ಜನಹಿತ ಆ್ಯಪ್ ದೂರುಗಳಿಗೆ ಸಿಗದ ಸ್ಪಂದನೆ
ಫೇಸ್‌ಬುಕ್-ಟ್ವಿಟರ್‌ನಲ್ಲಿ ಒಂದು ದೂರು ಸಹ ದಾಖಲಾಗಿಲ್ಲ
Team Udayavani, Oct 20, 2020, 3:49 PM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಸರ್ಕಾರ ಅದೇ ರೀತಿಯಲ್ಲಿ ನಾಗರಿಕರ ಕುಂದು ಕೊರತೆಗಳನ್ನು ನಿವಾರಿಸುವ ಸಲುವಾಗಿ ಆರಂಭಿಸಲಾದ ಜನಹಿತ ಆ್ಯಪ್ ಮೂಲಕ ಸಲ್ಲಿಕೆಯಾಗುವ ದೂರುಗಳಿಗೆ ಸೂಕ್ತ ರೀತಿಯ ಸ್ಪಂದನೆ ಇಲ್ಲದಂತಾಗಿದೆ.
ಅಪಸ್ವರ: ಮಾಹಿತಿ ಮತ್ತು ತಂತ್ರಾಜ್ಞಾನದ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸಹ ಆನ್‌ಲೈನ್ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರಿ ಯೋಜನೆಗಳನ್ನು ಅರ್ಜಿ ಸಲ್ಲಿಸುವ ಜೊತೆಗೆ ದೂರು ದುಮ್ಮಾನಗಳು ಸಹ ಆನ್‌ಲೈನ್ ಮೂಲಕವೇ ಅರ್ಜಿಗಳನ್ನು ಸ್ವೀಕರಿಸಿ ಪರಿಹರಿಸುವ ಸಲುವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಜನಹಿತ ಆ್ಯಪ್ ಯೋಜನೆಯಡಿ ದಾಖಲಿಸುವ ದೂರುಗಳಿಗೆ ಪೂರಕವಾಗಿ ಸ್ಪಂದನೆ ಸಿಗುತ್ತಿಲ್ಲ ಎಂಬ ಅಪಸ್ವರಕೇಳಿ ಬರುತ್ತಿದೆ.
ಸ್ವೀಕೃತಿ ಮಾತ್ರ: ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ನಾಗರಿಕ ಸಮಸ್ಯೆಗಳನ್ನು ಪರಿಹರಿಸುವಸಲುವಾಗಿ ಜನಹಿತ ಆ್ಯಪ್, ವಾಟ್ಸ್‌ಆಪ್, ಫೇಸ್‌ಬುಕ್, ಟ್ವೀಟರ್ ಜೊತೆಗೆ ಲಿಖೀತವಾಗಿ ದೂರು ಸ್ವೀಕರಿಸುವ ಯೋಜನೆ ಜಾರಿಯಲ್ಲಿದೆ. ಆದರೆಜನಹಿತ ಆ್ಯಪ್ ಮೂಲಕ ದಾಖಲಿಸುವ ದೂರುಗಳಿಗೆ ತ್ವರಿತವಾಗಿ ನಿಮ್ಮ ದೂರುಗಳನ್ನು ಪರಿಹರಿಸುತ್ತೇವೆಎಂದು ಸಿದ್ಧ ಉತ್ತರ (ಸ್ವೀಕೃತಿ) ದೊರೆಯುತ್ತದೆ ವಿನಃ ಮೊಬೈಲ್‌ಗಳಿಗೆ ಬರುವ ಸಂದೇಶಗಳನ್ವಯ ನಿಗದಿತ ಅವಧಿಯೊಳಗೆ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ.
ಯೋಜನೆಗೆ ಗ್ರಹಣ: ಕರ್ನಾಟಕ ಮುನ್ಸಿಪಲ್ ಟಾಡಾ ಸೊಸೈಟಿ ಸಹಯೋಗದೊಂದಿಗೆನಿರ್ವಹಿಸಲ್ಪಡುವ ಈ ಅಪ್ಲಿಕೇಷನ್ ಹೆಚ್ಚೆಚ್ಚು ಜನರು ಬಳಸಬೇಕು ಎಂದು ಅಂದಿನ ಸರ್ಕಾರ ನಾಗರಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಜಾರಿಗೊಳಿಸಿತು. ಆದರೆ ಜನಹಿತ ಆ್ಯಪ್ ಮೂಲಕ ದಾಖಲಾಗುವ ದೂರುಗಳು ತಿಂಗಳು ಕಳೆದರೂ ಸಹ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ. ಈ ಯೋಜನೆಒಂದು ರೀತಿಯಲ್ಲಿ ಗ್ರಹಣ ಬಡಿದಂತಾಗಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾವ ರೀತಿ ದೂರು ಸಲ್ಲಿಸಬಹುದು: ರಸ್ತೆ, ನೀರು, ಬೀದಿ ದೀಪ ಅಳವಡಿಕೆ, ಒಳಚರಂಡಿ ಅವ್ಯವಸ್ಥೆ ಸಾರ್ವಜನಿಕ ಆರೋಗ್ಯ ಸೇರಿದಂತೆ ಹಲವಾರು ಕುಂದು ಕೊರತೆಗಳ ಬಗ್ಗೆ ಜನಹಿತ ಆ್ಯಪ್ ಮೂಲಕ ದೂರು ನೀಡಬಹುದು. ಅದರಲ್ಲದೇ ದೂರವಾಣಿ ಮೂಲಕ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಬಹುದು. ವಾಟ್ಸ್‌ಆಪ್ ಬಳಕೆ ಮಾಡಿ ಸಹ ದೂರು ದಾಖಲಿಸಬಹುದು. ಆದರೆ ಈ ವ್ಯವಸ್ಥೆಯಕುರಿತು ವ್ಯಾಪಕ ಪ್ರಚಾರ ಆಗಬೇಕಾಗಿದೆ. ಜಿಲ್ಲೆಯಲ್ಲಿ 4 ನಗರಸಭೆ, ಒಂದು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಂದುಕೊರತೆ ಪರಿಹರಿಸಲು ಅರ್ಜಿ ಸಲ್ಲಿಸಲಾಗಿದೆ. ಅದಕ್ಕೆ ಪೂರಕವಾಗಿ ಸಂಬಂಧಿಸಿದ ಅಧಿಕಾರಿಗಳಿಂದಆಗುತ್ತಿಲ್ಲವೆಂದು ದೂರು ಸಾಮಾನ್ಯವಾಗಿದೆ.
ಇದೇ ಕಾರಣಕ್ಕಾಗಿ ಇಂದಿನ ಆಧುನಿಕ ಯುಗದಲ್ಲಿಹೆಚ್ಚಾಗಿ ಬಳಕೆಯಲ್ಲಿರುವ ಫೇಸ್‌ಬುಕ್ ಮತ್ತು ಟ್ವೀಟರ್‌ನಲ್ಲಿ ಯಾರು ದೂರು ಸಲ್ಲಿಸುವ ಗೋಜಿಗೆ ಹೋಗಿಲ್ಲ.ಕುಂದುಕೊರತೆ ಆಲಿಸಲು ಇರುವ ವ್ಯವಸ್ಥೆ ಉತ್ತಮವಾಗಿದೆ. ಆದರೆ ಸೂಕ್ತ ರೀತಿಯ ಸ್ಪಂದನೆ ಇಲ್ಲ. ಸಂಬಂಧಿಸಿದ ಅಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕಾಗಿದೆ.
ದೂರು ದಾಖಲಿಸಲು ಹಿಂದೇಟು : ಆನ್‌ಲೈನ್ ಮೂಲಕ ಕುಂದುಕೊರತೆಗಳ ನಿರ್ವಹಣೆಗೆ ಸ್ವಯಂಚಾಲಿತ ತಂತ್ರಾಂಶ ಬಳಕೆ ಮಾಡಲಾಗಿದೆ. ದೂರು ನೀಡಿದಾಗ ಬಳಿಕ ಕೂಡಲೇ ಒಂದು ಸಂದೇಶ ಮೊಬೈಲ್‌ಗಳಿಗೆ ಬರುತ್ತದೆ. ತಾವು ನೀಡಿರುವ ದೂರು ದಾಖಲಿಸಿಕೊಂಡಿದ್ದೇವೆ. ನಿಮ್ಮ ಸಮಸ್ಯೆಯನ್ನು ಮೂರು ಅಥವಾ ನಾಲ್ಕು ದಿನಗಳಲ್ಲಿ ಪರಿಹರಿಸುತ್ತೇವೆ ಎಂದು ಸಿದ್ಧ ಉತ್ತರ ಬರುತ್ತದೆ. ಆದರೆ ಸ್ಪಂದನ ಮಾತ್ರ ಆಟಕ್ಕುಂಟು ಲೆಕಕ್ಕಿಲ್ಲದಂತಾಗಿದೆ. ಇದರಿಂದ ನಾಗರಿಕರುಕುಂದುಕೊರತೆಗಳನ್ನು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.
ಜನಹಿತ ಮತ್ತು ಆನ್‌ಲೈನ್ ಮೂಲಕ ಸಲ್ಲಿಕೆಯಾಗುವ ದೂರುಗಳನ್ನು ತ್ವರಿತವಾಗಿಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ನಾಗರಿಕರು ದೂರುದಾಖಲಿಸುವ ವೇಳೆಯಲ್ಲಿ ವಿಳಾಸ ಮತ್ತು ದೂರಿಗೆ ಸಂಬಂಧಿಸಿದ ಚಿತ್ರಗಳನ್ನು ಅಪ್‌ಲೋಡ್ ಮಾಡಿದರೆ ಸಮಸ್ಯೆಗಳು ಬಗೆಹರಿಸಿರುವ ಬಗ್ಗೆ ಖಾತ್ರಿಯಾಗುತ್ತದೆ. ದೂರುಗಳು ಪರಿಹರಿಸಲು ವಿಳಂಬ ಕುರಿತು ಪರಿಶೀಲನೆ ನಡೆಸುತ್ತೇನೆ. –ರೇಣುಕಾ, ಜಿಲ್ಲಾ ಯೋಜನಾ ನಿರ್ದೇಶಕಿ, ನಗರಾಭಿವೃದ್ಧಿ ಕೋಶ
ನಗರಸಭೆ ವ್ಯಾಪ್ತಿಯಲ್ಲಿ ಅನೇಕ ರೀತಿಯ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವ ಸಲುವಾಗಿ ವ್ಯವಸ್ಥೆಗಳಿದ್ದರೂ ಸಹಅಧಿಕಾರಿಗಳು ಸರ್ಕಾರದಯೋಜನೆಗಳ ಕುರಿತು ಪ್ರಚಾರ ಪಡಿಸುವುದಿಲ್ಲ. ನಾಗರಿಕರು ಸಲ್ಲಿಸುವ ದೂರುಗಳುಕೇವಲ ಸ್ವೀಕೃತಿಗೆ ಸೀಮಿತವಾಗಿದೆ. –ಸೋಮು ನಾಗರಿಕರ ಚಿಕ್ಕಬಳ್ಳಾಪುರ
–ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.