ಗುಡಿಬಂಡೆಯ ತಾಣ ಪ್ರವಾಸಿಗರ ಪಾಲಿಗೆ ಸ್ವರ್ಗ!


Team Udayavani, Jul 23, 2023, 3:55 PM IST

ಗುಡಿಬಂಡೆಯ ತಾಣ ಪ್ರವಾಸಿಗರ ಪಾಲಿಗೆ ಸ್ವರ್ಗ!

ಗುಡಿಬಂಡೆ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡ ದು ಎನ್ನುವಂತೆ ಜಿಲ್ಲೆಯಲ್ಲಿ ಗುಡಿಬಂಡೆ ತಾಲೂಕು ಚಿಕ್ಕದಾದರೂ ಐತಿಹಾಸಿಕ, ಸಾಂಸ್ಕೃತಿಕ, ಪ್ರವಾ ಸೋದ್ಯಮಕ್ಕೆ ಗುಡಿಬಂಡೆ ಪ್ರವಾಸಿಗರ ಪಾಲಿಗೆ ಸ್ವರ್ಗ ವಾಗಿದೆ.

ಈಗಾಗಲೇ ಹಲವು ಸಿನಿಮಾ, ಧಾರವಾಹಿ ಚಿತ್ರೀಕರಣ ಈ ಭಾಗದಲ್ಲಿ ನಡೆದು ಗುಡಿಬಂಡೆ ರಾಜ್ಯ ಮಟ್ಟದಲ್ಲಿ ತಾಣವಾಗಿ ಗಮನ ಸೆಳೆಯುತ್ತಿದೆ. ತಾಲೂಕಿನ ಸುತ್ತಮುತ್ತಲಿನಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಐತಿಹಾಸಿಕ ಹಿನ್ನೆಲೆಯುಳ್ಳ 7 ಸುತ್ತಿನ ಕೋಟೆಯಿಂದ ಆವೃತವಾಗಿರುವ ಸುರಸದ್ಮಗಿರಿ ಬೆಟ್ಟ. ಹಿಂದಿನ ಕಾಲದಲ್ಲಿಯೇ ಭಾರತ ಭೂಪಟ ಹೋಲುವಂತೆ ನಿರ್ಮಿಸಿರುವ ಅಮಾನಿ ಬೈರಸಾಗರ ಕೆರೆ, ಅತ್ಯಂತ ಪುರಾತನ ಜೈನ ಬಸದಿಗಳು, ಪಟ್ಟಣಕ್ಕೆ ಸಮೀಪದಲ್ಲಿಯೇ ನವಿಲು ಜಿಂಕೆಗಳ ವಾಸ, ಜತೆಗೆ ಪಕ್ಕದ ತಾಲೂಕಿನ ವಾಟದಹೊಸಹಳ್ಳಿ ಕೆರೆ, ಗುಡಿಬಂಡೆ ಸನಿಹದಲ್ಲಿರುವ ಆವುಲಬೆಟ್ಟ ಹೀಗೆ ಅನೇಕ ಸ್ಥಳಗಳು ತನ್ನ ಪ್ರಾಕೃತಿಕ ಸೊಬಗಿನೊಂದಿಗೆ ಕಂಗೊಳಿಸುತ್ತಿದೆ.

ವಾರಾಂತ್ಯಕ್ಕೆ ಪ್ರವಾಸಿಗರ ದಂಡು: ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನತೆ ಈ ಪ್ರದೇಶಗಳನ್ನು ವೀಕ್ಷಿಸಲು ಬರುತ್ತಿರುವುದು ಸಾಮಾನ್ಯವಾಗಿದೆ. ಗುಡಿಬಂಡೆ ಸುತ್ತಮುತ್ತಲಿನ ಪರಿಸರದ ಸೌಂದರ್ಯ ಇಡೀ ರಾಜ್ಯದ ಜನರನ್ನು ಸೆಳೆಯುತ್ತಿದೆ ಎನ್ನಲಾಗುತ್ತಿದೆ.

ಭವ್ಯ ಸ್ವಾಗತ ಕೋರುವ ಬೈರಸಾಗರ ಕೆರೆ: ಇನ್ನೂ ಗುಡಿಬಂಡೆಗೆ ಆಗಮಿಸುತ್ತಿದ್ದಂತೆ ಪ್ರಯಾಣಿಕರಿಗೆ ಆಹ್ವಾನ ನೀಡುವಂತೆ ಕಾಣಿಸುವುದು ಅಮಾನಿ ಬೈರಸಾಗರ ಕೆರೆ. ಕೆರೆ ಏರಿ ಮೇಲೆ ಪ್ರಯಾಣಿಸುವುದೇ ಒಂದು ರೀತಿಯ ವಿಭಿನ್ನ ಅನುಭವ. ಕೆರೆ ಬಳಿಯೇ ಸ್ಯಾಂಡಲ್‌ವುಡ್‌ನ‌ಲ್ಲಿ ಹಿಟ್‌ ಹೊಡೆದ ಮೊನಾಲಿಸಾ ಚಿತ್ರದ ಓ ಪ್ರಿಯತಮೆ ಇದು ನ್ಯಾಯಾನಾ ಎಂಬ ಗೀತೆಯ ಚಿತ್ರೀಕರಣವೂ ನಡೆದಿದೆ. ಜತೆಗೆ ದಳಪತಿ ಚಲನಚಿತ್ರ ಹಾಗೂ ರಾಮಾಚಾರಿ ಕನ್ನಡದ ಧಾರವಾಹಿಗಳನ್ನೂ ಚಿತ್ರೀಕರಿಸಲಾಗಿದ್ದು, ಇತ್ತೀಚೆಗೆ ನಟ ಚರಣ್‌ ಅಭಿನಯದ ಗುರುಶಿಷ್ಯರು ಸಿನಿಮಾ ಈ ಭಾಗದಲ್ಲಿ ಭಾಗಶಃ ಚಿತ್ರೀಕರಣಗೊಂಡಿತ್ತು. ರಾಜ್ಯದಲ್ಲಿಯೇ ಅತ್ಯಂತ ಚಿಕ್ಕ ತಾಲೂಕುಗಳಲ್ಲಿ ಒಂದಾದ ಗುಡಿಬಂಡೆಯನ್ನು ರಾಜ ಮಹಾರಾಜರು ಸೇರಿ ಪಾಳೇಗಾರರು ಆಳಿದ್ದ ಐತಿಹಾಸಿಕ ಪ್ರದೇಶ. ಅನೇಕ ಪ್ರೇಕ್ಷಣೀಯ ಸ್ಥಳ ಹೊಂದಿರುವ ಗುಡಿಬಂಡೆಗೆ ಭೇಟಿ ನೀಡುವ ಪ್ರವಾಸಿಗರು ಪುನಃ ಪುನಃ ಭೇಟಿ ನೀಡಬೇಕೆನ್ನುತ್ತಾರೆ. ಅವುಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳ ಇಚ್ಛಾಶಕ್ತಿ, ಕಾಯಕಲ್ಪ ಬೇಕಿದೆ.

ಚಾರಣಿಗರಿಗಾಗಿ ಸುರಸದ್ಮಗಿರಿ ಕೋಟೆ: ಪಟ್ಟಣ ವ್ಯಾಪ್ತಿಯಲ್ಲಿಯೇ ಕಾಣಸಿಗುವುದು ಸುರಸದ್ಮಗಿರಿ ಬೆಟ್ಟ. ಈ ಬೆಟ್ಟಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ರಾಜ್ಯದ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟಗಳಲ್ಲಿ ಪೈಕಿ ಇದೂ ಒಂದಾಗಿದೆ. ಈ ಭಾಗದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬೈರಗೌಡ ಬೆಟ್ಟದ ಸುತ್ತಲೂ ರಕ್ಷಣೆಗಾಗಿ 7 ಸುತ್ತಿನ ಕೋಟೆ ನಿರ್ಮಿಸಿದ್ದಾನೆ. ಜತೆಗೆ ಬೆಟ್ಟದ ಮೇಲ್ಭಾಗದಿಂದ ಸುಂದರವಾದ ಪರಿಸರದ ಸೊಬಗನ್ನು ಕಾಣಬಹುದಾಗಿದೆ. ರಾಮಾಯಣದ ಪ್ರಕಾರ ರಾಮ ಲಕ್ಷ್ಮಣರು ವನವಾಸದ ಸಮಯದಲ್ಲಿ 108 ಜೋರ್ತಿಲಿಂಗಗಳ ಪೈಕಿ ಇಲ್ಲಿಯೂ ರಾಮೇಶ್ವರ ಲಿಂಗ ಪ್ರತಿಷ್ಠಾ ಪಿಸಿದ್ದಾರೆ ಎಂಬ ಪ್ರತೀತಿ ಇದೆ. ಆದರೆ ಸ್ಥಳೀಯ ಆಡಳಿತ ಈ ಬೆಟ್ಟದಲ್ಲಿ ವಾಹನ ನಿಲುಗಡೆ ಸೇರಿ ಮೂಲಭೂತ ಸೌಕರ್ಯ ಒದಗಿಸಿದರೇ ಪ್ರಯಾಣಿಕರಿಗೆ ಅನುಕೂಲವಾಗು ವುದರ ಜತೆಗೆ ನಿಗಧಿತ ಶುಲ್ಕದಿಂದ ಸರ್ಕಾರಕ್ಕೂ ಆದಾಯ ಬರಲಿದೆ.

ಬೇಕಿದೆ ಕಾಯಕಲ್ಪ : ಈಗಾಗಲೇ ಸ್ಥಳೀಯ ಶಾಸಕರು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸುಮಾರು 1 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ಅಮಾನಿ ಬೈರಸಾಗರ ಕೆರೆ ಬಳಿ ಬೋಟಿಂಗ್‌, ಪಾರ್ಕ್‌ ನಿರ್ಮಾಣ ಜತೆಗೆ ಸುರಸದ್ಮಗಿರಿ ಬೆಟ್ಟವನ್ನೂ ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದಾರೆ. ಈ ಕಾರ್ಯ ವಿಳಂಬ ವಾಗುತ್ತಿದ್ದು, ಶೀಘ್ರ ಕೈಗೊಳ್ಳಬೇಕೆಂಬುದು ಪ್ರವಾಸಿಗರ ಆಶಯವಾಗಿದೆ.

ಗುಡಿಬಂಡೆಯನ್ನು ಶಾಸಕರು ಪ್ರವಾಸೋ ದ್ಯಮ ತಾಣ ಮಾಡುವು ದಾಗಿ ಕೇವಲ ಭರವಸೆಗೆ ಸೀಮಿತರಾಗಿದ್ದಾರೆ.ಅಧಿಕಾ ರಿಗಳಾದರೂ ಕ್ರಮ ಕೈಗೊಳ್ಳಬೇಕು. ● ಮಧು ವೈ.ಯರ್ರಹಳ್ಳಿ, ಪಿಎಸ್‌ಎಸ್‌ ಮುಖಂಡರು

ಟಾಪ್ ನ್ಯೂಸ್

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.