ಶಾಸಕರ ರಾಜೀನಾಮೆ ವಿರುದ್ಧ ಸಿಪಿಎಂ ಪ್ರತಿಭಟನೆ


Team Udayavani, Jul 18, 2019, 3:00 AM IST

shasakarqa-raji

ಚಿಕ್ಕಬಳ್ಳಾಪುರ: ರಾಜ್ಯದ ಚುನಾಯಿತ ಜನಪ್ರತಿನಿದಿಗಳು ಇಡೀ ದೇಶದಲ್ಲಿ ರಾಜ್ಯದ ಮಾನ ಮರ್ಯದೆಯನ್ನು ಹರಾಜು ಹಾಕಿ ತಮಗೆ ಮತನ್ನು ಆರಿಸಿದ ಮತದಾರರನ್ನು ತಲೆ ತಗ್ಗಿಸುವಂತೆ ಮಾಡಿದ್ದು, ಅಧಿಕಾರ ದಾಹದಿಂದ 16 ಮಂದಿ ಶಾಸಕರಿಂದ ರಾಜೀನಾಮೆ ಕೊಡಿಸುವ ಮೂಲಕ ರಾಜ್ಯದಲ್ಲಿ ರಾಜಕೀಯ ವ್ಯಾಪಾರೀಕರಣಕ್ಕೆ ಬಿಜೆಪಿ ಮುಂದಾಗಿದೆಯೆಂದು ಮಾಜಿ ಶಾಸಕ ಸಿಪಿಎಂನ ಜಿ.ವಿ.ಶ್ರೀರಾಮರೆಡ್ಡಿ ವಾಗ್ಧಾಳಿ ನಡೆಸಿದರು.

ಶಾಸಕರ ರಾಜೀನಾಮೆ ಖಂಡಿಸಿ ಜಿಲ್ಲಾ ಕೇಂದ್ರದಲ್ಲಿ ಬುಧವಾರ ಮಾರ್ಕ್ಸ್ವಾದಿ ಕಮ್ಯೂನಿಸ್ಟ್‌ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಕರ್ನಾಟಕಕ್ಕೆ ಬಹಳ ಅತ್ಯುತ್ತಮ ಸಂಸದೀಯ ಚರಿತ್ರೆ ಇದೆ. ಬೇರೆ ರಾಜ್ಯಗಳಲ್ಲಿ ಈ ರೀತಿಯ ರಾಜಕೀಯ ಬೆಳವಣಿಗೆಗಳು ನಡೆದರೂ ರಾಜ್ಯದಲ್ಲಿ ಎಂದೂ ಈ ರೀತಿ ರಾಜಕಿಯ ಬೆಳವಣಿಗೆಗಳು ನಡೆದಿಲ್ಲ. ಈಗ ಶಾಸಕರ ರಾಜೀನಾಮೆ ಪ್ರಹಸನ ರಾಜ್ಯದ ಆರು ಕೋಟಿ ಜನ ತಲೆತಗ್ಗಿಸುವಂತಾಗಿದೆ ಎಂದರು.

ರೆಸಾರ್ಟ್‌ ರಾಜಕೀಯ: ಎಲ್ಲ ಪಕ್ಷಗಳು ಶಾಸಕರು ಸೇರಿಕೊಂಡು ರಾಜಕೀಯವನ್ನು ವ್ಯಾಪಾರೀಕರಣ ಮಾಡಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅಪಾಯದ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಶಾಸಕರು ನಾಪತ್ತೆಯಾಗಿದ್ದಾರೆ. 15 ಮಂದಿ ಶಾಸಕರು ಬಾಂಬೆಗೆ ಹೋಗಿದ್ದಾರೆ. ಇನ್ನೂ ಕೆಲವರು ರೆಸಾರ್ಟ್‌ಗೆ ಹೋಗಿದ್ದಾರೆ. ಕೆಲವು ಹೋಟೆಲ್‌ಗ‌ಳಲ್ಲಿದ್ದಾರೆ. ಶಾಸಕರ ಪರಿಸ್ಥಿತಿ ಹೇಗಿದೆ ಎಂದರೆ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಗದಂತೆ ತಲೆ ಮರೆಸಿಕೊಂಡಂತೆ ಕಾಣುತ್ತಿದೆಯೆಂದು ಶಾಸಕರ ರೆಸಾರ್ಟ್‌ ರಾಜಕೀಯದ ವಿರುದ್ಧ ಜಿ.ವಿ.ಶ್ರೀರಾಮರೆಡ್ಡಿ ವ್ಯಂಗ್ಯವಾಡಿದರು.

ಮತದಾರರಿಗೆ ಉತ್ತರಿಸಿ: ಯಾವುದೇ ತಿರ್ಮಾನ ತೆಗೆದುಕೊಳ್ಳಲು ಶಾಸಕರು ಸರ್ವ ಸ್ವತಂತ್ರರರು. ಆದರೆ ಬಾಂಬೆಗೆ, ರೆಸಾರ್ಟ್‌ಗೆ, ಹೋಟೆಲ್‌ಗೆ ಹೋಗುವ ಅವಶ್ಯಕತೆ ಇರಲಿಲ್ಲ. ಆದರೆ ಹೋಟೆಲ್‌, ರೆಸಾರ್ಟ್‌ಗಳಿಗೆ ಹೋಗಿರುವ ಅಗತ್ಯ ಏನು ಎಂಬುದನ್ನು ಶಾಸಕರು ರಾಜ್ಯದ ಜನತೆಗೆ ತಿಳಿಸಬೇಕು. ರಾಜ್ಯದ ಜನತೆ ಮತ ಹಾಕಿ ಅವರನ್ನು ಗೆಲ್ಲಿಸಿ ಶಾಸನಸಭೆಗೆ ಕಳುಹಿಸಿದ್ದಾರೆ. ನಿಮ್ಮಗೆ ಮತ ಹಾಕಿದ ಮತದಾರರಿಗೆ ಶಾಸಕರು ಉತ್ತರಿಸಬೇಕಿದೆ ಎಂದು ಹೇಳಿದರು.

ಕ್ಷೇತ್ರದ ಜನರ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಶಾಸಕರು ರಾಜ್ಯದ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಶಾಸನ ಸಭೆಯಲ್ಲಿ ಧ್ವನಿ ಎತ್ತಿ ಸರ್ಕಾರವನ್ನು ಬಗ್ಗಿಸುವ ಕೆಲಸ ಮಾಡದೇ ರೆಸಾರ್ಟ್‌ಗಳಲ್ಲಿ ಕೂರುವ ಅಗತ್ಯವೇನು ಎಂದು ಜಿ.ವಿ.ಶ್ರೀರಾಮರೆಡ್ಡಿ ರಾಜೀನಾಮೆ ನೀಡಿರುವ ಶಾಸಕರ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.

ಪಲಾಯನ ಸಲ್ಲದು: ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕಿದ್ದ ಶಾಸಕರು ಈಗ ಕಳ್ಳರಂತೆ ಬಚ್ಚಿಟ್ಟುಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಶಾಸನ ಸಭೆಗಳಿಗೆ ಹೋಗುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಸುಪ್ರೀಕೋರ್ಟ್‌ ಹೇಳಿದೆ. ಆದರೆ ಮತದಾರರು ಶಾಸಕರನ್ನು ಆರಿಸಿರುವುದು ಶಾಸನ ಸಭೆಗಳಿಗೆ ಹೊರತು, ಬಾಂಬೆಗೆ ಹೋಗಲು ಅಲ್ಲ ಎಂದರು.

ಶಾಸಕರಿಗೆ ಏನೇ ಸಮಸ್ಯೆ ಇದ್ದರೂ ಶಾಸನ ಸಭೆಗಳಲ್ಲಿ ಮಾತನಾಡುವ ಹಕ್ಕಿದೆ. ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆಗೆ ಅಥವಾ ವಿಶ್ವಾಸ ಮತ ಮಂಡನೆಗೆ ಅವಕಾಶ ಇದೆ. ಎಲ್ಲ ಅಧಿಕಾರ, ಶಕ್ತಿ ಇದ್ದರೂ ಕೂಡ ರಾಜ್ಯದ ಹಿತಾಸಕ್ತಿಯನ್ನು ಮರೆತು ಪಲಾನಯನ ಮಾಡಿದರೆ ಇದರ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರ ಹಾಗೂ ಪಿತೂರಿ ಅಡಗಿದೆಯೆಂದು ಟೀಕಿಸಿದರು.

ಬಿಜೆಪಿ ವಿರುದ್ಧ ಟೀಕಾಪ್ರಹಾರ: ದೇಶದಲ್ಲಿ ಮೋದಿ ಸರ್ಕಾರ ಎರಡನೇ ಸಲ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಏಕಪಕ್ಷದ ಸರ್ವಾಧಿಕಾರವನ್ನು ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಅದರ ಮೊದಲ ಪ್ರಯತ್ನವನ್ನು ಕರ್ನಾಟದಿಂದ ಆರಂಭಿಸಲಾಗಿದೆ. ಹಿಂಬಾಗಲಿನಿಂದ ಬಿಜೆಪಿ ಅಧಿಕಾರ ಪಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಮೊನ್ನೆ ತಾನೆ ಗೋವಾದಲ್ಲಿ 15 ಮಂದಿ ಶಾಸಕರನ್ನು ಪಕ್ಷಾಂತರ ಮಾಡಿ ಅಧಿಕಾರ ಕೊಟ್ಟಿದ್ದಾರೆ ಎಂದರು.

ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ಅಧಿಕಾರದಲ್ಲಿರುವ ಮದ್ಯಪ್ರದೇಶ, ರಾಜಸ್ಥಾನ, ಪಶ್ಚಿಮಬಂಗಾಲದಲ್ಲಿ ಆಡಳಿತರೂಢ ಶಾಸಕರನ್ನು ಖರೀದಿ ಮಾಡಿ ಬಿಜೆಪಿ ಸರ್ಕಾರವನ್ನು ಅಸ್ವಿತ್ವಕ್ಕೆ ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದು ದೇಶದ ಪ್ರಜಾತಂತ್ರದ ವ್ಯವಸ್ಥೆಗೆ ದೊಡ್ಡ ಅಪಾಯ ಎಂದು ಜಿ.ವಿ.ಶ್ರೀರಾಮರೆಡ್ಡಿ ಕಳವಳ ವ್ಯಕ್ತಪಡಿಸಿದರು.

ಇತ್ತೀಚೆಗೆ ಪ್ರಧಾನಿ ಮೋದಿಯವರೇ ಪಶ್ಚಿಮ ಬಂಗಾಳದ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆಂದು ಹೇಳಿದ್ದಾರೆ. ಪ್ರಧಾನಿಯೊಬ್ಬರು ಪಕ್ಷಾಂತರ ಮಾಡಿಸುವ ಕೀಳು ಮಟ್ಟಕ್ಕೆ ಇಳಿದಿದ್ದಾರೆಂದರೆ ದೇಶದ ಪ್ರಜಾಪ್ರಭುತ್ವಕ್ಕೆ ಎಷ್ಟು ಗಂಡಾಂತರ ಅಡಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು. ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ, ಸದಸ್ಯರಾದ ಚೆನ್ನರಾಯಪ್ಪ, ಎಚ್‌.ಪಿ.ಲಕ್ಷ್ಮೀನಾರಾಯಣ್‌, ಮಂಜುನಾಥರೆಡ್ಡಿ, ಬಿ.ಎನ್‌.ಮುನಿಕೃಷ್ಣಪ್ಪ, ರವಿಚಂದ್ರರರೆಡ್ಡಿ, ಆರ್‌.ಎನ್‌.ರಾಜು. ಜೈನಾಭಿ, ಸುಬ್ಬರಾಯಪ್ಪ, ಕೃಷ್ಣಪ್ಪ, ವೆಂಕಟೇಶಪ್ಪ, ಮಧು, ಸೇರಿದಂತೆ ಪಕ್ಷದ ಕಾರ್ಯಕರ್ತರಿದ್ದರು.

ಪಕ್ಷಾಂತರದಿಂದ ರಾಜಕೀಯ ಪಿತೂರಿ: ದೇಶದಲ್ಲಿ ಎಲ್ಲೂ ಕೂಡ ವಿರೋಧ ಪಕ್ಷಗಳು ಅಧಿಕಾರ ನಡೆಸುವ ಸರ್ಕಾರ ಇರಬಾರದು. ನಮನೆ ಎಲ್ಲೂ ವಿರೋಧ ಇರಬಾರದೆಂದು ಹೇಳಿ ಬಿಜೆಪಿ ಪಕ್ಷ ಪಕ್ಷಾಂತರದ ಮೂಲಕ ರಾಜಕೀಯ ಪಿತೂರಿ ನಡೆಸಿ ಏಕಪಕ್ಷೀಯವಾದ ಸರ್ವಾಧಿಕಾರವನ್ನು ಜಾರಿಗೆ ತರುವ ಕೆಲಸವನ್ನು ಮಾಡುತ್ತಿದೆ.

ಅದರ ಪ್ರತಿಫ‌ಲ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿ. ಎಂತಹವರಿಗೆ ನಾವು ಮತ ಹಾಕಿ ಶಾಸನ ಸಭೆಗಳಿಗೆ ಆರಿಸಿ ಕಳುಹಿಸಿದ್ದೇವೆಂಬದನ್ನು ರಾಜ್ಯದ ಜನತೆ ಅಲೋಚಿಸಬೇಕಿದೆ. ಶಾಸಕರಿಗೆ ವಿಪ್‌ ಜಾರಿ ಅನ್ವಯಿಸುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದರೆ ಆದರೆ ವಿಪ್‌ ಜಾರಿ ಮಾಡುವ ಅಧಿಕಾರ ರಾಜಕೀಯ ಪಕ್ಷಗಳಿಗೆ ಇದೆ ಎಂದು ಸಿಪಿಎಂ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ

Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ

MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್‌

MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್‌

chintamai-Murder

Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು! 

10-gudibanda

Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ

Sudhakar–sandeep-Reddy

BJP Rift: ಸಂಸದ ಕೆ.ಸುಧಾಕರ್‌ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.