![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, May 28, 2020, 7:04 AM IST
ಚಿಕ್ಕಬಳ್ಳಾಪುರ: ಲಾಕ್‌ಡೌನ್ ಪರಿಣಾಮ ಮಾರುಕಟ್ಟೆ ಇಲ್ಲದೇ ತೀವ್ರ ಸಂಕಷ್ಟಕ್ಕೀ ಡಾಗಿ ರುವ ಹೂವು ಬೆಳೆಗಾರರಿಗೆ ರಾಜ್ಯ ಸರ್ಕಾರ ಗರಿಷ್ಟ ಪ್ರತಿ ಹೆಕ್ಟೇರ್‌ಗೆ 25 ಸಾವಿರ ಸಾವಿರ ರೂ, ಪರಿಹಾರ ಧನ ವಿತರಿಸಲು ಮುಂದಾಗಿದ್ದು ಜಿಲ್ಲೆಯಲ್ಲಿ ಇದುವರೆಗೂ ಬರೋಬ್ಬರಿ 2,800 ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ ಆಗಿವೆ.
ಅರ್ಜಿ ಸಲ್ಲಿಕೆಗೆ ಮೇ 28ಕ್ಕೆ ಕೊನೆ ದಿನವಾ ದರೂ ತೋಟಗಾರಿಕೆ ಇಲಾಖೆ ಈ ತಿಂಗಳ ಮೇ 30ಕ್ಕೆ ಅರ್ಜಿ ಸಲ್ಲಿಸಲು ಕೊನೇ ದಿನ ನಿಗದಿಪಡಿಸಿದೆ. ಲಾಕ್‌ಡೌನ್‌ನಿಂದ ತತ್ತರಿಸಿ ರುವ ಹೂವು ಬೆಳೆಗಾರರು ಅಗತ್ಯ ದಾಖಲೆ ಹೊಂದಿಸಿಕೊಂಡು ಅರ್ಜಿ ಸಲ್ಲಿ ಕೆಗೆ ಈಗ ತೋಟಗಾರಿಕೆ ಇಲಾಖೆಗೆ ಮುಗಿ ಬಿದ್ದಿದ್ದು ಜಿಲ್ಲೆಯಲ್ಲಿ ಸುಮಾರು 3-4 ಸಾವಿರ ಮಂದಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ.
2,171 ಹೆಕ್ಟೇರ್‌ನಲ್ಲಿ ಹೂವು: ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ನಡೆಸಿ ರುವ ಬೆಳೆ ಸಮೀಕ್ಷೆಯಲ್ಲಿ ಬರೋಬ್ಬರಿ 2,171 ಹೆಕ್ಟೇರ್‌ನಲ್ಲಿ ರೈತರು ವಿವಿಧ ಬಗೆಯ ಹೂವು ಬೆಳೆಯುತ್ತಾರೆ.
ಆ ಪೈಕಿ ಶೇ.90 ಹೂವು ಬೆಳೆಗಾರರು ಜಿಲ್ಲೆಯ ಚಿಕ್ಕ ಬಳ್ಳಾ ಪುರ ತಾಲೂಕಿನಲ್ಲಿ ಇದ್ದರೆ ಉಳಿ ದಂತೆ ಶೇ.10 ಪ್ರಮಾಣದ ರೈತರು ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ, ಗೌರಿ ಬಿದನೂರು, ಬಾಗೇಪಲ್ಲಿ ತಾಲೂಕುಗಳಲ್ಲಿ ಇದ್ದಾರೆ. ಲಾಕ್‌ಡೌನ್ ಪರಿಣಾಮ ಯಾವುದೇ ಶುಭ ಕಾರ್ಯ ಹಾಗೂ ದೇವಾಲಯಗಳು ಇಲ್ಲದ ಪರಿಣಾಮ ಜಿಲ್ಲೆಯಲ್ಲಿ ಪುಷೊದ್ಯಮಕ್ಕೆ ಸಾಕಷ್ಟು ಹೊಡೆತ ಬಿದ್ದಿತ್ತು. ಅದರಲ್ಲೂ ಕೆಲ ರೈತರು ಅಪಾರ ಪ್ರಮಾ ಣದ ಹೂ ತೋಟಗಳನ್ನು ನಾಶಪಡಿಸಿ ದರು.
ಅಷ್ಟರ ಮಟ್ಟಿಗೆ ಕೊರೊನಾ ಲಾಕ್‌ಡೌನ್ ಆರ್ಥಿಕ ಸಂಕಷ್ಟಕ್ಕೀಡು ಮಾಡಿತು. ಸದ್ಯ ಸರ್ಕಾರ ಹೂವು ಬೆಳೆಗಾರರಿಗೆ ಆಸರೆ ಆಗುವಂತೆ ಗರಿಷ್ಠ ಒಂದು ಹೆಕ್ಟೇರ್‌ಗೆ 25 ಸಾವಿರ ರೂ, ನಂತರ ಪರಿಹಾರ ನೀಡಲು ಮುಂದಾಗಿದ್ದು ಜಿಲ್ಲೆಯಲ್ಲೀಗ ಬೆಳೆಗಾರರು ಅರ್ಜಿ ಸಲ್ಲಿಸುತ್ತಿದ್ದಾರೆ.
ಜಿಲ್ಲೆಗೆ ಬೇಕು 5-6 ಕೋಟಿ ರೂ. ಅನುದಾನ: ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಹೂವು ಬೆಳೆಗಾರರು ಸುಮಾರು 2,171 ಹೆಕ್ಟೇರ್‌ನಲ್ಲಿ ಹೂ ಬೆಳೆದಿದ್ದು ಪ್ರತಿ ಹೆಕ್ಟೇರ್‌ಗೆ ತಲಾ 25 ಸಾವಿರ ರೂ, ನಂತೆ ಜಿಲ್ಲೆಗೆ ಒಟ್ಟು 5-6 ಕೋಟಿ ರೂ.ಅನುದಾನ ಬೇಕಾಗಿದೆ. ಈಗಾಗಲೇ ರೈತರಿಂದ ಅರ್ಜಿ ಸ್ವೀಕರಿಸುತ್ತಿರುವ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಪಹಣಿಯಲ್ಲಿ ಹೂ ಬೆಳೆ ನಮೂದು ಆಗದೇ ಇರುವ ರೈತರಿಂದಲೂ ಅರ್ಜಿ ಸ್ವೀಕರಿಸುತ್ತಿದ್ದು ಪರಿಶೀಲನೆ ಬಳಿಕ ರೈತರಿಗೆ ಸರ್ಕಾರದ ನೆರವು ನೀಡಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ನಡೆಸಿರುವ ಬೆಳೆ ಸಮೀಕ್ಷೆ ಪ್ರಕಾರ 2,171 ಹೆಕ್ಟೇರ್‌ನಲ್ಲಿ ಹೂವು ಬೆಳೆಯು ತ್ತಾರೆ. ಈಗಾಗಲೇ ಸರ್ಕಾರದ ಸಹಾಯ ಧನ ಕೋರಿ ಒಟ್ಟು 2,800 ಕ್ಕೂ ಹೆಚ್ಚು ಅರ್ಜಿ ಬಂದಿದ್ದು ಎಲ್ಲಾ ಅರ್ಜಿಗಳ ಪರಿಶೀಲನೆ ಬಳಿಕ ಜೂನ್‌ನಲ್ಲಿ ರೈತರ ಖಾತೆಗಳಿಗೆ ಪರಿಹಾರ ಹಣ ನೇರವಾಗಿ ಜಮೆ ಮಾಡಲಾಗುವುದು.
-ಕುಮಾರಸ್ವಾಮಿ, ಉಪ ನಿರ್ದೇಶಕರು, ತೋಟಗಾರಿಗೆ ಇಲಾಖೆ
Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ
MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್
Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು!
Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ
BJP Rift: ಸಂಸದ ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ
You seem to have an Ad Blocker on.
To continue reading, please turn it off or whitelist Udayavani.