ಜಾಮಿಯಾ ಮಸೀದಿಯಲ್ಲಿ ಪವಿತ್ರ ರಂಜಾನ್: ವಿಶೇಷ ಪ್ರಾರ್ಥನೆ
ಮುಂಗಾರು ಬೆಳೆಗಳು ಉತ್ತಮವಾಗಿ ಬೆಳೆಯಲಿ ಎಂದು ದೇವರಲ್ಲಿ ಹರಿಕೆ ಮಾಡಿಕೊಂಡಿರುವುದಾಗಿ ತಿಳಿಸಿದರು.
Team Udayavani, May 4, 2022, 3:36 PM IST
ಚೇಳೂರು: ಪವಿತ್ರ ಹಬ್ಬವಾದ ರಂಜಾನ್ ಹಬ್ಬವನ್ನು ಚೇಳೂರು ಗ್ರಾಮ ಸೇರಿದಂತೆ ತಾಲೂಕಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮಂಗಳವಾರ ಮುಂಜಾನೆ ಜಾಮಿಯಾ ಹಾಗೂ ಮದೀನಾ ಮಸೀದಿಗಳಿಗೆ ತೆರಳಿದ ಮುಸಲ್ಮಾನರು ವಿಶೇಷ ಪ್ರಾರ್ಥನೆ ಸಲ್ಲಿಸಿ ಗ್ರಾಮದ ಹೊರವಲಯದ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ವೇಳೆ ಜಾಮಿಯಾ ಮಸೀದಿ ಅದ್ಯಕ್ಷ ಎಂ.ಎಸ್.ಅಬ್ದುಲ್ ಲತೀಫ್ ಮಾತನಾಡಿ, ಕೊರೊನಾ ಸಂಕಷ್ಟದ ಬಳಿಕ ಉತ್ತಮ ಮಳೆಯಾಗಿ ಬೆಳೆಯಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಸಿಗಲಿ ಮುಂಗಾರು ಬೆಳೆಗಳು ಉತ್ತಮವಾಗಿ ಬೆಳೆಯಲಿ ಎಂದು ದೇವರಲ್ಲಿ ಹರಿಕೆ ಮಾಡಿಕೊಂಡಿರುವುದಾಗಿ ತಿಳಿಸಿದರು.
ಜಾಮೀಯಾ ಮಸೀದಿ ಎಂ.ಎಸ್. ನೂರಅಹಮ್ಮದ್, ಮಹಮದ್‌ರಫಿ, ಟೈಲರ್ ಚಾಂದ್‌ಬಾಷ, ಹಲೀಮ್‌ಬಾಷ, ಗ್ರಾಪಂ ಮಾಜಿ ಅದ್ಯಕ್ಷ ಎಸ್.ಎಂ.ಕಲೀಮುಲ್ಲ,
ಸಮೀವುಲ್ಲ, ಸರ್ಕಾರಿ ಮುಖ್ಯ ಶಿಕ್ಷಕ ಜಿಲಾನ್ ಬಾಷ, ಶಿಕ್ಷಕ ಹೈದರ್‌ಸಾಬೀ, ಎಸ್.ಅಹಮ್ಮದ್ ಬಾಷ, ಖಾದರ್, ಬಟ್ಟೆ ಅಂಗಡಿ ಮಾಲಿಕ ಇಮ್ರಾನ್ ಕರವೇ ಸದಸ್ಯ ಬುಲೇಟ್‌ಬಾಬು, ಎಸ್.ಎಫ್.ಸಾದೀಕ್‌ಫಯಾಜ್ ಇತರರಿದ್ದರು.
ತಾಲ್ಲೂಕಿನ ಪ್ರಮುಖ ಗ್ರಾ.ಪಂ.ಗಳಾದ ನಲ್ಲಗುಟ್ಲಪಲ್ಲಿ, ಚಾಕವೇಲು, ಬಿಳ್ಳೂರು, ಪೋಲನಾಯಕನಹಳ್ಳಿ, ಜೂಲಪಾಳ್ಯ, ಪಾಳ್ಯಕೆರೆ, ನಾರೇಮದ್ದೇಪಲ್ಲಿ, ಕುರುಬರಹಳ್ಳಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸದರು. ಚೇಳೂರು ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಸಿ.ರವಿಕುಮಾರ್ ಆದೇಶದಂತೆ ಪ್ರೋ.ಪಿಎಸ್‌ಐ ಹರೀಶ್ ಪಾತಪಾಳ್ಯ ನಾರಾಯಣಸ್ವಾಮಿ ಎರಡು ಠಾಣೆಗಳ ಪರೀದಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
Gudibande: ಹೆಸರಿಗಷ್ಟೇ ಬಸ್ ನಿಲ್ದಾಣ; ಬಸ್‌ಗಳೇ ಬರಲ್ಲ
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.