ರೈತರೇ ಸಕಾಲಕ್ಕೆ ಮರುಪಾವತಿಸಿ
Team Udayavani, Sep 26, 2022, 3:33 PM IST
ಬಾಗೇಪಲ್ಲಿ: ರೈತರಿಗಾಗಿ ಸ್ಥಾಪಿತಗೊಂಡಿ ರುವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಅಭಿವೃದ್ಧಿ ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ರೈತರು ಸಕಾಲಕ್ಕೆ ಮರು ಪಾವತಿಸಿದರೆ ಮಾತ್ರ, ಹೊಸ ರೈತರಿಗೆ ಸಾಲ ನೀಡಲು ಸಾಧ್ಯವಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ಪ್ರಭಾಕರ ರೆಡ್ಡಿ ತಿಳಿಸಿದರು.
ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಶಾಖಾ ಕಚೇರಿ ಅವರಣದಲ್ಲಿ ನಡೆದ 2021-22ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಉದ್ಘಾ ಟಿಸಿ ಮಾತನಾಡಿ, ಬಾಗೇಪಲ್ಲಿ ತಾಲೂಕಿನ ಬಹುತೇಖರು ಕೃಷಿ ಅವಲಂಬಿತರಾಗಿದ್ದು, ಕೊಳವೆಬಾವಿ ಕೊರೆಯಲು, ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣ, ಹಸು, ಕೋಳಿ, ಕುರಿ ಸಾಕಾಣಿಕೆ, ಟ್ರ್ಯಾಕ್ಟರ್ ಖರೀದಿ ಹಾಗೂ ತೋಟಗಾರಿಕೆ ಅಭಿ ವೃದ್ಧಿಯ ಸಾಲಗಳಿಗೆ ಹೆಚ್ಚಿನ ಬೇಡಿಕೆಯಿದೆ. ಬ್ಯಾಂಕ್‌ನಿಂದ ಹೊಸ ರೈತರಿಗೆ ಹಾಗೂ ಹೊಸ ಯೋಜನೆಗಳಲ್ಲಿ ಸಾಲ ನೀಡ ಬೇಕಾದರೆ ಸಾಲ ವಸೂಲಾತಿ ಸಮರ್ಪಕ ವಾಗಿ ಇರಬೇಕು ಎಂದರು.
ಬ್ಯಾಂಕ್‌ನ ವ್ಯವಸ್ಥಾಪಕ ಕೆ.ಪಿ.ಶಶಿಧರ್ 2021-22ನೇ ಸಾಲಿನ ಆಡಳಿತ ಮಂಡಳಿಯ ವರದಿ ಮಂಡಿಸಿದರು.
ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷೆ ಕೆ.ಸಿ. ಲಕ್ಷ್ಮೀದೇವಮ್ಮ, ನಿರ್ದೇಶಕರಾದ ಶ್ರೀನಿವಾ ಸರೆಡ್ಡಿ, ಎಸ್.ನರಸಿಂಹಾರೆಡ್ಡಿ, ಎಲ್.ಬೈರಾ ರೆಡ್ಡಿ, ಎ.ಆನಂದ್, ಕೆ.ಆರ್. ಅಂಜಿನಪ್ಪ, ಬಿ. ನಾರಾಯಣರೆಡ್ಡಿ, ಜಿ.ಬೈಯಪ್ಪ, ಎ.ಆರ್.ಗಂಗುಲಪ್ಪ, ನಾಗರತ್ನಮ್ಮ, ಜಿ.ಆರ್.ಹರಿನಾಥ್, ವೆಂಕಟರವಣಪ್ಪ, ಬ್ಯಾಂಕ್ ಸಿಬ್ಬಂದಿ ಆರ್. ಧರ್ಮಣಿ, ಗಂಗರಾಜು, ರತ್ನಮ್ಮ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.