ಆಡಳಿತಾಧಿಕಾರಿ ಆಗಿ ಡೀಸಿ ಲತಾ ಅಧಿಕಾರ ಸ್ವೀಕಾರ
ಸಚಿವರ ಪರಿಶ್ರಮದಿಂದಾಗಿ ಹಾಲು ಉತ್ಪಾದಕ ರೈತರ ಬಹುದಿನಗಳ ಬೇಡಿಕೆ ಈಡೇರಿದೆ
Team Udayavani, Jun 24, 2022, 5:46 PM IST
ಚಿಕ್ಕಬಳ್ಳಾಪುರ: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಚಿಮುಲ್)ದ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಜಿಲ್ಲಾಧಿಕಾರಿ ಆರ್. ಲತಾ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಆರ್.ಲತಾ, ಸರ್ಕಾರದ ಆದೇಶದಂತೆ ಅಧಿಕಾರ ಸ್ವೀಕರಿಸಿರುವುದು ತುಂಬಾ ಸಂತೋಷವಾಗಿದೆ. ಜಿಲ್ಲೆಯಲ್ಲಿ ಚಿಮುಲ್ ಸ್ಥಾಪನೆ ಮೈಲಿಗಲ್ಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವವರೆಗೂ ಒಕ್ಕೂಟದ ಆಡಳಿತ ವ್ಯವಸ್ಥೆಗಾಗಿ ನನ್ನನ್ನು ಸರ್ಕಾರ ಆಡಳಿತಾಧಿ ಕಾರಿಯಾಗಿ ನೇಮಿಸಿದೆ. ಅದರಂತೆ ಮೂರು ತಿಂಗಳ ಒಳಗೆ ಚಿಮುಲ್ ಆಡಳಿತ ಮಂಡಳಿಗೆ ಕ್ರಮಬದ್ಧವಾಗಿ ಚುನಾವಣೆ ನಡೆಸಿ, ಆಯ್ಕೆ ಆದ ಮಂಡಳಿಗೆ ಅಧಿ ಕಾರ ಹಸ್ತಾಂತರಿಸುತ್ತೇನೆ. ಅಲ್ಲಿಯವರೆಗೆ ಒಕ್ಕೂಟದ ಕೆಲಸ ಕಾರ್ಯಗಳಿಗೆ ತೊಡಕಾಗದಂತೆ ಸಕ್ರಿಯವಾಗಿ
ಕಾರ್ಯನಿರ್ವಹಿಸುವುದಾಗಿ ಡೀಸಿ ತಿಳಿಸಿದರು.
ಶೀತಲ ಘಟಕಗಳ ನಿರ್ಮಾಣ: ಮೆಗಾ ಡೇರಿ ಪ್ರಧಾನ ವ್ಯವಸ್ಥಾಪಕಿ ಜಿ.ಬಿ.ವಿಜಯಲಕ್ಷಿ ರೈ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿನಿತ್ಯ ಬಿಎಂಸಿ 19ರ ಮಾರ್ಗದಲ್ಲಿ 2.7 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಅದರಲ್ಲಿ 1.5 ಲಕ್ಷ ಲೀಟರ್ ಯುಎಸ್‌ಟಿ ಉತ್ಪನ್ನಕ್ಕೆ ಹಾಗೂ 3 ತಿಂಗಳವರೆಗೂ ಸಂರಕ್ಷಿಸ ಬಹುದಾದ ಫ್ಲೆಕ್ಸಿ ಹಾಲಿನ ಉತ್ಪನ್ನಕ್ಕೆ 50 ಸಾವಿರ ಲೀಟರ್ ಅನ್ನು ಬಳಸಿಕೊಳ್ಳಲಾಗುತ್ತದೆ. 1 ಟನ್ ಸಾಮರ್ಥ್ಯದ ಬೆಣ್ಣೆ, ತುಪ್ಪ ಉತ್ಪಾದನಾ ಘಟಕವಿದೆ. 450 ಟನ್ ತುಪ್ಪ ಉತ್ಪಾದನೆ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ನಿರ್ಮಿಸುತ್ತಿರುವ ಶೀತಲ (ಕೋಲ್ಡ್ ಸ್ಟೋರೇಜ್) ಘಟಕಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿ ಜಿ.ಬಿ.ಮಂಜುಳಾ ಮಾತನಾಡಿ, ಜಿಲ್ಲೆಗೆ ಹಾಲು ಒಕ್ಕೂಟ ರಚನೆಯಾಗಿದ್ದು, ಆರೋಗ್ಯ ಸಚಿವರ ಪರಿಶ್ರಮದಿಂದಾಗಿ ಹಾಲು ಉತ್ಪಾದಕ ರೈತರ ಬಹುದಿನಗಳ ಬೇಡಿಕೆ ಈಡೇರಿದೆ ಎಂದು ಹೇಳಿದರು.
ಡೀಸಿ ನಿರ್ದೇಶನದಂತೆ ಕಾರ್ಯನಿರ್ವಹಣೆ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ನೋಂದಣಿಯಾಗಿ ಡೀಸಿ ಅಧಿಕಾರ ಸ್ವೀಕರಿಸಿರುವುದು ತುಂಬಾ ಸಂತೋಷವಾಗಿದೆ. ಶೀಘ್ರಗತಿಯಲ್ಲಿ ನೂತನ ಒಕ್ಕೂಟದ ಆಡಳಿತ ಮಂಡಳಿ ರಚನೆಯಾಗಿ, ಕೆಲಸ ಕಾರ್ಯಗಳು ಸುಸೂತ್ರವಾಗಿ ನಿರ್ವಹಣೆ
ಆಗಲಿವೆ. ಈ ನಿಟ್ಟಿನಲ್ಲಿ ಡೀಸಿ ನಿರ್ದೇಶನಗಳಂತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಅಧಿಕಾರಿ ಸ್ವೀಕರಿಸಿದ ನಂತರ ಜಿಲ್ಲಾಧಿಕಾರಿಗಳು ಹಾಲು ಸಂಗ್ರಹಣೆ ಘಟಕ, ಪ್ರಯೋಗಾಲಯ, ಪ್ಯಾಕಿಂಗ್ ಘಟಕ, ಬೆಣ್ಣೆ ಹಾಗೂ ತುಪ್ಪ ತಯಾರಿಸುವ ಘಟಕ ಸೇರಿ ವಿವಿಧ ಘಟಕಗಳ ಕಾರ್ಯ ವೈಖರಿ ಖುದ್ದಾಗಿ ಪರಿಶೀಲಿಸಿದರು. ಮೆಗಾ ಡೇರಿಯ ಹೊರಾಂಗಣ ಆವರಣವನ್ನು ಒಂದು ಸುತ್ತು ವೀಕ್ಷಿಸಿ ಅವಲೋಕಿಸಿದರು.
ಮೆಗಾ ಡೇರಿಯ ಸಹಾಯಕ ವ್ಯವಸ್ಥಾಪಕರಾದ ಜಿ.ಎಲ್.ಅಶ್ವತ್ಥನಾರಾಯಣ, ಎಂ.ಕೆ.ಉಮಾ, ನಟರಾಜು, ಮಾರುಕಟ್ಟೆ ಅಧೀಕ್ಷಕರಾದ ಎಸ್.ಎಲ್.ಮಧುಸೂದನ್ ರೆಡ್ಡಿ, ಆಡಳಿತ ಅಧಿಧೀಕ್ಷಕರಾದ ರಮೇಶ್‌ಬಾಬು, ಇತರೆ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.