ಚಿಕ್ಕಬಳ್ಳಾಪುರದಲ್ಲಿ 500 ತಲುಪಿದ ಕೋವಿಡ್ ಸೋಂಕಿತರ ಸಂಖ್ಯೆ: 35 ಮಂದಿ ಇಂದು ಡಿಸ್ಚಾರ್ಜ್
Team Udayavani, Jul 15, 2020, 5:36 PM IST
ಚಿಕ್ಕಬಳ್ಳಾಪುರ; ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ಅರ್ಭಟ ಮುಂದುವರೆದಿದ್ದು ಬುಧವಾರ ಒಂದೇ ದಿನ ಹೊಸದಾಗಿ 32 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯ ಸೋಂಕಿತರ ಸಂಖ್ಯೆ ಸರಿಯಾಗಿ 500 ತಲುಪಿದೆ.
ಹೊಸದಾಗಿ ಕಂಡು ಬಂದಿರುವ 32 ಪ್ರಕರಣಗಳ ಪೈಕಿ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದಲ್ಲಿಯೆ ಬರೋಬ್ಬರಿ 20, ಬಾಗೇಪಲ್ಲಿ 4, ಚಿಂತಾಮಣಿ 3, ಗೌರಿಬಿದನೂರು ಹಾಗೂ ಗುಡಿಬಂಡೆ ತಲಾ 1 ಪ್ರಕರಣ ಹಾಗೂ ಶಿಡ್ಲಘಟ್ಟದಲ್ಲಿ ಒಟ್ಟು 3 ಪ್ರಕರಣಗಳು ವರದಿಯಾಗಿವೆ. 32 ಮಂದಿ 18 ಮಂದಿ ಪುರುಷರಲ್ಲಿ ಹಾಗೂ 14 ಮಂದಿ ಮಹಿಳೆಯರಲ್ಲಿ ಕೋವಿಡ್ ಪಾಸಿಟೀವ್ ಬಂದಿದೆ.
35 ಮಂದಿ ಡಿಸ್ಚಾರ್ಜ್
ಜಿಲ್ಲೆಯಲ್ಲಿ ಸೋಂಕು ನಾಗಾಲೋಟ ಮುಂದುವರೆದಿರುವ ಬೆನ್ನಲೇ ಗುಣಮುಖರ ಸಂಖ್ಯೆಯು ಜಿಲ್ಲಾಡಳಿತಕ್ಕೆ ಸಮಾಧಾನ ತಂದಿದೆ. ಬುಧವಾರ ಒಂದೇ ದಿನ 35 ಮಂದಿ ಸೋಂಕಿತರು ಸೋಂಕಿನಿಂದ ಚೇತಕರಿಕೆ ಕಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಕಂಡು ಬಂಡಿರುವ 500 ಪ್ರಕರಣಗಳ ಪೈಕಿ ಇಟ್ಟು 279 ಮಂದಿ ಡಿಸ್ಚಾರ್ಜ್ ಆಗಿದ್ದು ಜಿಲ್ಲೆಯಲ್ಲಿ ಇನ್ನೂ 204 ಸಕ್ರಿಯ ಪ್ರಕರಣಗಳು ಇವೆ.
ಸಾವಿನ ಸಂಖ್ಯೆ 16ಕ್ಕೆ ಏರಿಕೆ
ಜಿಲ್ಲೆಯಲ್ಲಿ ಸತತವಾಗಿ ಕೋವಿಡ್-19 ಸೋಂಕಿತರ ಸಾವಿನ ಸರಣಿ ಮುಂದುವರೆದಿದ್ದು ಬುಧವಾರ ಜಿಲ್ಲೆಯ ಗೌರಿಬಿದನೂರಲ್ಲಿ ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್-19 ಬಲಿಯಾದವರ ಸಂಖ್ಯೆ 16ಕ್ಕೆ ಏರಿಕೆ ಕಂಡಿದ್ದು ಆ ಪೈಕಿ ಚಿಕ್ಕಬಳ್ಳಾಪುರದಲ್ಲಿ ಒಟ್ಟು 8, ಗೌರಿಬಿದನೂರು 5. ಚಿಂತಾಮಣಿ, ಬಾಗೇಪಲ್ಲಿಯಲ್ಲಿ ತಲಾ ಒಬ್ಬರು ಇದುವರೆಗೂ ಕೋವಿಡ್ನಿಂದ ಮೃತ ಪಟ್ಟಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.