4 ತಿಂಗಳಿಂದ ಅಸಮರ್ಪಕ ನೀರು ಪೂರೈಕೆ: ಪ್ರತಿಭಟನೆ
Team Udayavani, May 5, 2019, 3:00 AM IST
ಗೌರಿಬಿದನೂರು: ಕುಡಿವ ನೀರು, ಬೀದಿದೀಪ, ಚರಂಡಿ ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳಿಲ್ಲದೇ ಪರದಾಡುವಂತಾಗಿದ್ದು, ನಗರಸಭೆ ಕೂಡಲೇ ಸೂಕ್ತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ನಗರದ ಕೂಗಳತೆಯ ದೂರದಲ್ಲಿರುವ ಮಿಟ್ಟೆನಹಳ್ಳಿ ಬಡಾವಣೆ ಮಹಿಳೆಯರು ಕುಡಿಯುವ ನೀರಿನ ಕ್ಯಾನುಗಳನ್ನು ಪ್ರದರ್ಶಿಸಿ ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ನಗರಸಭೆ ವ್ಯಾಪ್ತಿಗೆ ಬರುವ ಮಿಟ್ಟೆನಹಳ್ಳಿ ಬಡಾವಣೆಯಲ್ಲಿ (23ನೇ ವಾರ್ಡ) ಸುಮಾರು 100ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿನ ಜನತೆ ಕನಿಷ್ಠ ಮೂಲಭೂತ ಸೌಕರ್ಯಯಗಳಿಲ್ಲದೆ ಪರಿತಪಿಸುವಂತಾಗಿದೆ ಆಕ್ರೋಶ ವ್ಯಕ್ತಪಡಿಸಿದರು.
4 ತಿಂಗಳಿಂದ ನೀರಿಲ್ಲ: ಕಳೆದ ಶಿವರಾತ್ರಿ ಹಬ್ಬದಿಂದ (ನಾಲ್ಕು ತಿಂಗಳಿಂದ)ಈವರೆಗೂ ಬಡಾವಣೆಗೆ ನೀರು ಸರಬರಾಜಾಗಿಲ್ಲ. ಅಮಾವಾಸ್ಯೆಗೋ, ಪೌರ್ಣಮಿಗೋ ಒಂದು ಟ್ಯಾಂಕರ್ ನೀರು ಬರುತ್ತದೆ. ಅದು ಸಿಕ್ಕರೆ ಸಿಕು¤, ಇಲ್ಲವಾದರೆ ಇಲ್ಲ. ಕುಡಿವ ನೀರಿಗಾಗಿ ಹಾಹಾಕಾರು ಶುರುವಾಗಿದೆ.
ಪ್ರತಿನಿತ್ಯ ಹಣ ಕೊಟ್ಟು ಎರಡು ಕ್ಯಾನ್ ನೀರು ಖರೀದಿಸಬೇಕು, ಕೂಲಿಯಲ್ಲಿ ಬರುವ ಹಣವೆಲ್ಲ ನೀರಿಗೆ ಇಟ್ಟರೆ ಹೊಟ್ಟೆಗೇನು ಮಾಡೋದು, ನಗರಸಭೆಯವರಿಗೆ ದೂರು ನೀಡಿದರೆ ಇಗೋ ಬಂತು ಟ್ಯಾಂಕರ್ ಅಂತಾರೆ. ಟ್ಯಾಂಕರೂ ಇಲ್ಲ ನೀರು ಇಲ್ಲ ಎಂದ ಮಹಿಳೆಯರು, ನಗರಸಭೆಗೆ ಹಿಡಿಶಾಪ ಹಾಕಿದರು.
ಸೊಳ್ಳೆಗಳ ತಾಣ: ಚರಂಡಿ ನೀರು ಎಲ್ಲೆಂದರಲ್ಲಿ ನಿಲ್ಲುವುದರಿಂದ ಆ ಸ್ಥಳಗಳು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿವೆ. ಇಲ್ಲಿನ ಜನರು ಸಾಂಕ್ರಮಿಕ ರೋಗದ ಭೀತಿಯಲ್ಲಿ ದಿನದೂಡುವಂತಾಗಿದೆ ಎಂದು ಬಡಾವಣೆಯ ಗಂಗಮ್ಮ ಅಳಲು ತೋಡಿಕೊಂಡರು.
ಕಗ್ಗತ್ತಲು: ಬಡಾವಣೆಯಲ್ಲಿ ಸಂಜೆಯಾದರೆ ಕಗ್ಗತ್ತಲು ಆವರಿಸುತ್ತದೆ, ವಿದ್ಯುತ್ ಕಂಬಗಳಿದ್ದರೂ ಬೀದಿ ದೀಪಗಳು ಅಳವಡಿಸಿಲ್ಲ. ನಗರ ಮತ್ತು ಇನ್ನಿತರೆ ಹೊಲಗದ್ದೆಗಳಲ್ಲಿ ಕೂಲಿನಾಲಿ ಮಾಡಿಕೊಂಡು ಮನೆಗೆ ಬರುವಾಗ ಕಗ್ಗತ್ತಲು ಆವರಿಸಿರುತ್ತದೆ. ಬೆಳಕಿಲ್ಲದೇ ವಿಷಜಂತುಗಳ ಆತಂಕ ಕಾಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪರಿಹಾರ: ಸ್ಥಳಕ್ಕಾಗಮಿಸಿದ ನಗರಸಭೆ ಮಾಜಿ ಉಪಾಧ್ಯಕ್ಷ ಆರ್.ಪಿ.ಗೋಪಿನಾಥ್ ಮತ್ತು ನಗರ ನೀರು ಸರಬರಾಜು ವ್ಯವಸ್ಥಾಪಕ ಮುರಳಿ ಮಾತನಾಡಿ, ಇನ್ಮುಂದೆ ಸಮರ್ಪಕವಾಗಿ ನೀರು ಸರಬರಾಜು ಮಾಡುವುದರ ಜತೆಗೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವುದಾಗಿ ತಿಳಿಸಿದರೂ ಮಹಿಳೆಯರು ಪ್ರತಿಭಟನೆ ಹಿಂಪಡೆಯಲಿಲ್ಲ.
ಕೆಲ ಕಾಲ ಮಹಿಳೆಯರು ಮತ್ತು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆದಿದ್ದರಿಂದ ಕೂಡಲೇ ಟ್ಯಾಂಕರ್ ಕಳುಹಿಸಲಾಗುವುದು. ಚರಂಡಿ ಸ್ವತ್ಛತೆಗೆ ಸಿಬ್ಬಂದಿಯನ್ನು ಕಳುಹಿಸುತ್ತಿದ್ದು, ಇನ್ನೆರಡು ದಿನಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ನಂತರ ನೀರಿನ ಟ್ಯಾಂಕರ್ ಕಳುಹಿಸಿದ ಬಳಿಕವಷ್ಟೇ ಪ್ರತಿಭಟನೆ ಹಿಂಪಡೆದರು.
ನಿತ್ಯ ನೀರಿಲ್ಲದೇ ಸ್ನಾನಕ್ಕೆ ಹಾಗೂ ಬಹಿರ್ದೆಸೆಗೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸ್ನಾನ ವಾರಕ್ಕೊಮ್ಮೆ ಮಾಡಿಕೊಳ್ಳುವ ಪರಿಸ್ಥಿಗೆ ಬಂದಿದ್ದೇವೆ. ಸ್ವತ್ಛತೆ ಮರೀಚಿಕೆಯಾಗಿ ಸಾಂಕ್ರಮಿಕ ರೋಗದ ಭೀತಿ ಕಾಡುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ.
-ಪ್ರೇಮಮ್ಮ, ಬಡಾವಣೆಯ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.