ವಿವಿಧ ಗ್ರಾಪಂಗಳ 5 ಸ್ಥಾನಕ್ಕೆ ಉಪ ಚುನಾವಣೆ
Team Udayavani, Oct 29, 2022, 5:41 PM IST
ಚಿಕ್ಕಬಳ್ಳಾಪುರ/ಚೇಳೂರು: ವಿವಿಧ ಕಾರಣದಿಂದ ತೆರವಾಗಿರುವ ಹಲವು ಗ್ರಾಪಂಗಳ ಉಪ ಚುನಾವಣೆಗೆ ಶುಕ್ರ ವಾರ ಶಾಂತಿಯುತ ಮತದಾನ ನಡೆದಿದೆ.
ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರ್ ನೇತೃತ್ವದಲ್ಲಿ ಉಪ ಚುನಾವಣೆ ಸುಗುಮವಾಗಿ ನಡೆದಿದೆ. ಜಿಲ್ಲೆಯಲ್ಲಿ 5 ಗ್ರಾಪಂ ಸದಸ್ಯ ಸ್ಥಾನ ಗಳಿಗೆ ಘೋಷಣೆಯಾಗಿದ್ದ ಚುನಾವಣೆ ಯಲ್ಲಿ ಈಗಾಗಲೇ 2 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಗೊಂಡಿದ್ದು, ಉಳಿದ 3 ಕ್ಷೇತ್ರಗಳಿಗೆ ಮತದಾನದಲ್ಲಿ ಒಟ್ಟು 8 ಮಂದಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಎಲ್ಲೆಲ್ಲಿ ಅವಿರೋಧ ಆಯ್ಕೆ: ಚಿಕ್ಕಬಳ್ಳಾ ಪುರದ ಪೆರೆಸಂದ್ರ ಗ್ರಾಪಂ 1 ಸದಸ್ಯ ಸ್ಥಾನ, ಶಿಡ್ಲಘಟ್ಟದ ಬಶೆಟ್ಟಹಳ್ಳಿ ಗ್ರಾಪಂನ ಖಾಲಿಯಿದ್ದ ಪೆಂಡ್ಲಿವಾರಪಲ್ಲಿ 1 ಸಾಮಾನ್ಯ ಕ್ಷೇತ್ರಕ್ಕೆ ಅವಿರೋಧ ಆಯ್ಕೆ ನಡೆದಿದೆ. ಬಾಗೇಪಲ್ಲಿಯ ಪರಗೋಡು ಗ್ರಾಪಂ ಎಸ್‌ಸಿ ಮೀಸಲು ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ ಮತದಾನ ನಡೆದಿದೆ. 2 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದೇ ರೀತಿ ರಾಶ್ಚೇರವು ಗ್ರಾಪಂ ವ್ಯಾಪ್ತಿಯ ರಾಮಸ್ವಾಮಿಪಲ್ಲಿ 1 ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಇಬ್ಬರು ಕಣದಲ್ಲಿದ್ದಾರೆ. ಶಿಡ್ಲಘಟ್ಟದ ಜಂಗಮಕೋಟೆ ಗ್ರಾಪಂನಲ್ಲಿ ಖಾಲಿ ಇರುವ ಎಸ್‌ಸಿ ಮೀಸಲು ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿದೆ.
ಮತದಾನದ ವಿವರ: ಬಾಗೇಪಲ್ಲಿಯ ಪರಗೋಡು ಗ್ರಾಪಂನ ಪರಗೋಡು ಕ್ಷೇತ್ರದಲ್ಲಿ 431 ಪುರುಷರು, 448 ಮಹಿಳೆಯರು ಸಹಿತ 879 ಮತದಾರರ ಪೈಕಿ 343 ಪುರುಷರು, 350 ಮಹಿಳೆ ಯರು ಸಹಿತ 693 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ.78.84 ರಷ್ಟು ಮತದಾನ ದಾಖಲಾಗಿದೆ. ರಾಶ್ಚೆರವು ಗ್ರಾಪಂನ ರಾಮಸ್ವಾಮಿಪಲ್ಲಿ ಸ್ಥಾನಕ್ಕೆ ನಡೆದ ಚುನಾವಣೆಗೆ 238 ಪುರುಷರು 248 ಮಹಿಳೆಯರು ಸೇರಿ ದಂತೆ 486 ಮತದಾರರ ಪೈಕಿ 218 ಪುರುಷರು, 217 ಮಹಿಳೆಯರು ಸೇರಿ ದಂತೆ 4 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ.89.51ರಷ್ಟು ಮತ ದಾನ ದಾಖಲಾಗಿದೆ. ಶಿಡ್ಲಘಟ್ಟದ ಜಂಗಮಕೋಟೆ ಗ್ರಾಪಂನ ಜಂಗಮ ಕೋಟೆ-5 ಸ್ಥಾನಕ್ಕೆ ನಡೆದ ಚುನಾ ವಣೆಯಲ್ಲಿ 553 ಪುರುಷರು, 517 ಮಹಿಳೆಯರು ಸೇರಿದಂತೆ 1070 ಮತದಾರರ ಪೈಕಿ 482 ಪುರುಷರು, 437 ಮಹಿಳೆಯರು ಸೇರಿದಂತೆ 919 ಮತದಾರರು ತಮ್ಮ ಹಕ್ಕು ಚಲಾಯಿ ಸಿದ್ದಾರೆ. ಶೇ.85.89ರಷ್ಟು ಮತದಾನ ದಾಖಲಾಗಿದೆ.
ಜಿಲ್ಲೆಯ ಮೂರು ಗ್ರಾಪಂಗಳ 3 ಸ್ಥಾನಗಳ ಉಪಚುನಾವಣೆಗೆ 1043 ಪುರುಷರು, 1004 ಮಹಿಳೆಯರು ಸೇರಿದಂತೆ 2047 ಮತದಾರರು ಮತದಾನ ಮಾಡಿದ್ದು, ಶೇ.84.07ರಷ್ಟು ಮತದಾನ ದಾಖಲಾಗಿದೆ. ಅ.31 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಶಿಡ್ಲಘಟ್ಟದ ಜಂಗಮಕೋಟೆ ಗ್ರಾಪಂ ಜಂಗಮಕೋಟೆ-05 ಸ್ಥಾನದ ಚುನಾ ವಣೆಗೆ ಎಲ್.ಪುಷ್ಪ, ಮಂಜಮ್ಮ, ಅಂಬ ರೀಶ್, ನರಸಿಂಹಯ್ಯ ಅಭ್ಯರ್ಥಿಗಳನ್ನು ಕಣದಲ್ಲಿ ಉಳಿದುಕೊಂಡಿದ್ದಾರೆ. ಶೇ. 85.89 ಮತದಾನ ದಾಖಲಾಗಿದೆ. ಅ.31ರಂದು ಮತಗಳ ಎಣಿಕೆ ಕಾರ್ಯ ಶಿಡ್ಲಘಟ್ಟ ತಾಲೂಕು ಕಚೇರಿಯಲ್ಲಿ ಬೆಳಗ್ಗೆ 8 ಗಂಟೆಗೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಚಂದ್ರಪ್ಪ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.