ಶಿಡ್ಲಘಟ್ಟದಲ್ಲಿ ಇಕೆವೈಸಿ ಅವಾಂತರ, ಪಡಿತರ ವಂಚಿತ


Team Udayavani, Jan 18, 2020, 3:00 AM IST

shidlagatta

ಶಿಡ್ಲಘಟ್ಟ: ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ಕುಟುಂಬ ಸದಸ್ಯರು ಕಡ್ಡಾಯವಾಗಿ ಇಕೆವೈಸಿ ಅಪ್‌ಡೇಟ್‌ ಮಾಡಬೇಕೆಂದು ಸರ್ಕಾರದ ಸೂಚನೆ ಗ್ರಾಹಕರ ಪಾಲಿಗೆ ಮುಳುವಾಗಿ ಪರಿಣಮಿಸಿದೆ.

ಶಿಡ್ಲಘಟ್ಟ ನಗರ ಸೇರಿದಂತೆ ತಾಲೂಕಿನಾದ್ಯಂತ ಪಡಿತರಚೀಟಿ ಹೊಂದಿರುವ ಪ್ರತಿಯೊಂದು ಕುಟುಂಬದ ಮುಖ್ಯಸ್ಥರು ಮತ್ತು ಸದಸ್ಯರು ಸರ್ಕಾರಿ ನ್ಯಾಯಬೆಲೆ ಅಂಗಡಿಯವರ ಲಾಗಿನ್‌ನಲ್ಲಿ ಉಚಿತವಾಗಿ ಇಕೆವೈಸಿ ಅಪ್‌ಡೇಟ್‌ ಮಾಡಲು ಸರ್ಕಾರ ಅವಕಾಶ ಕಲ್ಪಿಸಿತ್ತು. ಆದರೆ ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ತಂತ್ರಾಂಶದಲ್ಲಿ ಇಕೆವೈಸಿ ಮಾಡುವ ಸಂದರ್ಭದಲ್ಲಿ ಸರ್ವರ್‌ ಕಿರಿಕಿರಿಯಿಂದ ಗ್ರಾಹಕರು ಮತ್ತು ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ನೆಮ್ಮದಿ ಭಂಗವಾಗಿತ್ತು.

ಜನವರಿ ತಿಂಗಳಿನ ಪಡಿತರ ವಂಚಿತ: ಅಂರ್ತಜಾಲದ ಸಮಸ್ಯೆಯಿಂದ ಕೆಂಗೆಟ್ಟ ಕೆಲ ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸೂಚನೆ ಮೇರೆಗೆ ಗ್ರಾಹಕರು ಸೈಬರ್‌ ಕೇಂದ್ರಗಳಲ್ಲಿ ಜಿ.ಎಸ್‌.ಸಿ ಮುಖಾಂತರ ಇಕೆವೈಸಿ ಮಾಡಿದ್ದರಿಂದ ಪಡಿತರ ಚೀಟಿಯ ಸಂಖ್ಯೆ ಬದಲಾವಣೆಯಾಗಿ ಸುಮಾರು 200 ಮಂದಿ ಗ್ರಾಹಕರಿಗೆ ಜನವರಿ ತಿಂಗಳಿನ ಪಡಿತರದಿಂದ ವಂಚಿತಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಗ್ರಾಹಕರು ಆತಂಕ: ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಅಧಿಕಾರಿಗಳು ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಮಾತ್ರ ಇಕೆವೈಸಿ ಮಾಡಬೇಕೆಂದು ಸೂಚನೆ ನೀಡಿದರೂ ಸಹ ಗ್ರಾಹಕರು ಸೈಬರ್‌ ಕೇಂದ್ರಗಳಲ್ಲಿ ಇಕೆವೈಸಿ ಮಾಡಿದ್ದ ಫ‌ಲದಿಂದಾಗಿ ಪಡಿತರ ಭಾಗ್ಯದಿಂದ ವಂಚಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೈಬರ್‌ ಕೇಂದ್ರದಲ್ಲಿ ಇಕೆವೈಸಿ ಮಾಡಿಕೊಂಡು ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿರುವ ಗ್ರಾಹಕರಿಗೆ ನಿಮ್ಮ ಪಡಿತರ ಚೀಟಿಗೆ ಈ ಮಾಹೆಯಲ್ಲಿ ಆಹಾರಧಾನ್ಯಗಳು ಬಂದಿಲ್ಲ. ಮುಂದಿನ ತಿಂಗಳು ನಿಮ್ಮ ಪಡಿತರ ಚೀಟಿಗೆ ರೇಷನ್‌ ಬರುತ್ತದೆ ಎಂದು ಸಿದ್ಧ ಉತ್ತರ ಲಭಿಸುತ್ತಿದ್ದು, ಗ್ರಾಹಕರು ಆತಂಕಗೊಂಡಿದ್ದಾರೆ.

ಆಹಾರ ಇಲಾಖೆಗೆ ಲಗ್ಗೆ: ಪಡಿತರ ಚೀಟಿ ಹೊಂದಿರುವ ಗ್ರಾಹಕರು ಸೈಬರ್‌ ಕೇಂದ್ರಗಳಲ್ಲಿ ಇಕೆವೈಸಿ ಮಾಡಿದ್ದ ಫ‌ಲದಿಂದಾಗಿ ಜನವರಿ ಮಾಹೆಯಲ್ಲಿ ರೇಷನ್‌ಭಾಗ್ಯದಿಂದ ವಂಚಿತಗೊಂಡ ಬಳಿಕೆ ದಿಢೀರ್‌ ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಕಚೇರಿಗೆ ದೌಡಾಯಿಸಿ ಈ ಮಾಹೆಯಲ್ಲಿ ನಮಗೆ ರೇಷನ್‌ ಬಂದಿಲ್ಲ. ಡಿಪೋ ಅವರನ್ನು ಕೇಳಿದರೆ ನಿಮಗೆ ರೇಷನ್‌ ಬಂದಿಲ್ಲ ಎನ್ನುತ್ತಾರೆ.

ನಾವು ಬಡವರು ಪಡಿತರಚೀಟಿಯಲ್ಲಿ ಬರುವ ಆಹಾರ ಪದಾರ್ಥಗಳನ್ನು ನಂಬಿ ಜೀವನ ನಡೆಸುತ್ತಿದ್ದೇವೆ. ಡಿಪೋ ಅವರು ಹೇಳಿದಂತೆ ನಾವು ಸೈಬರ್‌ ಕೇಂದ್ರಗಳಲ್ಲಿ ಇಕೆವೈಸಿ ಮಾಡಿದ್ದೇವೆ. ಆದರೆ ರೇಷನ್‌ ಇಲ್ಲವೆಂದರೇ ಏನು ಮಾಡಬೇಕು ಎಂದು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.

ರೇಷನ್‌ ಡಿಪೋ ಮಾಲೀಕರ ಮೇಲೆ ಕ್ರಮಜರುಗಿಸಿ: ಸೈಬರ್‌ ಕೇಂದ್ರಗಳಲ್ಲಿ ಇಕೆವೈಸಿ ಮಾಡಬಾರದು ಎಂದು ಆಹಾರ ಇಲಾಖೆಯಿಂದ ಸ್ಪಷ್ಟ ಸೂಚನೆ ಇದ್ದರೂ ಸಹ ಗ್ರಾಹಕರನ್ನು ಸೈಬರ್‌ ಕೇಂದ್ರಗಳಿಗೆ ಕಳುಹಿಸಿದ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಮಾಲೀಕರು ಯಾರು? ಸರ್ವರ್‌ ಕಿರಿಕಿರಿ ನೆಪವೊಡ್ಡಿ ಇಕೆವೈಸಿಗೆ ಸೈಬರ್‌ ಕೇಂದ್ರಗಳಿಗೆ ಕಳುಹಿಸಿ ಕರ್ತವ್ಯ ಲೋಪವೆಸಗಿರುವ ನ್ಯಾಯಬೆಲೆ ಅಂಗಡಿ ಮಾಲೀಕರ ಪರವಾನಿಗೆ ರದ್ದುಗೊಳಿಸಬೇಕೆಂದು ಗ್ರಾಹಕರು ಮನವಿ ಮಾಡಿದ್ದಾರೆ.

ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಸಮರ್ಪಕವಾಗಿ ಇಕೆವೈಸಿ ಮಾಡಿದರೇ ಗ್ರಾಹಕರು ರೇಷನ್‌ಭಾಗ್ಯದಿಂದ ವಂಚಿತಗೊಳ್ಳುತ್ತಿರಲಿಲ್ಲ. ಆಹಾರ ಭದ್ರತಾ ಕಾಯ್ದೆಯಡಿ ತನಿಖೆ ನಡೆಸಿ ರೇಷನ್‌ ಡಿಪೋ ಮಾಲೀಕರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯ ಕೇಳಿಬಂದಿದೆ.

ಉಪನಿರ್ದೇಶಕರಿಗೆ ಮನವಿ ಸಲ್ಲಿಕೆ: ಪಡಿತರಚೀಟಿದಾರರಿಗೆ ತಪ್ಪು ಮಾಹಿತಿ ನೀಡಿ ಸೈಬರ್‌ ಕೇಂದ್ರಗಳಲ್ಲಿ ಇಕೆವೈಸಿ ಅಪ್‌ಡೇಟ್‌ ಮಾಡಿರುವ ಪ್ರಕರಣಗಳು ಗಂಭೀರವಾಗಿ ಪರಿಗಣಿಸಿರುವ ತಾಲೂಕು ದಂಡಾಧಿಕಾರಿ ಎಂ.ದಯಾನಂದ್‌ ಕಾನೂನು ಬಾಹಿರವಾಗಿ ಇಕೆವೈಸಿ ಮಾಡಿರುವ ಸೈಬರ್‌ ಕೇಂದ್ರಗಳಿಗೆ ನೋಟಿಸ್‌ ಜಾರಿಗೊಳಿಸಿ ಗ್ರಾಹಕರಿಗೆ ದಿಕ್ಕು ತಪ್ಪಿಸಿದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಮತ್ತೂಂದೆಡೆ ಸೈಬರ್‌ ಕೇಂದ್ರಗಳಿಂದ ಆಗಿರುವ ಅವಾಂತರದಿಂದ ಪಡಿತರಭಾಗ್ಯದಿಂದ ವಂಚಿತಗೊಂಡಿರುವ ಗ್ರಾಹಕರಿಗೆ ರೇಷನ್‌ ಭಾಗ್ಯ ಕರುಣಿಸಲು ಅನುವು ಮಾಡಿಕೊಡಬೇಕೆಂದು ತಾಲೂಕು ಆಡಳಿತ ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ವ್ಯವಹಾರ ನಡೆಸಿ ಮನವಿ ಮಾಡಿದ್ದಾರೆ.

ಸೈಬರ್‌ ಕೇಂದ್ರಗಳಿಗೆ ಮೂಗುದಾರ: ಶಿಡ್ಲಘಟ್ಟ ನಗರ ಸೇರಿದಂತೆ ತಾಲೂಕಿನಾದ್ಯಂತ ಇರುವ ಸೈಬರ್‌ ಕೇಂದ್ರಗಳಲ್ಲಿ ಇಕೆವೈಸಿ ಪಡೆಯಲು ಸರ್ಕಾರ ನಿಗದಿಪಡಿಸಿರುವ ದರಕ್ಕಿಂತಲೂ ಅಧಿಕವಾಗಿ ವಸೂಲಿ ಮಾಡುತ್ತಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿಗಳು ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪನಿರ್ದೇಶಕರಿಗೆ ದೂರು ಸಲ್ಲಿಸಿರುವುದರಿಂದ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಲು ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.

ತನಿಖೆ ನಡೆಸಿದ ತಂಡ ಗ್ರಾಹಕರನ್ನು ಪ್ರಶ್ನಿಸಿದಾಗ ಕೆಲ ಸೈಬರ್‌ ಕೇಂದ್ರಗಳಲ್ಲಿ ಕಾನೂನುಬಾಹಿರವಾಗಿ ಇಕೆವೈಸಿ ಮಾಡುವ ಜೊತೆಗೆ ಜಿ.ಎಸ್‌.ಸಿಗೆ ಬರುವ ಗ್ರಾಹಕರನ್ನು ಮನಸೋ ಇಚ್ಛೆ ಅಂದರೆ 100-200 ರೂ.ವರೆಗೆ ಸುಲಿಗೆ ಮಾಡುತ್ತಿದ್ದಾರೆ ಎಂದು ದೂರುಗಳು ಕೇಳಿಬಂದಿದ್ದರಿಂದ ತಾಲೂಕು ಆಡಳಿತ ಸೈಬರ್‌ ಕೇಂದ್ರಗಳಿಗೆ ಮೂಗುದಾರ ಹಾಕಲು ನಿರ್ಧರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಮತ್ತು ಹೆಸರು ತೆಗೆಯಲು, ನ್ಯಾಯಬೆಲೆ ಅಂಗಡಿ ವಿಳಾಸ ಬದಲಾವಣೆ, ಹೊಸ ಪಡಿತರಚೀಟಿಗೆ ಅರ್ಜಿ ಸಲ್ಲಿಸಲು ಕೇವಲ 50 ರೂ.ಮಾತ್ರ ಪಡೆಯಬೇಕೆಂದು ಸೈಬರ್‌ ಕೇಂದ್ರಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಜೊತೆಗೆ ಸೈಬರ್‌ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ಇಕೆವೈಸಿ ಮಾಡಬಾರದೆಂದು ಖಡಕ್‌ ಎಚ್ಚರಿಕೆ ನೀಡಲಾಗಿದೆ.

ಪಡಿತರವನ್ನು ವಿತರಿಸಲು ಮನವಿ – ತಹಶೀಲ್ದಾರ್‌:
ಶಿಡ್ಲಘಟ್ಟ ನಗರ ಸೇರಿದಂತೆ ತಾಲೂಕಿನಲ್ಲಿ ಸೈಬರ್‌ ಕೇಂದ್ರಗಳಲ್ಲಿ ಇಕೆವೈಸಿ ಮಾಡಿರುವ ಗ್ರಾಹಕರಿಗೆ ಜನವರಿ ಮಾಹೆಯ ಪಡಿತರ ಸ್ಥಗಿತಗೊಳಿಸಲಾಗಿದೆ. ಮಾನವೀಯತೆಯ ದೃಷ್ಟಿಯಿಂದ ಜನವರಿ ಮಾಹೆಯಲ್ಲಿ ಪಡಿತರಭಾಗ್ಯದಿಂದ ವಂಚಿತಗೊಂಡಿರುವ ಗ್ರಾಹಕರಿಂದ ಆಗಿರುವ ತಾಂತ್ರಿಕ ಲೋಪವನ್ನು ಸರಿಪಡಿಸಿಕೊಂಡು ಎಲ್ಲಾ ಅರ್ಹ ಪಡಿತರಚೀಟಿದಾರರಿಗೆ ಪಡಿತರವನ್ನು ವಿತರಿಸಲು ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಮಾಡಿದ್ದೇವೆ ಎಂದು ಶಿಡ್ಲಘಟ್ಟ ತಾಲೂಕು ತಹಶೀಲ್ದಾರ್‌ ಎಂ.ದಯಾನಂದ್‌ ತಿಳಿಸಿದ್ದಾರೆ.

ಇಲಾಖೆ ಅಧಿಕಾರಿಗಳು ಗ್ರಾಹಕರ ಹಿತದೃಷ್ಟಿಯಿಂದ ಜನವರಿ ಮಾಹೆಯ ಪಡಿತರವನ್ನು ಬಿಡುಗಡೆ ಮಾಡುವ ವಿಶ್ವಾಸ ತಮಗಿದೆ. ಕಾನೂನು ಬಾಹಿರವಾಗಿ ಇಕೆವೈಸಿ ಮಾಡಿರುವ ಸೈಬರ್‌ ಕೇಂದ್ರಗಳಿಗೆ ಈಗಾಗಲೇ ಎಚ್ಚರಿಕೆ ನೋಟಿಸ್‌ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರಿಂದ ದೂರು ಬಂದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

* ಎಂ.ಎ.ತಮೀಮ್‌ ಪಾಷ

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.