ಗುರು ಪೌರ್ಣಮಿಗೆ ಮೊಳಗಿದ ಗುರುನಾಮ ಸ್ಮರಣೆ
Team Udayavani, Jul 17, 2019, 3:00 AM IST
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ್ಯ ಅಷಾಢ ಮಾಸದ ಗುರು ಪೌರ್ಣಮಿ ಪ್ರಯುಕ್ತ ಮಂಗಳವಾರ ಶಿರಡಿ ಸಾಯಿಬಾಬಾ ದೇವಾಲಯಗಳಿಗೆ ಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸುವ ಮೂಲಕ ಗುರುಗಳ ಕೃಪೆಗೆ ಪಾತ್ರರಾದರು.
ಜಿಲ್ಲಾ ಕೇಂದ್ರದಲ್ಲಿ ಗುರು ಪೌರ್ಣಮಿ ಸಡಗರ ಕಳೆಗಟ್ಟಿತ್ತು. ನಗರದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣದ ರಸ್ತೆಯಲ್ಲಿರುವ ಸುಬ್ರಹ್ಮಣ್ಯೇಶ್ವರ, ಶನೇಶ್ವರ ಹಾಗೂ ಶಿರಡಿ ಸಾಯಿಬಾಬ ದೇವಾಲಯದಲ್ಲಿ 21 ನೇ ವರ್ಷದ ಗುರು ಪೌರ್ಣಮಿಯನ್ನು ಭಕ್ತರು ಆಚರಿಸಿದರು.
ಬೆಳಗ್ಗೆಯಿಂದ ವಿಶೇಷ ಪೂಜೆ, ಅಭಿಷೇಕ, ದತ್ತಾತ್ರೇಯ ಹೋಮ, ಶಿರಡಿ ಸಾಯಿಬಾಬಾ ಹೋಮ, ಹವನ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು.
ಎಪಿಎಂಸಿ ಲೇಔಟ್‌ನಲ್ಲಿ ಸಂಭ್ರಮ: ನಗರದ ಗೌರಿಬಿದನೂರು ರಸ್ತೆಯ ಎಪಿಎಂಸಿ ಲೇಔಟ್‌ನಲ್ಲಿರುವ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಕೂಡ 6 ನೇ ವರ್ಷದ ಗುರು ಪೌರ್ಣಮಿಯನ್ನು ಭಕ್ತರು ಆಚರಿಸಿದರು. ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂಜೆ ನಡೆದ ಶ್ರೀನಿವಾಸ ಕಲ್ಯಾನೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ದೇವಾಲಯಗಳಲ್ಲಿ ಜನ ಸಾಗರ: ಸಾಯಿಬಾಬಾ ದೇವಾಲಯಗಳು ಮಾತ್ರವಲ್ಲದೇ ನಗರದ ಹೊರ ವಲಯದ ಇತಿಹಾಸ ಪ್ರಸಿದ್ಧ ನಂದಿ ಬೋಗನಂದೀಶ್ವರ, ನಂದಿಗಿರಿಧಾಮದ ಯೋಗನಂದೀಶ್ವರ, ನಗರದ ಗಂಗಮ್ಮ ಗುಡಿ ರಸ್ತೆಯಲ್ಲಿರುವ ಜಾಲಾರಿ ಗಂಗಮ್ಮದೇವಿ, ಮಹಾಕಾಳಿ ದೇವಾಲಯಕ್ಕೆ ಭಕ್ತರು ಭೇಟಿ ನೀಡಿ ಭಕ್ತರು ಪೂಜೆ ಸಲ್ಲಿಸಿದರು.
ಹಾರೋಬಂಡೆ ಸಾಯಿ ಮಂದಿರ: ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಹಾರೋಬಂಡೆ ಸಮೀಪ ನಿರ್ಮಿಸಲಾಗಿರುವ ಶಿರಡಿ ಸಾಯಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ದೇವಾಲಯದ ಧರ್ಮದರ್ಶಿ ಜಿ.ಎಚ್.ನಾಗರಾಜ್ ಉಪಸ್ಥಿತರಿದ್ದರು.
ದೇಗುಲಗಳಿಗೆ ದೀಪಾಲಂಕಾರ: ಜಿಲ್ಲೆಯ ಸಾಯಿಬಾಬಾ ಮಂದಿರಗಳು ವಿದ್ಯುತ್ ದೀಪಾಲಂಕಾರಗಳೊಂದಿಗೆ ಕಂಗೊಳಿಸಿದವು. ನಗರದ ಸರ್ ಎಂ.ವಿ. ಕ್ರೀಡಾಂಗಣ, ಎಂಜಿ ರಸ್ತೆ, ಮಹಾಕಾಳಿ ರಸ್ತೆ ಮತ್ತಿತರ ಕಡೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಪಲ್ಲಕ್ಕಿ ಉತ್ಸವ, ಸಾಂಸ್ಕೃತಿಕ ಕಲರವ: ನಗರದಲ್ಲಿ ಇಳಿಸಂಜೆಯ ಹೊತ್ತಿನಲ್ಲಿ ಸಾಯಿಬಾಬಾ ಭಾವಚಿತ್ರಗಳ ಸಮೇತ ನಗರದ ಮುಖ್ಯ ಬೀದಿಗಳಲ್ಲಿ ನಡೆದ ಆಕರ್ಷಕ ಹೂವಿನ ಪಲ್ಲಕ್ಕಿ ರಥೋತ್ಸವ ಜನಾಕರ್ಷಣಿಯವಾಗಿತ್ತು. ದೇವಾಲಯಗಳಲ್ಲಿ ಗುರು ಪೌರ್ಣಿಮೆ ಪ್ರಯುಕ್ತ ವೀರಗಾಸೆ, ಡೊಳ್ಳು ಕುಣಿತ, ಸಂಗೀತ ಕಚೇರಿ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ತಲೆತೂಗುವಂತೆ ಮಾಡಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.