Nandi Hills: ನಂದಿಬೆಟ್ಟದಲ್ಲಿ 20ರೂ.ಗೆ ಊಟ,ತಿಂಡಿ


Team Udayavani, Aug 26, 2023, 3:38 PM IST

Nandi Hills: ನಂದಿಬೆಟ್ಟದಲ್ಲಿ 20ರೂ.ಗೆ ಊಟ,ತಿಂಡಿ

ಚಿಕ್ಕಬಳ್ಳಾಪುರ: ನಂದಿಬೆಟ್ಟದ ಪ್ರವಾಸ ಪ್ರವಾಸಿಗರ ಪಾಲಿಗೆ ದುಬಾರಿ ಎನ್ನುವ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲಿಯೆ ಗಿರಿಧಾಮಕ್ಕೆ ಆಗಮಿಸುವ ಪ್ರವಾಸಿಗರಿಗೆ ಅಗ್ಗದ ದರದಲ್ಲಿ ಕಾಫಿ, ಟೀ ಹಾಗೂ ಊಟ, ತಿಂಡಿ ಸಿಗುವ ಮಯೂರ ಕ್ಯಾಂಟೀನ್‌ ಶುರುವಾಗಿದೆ.

ಹೌದು, ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲಿಯೆ ಮಯೂರ ಕ್ಯಾಂಟೀನ್‌ನಲ್ಲಿ ಇನ್ಮೆàಲೆ ಪ್ರವಾಸಿಗರಿಗೆ ಅತಿ ಕಡಿಮೆ ದರದಲ್ಲಿ ಕರ್ನಾಟಕ ರಾಜ್ಯದ ಪ್ರವಾ ಸೋ ದ್ಯಮ ಅಭಿವೃದ್ಧಿ ನಿಗಮ ಊಟ, ತಿಂಡಿ ಸಿಗುವಂತೆ ಮಾಡುವ ಮೂಲಕ ನಂದಿಬೆಟ್ಟ ಬಡವರ ಪರ ಎಂಬುದನ್ನು ಸಾಬೀತು  ಗೊಳಿಸುವ ಪ್ರಯತ್ನಕ್ಕೆ ಹೆಜ್ಜೆ ಇಟ್ಟಿದೆ.

ನಂದಿಗಿರಿಧಾಮ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಸೇರಿದ ಬಳಿಕ ಗಿರಿಧಾಮ ಇತ್ತೀಚಿಗೆ ಹೊಸರೂಪ ಪಡೆದು, ಅನೇಕ ಅಭಿವೃದ್ಧಿ ಕಾರ್ಯಗಳು ಮೂಲಕ ಪ್ರವಾಸಿಗರಿಗೆ ಅವಶ್ಯಕ ಸೌಕರ್ಯಗಳನ್ನು ಒದಗಿಸುವು ದರೊಂದಿಗೆ ಪ್ರವಾಸಿಗರನ್ನು ಆಕರ್ಷಿ ಸುತ್ತಿದೆ. ಹೆಚ್ಚು ಪರಿಸರ ಸ್ನೇಹಿ ಕಾರ್ಯಕ್ರಮಗಳಿಗೆ ಒತ್ತು ಕೊಡುವ ಮೂಲಕ ಗಮನ ಸೆಳೆದಿದೆ.

ಇದೀಗ ಗಿರಿಧಾಮದಲ್ಲಿ ಊಟ, ತಿಂಡಿ ಪ್ರವಾಸಿಗರಿಗೆ ತುಂಬ ದುಬಾರಿ ಎಂಬ ಮಾತು ಕೇಳಿ ಬಂದಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಕೆಎಸ್‌ಟಿಡಿಸಿ ಇದೀಗ ಗಿರಿಧಾಮದಲ್ಲಿ ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲಿ ಮಯೂರ ಕ್ಯಾಂಟೀನ್‌ ಆರಂಭಿಸಿ, ಅಗ್ಗದ ದರದಲ್ಲಿ ಪ್ರವಾಸಿಗರಿಗೆ ಕೈಗೆಟುಕುವ ದರದಲ್ಲಿ ರುಚಿಕರವಾದ ಕಾಫಿ, ಟೀ ಹಾಗೂ ಊಟ, ತಿಂಡಿ ಮಾರಾಟಕ್ಕೆ ಮುಂದಾಗಿದೆ. ಕ್ಯಾಂಟೀನ್‌ನಲ್ಲಿ ಸಿಗುವ ಊಟ, ತಿಂಡಿ ಮೆನು ಜತೆಗೆ ಅದರ ದರಪಟ್ಟಿಯನ್ನು ಕೂಡ ಕ್ಯಾಂಟೀನ್‌ ಮುಂಭಾಗ ಪ್ರಕಟಿಸುವ ಮೂಲಕ ಪ್ರವಾಸಿಗರ ಗಮನ ಸೆಳೆದಿದೆ.

ಬರೀ 20 ರೂ.ಗೆ ಊಟ, ತಿಂಡಿ:  ಅಕ್ಕಿ, ಬೇಳೆ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಸಾಮಾನ್ಯವಾಗಿ ಹೋಟೆಲ್‌ಗ‌ಳಲ್ಲಿ ಟೀ, ಕಾಫಿ ದರ 15 ರೂ. ದಾಟಿದರೆ ಊಟ, ತಿಂಡಿ ದರ 50 ರೂ. ದಾಟಿದೆ. ಆದರೆ ನಂದಿಗಿರಿಧಾಮದಲ್ಲಿ ಪ್ರವಾಸಿಗರ ಅನುಕೂಲಕ್ಕೆ ತೆರೆದಿರುವ ಇಂದಿರಾ ಕ್ಯಾಂಟೀನ್‌ ಮಾದರಿಯ ಮಯೂರ ಕ್ಯಾಂಟೀನ್‌ನಲ್ಲಿ ಬರೀ 10 ರೂಗೆ ಟೀ, ಕಾಫಿ ಕುಡಿಯಬಹದು. 20 ರೂ. ಕೊಟ್ಟರೆ ಅನ್ನ ಸಾಂಬರು ಅಥವಾ ಕೇಸರಿಬಾತ್‌, ಬಿಸಿ ಬೆಳೆಬಾತ್‌, ಉಪ್ಪಿಟ್ಟು ಹಾಗೂ ಕೇವಲ 15 ರೂಗೆ ಮೊಸರನ್ನ ಒಂದು ಪ್ಲೇಟ್‌ ಸವಿಯಬಹುದಾಗಿದೆ.

ಕೆಎಸ್‌ಟಿಡಿಸಿ ಎಂಡಿ ಜನಪರ ಕಾಳಜಿಗೆ ಪ್ರವಾಸಿಗರ ಮೆಚ್ಚುಗೆ:

ನಂದಿಬೆಟ್ಟಕ್ಕೆ ಪ್ರತಿ ವಾರ ಹಾಗೂ ವಾರಾಂತ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು, ಗ್ರಾಮೀಣ ಭಾಗದಿಂದಲೂ ಕೂಡ ಜನ ಸಾಮಾನ್ಯರು ಗಿರಿಧಾಮದ ಪ್ರಾಕೃತಿಕ ಸೌಂದರ್ಯ ಸವಿಯಲು ನಂದಿಬೆಟ್ಟಕ್ಕೆ ಆಗಮಿಸುತ್ತಾರೆ. ಆದರೆ, ಬೆಟ್ಟದ ಮೇಲೆ ಮಯೂರ ಹೋಟೆಲ್‌ಗ‌ಳಲ್ಲಿ ಊಟ, ತಿಂಡಿ ತುಸು ದುಬಾರಿ ಎನ್ನುವ ಕಾರಣಕ್ಕೆ ಗಿರಿಧಾಮಕ್ಕೆ ಬರುವ ಆಟೋ, ಕಾರು, ಬಸ್‌, ಟ್ಯಾಕ್ಸಿ ಚಾಲಕರಿಗೆ, ನಿರ್ವಾಹಕರಿಗೆ ವಿಶೇಷವಾಗಿ ಜನ ಸಾಮಾನ್ಯರಿಗೆ ಹೆಚ್ಚು ಹೊರೆ ಆಗದ ರೀತಿಯಲ್ಲಿ ನಗರ, ಪಟ್ಟಣಗಳಲ್ಲಿ ಸಿಗುವ ದರಕ್ಕಿಂತ ಕಡಿಮೆ ಬೆಲೆಗೆ ಗುಣಮಟ್ಟದ ಊಟ, ತಿಂಡಿ ಸಿಗುವಂತೆ ಮಾಡಬೇಕೆಂಬ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಜಗದೀಶ್‌ ಜನಪರ ಕಾಳಜಿಯಿಂದಲೇ ನಂದಿಬೆಟ್ಟದಲ್ಲಿ ಇತಂಹದೊಂದು ಜನಸ್ನೇಹಿ ಕ್ಯಾಂಟೀನ್‌ ಆರಂಭಕ್ಕೆ ಕಾರಣ ಎಂದು ಕ್ಯಾಂಟೀನ್‌ ಬಳಸುತ್ತಿರುವ ಪ್ರವಾಸಿಗರು ಹರ್ಷ ವ್ಯಕ್ತಪಡಿಸಿ ಕೆಎಸ್‌ಟಿಡಿಸಿ ಎಂಡಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಉದಯವಾಣಿಯಲ್ಲಿ ವರದಿ:

ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲವಾಲಗುವಂತೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅತಿ ಅಗ್ಗದ ದರದಲ್ಲಿ ಕ್ಯಾಂಟೀನ್‌ ತೆರೆಯುವ ಕುರಿತು ಆ. 13 ರಂದೇ ಉದಯವಾಣಿ ಚಿಕ್ಕಬಳ್ಳಾಪುರ ಆವೃತ್ತಿಯಲ್ಲಿ ಪ್ರವಾಸಿಗರಿಗೆ ಅಗ್ಗದ ದರದಲ್ಲಿ ಊಟ, ತಿಂಡಿ, ನಂದಿಬೆಟ್ಟದಲ್ಲಿ ಇಂದಿರಾ ಕ್ಯಾಂಟೀನ್‌ ಮಾದರಿ ಮಯೂರ ಕ್ಯಾಂಟೀನ್‌ ಸ್ಥಾಪನೆಗೆ ನಿರ್ಧಾರ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಕ್ಯಾಂಟೀನ್‌ಲ್ಲಿ ಏನೇನು ಸಿಗುತ್ತೆ?:

ನಂದಿಬೆಟ್ಟಕ್ಕೆ ಆಗಮಿಸುವ ಸಾಮಾನ್ಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ಮಯೂರ ಕ್ಯಾಂಟೀನ್‌ನಲ್ಲಿ ಬಿಸಿ ಬಿಸಿ ಟೀ, ರೈಸ್‌ಬಾತ್‌, ಬಿಸಿ ಬೇಳೆ ಬಾತ್‌, ಉಪ್ಪಿಟ್ಟು ಮೊರಸನ್ನ, ಕೇಸರಿ ಬಾತ್‌ ಹಾಗೂ ಅನ್ನ ಸಾಂಬರ್‌ ಸಿಗಲಿದೆ.

ನಂದಿಬೆಟ್ಟದಲ್ಲಿ ಮಯೂರ ಕ್ಯಾಂಟೀನ್‌ನಲ್ಲಿ 10 ರು, ಟೀ, ಕಾಫಿ ಹಾಗೂ 20 ರೂಗೆ ಊಟ, ತಿಂಡಿ ಸಿಗಲಿದೆ. ಇದು ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೊಸ ಕೊಡುಗೆ.– ಜಿ.ಜಗದೀಶ್‌, ಎಂಡಿ ಕೆಎಸ್‌ಟಿಡಿಸಿ, ಬೆಂಗಳೂರು. 

-ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CKB-Crime

Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.