2 ವರ್ಷಗಳಲ್ಲಿ ಗೌರಿಬಿದನೂರು ಚಿತ್ರಣ ಬದಲು
Team Udayavani, Feb 24, 2020, 3:00 AM IST
ಗೌರಿಬಿದನೂರು: ನಗರದ ಬೆಂಗಳೂರು-ಹಿಂದೂಪುರ ರಸ್ತೆ ಅಭಿವೃದ್ಧಿಯಿಂದ ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ-ಮಧುಗಿರಿ ರಸ್ತೆ ಅಭಿವೃದ್ಧಿಯಾಗಲಿದ್ದು, ಇನ್ನೆರೆಡು ವರ್ಷಗಳಲ್ಲಿ ಗೌರಿಬಿದನೂರು ಚಿತ್ರಣ ಸಂಪೂರ್ಣ ಬದಲಾಣೆಯಾಗಲಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.
ನಗರದ ಬೆಂಗಳೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ-234 ಮತ್ತು ಗುಂಡಾಪುರ ಹಿರೇಬಿದನೂರು ಸಂಪರ್ಕ ರಸ್ತೆಯ ಮೇಲ್ಸೆತುವೆ ಕಾಮಾಗಾರಿ ವೀಕ್ಷಿಸಿ ಮಾತನಾಡಿದ ಅವರು, ನಗರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಅದ್ಯತೆ ನೀಡಲಾಗುತ್ತಿದ್ದು, ಈಗಾಗಲೇ ನಗರದ ಬೆಂಗಳೂರು-ಹಿಂದೂಪುರ ರಸ್ತೆ ಅಭಿವೃದ್ಧಿ ಮಾಡಿದ್ದು ರಾಷ್ಟ್ರೀಯ ಹೆದ್ದಾರಿ 234 ರಸ್ತೆ ಅಭಿವೃದ್ಧಿ ಪ್ರಗತಿಯಲ್ಲಿದೆ ಎಂದರು.
ಬೈಪಾಸ್ ರಸ್ತೆಯಿಂದ ಸಂಚಾರ ದಟ್ಟಣೆಗೆ ಕಡಿವಾಣ: ಗುಂಡಾಪುರದಿಂದ ಹಿರೇಬಿದನೂರು ಹೆದ್ದಾರಿ ಸಂಪರ್ಕ ರಸ್ತೆ ಹಾಗೂ ಬೆಂಗಳೂರು ರಸ್ತೆಯ ಅಂಡರ್‌ಪಾಸ್ ರಸ್ತೆ ನಿರ್ಮಾಣಕ್ಕೆ 100 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರದ ಅನುದಾನ ಸಹ ಸೇರಿದೆ. ಬೆಂಗಳೂರು ಮತ್ತು ಆಂಧ್ರಪ್ರದೇಶದ ಕಡೆಯಿಂದ ಬರುವ ಸರಕು ಸಾಗಾಣಿಕೆ ವಾಹನಗಳು ನಗರದೊಳಕ್ಕೆ ಸಂಚರಿಸುವ ಅವಶ್ಯಕತೆಯೇ ಇರುವುದಿಲ್ಲ ಎಂದರು.
ಬೆಂಗಳೂರು ಕಡೆಯಿಂದ ಬರುವ ಸರಕು ವಾಹನ ಹಾಗೂ ಇತರೆ ವಾಹನಗಳು ಬೈಪಾಸ್ ಮೂಲಕ ಹಿರೇಬಿದನೂರು ಬೈಪಾಸ್ ಮೂಲಕ ಆಂಧ್ರಕ್ಕೆ ಸಂಚರಿಸಬಹುದಾಗಿದೆ. ತುಮಕೂರು ಕಡೆಯಿಂದ ಬರುವ ವಾಹನಗಳು ಬೈಪಾಸ್ ಮೂಲಕ ಸಂಚರಿಸುತ್ತವೆ. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣವಾಗುವುದರ ಜೊತೆಗೆ ಸುಗಮ ಸಂಚಾರಕ್ಕೆ ಸಹಕಾರಿಯಾಗಲಿದೆ.
ಕೈಗಾರಿಕೆ ಅಭಿವೃದಿಗೆ ದಿಕ್ಸೂಚಿ: ಬೆಂಗಳೂರು-ಹಿಂದೂಪುರ ರಸ್ತೆ ಸಮಗ್ರವಾಗಿ ಅಭಿವೃದ್ಧಿಯಾಗಿದ್ದು, ಕಡುಮಲಕುಂಟೆಯಲ್ಲಿನ ಕೈಗಾರಿಕಾ ಪ್ರಾಂಗಣಕ್ಕೆ ಬೃಹತ್ ಕೈಗಾರಿಕೆಗಳ ಉದ್ಯಮಗಳು ಹಾಗೂ ಹೊರದೇಶಗಳ ಕೈಗಾರಿಕಾ ಸಂಸ್ಥೆಗಳು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಬಹಳಷ್ಟು ಮಂದಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಭರವಸೆ ನೀಡಿದ್ದಾರೆ. ಇದರಿಂದ ತಾಲೂಕಿನಲ್ಲಿ ವಹಿವಾಟು ಹೆಚ್ಚಾಗುವ ಜತೆಗೆ ಅಭಿವೃದ್ಧಿಯಾಗಲಿದೆ ಎಂದರು.
ನಗರಸಭಾ ಸದಸ್ಯರಾದ ಅರ್.ಪಿ.ಗೋಪಿನಾಥ್ ಡಿ.ಎನ್.ವೆಂಕಟರೆಡ್ಡಿ ಮುಖಂಡರಾದ ಎಚ್,ಎನ್.ಪ್ರಕಾಶ್ ರೆಡ್ಡಿ ಶೂಲಪಾಣಿ ವೆಂಕಟೇಶ್ ವೇಣುಗೋಪಾಲ್ ವೆಂಕಟರಮಣ ಮುಂತಾದವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.