E-KYC: ಇ-ಕೆವೈಸಿ ಆಗದ ರೈತರಿಗಾಗಿ ಹುಡುಕಾಟ

Team Udayavani, Aug 24, 2023, 3:12 PM IST

tdy-6

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬರೋಬ್ಬರಿ 18,731 ಮಂದಿ ರೈತರು ಕೇಂದ್ರ ಸರ್ಕಾರ ನೀಡುವ ಮಹತ್ವಕಾಂಕ್ಷಿ  ಪ್ರಧಾನ ಮಂತ್ರಿ ಕಿಸಾನ್‌  ಸನ್ಮಾನ್‌ ನಿಧಿ ಯೋಜನೆ ಲಾಭ ದೊರೆಯದೇ ದೂರ ಉಳಿದಿದ್ದಾರೆ. ಆದರೆ 18,731 ಮಂದಿ ರೈತರು ಜಿಲ್ಲೆಯಲ್ಲಿ ಇದ್ದಾರೆಯೆ ಇಲ್ಲವೇ ಎನ್ನುವ ನಿಖರ ಮಾಹಿತಿಗಾಗಿ ಕೃಷಿ ಇಲಾಖೆ ರೈತರ ಹುಡುಕಾಟಕ್ಕೆ ಮುಂದಾಗಿದೆ.

ಹೌದು, ಜಿಲ್ಲೆಯಲ್ಲಿ ಒಟ್ಟಾರೆ ಬರೋಬ್ಬರಿ 1,27,274 ಮಂದಿ ರೈತರು ನೋಂದಣಿ ಆಗಿದ್ದಾರೆ. ಆ ಪೈಕಿ 1,14,764 ಮಂದಿ ರೈತರು ಮಾತ್ರ ಪ್ರತಿ ಕಂತಿನಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಪಡೆಯುತ್ತಿದ್ದಾರೆ. ಆದರೆ, ಕೃಷಿ ಇಲಾಖೆ ಮಾಡಿರುವ ಪಟ್ಟಿಯಲ್ಲಿಯೆ ಸುಮಾರು 18 ಸಾವಿರಕ್ಕೂ ಹೆಚ್ಚು ಮಂದಿ ಪಿಎಂ ಕಿಸಾನ್‌ ನಿಧಿಯಿಂದ ವಂಚಿರಾಗುತ್ತಿದ್ದಾರೆ.

ಕೇಂದ್ರ ಸರ್ಕಾರ ಪ್ರತಿ ನಾಲ್ಕು  ತಿಂಗಳಗೊಮ್ಮೆ ವರ್ಷದಲ್ಲಿ 3 ಕಂತುಗಳಲ್ಲಿ ತಲಾ  2,000 ಸಾವಿರ ರೂ. ನಂತೆ ಒಟ್ಟು 6 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಈಗಾಗಲೇ ಜಿಲ್ಲೆಗೆ 13ನೇ ಕಂತು ಬಿಡುಗಡೆ ಆಗಿದೆ. ಲಕ್ಷಾಂತರ ರೈತರಿಗೆ ಯೋಜನೆ ಲಾಭ ಸಿಕ್ಕಿದೆ. ಆದರೆ, ಇನ್ನೂ 18 ಸಾವಿರಕ್ಕೂ ಹೆಚ್ಚು ರೈತರಿಗೆ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯ ಲಾಭ ಸಿಗದೇ ಇರುವುದು ಕೃಷಿ ಇಲಾಖೆ ಪಟ್ಟಿಯಿಂದ ಬಹಿರಂಗವಾಗಿದೆ.

ಮನೆ ಮನೆಗೂ ಕೃಷಿ ಇಲಾಖೆ ಸಿಬ್ಬಂದಿ ಭೇಟಿ:     ಜಿಲ್ಲೆಯಲ್ಲಿ 18 ಸಾವಿರಕ್ಕೂ ಹೆಚ್ಚು ರೈತರಿಗೆ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಸಿಗದ ಕಾರಣ ಯೋಜನೆಯಿಂದ ವಂಚಿತರಾಗುತ್ತಿರುವ ರೈತರ ಪಟ್ಟಿ ಗ್ರಾಮವಾರ ಸಿದ್ದಪಡಿಸಿಕೊಂಡಿರುವ ಕೃಷಿ ಇಲಾಖೆ ಸಿಬ್ಬಂದಿ, ರೈತರ ಹುಡುಕಾಟದಲ್ಲಿ ತೊಡಗಿದೆ.

ಆಧಾರ್‌ ಆಪ್‌ಡೇಟ್‌ ಆಗದ ರೈತರಿಗೆ ಅರಿವು ಮೂಡಿ ಸುವುದರ ಜತೆಗೆ ಇ-ಕೆ.ವೈಸಿ ಬಾಕಿ ಇದ್ದರೆ ತಕ್ಷಣ ಮಾಡಿಸುವಂತೆ ಸೂಚಿಸಲಾಗಿದೆ. ಇನ್ನೂ ಕೆಲ ರೈತರು ಕೃಷಿ ಭೂಮಿ ಮಾರಾಟ ಮಾಡಿ ಬೇರೆ ಊರುಗಳಿಗೆ ತೆರಳಿರುವುದು ಕಂಡು ಬಂದಿದ್ದರೆ ಮತ್ತೆ ಕೆಲ ರೈತರು ಮರಣ ಹೊಂದಿರುವುದು ಕೃಷಿ ಅಧಿಕಾರಿಗಳ ಪರಿಶೀಲನೆ ವೇಳೆ ಕಂಡು ಬಂದಿದೆ.

ಕೆಲ ವೊಂದು ರೈತರು ತಮ್ಮ ಬ್ಯಾಂಕ್‌ ಖಾತೆಗೆ ಇನ್ನೂ ಆಧಾರ್‌ ಲಿಂಕ್‌ ಮಾಡಿಲ್ಲ. ಕೆಲವು ರೈತರು ಮರಣ ಹೊಂದಿದ್ದು ಅವರ ಜಮೀನು ಪೌತೆ ಖಾತೆ ಆಗಿಲ್ಲ. ಇನ್ನೂ ಕೆಲವರು ಇ-ಕೆವೈಸಿ  ಮಾಡಿಸದ ಕಾರಣ ಕಿಸಾನ್‌ ಸಮ್ಮಾನ್‌ ನಿಧಿ ಬರುತ್ತಿಲ್ಲ. ಗ್ರಾಮವಾರು ಪಟ್ಟಿ ಹಿಡಿದುಕೊಂಡು ಕೃಷಿ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ  ಪರಿಶೀಲನೆ ನಡೆಸುತ್ತಿದ್ದಾರೆ. ಶೇ.85 ರಷ್ಟು ರೈತರಿಗೆ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಬರುತ್ತಿದೆ.-ಜಾವೀದಾ ನಸೀಮಾ ಖಾನಂ, ಜಂಟಿ ಕೃಷಿ ನಿರ್ದೇಶಕರು. 

-ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ

ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ

firing

Amritsar; ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ

siddanna-2

Siddaramaiah; ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಟಿ.ಜೆ.ಅಬ್ರಹಾಂ

9

IPL 2025: ಮುಂದಿನ ವರ್ಷ ಆರ್‌ಸಿಬಿ ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕ?

11-

Healthy lifestyle: ಸ್ವಸ್ಥ ಆರೋಗ್ಯಕ್ಕೆ ಸ್ವಸ್ಥ ಜೀವನ ಕ್ರಮ

Chandni Chowk: ಫ್ರೆಂಚ್ ರಾಯಭಾರಿಯ ಮೊಬೈಲನ್ನೇ ಎಗರಿಸಿದ ಕಳ್ಳರು… ನಾಲ್ವರ ಬಂಧನ

Chandni Chowk: ಫ್ರೆಂಚ್ ರಾಯಭಾರಿಯ ಮೊಬೈಲನ್ನೇ ಎಗರಿಸಿದ ಕಳ್ಳರು… ನಾಲ್ವರ ಬಂಧನ

ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್‌ ಅರೆಸ್ಟ್!‌ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ

ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್‌ ಅರೆಸ್ಟ್!‌ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-gudibande

Gudibande: ಕಲ್ಯಾಣಿಯಲ್ಲಿ ಬಿದ್ದು ಯುವಕ ಸಾವು

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

13-

Gudibanda: ದೇವಸ್ಥಾನದಲ್ಲಿ ಕಳವು; ಆರೋಪಿಗಳು ಪೊಲೀಸ್ ವಶಕ್ಕೆ

Cheque Bounce Case: ಚಿಂತಾಮಣಿ ಟಿಎಪಿಸಿಎಂಎಸ್‌ಗೆ 1.22 ಕೋಟಿ ದಂಡ

Cheque Bounce Case: ಚಿಂತಾಮಣಿ ಟಿಎಪಿಸಿಎಂಎಸ್‌ಗೆ 1.22 ಕೋಟಿ ದಂಡ

0528

Chikkaballapur: ಕೈ ಚೆಲ್ಲಿದ ಜನಪ್ರತಿನಿಧಿಗಳು: ಸುಂಕ ವಸೂಲಿಗೆ ನಗರಸಭೆ ಟೆಂಡರ್‌!

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ

ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ

ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ

ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ

firing

Amritsar; ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ

14

UV Fusion: ಪ್ರಕೃತಿ ಅವಶ್ಯ ಮನುಜನಿಗೆ

siddanna-2

Siddaramaiah; ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಟಿ.ಜೆ.ಅಬ್ರಹಾಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.