Farmers: 64 ಕೋಟಿ ಪೈಕಿ ರೈತರಿಗೆ ಸಿಕ್ಕಿದ್ದು 14 ಕೋಟಿ ಬರ ಪರಿಹಾರ!
Team Udayavani, Jan 27, 2024, 1:39 PM IST
ಸಾಂದರ್ಭಿಕ ಚಿತ್ರ
ಚಿಕ್ಕಬಳ್ಳಾಪುರ: ತೀವ್ರ ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ ಘೋಷಣೆಯಾಗಿ ನಾಲ್ಕೈದು ತಿಂಗಳು ಕಳೆದರೂ ಇನ್ನೂ ಬರ ಪರಿಹಾರ ಪೂರ್ಣ ಪ್ರಮಾಣದಲ್ಲಿ ಸಿಗದೇ ಅನ್ನದಾತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಜಿಲ್ಲೆಯ ರೈತರಿಗೆ ಒಟ್ಟು ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 64 ಕೋಟಿ ಬಿಡುಗಡೆ ಆಗಬೇಕಿದ್ದರೂ, ರೈತರಿಗೆ ಸದ್ಯ ಸಿಕ್ಕಿರುವುದು ಬರೀ 14 ಕೋಟಿ ಮಾತ್ರ. ಹೌದು, ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಿ ಪರಿಹಾರ ಕೊಡಲಿಲ್ಲ ಎಂದು ಹೇಳಿ ರಾಜ್ಯ ಸರ್ಕಾರ ಕೇಂದ್ರದ ಬರ ಪರಿಹಾರಕ್ಕೆ ಕಾಯದೇ ರೈತರಿಗೆ ಕನಿಷ್ಠ 2000 ರೂ. ಪರಿಹಾರ ಮೀರದಂತೆ ರೈತರಿಗೆ ಪಾವತಿಸಲು ಜಿಲ್ಲೆಗೆ ಇಲ್ಲಿವರೆಗೂ 14.31 ಕೋಟಿ ಅನುದಾನ ಮಾತ್ರ ಬಿಡುಗಡೆ ಮಾಡಿದೆ.
ಜಿಲ್ಲಾದ್ಯಂತ ಮುಂಗಾರು ಹಂಗಾಮಿನಲ್ಲಿ ಬರೋಬ್ಬರಿ 75,208.2 ಹೆಕ್ಟೇರ್ ಪ್ರದೇಶದ ಬೆಳೆ ನಷ್ಟವಾಗಿದ್ದು, ಸದರಿ ಬೆಳೆಗಳಿಗೆ ಸರ್ಕಾರದಿಂದ ಎನ್ ಡಿಆರ್‌ಎಫ್ ಮಾರ್ಗಸೂಚಿಯಂತೆ ಕನಿಷ್ಠ ಜಿಲ್ಲೆಗೆ 64 ಕೋಟಿ ಅನುದಾನ ಬಿಡುಗಡೆ ಆಗಬೇಕಿತ್ತು. ಆದರೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಮನವಿ ಸಲ್ಲಿಸಿದರೂ, ಇನ್ನೂ ಬರ ಪರಿಹಾರ ಹಣ ಬಿಡುಗಡೆಗೊಳ್ಳದ ಕಾರಣ ರಾಜ್ಯ ಸರ್ಕಾರವೇ ರೈತರಿಗೆ 2000 ರೂ. ಪರಿಹಾರ ವಿತರಣೆಗೆ ಮುಂದಾಗಿದ್ದರೂ, ಬಹಳಷ್ಟು ರೈತರಿಗೆ ಸದ್ಯಕ್ಕೆ ಸಾವಿರ ರೂ.ಪರಿಹಾರ ಮಾತ್ರ ಕೈಗೆಟುವಂತಾಗಿದ್ದು, ಇನ್ನೂ ಸಾವಿರಾರು ರೈತರಿಗೆ ಬರ ಪರಿಹಾರ ಗಗನಕುಸಮವಾಗಿದೆ. 14.31 ಕೋಟಿ ಜಮೆ: ಸದ್ಯ ಮೊದಲ ಹಂತದಲ್ಲಿ ಜಿಲ್ಲೆಯ 59,911 ಮಂದಿ ರೈತರಿಗೆ 55,592 ಎಕರೆ ವಿಸ್ತೀರ್ಣಕ್ಕೆ ಕನಿಷ್ಠ 1000 ರೂ. ಮತ್ತು ಗರಿಷ್ಠ 2000 ರೂ.ಮೀರದಂತೆ ಒಟ್ಟು 10.85 ಕೋಟಿ ಹಾಗೂ ಎರಡನೇ ಹಂತದಲ್ಲಿ 18,993 ರೈತರಿಗೆ 21,094 ಎಕರೆ ವಿಸ್ತೀರ್ಣಕ್ಕೆ 3.46 ಕೋಟಿ, ಸೇರಿ ಒಟ್ಟು ಇಲ್ಲಿವರೆಗೂ 78,104 ರೈತರಿಗೆ 76,686 ಎಕರೆ ವಿಸ್ತೀರ್ಣಕ್ಕೆ ಒಟ್ಟು 14.31 ಕೋಟಿ ಪರಿಹಾರಧನವನ್ನು ರೈತರ ಖಾತೆಗೆ ಈ ತಿಂಗಳಲ್ಲಿ ಪಾವತಿ ಮಾಡಿದೆಯೆಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಅಲ್ಲದೇ ಉಳಿಕೆ ಬರ ಪರಿಹಾರವನ್ನು ಸರ್ಕಾರದ ನಿರ್ದೇಶನದಂತೆ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದೆಂದು ಜಿಲ್ಲಾಡಳಿತ ತಿಳಿಸಿದೆ.
ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ಇಲ್ಲಿವರೆಗೂ ರಾಜ್ಯಕ್ಕೆ ನೈಯಾಪೈಸೆ ಕೊಟ್ಟಿಲ್ಲ. 44 ಸಾವಿರ ಕೋಟಿ ಬಿಡುಗಡೆ ಮನವಿ ಸಲ್ಲಿಸಿದರೂ ಕೇಂದ್ರ ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸುತ್ತಿಲ್ಲ. -ಡಾ.ಎಂ.ಸಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರು.
– ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
Gudibande: ಹೆಸರಿಗಷ್ಟೇ ಬಸ್ ನಿಲ್ದಾಣ; ಬಸ್‌ಗಳೇ ಬರಲ್ಲ
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.