ಬಹು ವರ್ಷಗಳ ಬೇಡಿಕೆಯಾದ ಕ್ರೀಡಾಂಗಣಕ್ಕೆ ಜಾಗ ಮಂಜೂರಾತಿಗೆ ಆದೇಶಿಸಿದ ಜಿಲ್ಲಾದಿಕಾರಿ
Team Udayavani, Mar 23, 2022, 6:43 PM IST
ಗುಡಿಬಂಡೆ: ತಾಲೂಕಿನ ಕ್ರೀಡಾಪಟುಗಳ ಬಹು ವರ್ಷಗಳ ಬೇಡಿಕೆಯಾದ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಕ್ಕೆ ಸೂಕ್ತ ಜಾಗಕ್ಕಾಗಿ ಜಿಲ್ಲಾಧಿಕಾರಿ ಆರ್.ಲತಾ ಅಮಾನಿಬೈರಸಾಗರ ಗ್ರಾಮದ ಸರ್ವೆ ನಂ. 3 ರಲ್ಲಿ 6-00 ಎಕರೆ ಜಮೀನು ಮಂಜೂರು ಮಾಡಲು ಅಧೇಶ ಹೊರಡಿಸಿದ್ದಾರೆ.
ಕ್ರೀಡಾಂಗಣಾಕ್ಕಾಗಿ ಜಾಗ ಗುರುತು: ಸುಮಾರು ವರ್ಷಗಳ ಹಿಂದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ರವರು ಪತ್ರ ಮುಖೇನ ಜಿಲ್ಲಾಧಿಕಾರಿಗಳಿಗೆ ಮತ್ತು ಗುಡಿಬಂಡೆ ತಹಶೀಲ್ದಾರ್ ರವರಿಗೆ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಕ್ಕಾಗಿ ಸೂಕ್ತ ಜಾಗ ಗುರುತಿಸಿ ಮಂಜೂರು ಮಾಡುವಂತೆ ಆದೇಶ ಪತ್ರ ನೀಡಿರುತ್ತಾರೆ, ಹಾಗೂ ಜಿಲ್ಲಾಧಿಕಾರಿಗಳು ಸಹ ತಹಶೀಲ್ದಾರ್‌ಗೆ ಜಾಗ ಗುರುತಿಸಿ ಮಂಜೂರಾತಿ ಆದೇಶಕ್ಕಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿರುತ್ತಾರೆ, ಅದರಂತೆ ಕಳೆದ ವರ್ಷ 2020ನೇ ಸೆ.22 ರಂದು ಜಿಲ್ಲಾ ಕ್ರೀಡಾ ಇಲಾಖೆಯ ನಿರ್ದೆಶಕಿ ಪಟ್ಟಣದ ಹತ್ತಿರ ಇರುವ ಅಮಾನಿಬೈರಸಾಗರ ಗ್ರಾಮದ ಸ.ನಂ. 3 ರ ಸರ್ಕಾರಿ ಜಮೀನಿಗೆ ಬೇಟಿ ನೀಡಿ, ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು ಒಪ್ಪಿಗೆ ಸೂಚಿಸಿ ಹೋಗಿದ್ದರು.
ಉದಯವಾಣಿ ವರದಿ: ಇದರ ಬೆನ್ನೆಲ್ಲೆ ಈ ವಿಚಾರವಾಗಿ ದಿನಾಂಕ: 29-09-2021 ರಂದು ’ಕ್ರೀಡಾಂಗಣಕ್ಕೆ ಜಾಗ ಗುರುತಿಸಿದ್ರೂ ಮಂಜೂರು ಮಾಡಿಲ್ಲ’ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಈ ವಿಚಾರವಾಗಿ ಎಚ್ಚೆತ್ತುಕೊಂಡ ಅಬಕಾರಿ ಇಲಾಖೆ ಅಧಿಕಾರಿಗಳು ಸಹ ಸ್ಥಳಕ್ಕೆ ಬೇಟಿ ನೀಡಿದ್ದರು, ತದ ನಂತರ ಅಬಕಾರಿ ಇಲಾಖೆಯ ಹಿಂಬರಹದ ನಂತರ ಜಿಲ್ಲಾಧಿಕಾರಿಗಳು ಕೆಲವು ಷರತ್ತುಗಳನ್ನು ವಿಧಿಸಿ ತಾಲೂಕು ಆಡಳಿತಕ್ಕೆ ಅತಿ ಜರೂರಾಗಿ ಜಾಗ ಮಂಜೂರು ಮಾಡಿ ಕ್ರೀಡಾ ಇಲಾಖೆಗೆ ವರ್ಗಾವಣೆ ಮಾಡುವಂತೆ ಆದೇಶ ಮಾಡಿದ್ದಾರೆ.
15 ದಿನದಲ್ಲಿ ಹಸ್ತಾಂತರ: ಕ್ರೀಡಾಂಗಣಕ್ಕಾಗಿ ಜಾಗ ಮಂಜುರು ಮಾಡಿರುವ ಅಮಾನಿ ಬೈರಸಾಗರ ಗ್ರಾಮದ ಸರ್ವೆ ನಂ. 3 ರಲ್ಲಿ 6-00 ಎಕರೆ ಜಮೀನು ಸ್ವತ್ತನ್ನು 15 ದಿನಗಳ ಒಳಗಾಗಿ ಅಳತೆ ಮಾಡಿಸಿ, ಚೆಕ್ಕುಬಂದಿ ಗುರ್ತಿಸಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಇಲಾಖೆ, ಚಿಕ್ಕಬಳ್ಳಾಪುರ ರವರಿಗೆ 15 ದಿನಗಳ ಒಳಗಾಗಿ ಹಸ್ತಾಂತರಿಸಲು ಜಿಲ್ಲಾದಿಕಾರಿಗಳು ಆಧೇಶ ಮಾಡಿದ್ದಾರೆ.
ಎಂಟು ವರ್ಷಗಳಿಂದ ಪ್ರತಿಭಟನೆ: ಕ್ರೀಡಾಂಗಣ ವಿಲ್ಲದೆ ಅನೇಕ ಪ್ರತಿಭೆಗಳು ಕ್ರೀಡೆಗಳಲ್ಲಿ ಮೂಲೆಗುಂಪಾಗಿದ್ದು, ಇದನ್ನು ಮನಗೊಂಡ ತಾಲೂಕಿನ ಪ್ರತ್ಯೇಕ ವಿದಾನಸಭಾ ಕ್ಷೇತ್ರ ಹೋರಾಟ ಸಮಿತಿಯ ಸದಸ್ಯರು ಬೆಂಬಿಡದೇ 2014 ರಿಂದಲೂ ಕ್ರೀಡಾಂಗಣಕ್ಕಾಗಿ ಒತ್ತಾಯಿಸಿ ಶಾಸಕರಿಗೆ, ಲೋಕಸಭಾ ಸದಸ್ಯರಿಗೆ, ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ್‌ರಿಗೆ, ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿಕೊಂಡೇ ಬರುತ್ತಿದ್ದರು, ತಾಲೂಕಿನ ಕ್ರೀಡಾಭಿಮಾನಿಗಳ ಕೋರಿಕೆಯಂತೆ ಜಿಲ್ಲಾಧಿಕಾರಿ ಆರ್.ಲತಾ ಆದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.