ದ್ರಾಕ್ಷಿ ಉತ್ತಮ ಇಳುವರಿ: ಹರ್ಷ
Team Udayavani, Apr 23, 2022, 2:40 PM IST
ಗೌರಿಬಿದನೂರು: ತಾಲೂಕಿನ ಡಿ.ಪಾಳ್ಯ ಹೋಬಳಿ ಸಾರಗೊಂಡ್ಲು ಗ್ರಾಮದ ಪ್ರಗತಿಪರ ರೈತ ಗಂಗರೆಡ್ಡಿ ದಿಲ್‌ಖುಷ್ ದ್ರಾಕ್ಷಿಬೆಳೆಯಲ್ಲಿ ಉತ್ತಮ ಫಸಲನ್ನು ಪಡೆದಿದ್ದು ಉತ್ತಮ ಲಾಭ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ದಿಲ್ ಕುಶ್, ದ್ರಾಕ್ಷಿ ಪ್ರತಿ ಕೆ.ಜಿ.ಗೆ ದ್ರಾಕ್ಷಿ 30- 34 ರೂ.ಗೆ ಹೋಲ್‌ಸೇಲ್ ಬೆಲೆಯಲ್ಲಿ ಮಾರಾಟವಾಗು ತ್ತಿದೆ. ಮಣ್ಣಿನ ಗುಣ ಹಾಗೂ ವಿಶಿಷ್ಟ ಹವಾಮಾನ ದಿಂದಾಗಿ ಇಲ್ಲಿ ಬೆಳೆವ ದಿಲ್‌ಖುಷ್ ದ್ರಾಕ್ಷಿ ಸ್ವಾದಿಷ್ಟವಾ ಗಿದೆ. ಅಷ್ಟು ಹುಳಿಯೂ ಅಲ್ಲದ ಸಿಹಿ ಸಿಹಿಯಾಗಿರುವ ಈ ದ್ರಾಕ್ಷಿಗೆ ಬೇರೆ ರಾಜ್ಯಗಳಲ್ಲಿ ಉತ್ತಮ ಬೇಡಿಕೆ ಇದೆ ಹೆಚ್ಚಿನ ಮುತುವರ್ಜಿಯಿಂದ ಬೆಳೆ ಯನ್ನು ನಿರ್ವಹಣೆ ಮಾಡಿರುವುದರಿಂದ ಈ ಬಾರಿ ಉತ್ತಮ ಆದಾಯ ಬಂದಿದೆ ಎಂದಿದ್ದಾರೆ.
ಎರಡು ವರ್ಷದಿಂದ ಕೊರೊನಾದಿಂದ ಬೆಳೆದ ಬೆಳೆಗೆ ಬೆಲೆಯಿಲ್ಲದೆ ತೀವ್ರ ಸಂಕಷ್ಟ ಅನುಭವಿಸಿದ್ದೆವು. ಈ ವರ್ಷ ಸಹಜವಾಗಿ ಬೇಡಿಕೆ ಹೆಚ್ಚಾಗಿದೆ. ಜತೆಗೆ ಉಷ್ಣಾಂಶದಿಂದಾಗಿ ಬೆಳೆಗಳು ಸರಿಯಾಗಿ ಆಗದೆ ಇರುವುದರ ಪರಿ ಣಾಮವಾಗಿ ದ್ರಾಕ್ಷಿಯ ಬೆಲೆ ಗಗನಕ್ಕೇರಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ತಾಲೂಕಿನ ಡಿ.ಪಾಳ್ಯ ಹೋಬಳಿ ಸಾರಗೊಂಡ್ಲು ಗ್ರಾಮದ ರೈತ ಗಂಗರೆಡ್ಡಿ ದ್ರಾಕ್ಷಿಬೆಳೆಯನ್ನು ಸವಾಲಾಗಿ ಸ್ವೀಕರಿಸಿ ಕಳೆದ 5ವರ್ಷದಿಂದ ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದಾರೆ ಎಂದರು.
ಗುಣಮಟ್ಟ ಹಾಗೂ ಬೇಡಿಕೆ ಹೆಚ್ಚಾಗಿರು ವುದರಿಂದ ವ್ಯಾಪಾರಸ್ಥರೇ ತೋಟಕ್ಕೆ ಬಂದು ಹಣ ಪಾವತಿಸಿ ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ಸರಿಯಾಗಿ ನಿರ್ವಹಣೆ ಮಾಡಿದರೆ 15 ರಿಂದ 20ವರ್ಷ ದ್ರಾಕ್ಷಿಯ ಬೆಳೆಯನ್ನು ಬೆಳೆಯಬಹುದು. ಇಲ್ಲಿನ ದ್ರಾಕ್ಷಿಗೆ ವಿವಿಧ ರಾಜ್ಯಗಳಿಂದ ಬೇಡಿಕೆಯಿದೆ. ಹೆಚ್ಚಾಗಿ ಕೇರಳ, ತಮಿಳುನಾಡು, ರಾಜಾಸ್ತಾನ, ದೆಹಲಿ, ಮುಂಬೈಗೆ ರಪ್ತಾಗುತ್ತದೆ ಎಂದು ರೈತ ಗಂಗರೆಡ್ಡಿ ತಿಳಿಸಿದರು.
ದಾಕ್ಷಿ ಬೆಳೆಗೆ ನರೇಗಾದಿಂದ ಅನುದಾನ : ಗೌರಿಬಿದನೂರು ತಾಲೂಕಿನಲ್ಲಿ ಸುಮಾರು 65 ಹೆಕ್ಟೇರ್‌ನಲ್ಲಿ ವಿವಿಧ ತಳಿಯ ದ್ರಾಕ್ಷಿಯನ್ನು ಬೆಳೆಯುತ್ತಿದ್ದಾರೆ ಹೆಚ್ಚಾಗಿ ಮಂಚೇನಹಳ್ಳಿ ಹೋಬಳಿಯಲ್ಲಿ ದ್ರಾಕ್ಷಿಯನ್ನು ಬೆಳೆಯುತ್ತಾರೆ. ದ್ರಾಕ್ಷಿಬೆಳೆಗೆ ಬಂಡವಾಳ ಹೆಚ್ಚಿಗೆ ಹೂಡಬೇಕು ಹಾಗೂ ನಿರ್ವಹಣೆ ಕಷ್ಟ ಎಂಬ ಕಾರಣದಿಂದ ಈ ತಾಲೂಕಿನ ರೈತರು ದ್ರಾಕ್ಷಿ ಬೆಳೆಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ತೋಟಗಾರಿಕೆ ಇಲಾಖೆಯಿಂದ ದ್ರಾಕ್ಷಿಬೆಳೆ ಪ್ರಾರಂಭಿಸಲು ನರೇಗಾದಿಂದ ಅನುದಾನ ನೀಡಲಾಗುತ್ತಿದ್ದು, ರೈತರು ಇದರ ಲಾಭವನ್ನು ಪಡೆದು ಹೆಚ್ಚು ದ್ರಾಕ್ಷಿಬೆಳೆ ಬೆಳೆಯಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ತಿಳಿದರು.
16 ಲಕ್ಷ ಆದಾಯ: 5 ವರ್ಷಗಳಿಂದ ದ್ರಾಕ್ಷಿ ಬೆಳೆಯುತ್ತಿದ್ದೇವೆ ನಮಗೆ ನಷ್ಟವೆಂಬುದೇ ಇಲ್ಲ ಇದಕ್ಕೆ ಕಾರಣ ಇದರ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡುತ್ತೇವೆ. 2017ರಲ್ಲಿ 4 ಎಕರೆಗೆ ದ್ರಾಕ್ಷಿ ಗಿಡಗಳನ್ನು ನಾಟಿ ಮಾಡಿದ್ದು ಕೂಲಿಗೆ 1ಲಕ್ಷ ಔಷಧಿ, ಬೇವಿನ ಹಿಂಡಿ, ಕಡಲೆಹಿಂಡಿ, ಹೊಂಗೆ ಹಿಂಡಿ ಕೊಟ್ಟಿಗೆ ಗೊಬ್ಬರ 20ಟನ್, ಇದಕ್ಕೆ ಬರುವ ಬೂದಿರೋಗ(ರೆಡ್ ಮೆಟ್ಸ್ ರೋಗ) ನಿರ್ವಹಣೆಗೆ ವೆಚ್ಚ, ದ್ರಾಕ್ಷಿಗೊನೆ ಯನ್ನು ಕಟ್ಟಿಸುವುದು, ಚಿಗುರು ಕೀಳು ವುದು ಸೇರಿ 4ಲಕ್ಷವನ್ನು ವೆಚ್ಚ ಮಾಡಲಾ ಗಿದೆ 16ಲಕ್ಷ ಆದಾಯ ಬಂದಿದೆ ಎಂದರು. ಈ ವರ್ಷದಷ್ಟು ಉತ್ತಮ ಇಳುವರಿ ಹಾಗೂ ಹೆಚ್ಚಿನ ಬೆಲೆ ಯಾವ ವರ್ಷವೂ ಬಂದಿರಲಿಲ್ಲ. ಈ ಋತುವಿ ನಲ್ಲಿ ಅಲ್ಪಪ್ರಮಾಣದ ರೈತರು ಮಾತ್ರವೇ ದ್ರಾಕ್ಷಿ ಇಟ್ಟುಕೊಂಡಿದ್ದಾರೆ. ಸರ್ಕಾರ ವೈಜ್ಞಾನಿಕವಾಗಿ ಮಾರುಕಟ್ಟೆಯ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಗಂಗರೆಡ್ಡಿ ಒತ್ತಾಯಿಸಿದರು.
-ವಿ.ಡಿ.ಗಣೇಶ್, ಗೌರಿಬಿದನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.