Chikkaballapur; ಬೆಳೆ ನಷ್ಟ ಆತಂಕ: ವಿಮೆ ನೋಂದಣಿಗೆ ಒಲವು
Team Udayavani, Aug 5, 2023, 2:24 PM IST
ಚಿಕ್ಕಬಳ್ಳಾಪುರ: ಪ್ರತಿ ವರ್ಷ ಬೆಳೆ ವಿಮೆ ನೋಂದಣಿ ಯಲ್ಲಿ ಹಿಂದೆ ಬೀಳುತ್ತಿದ್ದ ಜಿಲ್ಲೆಯು ಈ ವರ್ಷ ಮಳೆಯ ಕಣ್ಣಾಮುಚ್ಚಾಲೆ ಮುಂದುವರಿ ದಿರುವ ಪರಿಣಾಮ ಆತಂಕಕ್ಕೀಡಾಗಿ ರುವ ರೈತರು, ಬೆಳೆ ನಷ್ಟದಿಂದ ಪಾರಾ ಗಲು ಬೆಳೆ ವಿಮೆ ಆಸರೆ ಪಡೆಯಲು ಮುಂದಾಗಿದ್ದಾರೆ.
ಅತೀ ಹೆಚ್ಚು: ಜಿಲ್ಲೆಯಲ್ಲಿ ಆ.4 ರ ಅಂತ್ಯಕ್ಕೆ ಬರೋಬ್ಬರಿ 42,075 ಮಂದಿ ರೈತರು ಬೆಳೆ ವಿಮೆ ನೋಂದಣಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬೆಳೆ ವಿಮೆಗೆ ಅತಿ ಹೆಚ್ಚು ರೈತರು ನೋಂದಣಿ ಮಾಡಿಸಿಕೊಂಡಾಂತಾಗಿದೆ.
ಕಳೆದ ವರ್ಷ ಬೆಳೆ ವಿಮೆ ನೋಂದಣಿ ಅವಧಿ ಮುಗಿ ಯುವ ವೇಳೆ ಜಿಲ್ಲೆಯಲ್ಲಿ ಒಟ್ಟು 39,837 ಮಂದಿ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದರು. ಆದರೆ, ಈ ವರ್ಷ ಆ.4 ರ ವೇಳೆಗೆ 42,075 ಮಂದಿ ಬೆಳೆ ವಿಮೆಗೆ ನೋಂದಾಯಿಸುವ ಮೂಲಕ ನೋಂದಣಿ ಅವಧಿ ಕೊನೆ ವೇಳೆಗೆ ಬೆಳೆ ವಿಮೆ ನೋಂದಣಿ ಸಂಖ್ಯೆ ಬರೋಬ್ಬರಿ 50 ಸಾವಿರ ಗಡಿ ದಾಟುವ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ ಬೆಳೆ ವಿಮೆಗೆ ಅವಧಿ ಮುಗಿದರೂ ಸರ್ಕಾರ ಆ.16 ರ ವರೆಗೂ ಮತ್ತೆ ಕಾಲಾವಕಾಶ ನೀಡಿದೆ. ಹೀಗಾಗಿ ಜಿಲ್ಲೆಯಲ್ಲಿ ಈ ವರ್ಷ ನಿರೀಕ್ಷೆಗೂ ಮೀರಿ ಬೆಳೆ ವಿಮೆ ನೋಂದಣಿ ಆಗುವ ಆಶಾಭಾವನೆ ಕೃಷಿ ಇಲಾಖೆ ಹೊಂದಿದೆ.
ಪರಿಹಾರ ಬಂದಷ್ಟು ಬರಲಿ: ಈ ಬಾರಿ ಜಿಲ್ಲೆಯಲ್ಲಿ ಬಿತ್ತನೆ ಸಮಯಕ್ಕೆ ಸರಿಯಾಗಿ ಮಳೆ ಕೈ ಕೊಟ್ಟ ಪರಿಣಾಮ ನೆಲಗಡಲೆ, ತೊಗರಿ, ಮುಸುಕಿನ ಜೋಳ ಮತ್ತಿತರ ಮಳೆ ಆಶ್ರಿತ ಬೆಳೆಗಳು ಸಮರ್ಪಕವಾಗಿ ಬಿತ್ತನೆ ಆಗಿಲ್ಲ. ಕೃಷಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕೇವಲ ಶೇ.50 ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದ್ದು, ಈಗ ಮಳೆಯ ಅನಿಶ್ಚಿತತೆಯಲ್ಲಿರುವ ರೈತರು ತಾವು ಇಟ್ಟಿರುವ ಬೆಳೆ ನಷ್ಟವಾದರೂ ಕೈಗೆ ಬಂದಷ್ಟು ಪರಿಹಾರ ಸಿಗಲಿ ಎನ್ನುವ ಉದ್ದೇಶದಿಂದ ಜಿಲ್ಲೆಯಲ್ಲಿ ಈ ವರ್ಷ ಬೆಳೆ ವಿಮೆ ನೋಂದಣಿಗೆ ಉತ್ಸಾಹ ತೋರಿ ದಾಖಲೆ ಪ್ರಮಾಣದಲ್ಲಿ ನೋಂದಣಿ ಮಾಡಿಸಿದ್ದಾರೆ.
ಗೌರಿಬಿದನೂರು, ಬಾಗೇಪಲ್ಲಿ ಪ್ರಥಮ: ಬೆಳೆ ವಿಮೆ ನೋಂದಣಿಯಲ್ಲಿ ಜಿಲ್ಲೆಯ ಮಾಜಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರ ತವರು ತಾಲೂಕು ಗೌರಿಬಿದನೂರು (19,622) ಪ್ರಥಮ ಸ್ಥಾನದಲ್ಲಿದೆ. ನಂತರ ಸ್ಥಾನದಲ್ಲಿ ಅತಿ ಹಿಂದುಳಿದ ಹಾಗೂ ಮಳೆ ಕೊರತೆ ಆಗಿರುವ ಬಾಗೇಪಲ್ಲಿ ತಾಲೂಕು (11,429) ಬೆಳೆ ವಿಮೆ ನೋಂದಣಿಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನದಲ್ಲಿದೆ. ನಂತರ ಸ್ಥಾನದಲ್ಲಿ ಶಿಡ್ಲಘಟ್ಟ 3,323, ಗುಡಿಬಂಡೆ 4,498, ಚಿಕ್ಕಬಳ್ಳಾಪುರ 2,092 ಮಂದಿ ಹಾಗೂ ಚಿಂತಾಮಣಿಯಲ್ಲಿ ಬರೀ 1,111 ಮಂದಿ ರೈತರು ಮಾತ್ರ ಬೆಳೆ ವಿಮೆ ನೋಂದಣಿ ಮಾಡಿಸಿ ಕೊನೆ ಸ್ಥಾನದಲ್ಲಿದೆ. ಇನ್ನೂ ಬೆಳೆ ವಿಮೆ ನೋಂದಣಿ ಬಗ್ಗೆ ಗ್ರಾಮೀಣ ಭಾಗದಲ್ಲಿ ರೈತರಿಗೆ ಸಮರ್ಪಕ ಅರಿವು, ಮಾಹಿತಿ ಇಲ್ಲ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ.
ರೈತರ ಮನವೊಲಿಕೆಯಲ್ಲಿ ಕೃಷಿ ಅಧಿಕಾರಿಗಳು:
ಈ ಬಾರಿ ಮಳೆ ಕೈ ಕೊಡುವ ಸಾಧ್ಯತೆ ಇದೆ. ಆದ್ದರಿಂದ ಬೆಳೆ ವಿಮೆ ಮಾಡಿಸಿಕೊಳ್ಳಬೇಕೆಂದು ಕೃಷಿ ಅಧಿಕಾರಿಗಳು ರೈತರ ಬೆನ್ನು ಬಿದ್ದಿದ್ದಾರೆ. ಮಳೆ ಇಲ್ಲದೇ ಬೆಳೆ ನಷ್ಟ ಆಗಬಹುದು. ವಿಮೆ ಮಾಡಿಸಿದರೆ ಸರ್ಕಾರ ನಷ್ಟ ಪರಿಹಾರ ಕೊಡುತ್ತದೆ ಎಂದು ಹೇಳಿ ಸಾಕಷ್ಟು ರೈತರಿಗೆ ಖುದ್ದು ಅಧಿಕಾರಿಗಳೇ ದೂರವಾಣಿ ಕರೆ ಮಾಡಿ ವಿಮೆ ನೋಂದಣಿಗೆ ಮನವೊಲಿಸುತ್ತಿದ್ದಾರೆ. ಚಿಂತಾಮಣಿ ತಾಲೂಕಿನ ಕೃಷಿ ಅಧಿಕಾರಿಗಳು ಪ್ರೂಟ್ಸ್ ತಂತ್ರಾಂಶದಡಿ ರೈತರು ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಗಳಿಗೆ ಸಾಮೂಹಿಕವಾಗಿ ಕಾನ್ಫರೆನ್ಸ್ ಕಾಲ್ ಮಾಡಿ ಬೆಳೆ ವಿಮೆ ನೋಂದಣಿ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಬೆಳೆ ವಿಮೆ ನೋಂದಣಿಗೆ ಈ ವರ್ಷ ರೈತರ ಸ್ಪಂದನೆ ಪರವಾಗಿಲ್ಲ. ಜಿಲ್ಲೆಗೆ ನಿರ್ದಿಷ್ಟವಾಗಿ ಗುರಿ ಅಂತ ಇಲ್ಲ. ಆಸಕ್ತ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬಹುದು. ಆ.16 ರ ವರೆಗೂ ರಾಗಿ ಬೆಳೆಗೆ ವಿಮೆ ನೋಂದಣಿಗೆ ಅವಕಾಶ ಇದೆ. ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಆ.4 ರ ಅಂತ್ಯಕ್ಕೆ 4,0,100 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದಾರೆ. -ಜಾವೀದಾ ನಸೀಮಾ ಖಾನಂ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು.
– ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.