ಆಹಾರ ಇಲಾಖೆ ಡಿಇಓಗಳು ಅತಂತ್ರ

ಒಂದೂವರೆ ವರ್ಷದಿಂದ ವೇತನಭಾಗ್ಯವಿಲ್ಲ,ಸೇವಾ ಭದ್ರತೆಯೂ ಇಲ್ಲ

Team Udayavani, Nov 11, 2020, 5:18 PM IST

ಆಹಾರ ಇಲಾಖೆ ಡಿಇಓಗಳು ಅತಂತ್ರ

ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ರಾಜ್ಯ ಆಹಾರ ನಾಗರಿಕ ಸರಬರಾಜು ಇಲಾಖೆಯಲ್ಲಿ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸುತ್ತಿರುವ ಇಲಾಖೆಯ ಕ್ಷಣ ಕ್ಷಣದ ಮಾಹಿತಿಗಳನ್ನು ಅಪ್‌ಡೇಟ್‌ ಮಾಡಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಜ್ಯದ ಸುಮಾರು 239 ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಕಳೆದ ಒಂದೂವರೆ ವರ್ಷದಿಂದ ವೇತನವೂ ಇಲ್ಲ. ಸೇವಾ ಭದ್ರತೆ ಇಲ್ಲದೇ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ.

ಕುಟುಂಬ ನಿರ್ವಹಣೆಗೆ ಸಂಕಷ್ಟ: ಹೌದು, ರಾಜ್ಯದ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಇರುವ ಆಹಾರ ಇಲಾಖೆಯ ಕಚೇರಿಯಲ್ಲಿ ಹೊಸ ಪಡಿತರ ಚೀಟಿವಿತರಣೆ, ತಿದ್ದುಪಡಿ ಮತ್ತು ಆಹಾರ ಇಲಾಖೆಯ ಅಧಿಕೃತ ತಂತ್ರಾಂಶದಲ್ಲಿ ಇಲಾಖಾ ಅಧಿಕಾರಿಗಳು ಸೂಚಿಸುವ ಕೆಲಸ ಕಾರ್ಯಗಳನ್ನು ಕ್ರಮ ಬದ್ಧವಾಗಿ ನಿರ್ವಹಣೆ ಮಾಡಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಕಳೆದ ಒಂದೂವರೆ ವರ್ಷದಿಂದ ವೇತನವಿಲ್ಲದೇ ಕನಿಷ್ಠ ಸೇವಾ ಭದ್ರತೆಯೂ ಇಲ್ಲದೇ ಕುಟುಂಬ ನಿರ್ವಹಣೆ ಮಾಡಲು ಸಂಕಷ್ಟ ಎದುರಿಸುವಂತಾಗಿದೆ.

ಕರ್ತವ್ಯದಿಂದ ಬಿಡುಗಡೆ: ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಡಾಟಾಎಂಟ್ರಿ ಆಪರೇಟರ್‌ಗಳನ್ನು ಕಳೆದಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಕರ್ತವ್ಯದಿಂದ ಬಿಡುಗಡೆ ಮಾಡಲು ಸ್ವತಃ ಆಹಾರ ಇಲಾಖೆ ಆಯುಕ್ತರು ಆದೇಶ ಹೊರಡಿಸಿದರು. ಅದರಂತೆ ಆಯಾ ಜಿಲ್ಲೆಗಳ ಆಹಾರ ಇಲಾಖೆ ಉಪನಿರ್ದೇಶಕರು ಡಾಟಾಎಂಟ್ರಿ ಆಪರೇಟರ್‌ಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದರು. ಆದರೆ ಇಲಾಖೆಯ ಪ್ರಗತಿಯ ವರದಿಗಳನ್ನು ಸಕಾಲದಲ್ಲಿ ಅಪ್‌ಲೋಡ್‌ ಮಾಡಲು ಸಾಧ್ಯವಿಲ್ಲದೇ ಆಹಾರ ಇಲಾಖೆಯ ಅಧಿಕಾರಿಗಳು ಸಂಕಷ್ಟ ಎದುರಿಸುವಂತಾಯಿತು.

ತ್ರಿಶಂಕು ಸ್ಥಿತಿ: ಯಾವುದೇ ರೀತಿಯ ಮುನ್ಸೂಚನೆಯಿಲ್ಲದೇ  ಕರ್ತವ್ಯದಿಂದ ಬಿಡುಗಡೆ ಹೊಂದಿದ ಡಾಟಾ ಎಂಟ್ರಿ ಆಪರೇಟರ್‌ಗಳು ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಸೇವೆ ಮುಂದುವರಿಸಲು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಆಹಾರ ಇಲಾಖಾ ಆಯುಕ್ತರು ತಾವು ಕರ್ತವ್ಯವನ್ನು ಮುಂದುವರಿಸಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಮೌಖೀಕ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಸುಮಾರು ಒಂದುವರೆ ವರ್ಷದಿಂದ ವೇತನ ಭಾಗ್ಯವಿಲ್ಲದೇಕನಿಷ್ಠ ಸೇವಾ ಭದ್ರತೆ ಇಲ್ಲದೇಬೇರೆ ಕೆಲಸಗಳಿಗೆ ಹೋಗಲಾರದೆ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದಾರೆ.

ಹೊಸ ಸಮಿತಿ ರಚನೆಗೆ ಮಾಡಲು ಸಿದ್ಧತೆ :  ರಾಜ್ಯದಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳ ಸೇವೆ ಅಗತ್ಯವಿದೆಯೋ? ಅಥವಾ ಇಲ್ಲವೋ? ಎಂಬುದರ ಕುರಿತು ಅಧ್ಯಯನ ನಡೆಸಲು ವಿಭಾಗೀಯವಾರು6ಮಂದಿ ಒಳಗೊಂಡಂತೆ ಒಂದು ಸಮಿತಿಯನ್ನು ಆಹಾರ ಇಲಾಖೆ ಆಯುಕ್ತರು ರಚಿಸಿದ್ದಾರೆ. ಆದರೆ ಕೋವಿಡ್  ಸೋಂಕಿನ ಹಿನ್ನೆಲೆಯಲ್ಲಿ ಸಮಿತಿಯ ಸಭೆಗಳು ನಡೆದಿಲ್ಲ. ಬದಲಾಗಿ ಸಮಿತಿಯಲ್ಲಿದ್ದವರುಕೆಲವರು ನಿವೃತ್ತಿಯಾಗಿದ್ದರಿಂದ ಹೊಸ ಸಮಿತಿ ರಚನೆ ಮಾಡಲು ಸಿದ್ದತೆ ನಡೆದಿದೆ ಎಂದು ತಿಳಿದುಬಂದಿದೆ.

ಮನವಿ ಸಲ್ಲಿಸಿದರೂ ಪ್ರಯೋಜನ ಇಲ್ಲ : ಕೋವಿಡ್‌19 ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಕರ್ತವ್ಯ ನಿಷ್ಠೆ ಮೆರೆದಿರುವ ಡಾಟಾಎಂಟ್ರಿ ಆಪರೇಟರ್‌ಗಳು, ವೇತನ ಪಾವತಿಸಬೇಕೆಂದು ಇಲಾಖಾ ಸಚಿವರು ಅಧಿಕಾರಿಗಳಿಗೆ ಸುಮಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲದಂತಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳ ಮೌಖೀಕ ಆದೇಶ ನಂಬಿ ಸೇವೆ ಸಲ್ಲಿಸಿರುವ ಡಾಟಾಎಂಟ್ರಿ ಆಪರೇಟರ್‌ಗಳು ವೇತನ ಮತ್ತು ಸೇವಾ ಭದ್ರತೆ ಇಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಇವರ ನೆರವಿಗೆ ಧಾವಿಸಬೇಕಾಗಿದೆ.

ಕ್ಷಣ ಕ್ಷಣದ ಬೆಳವಣಿಗೆ ಅಪ್ಡೇಟ್‌ : ಹೊಸ ಪಡಿತರ ಚೀಟಿ ವಿತರಣೆ, ತಿದ್ದುಪಡಿ, ಸಕಾಲ ಅರ್ಜಿಗಳ ನಿರ್ವಹಣೆ  ಪಡಿತರ ಚೀಟಿಗಳಿಗೆ ಇ-ಕೆವೈಸಿ ಮಾಡುವುದು, ಪಡಿತರ ಚೀಟಿಗಳಿಗೆ ಆಧಾರ್‌ಕಾರ್ಡ್‌ ಲಿಂಕ್‌ ಮಾಡುವುದು ಹಾಗೂ ಪಡಿತರ ಚೀಟಿಗಳಿಗೆ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡುವುದು ಮತ್ತು ನ್ಯಾಯಬೆಲೆ ಅಂಗಡಿಗಳ ಆಹಾರ ಧಾನ್ಯ, ಅಂತಿಮ ಶುಲ್ಕ ನಿರ್ವಹಣೆ, ಐಎಮ್‌ಪಿಡಿಎಸ್‌ ಅನ್ನವಿತನ್‌ ಪೋರ್ಟಲ್‌ನಲ್ಲಿಕ್ಷಣ ಕ್ಷಣದ ಮಾಹಿತಿ ಮತ್ತು ಬೆಳವಣಿಗೆಗಳನ್ನು ಅಪ್‌ಡೇಟ್‌ ಮಾಡುವುದು.

ಅನುದಾನ ನಿಗದಿಗೆ ಕೋರಿಕೆ :  ಡಾಟಾ ಎಂಟ್ರಿ ಆಪರೇಟರ್‌ಗಳ ಸೇವೆ ಗುರುತಿಸಿರುವ ಇಲಾಖೆಯ ಆಯುಕ್ತರು23/10/2019ರಂದು ಇಲಾಖೆಯ ಪ್ರದಾನ ಕಾರ್ಯದರ್ಶಿಗಳಿಗೆ ಪತ್ರಬರೆದು 2019-2020ನೇ ಆರ್ಥಿಕ ಸಾಲಿನ5ತಿಂಗಳಿಗೆ(ಮಾರ್ಚ್‌ 2020ವರೆಗೆ) ಅಂದಾಜು 2,64,19,060 ರೂ. ಅನುದಾನ ಅವಶ್ಯಕತೆಯಿದ್ದು, ಈ ಅನುದಾನವನ್ನು ಲೆಕ್ಕಶೀರ್ಷಿಕೆ2408-01-102-0-04-059 ರಡಿ ಮಂಜೂರು ಮಾಡುವಂತೆಕೋರಿದ್ದಾರೆ. ಅದೇ ರೀತಿ 2020-21 ನೇ ಸಾಲಿಗೆ ಸುಮಾರು6,34,05,744ರೂಗಳ ಅನುದಾನ ನಿಗದಿಗೊಳಿಸಬೇಕೆಂದು ಕೋರಿದ್ದಾರೆ.

ಚಿಕ್ಕಬಳ್ಳಾಪುರ  ಜಿಲ್ಲೆಯ 6 ತಾಲೂಕುಗಳಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ  ಡಾಟಾ ಎಂಟ್ರಿ ಆಪರೇಟರ್‌ ಗಳ ಹಳೇ ಬಾಕಿ ವೇತನ (ಫೆಬ್ರವರಿಯಿಂದ ಅಕ್ಟೋಬರ್‌ ವರೆಗೆ) ಮಂಜೂರಾಗಿದೆ.ಹೊರಗುತ್ತಿಗೆ ಆಧಾರದ ಮೇರೆಗೆಕೆಲಸ ಮಾಡುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಯಾವುದೇ ರೀತಿಯ ಸೇವಾ ಭದ್ರತೆ ಇರುವುದಿಲ್ಲ.ಆಹಾರ ಇಲಾಖೆ ಆಯುಕ್ತರು ಮೌಖೀಕವಾಗಿ ನೀಡಿರುವ ಆದೇಶದ ಕುರಿತು ಯಾವುದೇ ಮಾಹಿತಿಇಲ್ಲ. -ಪಿ.ಸವಿತಾ, ಉಪನಿರ್ದೇಶಕಿ, ಆಹಾರ ಇಲಾಖೆ ಚಿಕ್ಕಬಳ್ಳಾಪುರ

ರಾಜ್ಯದಲ್ಲಿ 239ಮಂದಿ ಡಾಟಾ ಎಂಟ್ರಿ ಆಪರೇಟರ್‌ಗಳುಕೆಲಸ ನಿರ್ವಹಿಸಿದ್ದಾರೆ. ಅವರಿಗೆ ವೇತನ ಮತ್ತು ಸೇವಾಭದ್ರತೆ ಇಲ್ಲ ದಂತಾಗಿದೆ.ಇದರಿಂದ ಕುಟುಂಬ ನಿರ್ವಹಣೆ ಮಾಡಲು ಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಆಪರೇಟರ್‌ಗಳು ಅನುಭವಿಸುತ್ತಿರುವ ಕಷ್ಟಗಳನ್ನು ಇಲಾಖೆಯ ಸಚಿವರು-ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಸರ್ಕಾರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ. -ಹನುಮಂತ ಬೋವಿ, ರಾಜ್ಯಾಧ್ಯಕ್ಷ, ಡಾಟಾಎಂಟ್ರಿ ಆಪರೇಟರ್ಗಳ ಸಂಘ

 

– ಎಂ..ತಮೀಮ್ಪಾಷ

ಟಾಪ್ ನ್ಯೂಸ್

Amith-sha

Fight Terrorism: ಶೀಘ್ರವೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಬಿಡುಗಡೆ: ಅಮಿತ್‌ ಶಾ

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ

Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ

Maharashtra: ಕ್ವಿಂಟಲ್‌ ಈರುಳ್ಳಿಗೆ5,400 ರೂ.: 5 ವರ್ಷದಲ್ಲೇ ಗರಿಷ್ಠ!

Maharashtra: ಕ್ವಿಂಟಲ್‌ ಈರುಳ್ಳಿಗೆ5,400 ರೂ.: 5 ವರ್ಷದಲ್ಲೇ ಗರಿಷ್ಠ!

Ranji Trophy: ಶ್ರೇಯಸ್‌ ಅಯ್ಯರ್‌ ದ್ವಿಶತಕ

Ranji Trophy: ಶ್ರೇಯಸ್‌ ಅಯ್ಯರ್‌ ದ್ವಿಶತಕ; ಬೃಹತ್‌ ಮೊತ್ತದತ್ತ ಮುಂಬಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ: ಒಬ್ಬ ಮೃತ

Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ

Waqf Issue: BJP protest against the Congress government across the state on November 4

Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

10-gudibande

Gudibande: ಕಲ್ಯಾಣಿಯಲ್ಲಿ ಬಿದ್ದು ಯುವಕ ಸಾವು

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

13-

Gudibanda: ದೇವಸ್ಥಾನದಲ್ಲಿ ಕಳವು; ಆರೋಪಿಗಳು ಪೊಲೀಸ್ ವಶಕ್ಕೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

fraudd

Puttur: ಲಕ್ಕಿ ಡ್ರಾ ನಂಬಿ ಹಣ ಕಳೆದುಕೊಂಡ ಕೂಲಿ ಕಾರ್ಮಿಕ

Amith-sha

Fight Terrorism: ಶೀಘ್ರವೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಬಿಡುಗಡೆ: ಅಮಿತ್‌ ಶಾ

sand

Kaup: ಕೈಪುಂಜಾಲು; ಅಕ್ರಮ ಮರಳು ಸಂಗ್ರಹ; ಪ್ರಕರಣ ದಾಖಲು

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

4

Malpe: ಕಡೆಕಾರು ಪಡುಕರೆ; ವ್ಯಕ್ತಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.