ತಂಬಾಕಿನಿಂದ ಮನುಷ್ಯನ ದೇಹಕ್ಕಲ್ಲದೆ, ಪರಿಸರಕ್ಕೂ ಹಾನಿ
Team Udayavani, May 28, 2022, 3:30 PM IST
ಚಿಕ್ಕಬಳ್ಳಾಪುರ: ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ವಿಶ್ವದಾದ್ಯಂತಆಚರಿಸಲಾಗುತ್ತಿದ್ದು, ಈ ವರ್ಷದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ತಂಬಾಕು ಪರಿಸರಕ್ಕೆಮಾರಕ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ನಂದಿ ಗಿರಿಧಾಮದಲ್ಲಿ ತಂಬಾಕಿನಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಪರಿಸರ ಸ್ವಚ್ಛತಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್. ಕಬಾಡೆ ಚಾಲನೆ ನೀಡಿ ಮಾತನಾಡಿ, ನಂದಿ ಗಿರಿಧಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳಾದ, ನಿಸರ್ಗ ಸೊಸೈಟಿ, ಕೂರ್ ಸಂಸ್ಥೆ, ಆಶಾಫೌಂಡೇಶನ್, ಸೌಖ್ಯ ಸಂಜೀವಿನಿ ಸಂಸ್ಥೆಗಳಸಹಭಾಗಿತ್ವದೊಂದಿಗೆ ಬೀಡಿ, ಸಿಗೇರೇಟ್ ಹಾಗೂಇತರೆ ತಂಬಾಕಿನ ಉತ್ಪನ್ನಗಳ ತ್ಯಾಜ್ಯವನ್ನು ಸ್ವಚ್ಛಗೊಳಿಸುವುದರ ಮೂಲಕ ಪರಿಸರ ಸ್ವತ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತಂಬಾಕು ಜೀವ ಸಂಕುಲಕ್ಕೆ ಅಪಾಯ: ತಂಬಾಕು ಸೇವನೆಯಿಂದ ಮನುಷ್ಯನ ದೇಹಕ್ಕೆ ಅಷ್ಟೇಅಲ್ಲದೆ, ಪರಿಸರಕ್ಕೂ ಸಹ ಹಾನಿ ಉಂಟಾಗುತ್ತದೆ. ಪ್ರತಿ ವರ್ಷ 7,66,571 ಮೆಟ್ರಿಕ್ ಟನ್‌ನಷ್ಟುಸಿಗರೇಟ್ ತುಂಡುಗಳಿಂದ ತ್ಯಾಜ್ಯವು ಪರಿಸರದಲ್ಲಿ ವಿಲೀನಗೊಳ್ಳುತ್ತದೆ. ಈ ಸಿಗರೇಟ್ ತುಂಡುಗಳಲ್ಲಿರುವ ನಿಕೋಟಿನ್, ಲೆಡ್, ಪ್ಲಾಸ್ಟಿಕ್‌ನಂತಹ ವಸ್ತುಗಳಿಂದ ನೀರು ಕಲುಷಿತವಾಗಿ ನೀರಿನಲ್ಲಿ ವಾಸಿಸುವ ಜಲಚರಗಳು ಹಾಗೂನೀರನ್ನು ಸೇವಿಸುವ ದನಕರುಗಳು, ಪ್ರಾಣಿ-ಪಕ್ಷಿಗಳಿಗೆ ಅಪಾಯವಾಗುತ್ತಿದೆ ಎಂದು ತಿಳಿಸಿದರು.
ಧೂಮಪಾನದಿಂದ ಆರೋಗ್ಯ ಸಮಸ್ಯೆ: ಪ್ರತಿ ವರ್ಷ ವಿಶ್ವದಲ್ಲಿ 6 ಟ್ರಿಲಿಯನ್ ಸಿಗರೇಟುಉಪಯೋಗಿಸುವುದರಿಂದ ವಾತವರಣದಲ್ಲಿಇಂಗಾಲದ ಡೆ„ ಆಕ್ಸೆ„ಡ್ ಹೆಚ್ಚಾಗಿ ಹವಾಮಾನ ಬದಲಾವಣೆಯಾಗುತ್ತಿದೆ. ಪರೋಕ್ಷಧೂಮಪಾನದಿಂದ ಬರುವ ಹೊಗೆಯಿಂದಸಾರ್ವಜನಿಕರಿಗೂ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಯಲ್ಲಾರಮೇಶ್ ಬಾಬು, ಐಎಂಎ ಭಾರತೀಯವೈದ್ಯಕೀಯ ಸಂಘದ ಡಾ.ವಿಜಯ ಮತ್ತುಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.