ಐತಿಹಾಸಿಕ ಕಟ್ಟಡದಲ್ಲಿ  ಡಿಜಿಟಲ್‌ ಗ್ರಂಥಾಲಯ

Team Udayavani, Apr 10, 2022, 5:50 PM IST

ಐತಿಹಾಸಿಕ ಕಟ್ಟಡದಲ್ಲಿ  ಡಿಜಿಟಲ್‌ ಗ್ರಂಥಾಲಯ

ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ ಗ್ರಾಮವು ದೇಶಭಕ್ತರ ಹಳ್ಳಿಯೆಂದೇ ಹೆಸರು ವಾಸಿ ಆಗಿದ್ದು, ಸ್ವಾತಂತ್ರ್ಯದ ಹೋರಾಟದಲ್ಲಿ ಬ್ರಿಟಿಷರ ಬಂದೂಕಿನ ಗುಂಡಿಗೆ ಎದೆಯೊಡ್ಡಿ ನಿಂತ ದೇಶಪ್ರೇಮಿ ಗಳ ಹೋರಾಟ ಇತಿಹಾಸವನ್ನು ನೆನಪಿಸುತ್ತದೆ. ಈ ಗ್ರಾಮದಲ್ಲಿ ಬ್ರಿಟಿಷರ ಕಾಲದಲ್ಲಿನ ಕಟ್ಟಡಗಳಿದ್ದು, ಅವುಗಳನ್ನು ಉಳಿಸಿ ಸ್ಮಾರಕಗಳನ್ನಾಗಿಸುವ ಕೆಲಸ ಭಕ್ತರಹಳ್ಳಿ ಗಾಪಂನಿಂದ ನಡೆಯುತ್ತಿರುವುದು ದೇಶ ಪ್ರೇಮಿಗಳಲ್ಲಿ ಖುಷಿ ತಂದಿದೆ.

ತಾಲೂಕಿನ ಭಕ್ತರಹಳ್ಳಿಯಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಹಲವು ಕಟ್ಟಡ, ವೃತ್ತಗಳೂ ಇವೆ. ಬ್ರಿಟಿಷರ ಬಂದೂಕಿನ ಗುಂಡಿಗೆ ಎದೆಕೊಟ್ಟು ಹುತಾತ್ಮರಾದವರ ಸ್ತೂಪವೂ ಇವೆ. ಇವೆಲ್ಲವೂ ಆಗಿನ ಬ್ರಿಟಿಷರ ವಿರುದ್ಧ ಹೋರಾಟ, ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ತರುತ್ತವೆ. ಈ ಪೈಕಿ ಕೆಲವೊಂದು ಕಟ್ಟಡ ಪಾಳು ಬಿದ್ದಿದ್ದು, ಪಾಳು ಬಿದ್ದ ಕಟ್ಟಡ ಸಂರಕ್ಷಿಸಿ ಅವುಗಳಿಗೆ ಮರುಜೀವ ನೀಡುವ ಜೀರ್ಣೋದ್ಧಾರದ ಕೆಲಸ ಗ್ರಾಪಂ ನೇತೃತ್ವದಲ್ಲಿ ಜಿಪಂ, ತಾಪಂ ಹಾಗೂ ಸಂಘ- ಸಂಸ್ಥೆಗಳ ನೆರವಿನಿಂದ ನಡೆಯುತ್ತಿದೆ.

ಬರೋಬ್ಬರಿ 110 ವರ್ಷದ ಹಿಂದೆ 1912ರಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿ ಬ್ರಿಟೀಷ್‌ ಅಧಿಕಾರಿಗಳ ಕಚೇರಿ ಯಾ ಗಿ ದ್ದ, ಆನಂತರ ಶಾಲೆಯಾಗಿ ಮಾರ್ಪಟ್ಟು, ತದ ನಂತರ ಬಳಕೆಯಿಲ್ಲದೆ ಪಾಳು ಬಿದ್ದಿದ್ದ ಕಟ್ಟಡದಲ್ಲಿ ಇದೀಗ ಡಿಜಿಟಲ್‌ ಲೈಬ್ರರಿ ಆರಂಭಿಸುವ ಮೂಲಕ ಕಟ್ಟಡವನ್ನು ಉಳಿಸುವ ಕೆಲಸ ನಡೆದಿದೆ.

ಕಟ್ಟಡ ಹೇಗಿದೆಯೋ ಹಾಗೆಯೆ ದುರಸ್ತಿ ಮಾಡಿದ್ದು, ಸುಣ್ಣಬಣ್ಣ ಬಳಿದು ನೋಡಲು ಅಂದ ಚೆಂದವಾಗಿದೆ. ಅಲ್ಲಿ ಬರೆದ ಎಲ್ಲ ಬರಹ, ಚಿತ್ರಗಳು ಪುಸ್ತಕ ಓದು ವಂತೆ ಪ್ರೋತ್ಸಾಹಿಸಿ ಕೈ ಬೀಸಿ ಕರೆಯುವಂತೆ ಕಾಣುತ್ತಿವೆ. ಈಗಾಗಲೇ 4 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡದ ನವೀಕರಣ ಕಾರ್ಯ ಮುಗಿಸಿದ್ದು, ಗ್ರಾಪಂಗೆ ಈ ವರ್ಷ ಬರುವ ಪುರಸ್ಕಾರದ 10 ಲಕ್ಷ ರೂ. ಅನುದಾನವನ್ನು ಸಹ ಈ ಪಾರಂಪರಿಕ ಕಟ್ಟಡದ ನಿರ್ವಹಣೆ ಅಭಿವೃದ್ಧಿಗೆ ಬಳಸಲು ಭಕ್ತರಹಳ್ಳಿ ಗ್ರಾಪಂ ಪಿಡಿಒ ಹಾಗೂ ಆಡಳಿತ ಮಂಡಳಿ ನಿರ್ಧರಿಸಿದೆ.

ಇದಾದ ನಂತರ ಇನ್ನು ಇತರೆ ಕಟ್ಟಡ ಇದೇ ರೀತಿ ಉಳಿಸಿಕೊಳ್ಳುವ ಉದ್ದೇಶ ಭಕ್ತರಹಳ್ಳಿ ಗ್ರಾಪಂಗೆ ಇದ್ದು,ಇದು ದೇಶಪ್ರೇಮಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

ಗ್ರಾಮದಲ್ಲಿ ಪ್ರಾಚೀನ ಕಾಲದ ಕಟ್ಟಡ ಸಂರಕ್ಷಿಸಿ ಡಿಜಿಟಲ್‌ ಗ್ರಂಥಾಲಯ ಮಾಡಿ ಜ್ಞಾನರ್ಜನೆ ಕೇಂದ್ರವಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ.  ಪ್ರಸಕ್ತ ಸಾಲಿನಲ್ಲಿ ಗ್ರಾಪಂಗೆ ಪುರಸ್ಕಾರ ಬರಲಿದ್ದು, ಅದರ ಪ್ರೋತ್ಸಾಹಧನವನ್ನು ಗ್ರಂಥಾಲಯದ ಅಭಿವೃದ್ಧಿಗೆ ಬಳಸಿ ಮಾದರಿ ಗ್ರಂಥಾಲಯವನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಓದುಗರು ಇದರ ಸದುಪಯೋಗ ಮಾಡಿಕೊಳ್ಳಬೇಕಾಗಿದೆ. ಅಂಜನ್‌ಕುಮಾರ್‌, ಭಕ್ತರಹಳ್ಳಿ ಗ್ರಾಪಂ ಪಿಡಿಒ

ಪ್ರಾಚೀನ ಕಟ್ಟಡ ಸಂರಕ್ಷಣೆ ಮಾಡುವ ಕೆಲಸ ಗ್ರಾಪಂ ಮೂಲಕ ಮಾಡುತ್ತಿರುವುದು ಸಂತಸ ತಂದಿದೆ. ಗ್ರಂಥಾಲಯಕ್ಕೆ ಅಗತ್ಯ ಪುಸ್ತಕ, ಸೌಲಭ್ಯ ಒದಗಿಸಲು ಗ್ರಾಪಂ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. –ಆನಂದ್‌ ಛಲವಾದಿ, ಭಕ್ತರಹಳ್ಳಿ ಗ್ರಾಮಸ್ಥ

ಟಾಪ್ ನ್ಯೂಸ್

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.