ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರಳ ಈದ್ ಉಲ್ ಫಿತ್ರ್
Team Udayavani, May 15, 2021, 8:41 PM IST
ಚಿಕ್ಕಬಳ್ಳಾಪುರ: ನಗರ ಸೇರಿ ಜಿಲ್ಲಾದ್ಯಂತಮುಸ್ಲಿಮರ ಪವಿತ್ರ ಹಬ್ಬ ಈದ್ ಉಲ್ ಫಿತ್ರ(ರಂಜಾನ್) ಕೋವಿಡ್ ಮುನ್ನೆಚ್ಚರಿಕೆ ಮಧ್ಯೆಶ್ರದ್ಧಾಭಕ್ತಿಯಿಂದ ಸರಳವಾಗಿ ಆಚರಿಸಲಾಯಿತು.ಶಾಂತಿ, ಸೌರ್ಹಾದತೆ ಮತ್ತು ಸಹಬಾಳ್ವೆ ಪ್ರತೀಕವಾಗಿರುವ ಈದ್ ಉಲ್ ಫಿತ್ರ (ರಂಜಾನ್)ಹಬ್ಬವನ್ನು ಸರ್ಕಾರದ ಆದೇಶದಂತೆ ಸರಳವಾಗಿಮನೆಯಲ್ಲಿ ಆಚರಿಸಲಾಯಿತು. ಕಳೆದ ಒಂದುತಿಂಗಳು ಉಪವಾಸ ವ್ರತ ಆಚರಿಸಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮನೆಯಲ್ಲೇ ನಮಾಜ್:ಸಮಾಜದಲ್ಲಿರುವ ಎಲ್ಲಾಬಡವರು ಹಬ್ಬವನ್ನು ಆಚರಿಸಲು ಜಕಾತ್( ಆದಾಯದಲ್ಲಿನ ಒಂದು ಭಾಗ ದಾನ ಮಾಡುವುದು),ಫಿತರಾ ಮತ್ತು ಸದಾ (ಮನುಷ್ಯನ ಶ್ರೇಯಸ್ಸಿಗೆ ಇದೊಂದು ರೀತಿಯ ದಾನ) ನೆರವೇರಿಸಿಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಹಬ್ಬ ಆಚರಿಸಿದರು.ಕೋವಿಡ್ ನಿಯಂತ್ರಿಸಲು ಕಠಿಣ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ, ಜಿಲ್ಲಾದ್ಯಂತ ವಿವಿಧ ಮಸೀದಿ, ಈದ್ಗಾ ಮೈದಾನದಲ್ಲಿ ಪೊಲೀಸರನ್ನು ನಿಯೋಜಿಸಿ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸ ಲಾಗಿತ್ತು.ಕೆಲವೊಂದು ಪ್ರದೇಶಗಳಲ್ಲಿ ಕುಟುಂಬ ಸದಸ್ಯರುಸೇರಿ ಪ್ರಾರ್ಥನೆ ಸಲ್ಲಿಸಿದರು.
ಸರಳವಾಗಿ ಆಚರಣೆ:ಜಿಲ್ಲೆಯಲ್ಲಿ ಜನತಾ ಕಫೂÂìಮತ್ತು ಲಾಕ್‌ಡೌನ್ ಹಿನ್ನೆಲೆ ಬಟ್ಟೆ ಅಂಗಡಿಗಳನ್ನೂಮುಚ್ಚಿದ್ದರಿಂದ ಬಟ್ಟೆ ಖರೀದಿ ಮಾಡಲೂ ಪರದಾಡುವಂತಾಯಿತು. ಧಾರ್ಮಿಕ ಉಪನ್ಯಾಸಕರುಈ ಹಬ್ಬಕ್ಕೆ ಬಟ್ಟೆ ಖರೀದಿ ಮಾಡುವುದನ್ನು ತ್ಯಾಗಮಾಡಿ ಅದೇ ಹಣದಲ್ಲಿ ಕೊರೊನಾ ಸೋಂಕಿತರಿಗೆಕೈಲಾದಷ್ಟು ಸಹಾಯ ಮಾಡಬೇಕೆಂದು ಸೂಚನೆನೀಡಿದ್ದರಿಂದ ಬಹುತೇಕ ಜನ ಧಾರ್ಮಿಕಮುಖಂಡರ ಆದೇಶ ಪಾಲಿಸಿದರು. ಇನ್ನೂಕೆಲವರು ಹೊಸಬಟ್ಟೆ ಧರಿಸಿ ಮಕ್ಕಳಿಗೆ ಬಟ್ಟೆ ಖರೀದಿಮಾಡಿ ಸರಳವಾಗಿ ಹಬ್ಬ ಆಚರಿಸಿದರು.
ಸಂಬಂಧಿಕರ ಆಗಮನಕ್ಕೆ ಕಡಿವಾಣ: ಕೊರೊನಾಸೋಂಕು ವ್ಯಾಪಕವಾಗಿ ಹರಡಿ ಕೆಲವರುಮೃತಪಡುತ್ತಿರುವ ಘಟನೆಗಳನ್ನು ಕಣ್ಣಾರೆ ಕಂಡುಈ ಬಾರಿಯ ಹಬ್ಬವನ್ನು ಆಚರಿಸಿದ ಬಹುತೇಕಮುಸ್ಲಿಮರು ತಮ್ಮ ಸಂಬಂಧಿಕರ ಮನೆಗಳಿಗೆತೆರಳಲು ಹಿಂಜರಿದಿದ್ದು ವಿಶೇಷವಾಗಿತ್ತು.ರಂಜಾನ್ ಮತ್ತು ಬಕ್ರೀದ್ ಹಬ್ಬಗಳಲ್ಲಿ ಈದ್ಗಾಮೈದಾನಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆಸಲ್ಲಿಸುವ ಪದ್ಧತಿಗೆ ಕಡಿವಾಣ ಹಾಕಲಾಗಿತ್ತು.ಮನೆಯಲ್ಲಿ ಮಾತ್ರ ಪ್ರಾರ್ಥನೆ ಸಲ್ಲಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.