ಡೊನೇಷನ್ ಕಟ್ಟಿ ಶಾಲೆ ಶುರುವಾಗುತ್ತೆ
ನಿತ್ಯ ಖಾಸಗಿ ಶಾಲೆಗಳಿಂದ ಫೋನ್ ಕರೆ | ಗೊಂದಲದಲ್ಲಿ ಪೋಷಕರು
Team Udayavani, May 10, 2020, 4:46 PM IST
ಸಾಂದರ್ಭಿಕ ಚಿತ್ರ
ಚಿಕ್ಕಬಳ್ಳಾಪುರ: ಹಲೋ ನಿಮ್ಮ ಮಕ್ಕಳನ್ನು ಎಲ್‌ಕೆಜಿ, ನರ್ಸರಿಗೆ ಸೇರಿಸಬೇಕಾ. ಈಗಲೇ ಪ್ರವೇಶ ಪಡೆಯರಿ. ಡೊನೇಷನ್ ತುಂಬಾ ಕಡಿಮೆ. ಸೀಟುಗಳು ಬೇರೆ ಈ ಬಾರಿ ಕಡಿಮೆ ಇವೆ. 1 ರಿಂದ 10 ನೇ ತರತಿಗೆ ಮೇ 11 ರಿಂದ ಶಾಲೆ ಆರಂಭವಾಗುತ್ತೆ. ಡೊನೇಷನ್ ಕಟ್ಟಿ ನೋಟ್ ಬುಕ್, ಸಮವಸ್ತ್ರ ತೆಗೆದುಕೊಳ್ಳಿ.
ನಿತ್ಯ ಜಿಲ್ಲೆಯ ಹಲವು ಖಾಸಗಿ ಶಿಕ್ಷಣ ಸಂಸ್ಥೆ ಗಳಿಂದ ವಿದ್ಯಾರ್ಥಿ ಪೋಷಕರಿಗೆ ಬರುತ್ತಿರುವ ಪೋನ್ ಕರೆಗಳು ಹೀಗಿರುತ್ತವೆ. ಸರ್ಕಾರ ಸಂಕಷ್ಟದಿಂದ ಈ ವರ್ಷದ ಶೈಕ್ಷಣಿಕ ವರ್ಷವನ್ನು ಯಾವಾಗಿ ನಿಂದ ಆರಂಭಿಸಬೇಕು ಎಂಬ ಗೊಂದಲ ದಲ್ಲಿದೆ. ಜೊತೆಗೆ ಇನ್ನೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಸವಾಲು ಶಿಕ್ಷಣ ಇಲಾಖೆ ಮೇಲಿದೆ. ಆದರೆ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ಕೋವಿಡ್ ಸಂಕಷ್ಟದ ನಡುವೆಯೂ ಪೋಷಕರಿಂದ ಡೊನೇಷನ್ ಪಡೆಯಲು ಶುರು ಮಾಡಿವೆ.
ಮೊಬೈಲ್ ಸಂದೇಶ: ವಿದ್ಯಾರ್ಥಿ ಪೋಷಕ ರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಕರೆ ಮಾಡಿ “ಈ ವರ್ಷದ ಡೊನೇಷನ್ ಕಟ್ಟಿ, ಹಿಂದಿನ ವರ್ಷದ ಬಾಕಿ ಶುಲ್ಕ ಕಟ್ಟಿ. ಮುಂದಿನ ತರ ಗತಿಗೆ ಪ್ರವೇಶ ಪಡೆದುಕೊಳ್ಳಿ, ನಿಮ್ಮ ಮಕ್ಕಳ ಪಠ್ಯ ಪುಸ್ತಕ, ನೋಟ್ ಬುಕ್, ಸಮವಸ್ತ್ರ ತೆಗೆದುಕೊಂಡು ಹೋಗಿ’ ಎನ್ನುವ ಸಲಹೆ ಜತೆಗೆ ನರ್ಸರಿ, ಎಲ್‌ಕೆಜಿ, ಯುಕೆಜಿಗೆ ಪ್ರವೇಶ ನೀಡುತ್ತಿ ದ್ದೇವೆ. ನಿಮ್ಮ ಮಕ್ಕಳನ್ನು ಸೇರಿಸಿ ಎನ್ನುವ ಸಂದೇಶ ಪೋಷಕರ ಮೊಬೈಲ್‌ಗಳಿಗೆ ಬರಲಾರಂಭಿಸಿವೆ. ಕೆಲವು ಶಾಲೆಗಳಂತೂ ನಾವು ಮೇ 11 ರಿಂದಲೇ ಶಾಲೆ ಆರಂಭಿಸಲು ಸಿದ್ಧತೆ ನಡೆಸಿದ್ದೇವೆ. ನೀವು ಬಂದು ಶುಲ್ಕ ಕಟ್ಟಿ ಹೋಗಿ ಎಂದು ಪೋಷಕರಿಗೆ ತಾಕೀತು ಮಾಡುತ್ತಿವೆ. ಇದ ರಿಂದ ವಿದ್ಯಾರ್ಥಿ ಪೋಷಕರು ಸಾಕಷ್ಟು ಗೊಂದಲದಲ್ಲಿ ಮುಳುಗಿದ್ದು ತಮ್ಮ ಮಕ್ಕಳಿಗೆ ಎಲ್ಲಿ ಸೀಟು ಸಿಗದೇ ಹೋಗುತ್ತದೆಯೋ ಎಂಬ ಆತಂಕದಲ್ಲಿದ್ದಾರೆ.
ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಯಾರನ್ನೂ ಬಲವಂತ ಮಾಡುವಂತಿಲ್ಲ. ಸ್ವಯಂ ಪ್ರೇರಣೆಯಿಂದ ಪೋಷಕರು ಶುಲ್ಕ ಕಟ್ಟಿ ಮಕ್ಕಳನ್ನು ಶಾಲೆಗೆ ಸೇರಿಸ ಬಹುದು. ಆದರೆ, ತರಗತಿ ಆರಂಭಿಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. –ಎಸ್.ಜಿ.ನಾಗೇಶ್, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ
– ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
Gudibande: ಹೆಸರಿಗಷ್ಟೇ ಬಸ್ ನಿಲ್ದಾಣ; ಬಸ್‌ಗಳೇ ಬರಲ್ಲ
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.