ಚಿಕ್ಕಬಳ್ಳಾಪುರ: ಬಡವರಿಂದ ಪಡೆದ ಹಣ ಕಚೇರಿಗೆ ಕಟ್ಟದೆ ವಂಚಿಸಿದ ಪೋಸ್ಟ್‌ಮ್ಯಾನ್
Team Udayavani, Apr 27, 2022, 3:56 PM IST
ಚಿಕ್ಕಬಳ್ಳಾಪುರ: ಸಾಮಾಜಿಕ ಭದ್ರತಾ ಯೋಜನೆಯಡಿ ಸರ್ಕಾರಗಳು ನೀಡುವ ಮಾಶಾಸನ ಹಾಗೂ ಕೂಡಿಟ್ಟ ಹಣವನ್ನು ಪ್ರತಿದಿನ ಅಂಚೆ ಕಚೇರಿಗೆ ಪಾವತಿಸುತ್ತಿದ್ದ (ಪಿಗ್ಮಿ)20-30 ಫಲಾನುಭವಿಗಳ ಹಣವನ್ನು ಪೋಸ್ಟ್‌ಮ್ಯಾನ್ ಒಬ್ಬ ಅಂಚೆ ಕಚೇರಿಗೆ ಪಾವತಿಸದೆ ತಾನೇ ಸ್ವಂತಕ್ಕೆ ಬಳಸಿಕೊಂಡಿರುವ ಘಟನೆ ಪತ್ತೆಯಾಗಿದೆ.
ಈ ಕುರಿತು ಬಡವರು ಕಂದಾಯ ಇಲಾಖೆ ಹಿರಿಯ ಅಧಿಕಾ ರಿಗಳಿಗೆ ದೂರು ಸಲ್ಲಿಸಿದ್ದು, ತಮ್ಮ ಬಾಬತ್ತಿನ ಹಣಕ್ಕಾಗಿ ಅಂಚೇ ಕಚೇರಿಗೆ ಆಗಮಿಸಿರುವ ಫಲಾನುಭವಿಗಳು ತಮ್ಮ ಹಣ ವಾಪಸ್ ನೀಡುವಂತೆ ಕಚೇರಿ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲಿ ಬಡವರು, ದಿನ ಕೂಲಿ ಕೆಲಸ ಮಾಡಿ ತಮ್ಮ ಮಕ್ಕಳ ವಿದ್ಯಾಭ್ಯಾಸ ಇನ್ನಿತರೆ ಕಾರ್ಯಗಳಿಗೆ ಹಣ ಉಳಿತಾಯ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದೇವೆ. ಇದಕ್ಕಾಗಿ ಅಂಚೆ ಕಚೇರಿಗೆ 100-200 ರೂ. ಗಳನ್ನು ಠೇವಣಿ ಕಟ್ಟುತ್ತಿದ್ದೆವು. ಆದರೆ, ಜನರ ಬಳಿ ದುಡ್ಡು ಪಡೆಯುತ್ತಿದ್ದ ಪೋಸ್ಟ್‌ಮ್ಯಾನ್ ಜಯರಾಜ್ ಹಣವನ್ನು ಅಂಚೆ ಇಲಾಖೆಗೆ ಜಮೆ ಮಾಡದೆ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾನೆ.
ಗೊತ್ತಾಗಿದ್ದು ಹೇಗೆ?: ಫಲಾನುಭವಿಗಳು ಕೆಲವರು ಹೇಗಿದ್ದರು ತಮ್ಮ ಅಕೌಂಟಿನಲ್ಲಿ ಹಣವಿದೆ ಎಂದು ಅಂಚೆ ಕಚೇರಿಗೆ ಭೇಟಿ ನೀಡಿ ತಮ್ಮ ಅಕೌಂಟಿನಲ್ಲಿರುವ ಹಣವನ್ನು ಪಡೆಯಲು ಚಲನ್ ನೀಡಿದ್ದಾರೆ. ಆಗ ಅಧಿಕಾರಿಗಳು ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಇದರಿಂದ ಚಕಿತರಾದ ಫಲಾನುಭವಿಗಳು ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಎಚ್ಚತ್ತ ಇನ್ನಷ್ಟು ಫಲಾನುಭವಿಗಳು ಅಂಚೆ ಕಚೇರಿಗೆ ಬಂದು ತಮ್ಮ ಖಾತೆಗಳನ್ನು ಪರಿಶೀಲನೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಇದರಿಂದ ಆತಂಕಗೊಂಡ ಜಡಜನರು ಅಧಿಕಾರಿಗಳಿಗೆ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ.
ಕೂಲಿ ಕಾರ್ಮಿಕರು ಮತ್ತು ಮಹಿಳೆಯರು ಹಣವನ್ನು ಠೇವಣಿ ಮಾತ್ರ ಇದೆ ಆದರೆ, ಅದರಲ್ಲಿ ಹಣವಿಲ್ಲ. ಹೀಗಾಗಿ ಪೋಸ್ಟ್ ಮ್ಯಾನ್ ಜಯರಾಜ್ ಜನರಿಂದ ಹಣವನ್ನು ವಸೂಲಿ ಮಾಡಿ ಅದನ್ನು ಇಲಾಖೆಯಲ್ಲಿ ಜಮೆ ಮಾಡದೆ ವಂಚನೆ ಮಾಡಿದ್ದಾರೆ ಎಂದು ಫಲಾನುಭವಿಗಳು ಆರೋಪಸಿದ್ದಾರೆ.
ಲಕ್ಷಾಂತರ ರೂ.ಗಳ ಹಣವನ್ನು ಜಯರಾಜ್ ಸ್ವಂತಕ್ಕೆ ಬಳಸಿಕೊಂಡಿದ್ದಾನೆ ಎಂದು ಜನರು ಆರೋಪಿಸಿದ್ದು, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಿ ಕಟ್ಟಿರುವ ಹಣವನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನಕಲಿ ಸೀಲು, ಸಹಿ ಮಾಡಿದ ರಸೀದಿ ಪತ್ತೆ : ಫಲಾನುಭವಿಗಳು ದಿನ ಹಣ ಕಟ್ಟುತ್ತಿದ್ದು, ಖಾತೆಗಳಲ್ಲಿ ಹಣವೇ ಇರಲಿಲ್ಲ. ಪೋಸ್ಟ್‌ಮ್ಯಾನ್ ಕರೆಸಿ ವಿಚಾರಿಸಿದಾಗ ಸತ್ಯ ಪತ್ತೆಯಾಗಿದೆ. ಬಡವರ ಬಳಿ ದುಡ್ಡು ಪಡೆಯುತ್ತಿದ್ದ ಪೋಸ್ಟ್ ಮ್ಯಾನ್ ನಕಲಿ ಸೀಲ್ ಸಹಿ ಮಾಡಿದ ರಸೀದಿ ನೀಡಿದ್ದಾನೆ. ಈ ಹಣವನ್ನು ಪೋಸ್ಟ್ ಆಫೀಸ್ ಗೆ ಕಟ್ಟಿಲ್ಲ ಇದರಿಂದ ಹಣ ಕಳೆದುಕೊಂಡ ಜನ ಈಗ ಅಂಚೆ ಕಚೇರಿಗೆ ಬಂದು ತಮ್ಮ ಹಣ ಕೊಡುವಂತೆ ಅಂಚೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.