ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ
Team Udayavani, Mar 4, 2021, 10:01 PM IST
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ದ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿಗಳನ್ನು ಹೊಡೆದು ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ನಂದಿಗಿರಿಧಾಮ ಪೋಲಿಸರು ಯಶಸ್ವಿಯಾಗಿದ್ದಾರೆ.
ಮೈಸೂರು ನಗರದ ಏಕಲವ್ಯ ನಗರದ ಕಬಾಲ್ ಉರುಫ್ ಚಂದು(25), ಮಂಡ್ಯ ತಾಲೂಕು ಹಿಂಡುವಾಳ ಗ್ರಾಮದ ಸುಮಂತ (21) ಬಂಧಿತ ಆರೋಪಿಗಳು ಆರೋಪಿಗಳಿಂದ 6700 ರೂ.ಗಳು ನಗದು ಕೃತ್ಯಕ್ಕೆ ಬಳಸಿದ್ದ 50 ಸಾವಿರ ರೂಗಳ ಮೌಲ್ಯದ ದ್ವಿಚಕ್ರ ವಾಹನ ಮತ್ತು ಎರಡು ಕಬ್ಬಿಣದ ರಾಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿಕೆ ಮಿಥುನ್‍ಕುಮಾರ್ ತಿಳಸಿದ್ದಾರೆ.
30-01-2021 ರಂದು ರಾತ್ರಿ ನಂದಿ ಗ್ರಾಮದ ಶೀ ಭೋಗನಂದೀಶ್ವರ ದೇವಾಲಯದಲ್ಲಿ ಗರ್ಭಗಡಿಯ ಮುಂಭಾಗದಲ್ಲಿ ಇಟ್ಟಿದ್ದ ಎರಡು ಕಾಣಿಕೆ ಹುಂಡಿಗಳ ಬೀಗವನ್ನು ಹೊಡೆದು ಅದರಲ್ಲಿದ್ದ ಹಣವನ್ನು ದೋಚಿ ಹುಂಡಿಯನ್ನು ಬಿಸಾಡಿ ಹೋಗಿದ್ದರು ಅದರ ಕುರಿತು ದೇವಾಲಯದ ಪಾರುಪತ್ತೆದಾರ ನಾಗರಾಜ್ ಅವರು ನಂದಿಗಿರಿಧಾಮ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ದೂರು ದಾಖಲಿಸಿಕೊಂಡ ಪೋಲಿಸರು ಜಿಲ್ಲಾ ಎಸ್ಪಿ ಜಿಕೆ ಮಿಥುನ್ ಕುಮಾರ್,ಡಿವೈಎಸ್ಪಿ ಕೆ.ರವಿಶಂಕರ್,ಸಿಪಿಐ ಪ್ರಶಾಂತ್ ಅವರ ನೇತೃತ್ವದಲ್ಲಿ ಪಿಎಸ್‍ಐ ಬಸನಗೌಡ ಕೆ ಪಾಟೀಲ್ ಮತ್ತು ಸಿಬ್ಬಂದಿ ಒಳಗೊಂಡಂತೆ ತನಿಖಾ ತಂಡಗಳನ್ನು ರಚಿಸಲಾಗಿತ್ತು ತನಿಖಾ ತಂಡ ಆರೋಪಿಗಳನ್ನು ರಾಜಘಟ್ಟದಿಂದ ದೊಡ್ಡಬಳ್ಳಾಪುರಕ್ಕೆ ತೆರಳುವ ಮಾರ್ಗದಲ್ಲಿರುವ ರೈಲ್ವೆ ಸೇತುವೆ ಬಳಿ ಬಂಧಿಸಿದ್ದಾರೆ.
ಇದನ್ನೂ ಓದಿ : ವಿಡಿಯೋ ಕಾಲ್ ಸೇವೆಯನ್ನು ಡೆಸ್ಕ್ ಟಾಪ್‌ಗೂ ವಿಸ್ತರಿದ ವಾಟ್ಸ್ ಆ್ಯಪ್
ವಿಚಾರಣೆಯ ವೇಳೆಯಲ್ಲಿ ಆರೋಪಿಗಳು ಮಂಡ್ಯ ಜಿಲ್ಲೆಯಲ್ಲಿ 10.01.2021 ರಂದು ಕೆ.ಆರ್.ಪೇಟೆ ತಾಲೂಕಿನ ಸಾಸಲು ಗ್ರಾಮದಲ್ಲಿರುವ ಶ್ರೀ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ದೇವಾಲಯಗಳಲ್ಲಿ ಮೂರು ಹುಂಡಿಗಳನ್ನು ಹೊಡೆದು ಕಳುವು ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಎಸ್ಪಿ ಮಿಥುನ್‍ಕುಮಾರ್ ತಿಳಿಸಿದ್ದಾರೆ.
ಆರೋಪಿಗಳ ವಿರುಧ್ಧ ಈಗಾಗಲೇ ಬೆಂಗಳೂರು ನಗರದ ಅಮೃತಹಳ್ಳಿ, ದೇವನಹಳ್ಳಿ, ಮಾದನಾಯಕನಹಳ್ಳಿ, ಚಿಕ್ಕಪೇಟೆ, ಸೋಲದೇವನಹಳ್ಳಿ,ರಾಮನಗರ ಜಿಲ್ಲೆಯ ಚನ್ನಪಟ್ಟಣ, ಮಂಡ್ಯ ಜಿಲ್ಲೆಯ ಮದ್ದೂರು, ನಾಗಮಂಗಲ, ತುಮಕೂರು, ಮೈಸೂರು ನಗರದ ಲಷ್ಕರ್,ಮಂಡಿ ಮೊಹಲ್ಲಾ ಪೋಲಿಸ್‍ಠಾ ಣೆಗಳಲ್ಲಿ 15ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿದೆ .ನಂದಿಗಿರಿಧಾಮದ ಪೋಲಿಸರ ಕಾರ್ಯವೈಖರಿಯನ್ನು ಪ್ರಶಂಸಿರುವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ತನಿಖಾ ತಂಡಕ್ಕೆ ನಗದು ಬಹುಮಾನವನ್ನು ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.