Gruhalakshmi Scheme: ಗೃಹಲಕ್ಷ್ಮೀಯರಿಗೆ ತಪ್ಪದ ಇ-ಕೆವೈಸಿ ಕಿರಿಕಿರಿ!
Team Udayavani, Sep 4, 2023, 3:18 PM IST
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಒಂದಡೆ ಗೃಹಲಕ್ಷ್ಮಿ ಯೋಜನೆ ನೋಂದಣಿಗಾಗಿ ಮನೆ ಯಾಜಮಾನಿಯರು ಇನ್ನೂ ಪರದಾಟ ನಡೆಸುತ್ತಿದ್ದರೆ ಮತ್ತೂಂದಡೆ ಇ-ಕೆವೈಸಿ ಸರಿ ಇದ್ದರೂ 20 ಸಾವಿರ ಮಂದಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ವರ್ಗಾಯಿಸಿದ್ದ ಗೃಹಲಕ್ಷ್ಮಿ ಯೋಜನೆ ಹಣ ಖಜಾನೆಗೆ ಮರಳಿ ಬಂದಿದೆ.
ಹೌದು, ಜಿಲ್ಲಾದ್ಯಂತ ಗೃಹಲಕ್ಷ್ಮಿ ಯೋಜನೆ ಚಾಲನೆಗೊಂಡ ಬಳಿಕ ಇಲ್ಲಿವರೆಗೂ ಕೇವಲ 95,421 ಮಂದಿ ಫಲಾನುಭವಿಗಳಿಗೆ ಮಾತ್ರ ಗೃಹಲಕ್ಷ್ಮೀ ಹಣ ಜಮೆ ಆಗಿದ್ದು, ಉಳಿದವರಿಗೆ ಗೃಹಲಕ್ಷ್ಮೀ ಹಣ ತಲುಪಲು ತಾಂತ್ರಿಕ ಸಮಸ್ಯೆ ಉಂಟಾಗಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಪಡಿತರ ಚೀಟಿಯಲ್ಲಿ ಮನೆ ಯಾಜಮಾನಿ ಎಂದು ನಮೂದಾಗಿದ್ದರೆ ಹಾಗೂ ಬ್ಯಾಂಕ್ಗೆ ಆಧಾರ್ ಆಪ್ ಡೇಟ್ ಇದ್ದರೆ ಮಾತ್ರ ಗೃಹಲಕ್ಷ್ಮಿಯೋಜನೆ ನೊಂದಣಿ ಕಾರ್ಯ ಯಶಸ್ವಿ ಆಗುತ್ತದೆ. ಆದರೆ -ಕೆವೈಸಿ ಸರಿ ಇದ್ದು ನೋಂದಣಿ ಯಶಸ್ವಿಯಾದ 20 ಸಾವಿರ ಮಹಿಳೆಯರಿಗೆ ಜಿಲ್ಲಾ ಖಜಾನೆ ಮೂಲಕ ಕಳುಹಿಸಿದ ಗೃಹಲಕ್ಷ್ಮಿ ಹಣ ಅವರ ಬ್ಯಾಂಕ್ ಖಾತೆಗೆ ಜಮೆ ಆಗದೇ ವಾಪಸ್ ಬಂದಿದೆ.
ಇದಕ್ಕೆ ತಾಂತ್ರಿಕ ಸಮಸ್ಯೆಯೆ ಕಾರಣ ಆಗಿದ್ದು ಹೀಗಾಗಿ ಗೃಹಲಕ್ಷ್ಮಿ ಯೋಜನೆ ಅನುಷ್ಟಾನಕ್ಕೆ ಒಂದು ಕಡೆ ಸರ್ವರ್ ಸಮಸ್ಯೆ ಮತ್ತೂಂದು ಕಡೆ ಇ-ಕೆವೈಸಿ ಕಿರಿಕಿರಿಯಿಂದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ಕಾಯುತ್ತಿರುವ ಮಹಿಳೆಯರನ್ನು ಅಕ್ಷರಶಃ ತೀವ್ರ ಹೈರಾಣಾಗಿಸುತ್ತಿದೆ. ಎಲ್ಲವೂ ಸರಿ ಇದ್ದರೂ ಇನ್ನೂ ಜಿಲ್ಲೆಯಲ್ಲಿ ಸುಮಾರು 1ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸೇರಿಲ್ಲ.
ಗೃಹಲಕ್ಷ್ಮಿ ಹಣ ಪರಿಶೀಲನೆಗೆ ಬ್ಯಾಂಕ್ಗಳಿಗೆ ಅಲೆದಾಟ!: ಸರ್ಕಾರ ಪ್ರತಿ ಮನೆಯ ಯಾಮಾನಿಗೆ ಮಾಸಿಕ ಗೃಹಲಕ್ಷ್ಮಿ ಯೋಜನೆಯಡಿ 2000 ರೂ. ಹಣ ಜಮೆ ಮಾಡುವುದಾಗಿ ಘೋಷಿಸಿ ಕಳೆದ ಆ.30 ರಂದು ಯೋಜನೆಗೆ ಚಾಲನೆ ನೀಡಿದ ಬೆನ್ನಲೇ ಜಿಲ್ಲೆಯಲ್ಲಿ ಇಲ್ಲಿವರೆಗೂ ಸುಮಾರು 1.50 ಲಕ್ಷ ಮಂದಿಗೆ ಗೃಹಲಕ್ಷ್ಮೀ ಯೋಜನೆಯಡಿ ಹಣ ಜಮೆ ಆಗಿದೆ. ಆದರೆ ಜಿಲ್ಲೆಯಲ್ಲಿ ಯೋಜನೆಗೆ ಬರೋಬ್ಬರಿ 2.51 ಲಕ್ಷ ಮಂದಿ ನೋಂದಾಯಿಸಿಕೊಂಡಿರುವುದರಿಂದ ಮಹಿಳೆಯರು ಗೃಹಲಕ್ಷ್ಮೀ ಹಣ ಬಂದಿರುವುದನ್ನು ಖಚಿತಪಡಿಸಿ ಕೊಳ್ಳಲು ಬ್ಯಾಂಕ್ಗಳಿಗೆ ಲಗ್ಗೆ ಇಟ್ಟು ಖಾತೆ ಪರಿಶೀಲಿಸಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ 1 ಲಕ್ಷ ಗೃಹಲಕ್ಷ್ಮಿಯರಿಗೆ ಸರ್ಕಾರ 2000 ರೂ. ಹಣ ಜಮೆ ಮಾಡುವುದನ್ನು ಬಾಕಿ ಉಳಿಸಿಕೊಂಡಿದೆ. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿರುವ ಸುಮಾರು 20 ಸಾವಿರ ಮಂದಿ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದ್ದ ಗೃಹಲಕ್ಷ್ಮಿ ಯೋಜನೆಯ ಹಣ ಪುನಃ ಖಜಾನೆಗೆ ವಾಪಸ್ ಬಂದಿದೆ. -ಅಶ್ವತ್ಥಮ್ಮ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಬಳ್ಳಾಪುರ
-ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.