ಜೆಡಿಎಸ್‌ ಕಾರ್ಯಕರ್ತನ ಬರ್ಬರ ಕೊಲೆ


Team Udayavani, Apr 28, 2018, 11:40 AM IST

jds-karyakarta.jpg

ಗೌರಿಬಿದನೂರು/ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾದಂತೆ ಜಿಲ್ಲೆಯಲ್ಲಿ ರಾಜಕೀಯ ಹಿಂಸಾಚಾರ ಭುಗಿಲೇಳಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ಎನ್ನಲಾದ ರೌಡಿಗಳ ಗುಂಪೊಂದು ನಡೆಸಿದ ದಾಳಿಗೆ ಜೆಡಿಎಸ್‌ ಬೆಂಬಲಿಗನೊಬ್ಬ ಭೀಕರವಾಗಿ ಕೊಲೆಗೀಡಾಗಿ ನೆತ್ತರು ಹರಿದಿದೆ.

ಜಿಲ್ಲೆಯ ಗೌರಿಬಿದನೂರಿನ ಕೋಟಾಲದಿನ್ನೆಯ ಸಮೀಪ ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಗುಂಪು ಘರ್ಷಣೆಯಲ್ಲಿ ಜೆಡಿಎಸ್‌ ಕಾರ್ಯಕರ್ತ ರಾಮರೆಡ್ಡಿ (27) ಎಂಬಾತನನ್ನು ಕಾಂಗ್ರೆಸ್‌ ಬೆಂಬಲಿತ ರೌಡಿ ಶೀಟರ್‌ ರಮೇಶ್‌ ಹಾಗೂ ಆತನ ಬೆಂಬಲಿಗರು ಲಾಂಗ್‌, ಮಚ್ಚು ಮತ್ತಿತರ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದಾರೆ.

ಆಗಿದ್ದೇನೆ?: ಗೌರಿಬಿದನೂರು ಹೊರವಲಯದ ಕೋಟಾಲದಿನ್ನೆಯ ಸಮೀಪ ಇರುವ ಭವಾನಿ ಬಾರ್‌ನಲ್ಲಿ ಜೆಡಿಎಸ್‌ ಕಾರ್ಯಕರ್ತ ರಾಮರೆಡ್ಡಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತ ರೌಡಿ ಶೀಟರ್‌ ರಮೇಶ್‌ ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ರೌಡಿ ಶೀಟರ್‌ ರಮೇಶ್‌ ಹಾಗೂ ಆತನ ಸಹಚರರು ರಾಮರೆಡ್ಡಿ ಹಾಗೂ ಆತನ ಸ್ನೇಹಿತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ರಾಮರೆಡ್ಡಿ ತಲೆ, ಹೊಟ್ಟೆ ಭಾಗಕ್ಕೆ ಗಂಭೀರವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಕುಸಿದು ಬಿದಿದ್ದಾನೆ. ತಕ್ಷಣ ಆತನನ್ನು ಚಿಕಿತ್ಸೆಗಾಗಿ ಗೌರಿಬಿದನೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಕಾರಿಯಾಗದೇ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

ಒಬ್ಬನ ಸ್ಥಿತಿ ಚಿಂತಾಜನಕ: ಇನ್ನೂ ರಮೇಶ್‌ ಗುಂಪಿನ ದಾಳಿಗೆ ಜೆಡಿಎಸ್‌ ಕಾರ್ಯಕರ್ತರಾದ ನರೇಂದ್ರ, ಮಂಜುನಾಥ ಹಾಗೂ ನರಸಿಂಹ ಎಂಬುವವರಿಗೂ ಗಾಯಗಳಾಗಿದ್ದು, ಈ ಪೈಕಿ ನರೇಂದ್ರನ ಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ರೌಡಿ ಶೀಟರ್‌ ರಮೇಶ್‌ಗೆ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ನರೇಂದ್ರ ಮತ್ತಿತರರನ್ನು ಹೆಚ್ಚಿನ ಚಿಕಿತ್ಸೆಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಮರೆಡ್ಡಿಗೆ ಮದುವೆ ಫಿಕ್ಸ್‌ ಆಗಿತ್ತು: ರೌಡಿ ಶೀಟರ್‌ ರಮೇಶ್‌ ಗ್ಯಾಂಗ್‌ನಿಂದ ಕೊಲೆಗೀಡಾಗಿರುವ ಜೆಡಿಎಸ್‌ ಕಾರ್ಯಕರ್ತ ರಾಮರೆಡ್ಡಿ ಮದುವೆ ಮೇ 6ಕ್ಕೆ ನಿಗದಿಯಾಗಿತ್ತು. ಮದುವೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದ ರಾಮರೆಡ್ಡಿ ಜೆಡಿಎಸ್‌ ಯುವ ಮುಖಂಡನಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ. ಇದನ್ನು ಸಹಿಸದ ಕಾಂಗ್ರೆಸ್‌ ಕಾರ್ಯಕರ್ತ ರೌಡಿ ಶೀಟರ್‌ ಆಟೋ ರಮೇಶ್‌ ಹಾಗೂ ಆತನ ಸ್ನೇಹಿತರು ಕೋಟಾಲದಿನ್ನೆ ಬಳಿ ಮಾರಕಾಸ್ತ್ರಗಳಿಂದ ರಾಮರೆಡ್ಡಿರನ್ನು ಕೊಲೆ ಮಾಡಿದ್ದಾರೆ.

ಗೌರಿಬಿದನೂರಲ್ಲಿ ಬಿಗುವಿನ ಸ್ಥಿತಿ: ಕಾಂಗ್ರೆಸ್‌, ಜೆಡಿಎಸ್‌ ಬೆಂಬಲಿತ ರೌಡಿ ಗ್ಯಾಂಗ್‌ ನಡುವೆ ನಡೆದ ಜಗಳದಲ್ಲಿ ಜೆಡಿಎಸ್‌ ಕಾರ್ಯಕರ್ತ ರಾಮರೆಡ್ಡಿ ಕೊಲೆಗೀಡಾಗಿರುವುದರಿಂದ ಗೌರಿಬಿದನೂರು ಪಟ್ಟಣ ಸೇರಿದಂತೆ ರಾಮರೆಡ್ಡಿ ಸ್ವಗ್ರಾಮದಲ್ಲಿ ಬಿಗುವಿನ ವಾತಾವರಣ ನೆಲಸಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಸ್ಥಳದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತೀಕರೆಡ್ಡಿ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಪೊಲೀಸ್‌ ಜೀಪ್‌ ಮೇಲೆ ಕಲ್ಲು ತೂರಾಟ: ರಾಮರೆಡ್ಡಿ ಮೇಲೆ ರೌಡಿ ಶೀಟರ್‌ ರಮೇಶ್‌ ಗ್ಯಾಂಗ್‌ ದಾಳಿ ಮಾಡಿ ಕೊಲೆ ಮಾಡಿರುವ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಜೆಡಿಎಸ್‌ ಕಾರ್ಯಕರ್ತರ ಗುಂಪು ಹಾಗೂ ರಾಮರೆಡ್ಡಿ ಕುಟುಂಬಸ್ಥರು ಗ್ರಾಮಾಂತರ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ವೇಳೆ ನ್ಯಾಯ ಕೇಳಲು ಬಂದವರ ಮೇಲೆಯೇ ಪೊಲೀಸರು ಲಾಠಿ ಪ್ರಹಾರ ನಡೆಸಿ ದೌರ್ಜನ್ಯ ನಡೆಸುತ್ತಿದ್ದಾರೆಂದು ಹೇಳಿ ರೊಚ್ಚಿಗೆದ್ದ ಜೆಡಿಎಸ್‌ ಕಾರ್ಯಕರ್ತರ ಗುಂಪೊಂದು ಠಾಣೆ ಮುಂದಿದ್ದ ಪೊಲೀಸ್‌ ಜೀಪ್‌ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಜಖಂಗೊಳಿಸಿದ್ದಾರೆ.

ಜೆಡಿಎಸ್‌ ವರಿಷ್ಠ ದೇವೇಗೌಡ ಭೇಟಿ: ಘಟನೆಯಲ್ಲಿ ಜೆಡಿಎಸ್‌ ಕಾರ್ಯಕರ್ತ ರಾಮರೆಡ್ಡಿ ಕೊಲೆಗೀಡಾಗಿರುವ ವಿಷಯ ತಿಳಿಯುತ್ತಿದ್ದಂತೆ ಗೌರಿಬಿದನೂರಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಆಗಮಿಸಿ ರಾಮರೆಡ್ಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೇ ಘಟನೆಯಲ್ಲಿ ಭಾಗಿಯಾಗಿರುವ ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

ರೌಡಿ ಶೀಟರ್‌ ರಮೇಶ್‌ ಸೇರಿ ಐವರ ಸೆರೆ: ಜೆಡಿಎಸ್‌ ಕಾರ್ಯಕರ್ತ ರಾಮರೆಡ್ಡಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಪ್ರಮುಖ ಆರೋಪಿ ರಮೇಶ್‌ ಅಲಿಯಾಸ್‌ ಆಟೋ ರಮೇಶ್‌ ಸೇರಿದಂತೆ ಒಟ್ಟು ಐದು ಮಂದಿಯನ್ನು ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಗೆ ಹಳೆಯ ವೈಷಮ್ಯದ ಜೊತೆಗೆ ಕೊಲೆಗೀಡಾದ ರಾಮರೆಡ್ಡಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಿ.ಆರ್‌.ನರಸಿಂಹಮೂರ್ತಿ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದ ಎನ್ನಲಾಗಿದೆ. ಇದರಿಂದ ಕೆರಳಿದ ರೌಡಿ ಶೀಟರ್‌ ರಮೇಶ್‌ ಜೆಡಿಎಸ್‌ ಪರವಾಗಿ ಪ್ರಚಾರಕ್ಕೆ ಹೋಗಬೇಡ ಎಂದು ರಾಮರೆಡ್ಡಿಗೆ ತಾಕೀತು ಮಾಡಿದಾಗ ಗುರುವಾರ ರಾತ್ರಿ ಇಬ್ಬರ ನಡುವೆ ಮಾತಿನಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಹಳೆ ವೈಷಮ್ಯದಿಂದ ರೌಡಿ ಶೀಟರ್‌ ರಮೇಶ್‌ ಹಾಗು ಆತನ ಸಹಚರರು ರಾಮರೆಡ್ಡಿ ಹಾಗೂ ಅವರ ಗುಂಪಿನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ರಾಮರೆಡ್ಡಿರನ್ನು ಕೊಲೆ ಮಾಡಿದ್ದಾರೆ. ಈ ಸಂಬಂದ ಕೊಲೆ ಆರೋಪಿ ರಮೇಶ್‌ ಅಲಿಯಾಸ್‌ ಆಟೋ ರಮೇಶ್‌ ಹಾಗೂ ಆತನ ಸಹಚರರು ಸೇರಿ ಒಟ್ಟು ಐದು ಮಂದಿಯನ್ನು ಬಂಧಿಸಿದ್ದೇವೆ. ವಿಚಾರಣೆ ಬಳಿಕ ಕೊಲೆಗೆ ಕಾರಣ ತಿಳಿಯಲಿದೆ. 
-ಕಾರ್ತೀಕರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಟಾಪ್ ನ್ಯೂಸ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ

Vijay Hazare Trophy: Padikkal century; Karnataka entered the semi after winning against Baroda

VijayHazareTrophy: ಪಡಿಕ್ಕಲ್‌ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

Leopard: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಆಗ್ರಹ

Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12(1

Gudibande: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

JDS leader hits at Chikkaballapura

Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ

allu arjun

Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ

Vijay Hazare Trophy: Padikkal century; Karnataka entered the semi after winning against Baroda

VijayHazareTrophy: ಪಡಿಕ್ಕಲ್‌ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.