ಅಭಿವೃದ್ಧಿಗೆ ಶಿಕ್ಷಣವೇ ಮಾನದಂಡ


Team Udayavani, Jan 29, 2020, 3:00 AM IST

abhivruddige

ಚಿಕ್ಕಬಳ್ಳಾಪುರ: ಕೇವಲ ಶಸ್ತ್ರಾಸಗಳ ಸಂಗ್ರಹ, ಗಗನಚುಂಬಿ ಕಟ್ಟಡಗಳು ಮತ್ತು ಬೆಲೆಬಾಳುವ ಕಾರುಗಳು ಅಭಿವೃದ್ಧಿಯ ನಿಜವಾದ ಮಾನದಂಡಗಳಲ್ಲ. ಅಭಿವೃದ್ಧಿಯು ಆ ದೇಶದ ಜನತೆಯ ಬುದ್ಧಿ ಮತ್ತು ಭಾವನೆಗಳನ್ನು ಅವಲಂಬಿಸಿದ್ದು, ಜನೆತೆಗೆ ಎಂತಹ ಶಿಕ್ಷಣ ನೀಡಲಾಗುತ್ತಿದೆ ಎಂಬುದರ ಮೇಲೆ ದೇಶದ ಅಭಿವೃದ್ಧಿ ಆಧಾರ ಪಡುತ್ತದೆ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸಂಸ್ಥಾಪಕ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ತಾಲೂಕಿನ ಪೆರೇಸಂದ್ರದ ಶಾಂತ ಸಮೂಹ ಶಿಕ್ಷಣ ಸಂಸ್ಥೆಯ 9 ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಆವಿಷ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಜಪಾನ್‌ ದೇಶವು ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದ ಆ ದೇಶದ ಪ್ರತಿಯೊಬ್ಬ ಪ್ರಜೆಯು ದೇಶದ ಅಭಿವೃದ್ಧಿಗೆ ವೈಯಕ್ತಿಕ ಕೊಡುಗೆ ನೀಡುತ್ತಾನೆ. ಅಲ್ಲಿನ ಶಿಕ್ಷಣ ಅವನನ್ನು ದೇಶದ ಅಭಿವೃದ್ಧಿಯ ನೇರ ಹೊಣೆಗಾರನ್ನನಾಗಿ ರೂಪಿಸುತ್ತದೆ. ಹೀಗಾಗಿಯೇ ಎರಡನೇ ವåಹಾಯುದ್ಧದಲ್ಲಿ ಬಾಂಬುಗಳ ದಾಳಿಗೆ ಸಿಕ್ಕಿ ಛಿದ್ರವಾಗಿದ್ದ ಜಪಾನ್‌ ಕೆಲವೇ ದಶಕಗಳಲ್ಲಿ ಅಭಿವೃದ್ಧಿಯ ಮುಂಚೂಣಿಗೆ ಬಂದಿದೆ ಎಂದರು.

ಮಾಹಿತಿ ಸಂಗ್ರಹ ಶಿಕ್ಷಣವಲ್ಲ: ಆವಿಷ್ಕಾರ್‌ ಎಂದರೆ ಸೃಜನಶೀಲತೆಯಿಂದ ಹೊಸದನ್ನು ಹುಡುಕುವುದು, ಅನ್ವೇಷಕ ಮನಸ್ಸಿನಿಂದ ಜಗತ್ತನು ನೋಡುವ ಮನಸ್ಸು ಮತ್ತು ಕಣ್ಣುಗಳು. ಬರೀ ಮಾಹಿತಿ ಸಂಗ್ರಹ ಶಿಕ್ಷಣವಲ್ಲ, ಏಕಾಗ್ರತೆ ಮತ್ತು ಮನಸ್ಸಿನ ವಿಕಾಸ ನಿಜವಾದ ಶಿಕ್ಷಣವಾಗಿದ್ದು ಅಂತಹ ಮಾನವ ನಿರ್ಮಾಣ ಮತು ರಾಷ್ಟ್ರ ನಿರ್ಮಾಣ ಶಿಕ್ಷಣವನ್ನು ವಿವೇಕಾನಂದರು ಪ್ರತಿಪಾದಿಸಿದ್ದಾರೆ. ಎಲ್ಲಾ ಶಾಲೆಗಳು ಮತ್ತು ಶಿಕ್ಷಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಶಿಕ್ಷಣವು ಕೇವಲ ಮನುಷ್ಯನ ಶರೀರ ವಿಕಾಸಕ್ಕೆ ಸೀಮಿತವಲ್ಲ, ಮನುಷ್ಯ ಕೇವಲ ಜೈವಿಕ ಅಂಶವಲ್ಲ, ಅವನು ಮನೋ ಸಾಮಾಜಿಕ ವಿಷಯಗಳಲ್ಲಿ ವಿಕಾಸವಾಗಿ ಅಭಿವೃದ್ಧಿ ಸಾಧಿಸುತ್ತಾನೆ. ಆದ್ದರಿಂದ ಜೀವನವು ಅರ್ಧ ಸತ್ಯದಿಂದ ಪೂರ್ಣ ಸತ್ಯದ ಕಡೆಗೆ ವಿಕಾಸವಾಗಬೇಕು ಎಂದರು.

ಪೋಷಕರೇ ನಿಜವಾದ ಹೀರೋಗಳು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶೆ ಕೆ.ಎನ್‌.ರೂಪಾ, ಮಕ್ಕಳಿಗೆ ತಂದೆ ತಾಯಿಯೇ ಹಿರೋಗಳು. ಪೋಷಕರಿಗೆ ಮಕ್ಕಳ ಉತ್ತಮ ಭವಿಷ್ಯವೇ ಜೀವನದ ಸರ್ವಸ್ವ, ಅವರು ಮಕ್ಕಳಿಗೆ ತಮ್ಮ ಕಷ್ಟಗಳನ್ನು ಹೇಳುವುದಿಲ್ಲ. ಬದಲಾಗಿ ಮಕ್ಕಳಿಗೆ ಉತ್ತಮ ಭವಿಷ್ಯಕಟ್ಟಿ ಕೊಡುವ ಕನಸು ಹೊಂದಿರುತ್ತಾರೆ ಎಂದರು.

ಮಿಸ್‌ ಕರ್ನಾಟಕ-2016 ಶುಭ ಶ್ರೀರಾಮ ಮಾತನಾಡಿ, ಹಣ ಸಂಪಾದನೆ ಹಾಗೂ ಹೆಸರು ಗಳಿಕೆಯೇ ಜೀವನವಲ್ಲ. ಬದಲಾಗಿ ಸಹ ಮಾನವರ ಬಗ್ಗೆ ಪ್ರೀತಿ, ಕಾರುಣ್ಯ ಅನುಭೂತಿ ಹೊಂದಬೇಕು. ನಮ್ಮಲ್ಲಿರುವ ಪ್ರೀತಿ, ಕರುಣೆ ಮತ್ತು ಬುದ್ಧಿವಂತಿಕೆಯನ್ನು ಸಹ ಹಂಚಿಕೊಂಡರೆ ಅವು ಹಿಮ್ಮಡಿಸುತ್ತವೆ ಮತ್ತು ಇಡೀ ಸಮಾಜಕ್ಕೆ ತಲುಪುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ.ಸುಧಾಕರ್‌, ಉಪ ವಿಭಾಗಾಧಿಕಾರಿ ಎ.ಎನ್‌.ಘುನಂದನ್‌ ಮತ್ತು ಮಿಸ್‌ ಕರ್ನಾಟಕ ಗೌರವ ಹೊಂದಿರುವ ಗಾಯತ್ರಿ ಸಂದೀಪ್‌, ಮಕ್ಕಳಿಗೆ ಅಧ್ಯಯನಶೀಲತೆ ಬಗ್ಗೆ ಹೇಳಿ ನೆನಪಿನ ಕಾಣಿಕೆಗಳನ್ನು ವಿತರಿಸಿದರು. ಡಾ.ಪ್ರೀತಿ ಸುಧಾಕರ್‌ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಕೋಡಿರಂಗಪ್ಪ, ಪೆರೇಸಂದ್ರ ಗ್ರಾಪಂ ಅಧ್ಯಕ್ಷ ಚನ್ನಕೃಷ್ಣಾರೆಡ್ಡಿ, ಪ್ರಾಧ್ಯಾಪಕರಾದ ಅಜೀಷ್‌, ಪೊ›.ಹನುಮಂತರೆಡ್ಡಿ, ದೀಪಕ್‌ ಮ್ಯಾಥ್ಯೂ, ನಸರೀನ್‌ತಾಜ್‌, ಮಮತಾ ಮತ್ತಿತರರು ಇದ್ದರು.

ರಾಷ್ಟ್ರವು ಕೇವಲ ಭೌಗೋಳಿಕ ಪರಿಕಲ್ಪನೆಯಲ್ಲ. ರಾಷ್ಟ್ರವನ್ನು ಭಾವನಾತ್ಮಕ ನೆಲೆಯಿಂದ ಗುರುತಿಸಬೇಕು. ಭಾರತದಲ್ಲಿ ಪ್ರಸ್ತುತ ಪೌರತ್ವ ಕಾನೂನು ಬಗ್ಗೆ ವಿರೋಧ ಮತ್ತ ಪರ ಪ್ರತಿಭಟನೆಗಳು ನಡೆದಿವೆ. ಜನತೆಯು ನಿಜ ಪೌರತ್ವವನ್ನು ಅರ್ಥ ಮಾಡಿಕೊಂಡು ಬಾಳಿದರೆ ದೇಶಕ್ಕೆ ಘನತೆ ಬರುತ್ತದೆ.
-ವೀರೇಶಾನಂದ ಸರಸ್ವತಿ ಸ್ವಾಮೀಜಿ, ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸಂಸ್ಥಾಪಕ ಅಧ್ಯಕ್ಷ

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್‌ ನಿಲ್ದಾಣ  

Chikkaballapur: ಬ್ಯಾಂಕ್‌ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್‌ ವಂಚಕನ ಬಂಧನ

Chikkaballapur: ಬ್ಯಾಂಕ್‌ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್‌ ವಂಚಕನ ಬಂಧನ

Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್‌ ನಿಲ್ದಾಣ

Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್‌ ನಿಲ್ದಾಣ

Gudibande: ಹೆಸರಿಗಷ್ಟೇ ಬಸ್‌ ನಿಲ್ದಾಣ; ಬಸ್‌ಗಳೇ ಬರಲ್ಲ

Gudibande: ಹೆಸರಿಗಷ್ಟೇ ಬಸ್‌ ನಿಲ್ದಾಣ; ಬಸ್‌ಗಳೇ ಬರಲ್ಲ

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.