Flower Price: ಉಚಿತವಾಗಿ ಹೂ ಕಿತ್ತುಕೊಂಡು ಹೋಗಿ

ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ ಗೇರುಮರದಹಳ್ಳಿ ರೈತ

Team Udayavani, Sep 18, 2023, 4:03 PM IST

Flower Price: ಉಚಿತವಾಗಿ ಹೂ ಕಿತ್ತುಕೊಂಡು ಹೋಗಿ

ಗುಡಿಬಂಡೆ: ಶ್ರಾವಣ ಮಾಸ ಮುಗಿದು ಸಾಲು ಸಾಲು ಹಬ್ಬಗಳು ಶುರುವಾಗುತ್ತಿದ್ದರೂ, ಹೂವಿನ ಬೆಲೆ ಪಾತಾಳಕ್ಕೆ ಹೋದ ಕಾರಣದ ಇಲ್ಲೋಬ್ಬ ರೈತ ತೋಟದಲ್ಲಿ ಬೆಳೆದಿರುವ ಹೂವನ್ನು ಉಚಿತವಾಗಿ ಕಿತ್ತು ಕೊಂಡು ಹೋಗುವಂತೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿ ಬಿಟ್ಟಿದ್ದಾನೆ.

ತಾಲೂಕಿನ ಗೇರುಮರದಹಳ್ಳಿ ಗ್ರಾಮದ ದೇವರಾಜರೆಡ್ಡಿ ಎಂಬ ರೈತ ತಮ್ಮ 1.20 ಎಕರೆ ಜಮೀನಿನಲ್ಲಿ ಸೇವಂತಿಗೆ ಹೂ ಬೆಳೆದಿದ್ದು, ಸುಮಾರು ಇಪ್ಪತ್ತು ದಿನಗಳಿಂದ ಹೂವಿನ ಬೆಲೆ ತಳಮಟ್ಟಕ್ಕೆ ಇಳಿದ ಕಾರಣ, ಹೂವು ಕಿತ್ತರೆ ಕನಿಷ್ಟ ಕೂಲಿಕಾರರಿಗೆ ನೀಡಬೇಕಾದ ಹಣವು ಸಹ ಸಿಗುವುದಿಲ್ಲ ಎಂದು ಅರಿತ ರೈತ, ಗಣೇಶ ಹಬ್ಬ ಇದ್ದ ಕಾರಣ, ತಮ್ಮ ಫೇಸ್‌ ಬುಕ್‌ ನಲ್ಲಿ ಗೌರಿ ಗಣೇಶನ ಹಬ್ಬದ ಪ್ರಯುಕ್ತ ಉಚಿತ ಆಫರ್‌, ಯಾರು ಬೇಕಾದರೂ ಹೂ ಕಿತ್ತುಕೊಂಡು ಹೋಗಬಹುದು ಈ ಆಫರ್‌ ಮತ್ತೆಂದು ಸಿಗದು, ತ್ವರಿ ಮಾಡಿ ಭೇಟಿ ನೀಡಿ ನಮ್ಮ ತೋಟಕ್ಕೆ ಎಂದು ತೋಟದ ಚಿತ್ರ ಸಮೇತ ಹಂಚಿಕೊಂಡಿದ್ದಾರೆ.

ಕಡಿಮೆಯಾದ ಹೂವಿನ ಬೇಡಿಕೆ: ಜಿಲ್ಲಾದ್ಯಾಂತ ಮಳೆ ಹೆಚ್ಚಾಗುತ್ತಿರುವುದರಿಂದ ಹೂವು ಗಳಲ್ಲಿ ನೀರು ತುಂಬಿ, ಬೇರೆಡೆಗೆ ಸಾಗಿಸಲು ಸಾಧ್ಯವಾಗದ ಕಾರಣ ಮಂಡಿಗಳಲ್ಲಿ ಹೂವು ಖರೀದಿಯಾಗುತ್ತಿಲ್ಲ. ಬೇರೆ ಜಿಲ್ಲೆ ಮತ್ತು ರಾಜ್ಯ ಗಳಲ್ಲೂ ಸ್ಥಳೀಯವಾಗಿ ಬೆಳೆದಿರುವ ಹೂಗಳೇ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗಳಿಗೆ ಬರುತ್ತಿರುವುದರಿಂದ, ಹೂವಿಗೆ ಬೇಡಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಮಂಡಿ ವ್ಯಾಪಾರಿಗಳು.

ನೆಲಕ್ಕಚ್ಚಿದ ಹೂವಿನ ಬೆಲೆ: ವರಮಹಾಲಕ್ಷ್ಮೀ, ಗಣೇಶ, ದಸರಾ ಸಾಲು ಸಾಲು ಹಬ್ಬ ಬಂತು ಎಂದರೆ ಹೂವಿನ ಬೆಲೆ ಗಗನಕ್ಕೆ ಏರುತ್ತಿತ್ತು, ಆದರೆ ಗಣೇಶ ಹಬ್ಬಕ್ಕೆ ಕಳೆದ ಬಾರಿ ಬೇಡಿಕೆ ಇದ್ದಷ್ಟರಲ್ಲಿ ಬೇಡಿಕೆ ಸಹ ಈ ಭಾರಿ ಇಲ್ಲವಾಗಿದೆ. ಸೆಂಟೋಯೆಲ್ಲೋ ಕೆ.ಜಿ.30 ರೂ.ಗೆ, ಸೆಂಟ್‌ ವೈಟ್‌ 50 ರೂ. ಚಾಕಲೇಟ್‌ 30 ರೂ ಗೆ, ಚೆಂಡು ಹೂ ಕೆ.ಜಿ.ಗೆ 10 ರೂ ಮಾರಾಟವಾಗಿದೆ. ಸಾಗಾಣಿಕೆ ಬೆಲೆ ಸಹ ಇಲ್ಲ: ಗಣೇಶ ಹಬ್ಬಕ್ಕೆ ಅಲ್ಪ ಸ್ವಲ್ಪ ಬೇಡಿಕೆ ಇದ್ದರೂ ಸಹ, ತೋಟದಲ್ಲಿ ಹೂವು ಕಿತ್ತು, ಮಾರುಕಟ್ಟೆಗೆ ಹೋಗಿ ಬರುವ ಸಾಗಾಣಿಕೆ ಬೆಲೆ ಸಹ ಬರುತ್ತಿಲ್ಲ, ಇನ್ನು ಹೂವು ಕೀಳಲು ಬರುವ ಕೂಲಿಕಾರರಿಗೆ ಎಲ್ಲಿಂದ ಹಣವನ್ನು ನೀಡುವುದು ಎಂದು ಹೂವು ಬೇಕಾದವರು ತೋಟಕ್ಕೆ ಬಂದು ಹೂವನ್ನು ಕಿತ್ತುಕೊಂಡು ಹೋಗಿ ಎಂದು ಹಾಕಿದ್ದೇವೆ ಎಂದರು.

ಸುಮಾರು 1.20 ಎಕರೆ ಪ್ರದೇಶದಲ್ಲಿ ಸೇವಂತಿಗೆ ಬೆಳೆದಿದ್ದು, ಈಗಿನ ಮಾರುಕಟ್ಟೆ ದರದಲ್ಲಿ ಸಾಗಾಣಿಕೆ ಬೆಚ್ಚ ಸಹ ಬರುವುದಿಲ್ಲ, ದೇವರಿಗಾದರು ಉಚಿತವಾಗಿ ಜನರೇ ಬಂದು ಕಿತ್ತುಕೊಂಡು ಹೋಗಲಿ. ● ದೇವರಾಜರೆಡ್ಡಿ, ರೈತ, ಗೇರುಮರದಹಳ್ಳಿ

-ಎನ್‌.ನವೀನ್‌ ಕುಮಾರ್‌

ಟಾಪ್ ನ್ಯೂಸ್

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Kadaba: ಮೇಯಲು ಬಿಟ್ಟ ದನದ ಕಾಲು ಕಡಿದ ವ್ಯಕ್ತಿ; ದೂರು

dw

Siddapura: ವಿದ್ಯುತ್‌ ಲೈನಿಗೆ ಕೊಕ್ಕೆ ತಾಗಿ ಕಾರ್ಮಿಕ ಸಾವು

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

byndoor

Siddapura: ಪಾದಚಾರಿಗೆ ಪಿಕಪ್‌ ವಾಹನ ಢಿಕ್ಕಿ; ಗಂಭೀರ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.