ಗಿಫ್ಟ್ ಕೂಪನ್ ಆಸೆಗೆ 6.94 ಲಕ್ಷ ಕಳಕೊಂಡ ವಿದ್ಯಾರ್ಥಿನಿ!
Team Udayavani, Jun 18, 2023, 3:48 PM IST
ಚಿಕ್ಕಬಳ್ಳಾಪುರ: ಮೀಶೋ ಕಂಪನಿ ಹೆಸರಿನಲ್ಲಿ ಅಂಚೆ ಮೂಲಕ ಬಂದ ಗಿಫ್ಟ್ ಕೂಪನ್ ಮಾದರಿಯ ಒಂದು ಲೆಟರ್ ನಂಬಿದ ಬಿಇ ಓದುತ್ತಿದ್ದ ವಿದ್ಯಾರ್ಥಿನಿ ಬರೋಬ್ಬರಿ 6.94 ಲಕ್ಷ ರೂ ಹಣವನ್ನು ಕಳೆದುಕೊಂಡಿರುವ ಘಟನೆ ಶಿಡ್ಲಘಟ್ಟ ತಾಲೂಕಿನಲ್ಲಿ ನಡೆದಿದೆ.
ಶಿಡ್ಲಘಟ್ಟ ತಾಲೂಕಿನ ಕಾಳಿನಾಯಕನಹಳ್ಳಿಯ ಸಹನಾ ಕೆ.ಬಿನ್ ಕೃಷ್ಣಪ್ಪ (19) ಬೆಂಗಳೂರಿನ ನ್ಯೂ ಹಾರಿಜನ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದು ಸದ್ಯ ತನಗೆ ಆಗಿರುವ ಹಣಕಾಸಿನ ವಂಚನೆ ಬಗ್ಗೆ ಜಿಲ್ಲಾ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ?: ಶಿಡ್ಲಘಟ್ಟ ತಾಲೂಕು ಎಚ್.ಕ್ರಾಸ್‌ನಲ್ಲಿರುವ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ ಎಸ್.ಬಿ. ಖಾತೆ ಹೊಂದಿರುವ ಸಹನಾ ಭೀಮ್ ಯುಪಿಐ ಅಪ್ಲಿಕೇಷನ್ ಬಳಸುತ್ತಿದ್ದು ಮೀಶೋ ಅಪ್ಲಿಕೇ ಷನ್ ನ್ನು ಶಾಂಪಿಂಗ್ ಸಲುವಾಗಿ ಬಳಸುತ್ತಿದ್ದರು. ಆದರೆ, ಕಳೆದ ಜೂ.3 ರಂದು ಆಕೆಯ ಅಂಚೆ ವಿಳಾಸಕ್ಕೆ ಒಂದು ಪೋಸ್ಟ್ ಬಂದಿದ್ದು ಸದರಿ ಪೋಸ್ಟ್ ಅನ್ನು ತೆಗೆದು ನೋಡಲಾಗಿ Online Shopping Scratch Win, 1st Prize 11,00000 ಇತ್ಯಾದಿ ಒಂದು ಕೂಪನ್, ಅದರೊಂದಿಗೆ ಮೀಶೋ ಕಂಪನಿ ಹೆಸರಿನಲ್ಲಿ 1 ಲೆಟರ್ ಇದೆ. ಅದನ್ನು ನಂಬಿದ ಸಹನಾ ಲೆಟರ್‌ನಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದಾಳೆ.
ಬಳಿಕ ನಡೆದಿದ್ದೇ ಬೇರೆ. ಆಕೆಗೆ ಆನ್ ಲೈನ್ ವಂಚಕರು ಗಿಫ್ಟ್ ಕೂಪನ್ ಹೆಸರಲ್ಲಿ ಲೆಟರ್ ಕಳುಹಿಸಿ ನಿನಗೆ 11 ಲಕ್ಷ ಬಹುಮಾನ ಬಂದಿದೆ ಎಂದು ತಿಳಿಸಿ ವಿವಿಧ ಶುಲ್ಕಗಳ ಹೆಸರಲ್ಲಿ ಒಟ್ಟು 6,94,200 ರೂ.ಗಳನ್ನು ವಂಚಕರು ಹೇಳಿದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ ಕೈ ಸುಟ್ಟು ಕೊಂಡಿದ್ದಾರೆ.
ಸ್ನೇಹಿತರಿಂದಲೂ ಲಕ್ಷ ಲಕ್ಷ ಸಾಲ: 11 ಲಕ್ಷ ಬಹುಮಾನ ಪಡೆಯುವ ಆಸೆಯಿಂದ ತನ್ನ ಸ್ನೇಹಿತರಿಂದಲೂ ಲಕ್ಷಾಂತರ ರೂ., ಸಾಲ ಪಡೆದು ಆನ್‌ಲೈನ್ ವಂಚಕರಿಗೆ ನೀಡಿರುವುದಾಗಿ ಸಹನಾ ಸೈಬರ್ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಅಲ್ಲದೇ ವಂಚಕರು ಆಕೆಗೆ ಆರ್‌ಬಿಐ ಹೆಸರಿನಲ್ಲಿ ಲೆಟರ್ ಅನ್ನು ವ್ಯಾಟ್ಸಪ್ ಮಾಡಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.