ಕಳೆಗಟ್ಟಿದ ಧರ್ಮರಾಯಸ್ವಾಮಿ ಹೂವಿನ ಕರಗ


Team Udayavani, Apr 29, 2019, 3:00 AM IST

kalegattida

ಚಿಕ್ಕಬಳ್ಳಾಪುರ: ಎಲ್ಲಿ ನೋಡಿದರೂ ಜನವೋ ಜನ. ಕರಗ ವೀಕ್ಷಕರಿಗೆ ಭರಪೂರ ಪಾನಕ, ಮಜ್ಜಿಗೆ ಅನ್ನದಾನ, ಸೂಜಿಗಲ್ಲಿನಂತೆ ಎಲ್ಲರನ್ನು ತನ್ನತ್ತ ಸೆಳೆಯಿತು ಒನಕೆ ಕರಗ. ವಿದ್ಯುತ್‌ ದೀಪಾಲಂಕಾರಕ್ಕೆ ಝಗಮಗಿಸಿತು ಜಿಲ್ಲಾ ಕೇಂದ್ರ.

ಕರಗ ಮಹೋತ್ಸವದಲ್ಲಿ ಮೇಳೈಸಿದ ಸಾಂಸ್ಕೃತಿಕ ಕಲರವ. ಭಕ್ತರನ್ನು ತಲೆದೂಗುವಂತೆ ಮಾಡಿತು ಹೂವಿನ ಕರಗ, ಭಕ್ತಿಭಾವದಿಂದ ವಾರದ ಕಾಲ ಆಚರಿಸಿದ ಶ್ರೀ ಧರ್ಮರಾಯರ ಹೂವಿನ ಕರಗ ಮಹೋತ್ಸವಕ್ಕೆ ವೈಭವದ ತೆರೆ.

ಜಿಲ್ಲಾ ಕೇಂದ್ರದಲ್ಲಿ ನಾಡ ಹಬ್ಬವಾಗಿ ಆಚರಿಸಿದ ಶ್ರೀ ಜಾಲಾರಿ ಗಂಗಮಾಂಭ ದೇವಾಲಯದ 59ನೇ ವರ್ಷದ ಶ್ರೀ ಧರ್ಮರಾಯರ ಹೂವಿನ ಕರಗ ಮಹೋತ್ಸವ ಶನಿವಾರ ರಾತ್ರಿಯಿಡೀ ನಗರದಲ್ಲೆಡೆ ವೈಭವದಿಂದ ನಡೆದು ಅಪಾರ ಜನಸಾಗರಕ್ಕೆ ಸಾಕ್ಷಿಯಾಯಿತು. ಒಂದೆಡೆ ಕರಗ ನೃತ್ಯ, ಮತ್ತೂಂದೆಡೆ ವಾದ್ಯಗೋಷ್ಠಿಯಲ್ಲಿ ಮಾರ್ದನಿಸಿದ ಹಾಡು, ಕುಣಿತಕ್ಕೆ ಜನಸ್ತೋಮ ಧರ್ಮರಾಯರ ಕರಗ ವೀಕ್ಷಣೆ ಮಾಡಿ ಕಣ್ತುಂಬಿಕೊಂಡಿತು.

ನಗರದಾದ್ಯಂತ ಸಂಚಾರ: ಚಿಕ್ಕಬಳ್ಳಾಪುರ ನಗರದ ಗಂಗಮ್ಮ ಗುಡಿ ರಸ್ತೆಯಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ಜಾಲಾರಿ ಗಂಗಮಾಂಭ ದೇವಾಲಯದಲ್ಲಿ ಶ್ರೀ ಧರ್ಮರಾಯ ಕರಗ ಮಹೋತ್ಸವ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಕರಗ ಮಹೋತ್ಸವದಲ್ಲಿ ಜಿಲ್ಲೆಯ ಮೇಲೂರಿನ ಕೆ.ಧರ್ಮೇಂದ್ರ ಘಮಘುಮಿಸುವ ಮಲ್ಲಿಗೆ ಹೂನಿಂದ ಆಕರ್ಷಕವಾಗಿ ಅಲಂಕೃತಗೊಂಡಿದ್ದ ಶ್ರೀ ಧರ್ಮರಾಯರ ಹೂವಿನ ಕಗರ ಹೊತ್ತು ನಗರದ್ಯಾಂತ ಸಂಚರಿಸಿದರು. ಹೂವಿನ ಕರಗ ಸಾಗಿ ಬಂದ ರಸ್ತೆಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನಿಂತು ಕರಗ ವೀಕ್ಷಿಸಿ ಭಕ್ತಿಭಾವ ಮೆರೆದರು.

ಕರಗ ಹೊತ್ತ ಧರ್ಮೇಂದ್ರ: ತಮ್ಮ ತಂದೆಯ ನಂತರ ಎರಡನೇ ಬಾರಿಗೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರಿನ ಕೆ. ದ್ರ ಶ್ರೀ ಧರ್ಮರಾಯರ ಹೊವಿನ ಕರಗ ಹೊತ್ತು ಕಲಾವಿದರ ತಮಟೆಯ ಸದ್ದಿಗೆ ವಿವಿಧ ಭಂಗಿಗಳಲ್ಲಿ ನೃತ್ಯ ಪ್ರದರ್ಶಿಸುತ್ತಾ ನಗರದ ಮುಖ್ಯರಸ್ತೆಗಳಲ್ಲಿ ಕರಗ ಹೊತ್ತು ಹೆಜ್ಜೆ ಹಾಕಿದರು.

ನಗರದ ಕಂದವಾರರಪೇಟೆ, ಎಂಜಿ ರಸ್ತೆ, ಬಿಬಿ ರಸ್ತೆ, ಬಜಾರ್‌ ರಸ್ತೆ, ಗಂಗಮ್ಮ ಗುಡಿ ರಸ್ತೆಗಳಲ್ಲಿ ಕರಗ ಸಂಚರಿಸಿ ನೆರೆದಿದ್ದ ಸಾರ್ವಜನಿಕರಲ್ಲಿ ಸಂಚಲನ ಉಂಟು ಮಾಡಿದರು. ಶನಿವಾರ ರಾತ್ರಿ ರಾತ್ರಿ 10:30ಕ್ಕೆ ಸರಿಯಾಗಿ ಹೊತ್ತ ಹೂವಿನ ಕಗರವನ್ನು ನಗರದ ಆಯ್ದ ಪ್ರದೇಶಗಳಲ್ಲಿ ಸಂಚರಿಸಿ ಮರಳಿ ಗಂಗಮಾಂಭ ದೇವಾಲಯಕ್ಕೆ ಬರುವಷ್ಟರಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಯಾಗಿತ್ತು.

ಕರಗ ವೀಕ್ಷಣೆಗಾಗಿ ನಗರದ ಮುಖ್ಯ ರಸ್ತೆಗಳಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಮೊದಲೇ ನಗರದ ರಸ್ತೆಗಳು ಕಿಷ್ಕಿಂಧೆಯಾಗಿ ಕಿರಿದಾಗಿದ್ದ ಕಾರಣ ಕರಗ ವೀಕ್ಷಣೆಗೆ ಯುವಕರು, ಸಾರ್ವಜನಿಕರು ತಮ್ಮ ಬಡಾವಣೆಗಳಲ್ಲಿ ಅಕ್ಕಪಕ್ಕದ ಮನೆಗಳ ಮೇಲೆ ಹತ್ತಿ ಕರಗ ವೀಕ್ಷಿಸಿದರು.

ನಗರಕ್ಕೆಲ್ಲಾ ವಿದ್ಯುತ್‌ ದೀಪಾಲಂಕಾರ: ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿರುವ ಎಲ್ಲಾ ಪ್ರಮುಖ ರಸ್ತೆಗಳಿಗೆ ಆಕರ್ಷಕ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಹೂವಿನ ಕರಗ ಸಾಗಿ ಬಂದ ಮಾರ್ಗಗಳಲ್ಲಿ ವಿದ್ಯುತ್‌ ದೀಪಾಲಂಕಾರಕ್ಕೆ ರಸ್ತೆಗಳು ಝಘಮಗಿಸಿದ ದೃಶ್ಯಗಳು ಗಮನ ಸೆಳೆದವು.

ನಗರದ ಬಿಬಿ ರಸ್ತೆ, ಬಜಾರ್‌ ರಸ್ತೆ, ಗಂಗಮ್ಮ ಗುಡಿ ರಸ್ತೆ, ಎಂಜಿ ರಸ್ತೆ, ಅಂಬೇಡ್ಕರ್‌ ಭವನದ ರಸ್ತೆ ಹಾಗೂ ವಾಪಸಂದ್ರದ ರಸ್ತೆಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಜಾಲಾರಿ ಗಂಗಮಾಂಭ ದೇವಾಲಯಕ್ಕೂ ಆಕರ್ಷಕವಾದ ಹೂವಿನ ಹಾಗೂ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ಕರಗಕ್ಕೆ ಪೊಲೀಸರ ಹದ್ದಿನ ಕಣ್ಣು: ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುವ ಕರಗ ವೀಕ್ಷಣೆಗೆ ನಗರದ ಜನತೆ ಹಾದಿಯಾಗಿ ಜಿಲ್ಲೆಯ ವಿವಿಧ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದರಿಂದ ಅಹಿತಕರ ಘಟನೆಗಳು ನಡೆಯದಂತೆ ಎಸ್‌ಪಿ ಕೆ.ಸಂತೋಷ ಬಾಬು ಮಾರ್ಗದರ್ಶನದಲ್ಲಿ ಉಪ ವಿಭಾಗದ ಆರಕ್ಷಕ ಉಪ ಅಧೀಕ್ಷಕ ಪ್ರಭುಶಂಕರ್‌, ವೃತ್ತ ನಿರೀಕ್ಷಕ ಸುದರ್ಶನ್‌ ನೇತೃತ್ವದಲ್ಲಿ ನೂರಾರು ಪೊಲೀಸರನ್ನು ಆಯಕಟ್ಟಿನ ಸ್ಥಳಗಳಲ್ಲಿ ಬಂದೋಬಸ್ತ್ಗಾಗಿ ನಿಯೋಜಿಸಲಾಗಿತ್ತು.

ಚಿಕ್ಕಬಳ್ಳಾಪುರ ಉಪ ವಿಭಾಗದ ಗೌರಿಬಿದನೂರು, ಬಾಗೇಪಲ್ಲಿ ತಾಲೂಕಿನ ಪೊಲೀಸ್‌ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಸಹ ಕರಗದ ಬಂದೋಬಸ್ತ್ಗೆ ಕರೆಸಿಕೊಳ್ಳಲಾಗಿತ್ತು.

ಮೇಳೈಸಿದ ಸಾಂಸ್ಕೃತಿಕ ಕರಲವ: ಕರಗ ಮಹೋತ್ಸವದ ಪ್ರಯುಕ್ತ ಚಿಕ್ಕಬಳ್ಳಾಪುರ ನಗರದಲ್ಲಿ ಹಬ್ಬದ ಸಂಭ್ರಮ ಒಂದೆಡೆ, ಮತ್ತೂಂದೆಡೆ ಮೇಳೈಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಕರಗ ಮಹೋತ್ಸವಕ್ಕೆ ಮೆರಗು ತಂದು ಕೊಟ್ಟವು. ನಗರದ ವಿವಿಧೆಡೆಗಳಲ್ಲಿ ಆಯೋಜಿಸಿದ್ದ ವಾದ್ಯಗೋಷ್ಠಿ, ಪೌರಾಣಿಕ ನಾಟಕ, ಸಂಗೀತ ರಸ ಮಂಜರಿ ಮತ್ತಿತರ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾತ್ರಿಯಿಡೀ ನಾಗರಿಕರು ನೋಡಿದರು. ಕರಗ ಸಾಗಿ ಬಂದ ಟೌನ್‌ಹಾಲ್‌ ಎದುರು, ಸರ್‌ಎಂ ರಸ್ತೆ, ಬಿಬಿ ರಸ್ತೆ, ಖಾಸಗಿ ಬಸ್‌ ನಿಲ್ದಾಣ ರಸ್ತೆ, ಗಂಗಮ್ಮ ಗುಡಿ ರಸ್ತೆಗಳಲ್ಲಿ ಯುವಕರ ಸಂಘಟನೆಗಳು ಜನತೆಗೆ ಸ್ವಯಂ ಪ್ರೇರಣೆಯಿಂದ ಅನ್ನಸಂರ್ತಪಣೆ ಜೊತೆಗೆ ಪಾನಕ, ಮಜ್ಜಿಗೆ, ಕೋಸಂಬರಿ, ಶರಬತ್‌ ನೀಡಿ ಭಕ್ತಿಭಾವ ಮೆರೆದರು.

ಒನಕೆ ಕರಗ ಆಕರ್ಷಣೆ, ಅಗ್ನಿಕುಂಡ ಪ್ರವೇಶ: ಹೂವಿನ ಕರಗ ಮಹೋತ್ಸವದಲ್ಲಿ ನೆರೆದಿದ್ದವರ ಸಹಸ್ರಾರು ಜನರ ಮೈಮನ ರೋಮಾಂಚನಗೊಳಿಸಿದ್ದು ಅಗ್ನಿಕುಂಡ ಪ್ರವೇಶ ಹಾಗೂ ಒನಕೆ ಕರಗ ಪ್ರದರ್ಶನ. ಶ್ರೀ ಜಾಲಾರಿ ಗಂಗಮ್ಮ ದೇವಾಲಯದ ಆವರಣದಲ್ಲಿ ಕರಗ ಮಹೋತ್ಸವದ ಪ್ರಯುಕ್ತ ಸಿದ್ದಪಡಿಸಲಾಗಿದ್ದ ಅಗ್ನಿ ಕುಂಡದಲ್ಲಿ ಕರಗ ಹೊತ್ತಿದ್ದ ಕೆ.ಧಮೇಂದ್ರ ಪ್ರವೇಶಿಸಿದರು. ಅವರನ್ನು ಹಿಂಬಾಲಿಸಿ ಕೆಲ ಭಕ್ತರು ಅಗ್ನಿಕುಂಡ ಪ್ರವೇಶಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ಬಳಿಕ ನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ಭಾನುವಾರ ಸಂಜೆ 4 ವಸಂತೋತ್ಸವದ ಭಾಗವಾಗಿ ವಿವಿಧ ಭಂಗಿಗಳಲ್ಲಿ ನೃತ್ಯದ ಮೂಲಕ ಪ್ರದರ್ಶಿಸಿದ ಒನಕೆ ಕರಗ ಗಮನ ಸೆಳೆಯಿತು. ಕಳೆದ ಸೋಮವಾರದಿಂದ ನಡೆದುಕೊಂಡು ಬಂದ ಶ್ರೀ ಧರ್ಮರಾಯರ ಹೂವಿನ ಕರಗ ಮಹೋತ್ಸವ ಭಾನುವಾರ ಅದ್ದೂರಿಯಾಗಿ ಸಂಪನ್ನಗೊಂಡಿತು.

ಟಾಪ್ ನ್ಯೂಸ್

Ullala; Heap of waste in Nema’s field; Daiva got angry

Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Man enters church and chants Jai Shri Ram in Meghalaya: Case registered

Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್‌ ಘೋಷಣೆ: ಕೇಸು ದಾಖಲು

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6-national-emblem

National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ

Ullala; Heap of waste in Nema’s field; Daiva got angry

Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ

5-snehamayi

Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.