ಮಾಗಡಿಗೆ ಹೋಗಿ ಬಂದ ಪೊಲೀಸ್ ಪೇದೆಗೆ ಸೋಂಕು
Team Udayavani, May 30, 2020, 6:29 AM IST
ಚಿಕ್ಕಬಳ್ಳಾಪುರ: ನೆರೆಯ ದೊಡ್ಡಬಳ್ಳಾಪುರದ ಮೂಲಕ ಇತ್ತೀಚೆಗೆ ಮಾಗಡಿಗೆ ಹೋಗಿ ಬಂದಿದ್ದ ಪೊಲೀಸ್ ಪೇದೆಯೊಬ್ಬರಿಗೂ ಕೋವಿಡ್ 19 ಸೋಂಕು ದೃಢಪಟ್ಟಿರುವುದು ತೀವ್ರ ಆತಂಕವನ್ನು ಉಂಟು ಮಾಡಿದ್ದು, ಪೇದೆಯನ್ನು ಜಿಲ್ಲಾ ಕೋವಿಡ್-19 ಐಸೋ ಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ನಗರದ ಹೊರ ವಲಯದ ಅಣಕನೂರು ಸಮೀಪ ಇರುವ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಮ್ (ವೈರ್ ಲೆಸ್) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ 32 ವರ್ಷದ ಪೇದೆಗೂ ಕೋವಿಡ್ 19 ಸೋಂಕು ಇರುವುದು ದೃಢವಾಗಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್‌ನ್ನು ಜಿಲ್ಲಾ ಎಸ್ಪಿ ಕಚೇರಿ ಆವರಣದಿಂದ ನಂದಿ ಗಿರಿಧಾಮ ಸಮೀಪಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಶುಕ್ರವಾರ “ಉದಯವಾಣಿ’ ಗೆ ತಿಳಿಸಿದರು.
ಸೀಲ್‌ಡೌನ್: ಪೇದೆ ವಾಸ ಮಾಡುತ್ತಿದ್ದ ನಗರದ ಪ್ರಶಾಂತ ನಗರದಲ್ಲಿರುವ ಪೊಲೀಸ್ ವಸತಿ ಗೃಹಗಳ ಸಮುತ್ಛಯವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೇ ಇಡೀ ವಸತಿ ಸಮುತ್ಛಯಕ್ಕೆ ಕ್ರಿಮಿ ನಾಶಕವನ್ನು ಸಿಂಪಡಿಸಲಾಗುತ್ತಿದೆ. ಪೇದೆ ಸಂಪರ್ಕದಲ್ಲಿದ್ದ 12 ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದರು.
ಹಲವು ದಿನಗಳ ಹಿಂದೆ ಪೇದೆ ಮಾಗಡಿಗೆ ಹೋಗಿ ಬಂದಿದ್ದರು. ಈ ಹಿನ್ನಲೆ ಯಲ್ಲಿ ಅವರಿಗೆ ಸೋಂಕು ತಗುಲಿರುವ ಶಂಕೆ ಇದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದ ಎಸ್ಪಿ, ಪೊಲೀಸ್ ಪೇದೆಗೆ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
Gudibande: ಹೆಸರಿಗಷ್ಟೇ ಬಸ್ ನಿಲ್ದಾಣ; ಬಸ್‌ಗಳೇ ಬರಲ್ಲ
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.