ಜನರಿಲ್ಲದೇ ಭಣಗುಡುತ್ತಿವೆ ಸರ್ಕಾರಿ ಕಚೇರಿಗಳು! 


Team Udayavani, Apr 26, 2023, 4:13 PM IST

ಜನರಿಲ್ಲದೇ ಭಣಗುಡುತ್ತಿವೆ ಸರ್ಕಾರಿ ಕಚೇರಿಗಳು! 

ಚಿಕ್ಕಬಳ್ಳಾಪುರ: ಸದಾ ಸಾರ್ವಜನಿಕರಿಂದ ಗಿಜಿಗುಡುತ್ತಿದ್ದ ಸರ್ಕಾರಿ ಕಚೇರಿಗಳು ಈಗ ಅಕ್ಷರಶಃ ಜಿಲ್ಲಾದ್ಯಂತ ಭಣಗುಡು ತ್ತಿವೆ. ಯಾವ ಸರ್ಕಾರಿ ಕಚೇರಿಗೆ ಕಾಲಿಟ್ಟರೂ ಅಧಿಕಾರಿಗಳ ಖಾಲಿ ಕುರ್ಚಿಗಳ ದರ್ಶನ ವಾಗುತ್ತಿವೆ. ಅಪರೂಪಕ್ಕೆ ಕಚೇರಿ ನೌಕರರು, ಸಿಬ್ಬಂದಿ ಕಂಡು ಬಂದರೂ ಸಾಹೇ ಬರು ಇಲ್ಲ, ಚುನಾವಣೆ ಡ್ನೂಟಿ ಯಲ್ಲಿ ಇದ್ದಾರೆಂಬ ಸಿದ್ಧ ಉತ್ತರ ಅಧಿಕಾರಿಗಳ ಕಚೇರಿ ಅಂಗಳದಲ್ಲಿ ಕೇಳಿ ಬರುತ್ತಿದೆ.

ಹೌದು, ರಾಜ್ಯಾದ್ಯಂತ ಮೇ 10 ಕ್ಕೆ ನಿಗದಿಯಾಗಿರುವ ವಿಧಾನಸಭಾ ಚುನಾವಣೆಯ ಪರಿಣಾಮ ಈಗ ಜಿಲ್ಲಾದ್ಯಂತ ಸರ್ಕಾರಿ ಅಧಿಕಾರಿಗಳು, ನೌಕರರು ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿರುವುದರಿಂದ ಕಚೇರಿಗಳು ಸಾರ್ವಜನಿಕರಲ್ಲದೇ ಬೀಕೋ ಎನ್ನುತ್ತಿದ್ದು, ಸಮಸ್ಯೆ ಹೊತ್ತು ಬರುವ ಸಾರ್ವಜನಿಕರಿಗೆ ಅಧಿಕಾರಿಗಳ ದರ್ಶನ ಆಗದೇ ಬರಿಗೈಯಲ್ಲಿ ವಾಪಸ್‌ ಹೋಗುವಂತಾಗಿದೆ.

ತಾಲೂಕು ಕೇಂದ್ರಗಳಲ್ಲಿ ಪರಿಸ್ಥಿತಿ ಭಿನ್ನವಿಲ್ಲ: ಜಿಲ್ಲಾ ಕೇಂದ್ರದಲ್ಲಿಯ ಪರಿಸ್ಥಿತಿಯಂತೆ ತಾಲೂಕು ಕೇಂದ್ರ ಗಳಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿ ಇಲ್ಲ. ಬಹುತೇಕ ಸರ್ಕಾರಿ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿ ಪ್ಲೆ„ಯಿಂಗ್‌ ಸ್ಕ್ವಾಡ್‌, ಸ್ವೀಪ್‌ ಕಾರ್ಯಕ್ರಮಗಳಿಗೆ, ಚೆಕ್‌ ಪೋಸ್ಟ್‌ ತಪಾಸಣೆ, ವಿಡಿಯೋ ಸರ್ವಲೆನ್ಸ್‌, ರಾಜಕೀಯ ಪಕ್ಷಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ನೇಮಕ ಆಗಿರುವುದರಿಂದ ತಾಲೂಕು ಕಚೇರಿಗಳಲ್ಲಿ ಅಧಿಕಾರಿ, ಸಿಬ್ಬಂದಿ ಇಲ್ಲದೇ ಕಚೇರಿಗಳು ಬಿಕೋ ಎನ್ನುತ್ತಿವೆ.

ಚುನಾವಣಾ ಕಾರ್ಯಗಳಿಗೆ ಸೀಮಿತ: ತಾಲೂಕು ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದರೂ ಚುನಾ ವಣಾ ಕಾರ್ಯಗಳಿಗೆ ಮಾತ್ರ ಸೀಮಿತವಾಗಿದ್ದು, ಅದರಲ್ಲೂ ಸಾರ್ವಜನಿಕರ ಪ್ರವೇಶ ಕಷ್ಟಕರವಾಗಿದೆ. ಚುನಾವಣಾ ಕಾರ್ಯಗಳನ್ನು ಹೊರತುಪಡಿಸಿ ಬೇರೆ ಯಾವುದರ ಕಡೆಯೂ ಅಧಿಕಾರಿ, ಸಿಬ್ಬಂದಿಗೆ ಗಮನ ಇಲ್ಲ. ಹೀಗಾಗಿ ಸಾರ್ವಜನಿಕರ ಸಮಸ್ಯೆ, ಸಂಕಷ್ಟ ಕೇಳುವವರೇ ಇಲ್ಲವಾಗಿದೆ.

ಜಾತಿ, ಆದಾಯ ಪ್ರಮಾಣ ಪತ್ರಕ್ಕೆ ಪರದಾಟ: ಸದ್ಯ ಶಾಲಾ, ಕಾಲೇಜುಗಳ ಶೈಕ್ಷಣಿಕ ವರ್ಷ ಆರಂಭಗೊಳ್ಳಲು ದಿನಗಣನೆ ಶುರುವಾಗಿದ್ದು, ವಿದ್ಯಾರ್ಥಿ ಪೋಷಕರು, ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲು ಇನ್ನಿಲ್ಲದಂತೆ ಪರದಾಡಬೇಕಿದೆ. ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಹೋಬಳಿ, ಹಳ್ಳಿ ಮಟ್ಟ ದಲ್ಲಿ ಚುನಾವಣಾ ಕಾರ್ಯದಲ್ಲಿ ನಿಯೋಜನೆಗೊಂಡಿ ರುವುದರಿಂದ ಅವರು ಸಾರ್ವಜನಿಕರ ಕೈಗೆ ಸಿಗುವುದು ದೊಡ್ಡ ಸವಾಲಾಗಿದೆ.

ಕಚೇರಿ ಬಾಗಿಲುಗಳ ಮೇಲೆ ಸಹಕರಿಸುವಂತೆ ಕೋರುವ ಫ‌ಲಕಗಳು!: ನಮ್ಮ ಕಚೇರಿಯ ಸಾಹೇಬರು, ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸಂಪೂರ್ಣವಾಗಿ ಚುನಾವಣಾ ಕಾರ್ಯದಲ್ಲಿಯೇ ಮಗ್ನ ಆಗಿರುವುದರಿಂದ ಚುನಾವಣೆ ಮುಗಿಯುವರೆಗೂ ಸಾರ್ವಜನಿಕರ ಸೇವೆಗಳಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ದಯವಿಟ್ಟು ಸಾರ್ವಜನಿಕರು, ರೈತರು ಸಹಕರಿಸಬೇಕು. ಹೀಗೆಂಬ ವಿನಂತಿ ಮಾಡುವ ನಾಮಫ‌ಲಕ ಹಾಕಿರುವುದು ಪ್ರತಿ ಕಚೇರಿ ಕಟ್ಟಡ, ಬಾಗಿಲುಗಳ ಮೇಲೆ ಅಂಟಿಸಲಾಗಿದೆ.

ಬಿಕೋ ಎನ್ನುತ್ತಿರುವ ಶಕ್ತಿ ಕೇಂದ್ರ ಜಿಲ್ಲಾಡಳಿತ ಭವನ: ಜಿಲ್ಲೆಯ ಆಡಳಿತದ ಶಕ್ತಿ ಕೇಂದ್ರವಾಗಿರುವ ಜಿಲ್ಲಾಡಳಿತ ಭವನಕ್ಕೂ ಈಗ ಚುನಾವಣೆ ಬಿಸಿ ತಟ್ಟಿದ್ದು, ಬಹುತೇಕ ಸರ್ಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ವಿವಿಧ ಹೊಣೆಗಳನ್ನು ಹೊತ್ತು ಕಾರ್ಯನಿರ್ವಹಿಸುತ್ತಿರುವುದರಿಂದ ಕಚೇರಿಗಳು ಬಾಗಿಲು ತೆರೆದಿದ್ದರೂ ಅಧಿಕಾರಿಗಳು ಕಂಡು ಬರುತ್ತಿಲ್ಲ. ಹೀಗಾಗಿ ಸದಾ ಜನರಿಂದ ತುಂಬಿರುತ್ತಿದ್ದ ಜಿಲ್ಲಾಡಳಿತ ಭವನ ಸದ್ಯ ಬಿಕೋ ಎನ್ನುತ್ತಿದೆ.

ಅಪರೂಪಕ್ಕೆ ಒಮ್ಮೆ ಅಧಿಕಾರಿಗಳು ಕಚೇರಿಗಳಿಗೆ ಬಂದು ಹೋಗುವುದು ಬಿಟ್ಟರೆ ಬಹುತೇಕ ಸಮಯ ಚುನಾವಣಾ ಕಾರ್ಯದ ಹಿನ್ನೆಲೆಯಲ್ಲಿ ಹೊರಗೆ ಕೆಲಸ ಮಾಡುತ್ತಿರುವುದರಿಂದ ಜನರ ಓಡಾಟ, ಸಂಪರ್ಕ ಇಲ್ಲ. ಆದ್ದರಿಂದ ಶಕ್ತಿ ಕೇಂದ್ರಕ್ಕೆ ಮಂಕು ಕವಿದಂತಾಗಿದೆ. ಚುನಾವಣೆ ಮುಗಿಯುವರೆಗೂ ಜಿಲ್ಲಾಡಳಿತ ಭವನದ ಪರಿಸ್ಥಿತಿ ಇದೇ ರೀತಿ ಇರಲಿದೆ.

ವ್ಯಾಪಾರ ಕುಸಿತಕ್ಕೆ ಅಂಗಡಿ ವ್ಯಾಪಾರಿಗಳ ಹೈರಾಣ: ಜಿಲ್ಲಾಡಳಿತ ಭವನಕ್ಕೆ ಬರುವ ಅಧಿಕಾರಿಗಳು, ಸಾರ್ವಜನಿಕರನ್ನು ನಂಬಿಕೊಂಡು ಡೀಸಿ ಕಚೇರಿ ಹೊರಗೆ ಸಾಕಷ್ಟು ಸಂಖ್ಯೆಯಲ್ಲಿ ಅಂಗಡಿ ಮುಂಗಟ್ಟುಗಳು ತಲೆ ಎತ್ತಿವೆ. ಅದರಲ್ಲೂ ಹೋಟೆಲ್‌, ಜೆರಾಕ್ಸ್‌, ಕಾಂಡಿಮೆಂಟ್ಸ್‌ ಅಂಗಡಿಗಳು ಅಪಾರ ಸಂಖ್ಯೆಯಲ್ಲಿವೆ. ಆದರೆ ಚುನಾವಣೆ ಮಾದರಿ ನೀತಿ ಸಂಹಿತೆ ಜೊತೆಗೆ ಬಹುತೇಕ ಅಧಿಕಾರಿಗಳು ಕಚೇರಿಗಳತ್ತ ಸುಳಿಯದೇ ಜನರೂ ಅತ್ತ ಹೋಗುತ್ತಿಲ್ಲ. ತಿಂಗಳ ಸಾವಿರಾರೂ ರೂ. ಬಾಡಿಗೆ ಕಟ್ಟುವ ಅಂಗಡಿ ಮಳಿಗೆ ವರ್ತಕರು ದಿನ ನಿತ್ಯದ ವ್ಯಾಪಾರ ವಹಿವಾಟು ಕುಸಿದು ಆರ್ಥಿಕವಾಗಿ ತೀವ್ರ ಹೈರಾಣುವ ಸ್ಥಿತಿಗೆ ತಲುಪಿದ್ದಾರೆ.

– ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

JDS leader hits at Chikkaballapura

Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrested

Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

1-idpp

Actor; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಟಿ ಡಿಂಪಲ್‌ ಕಪಾಡಿಯಾ

1-kukke

Kukke Subrahmanya: ಕಿರುಷಷ್ಠಿ ರಥೋತ್ಸವ

1-mang

Mangaluru ಧರ್ಮಪ್ರಾಂತ;ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.