ಅಮೃತ್ ಮಹಲ್ ಗಂಡು ಕರುಗಳ ಹರಾಜು
ಹಬ್ಬನಘಟ್ಟದ-ಮೆಣಸಿ-ನಿರ್ವಾಣಿ ತಳಿ ಜೋಡಿ 2 ಲಕ್ಷ ರೂ.ಗೆ ದಾಖಲೆ ಮಾರಾಟ
Team Udayavani, Jan 23, 2020, 1:45 PM IST
ಕಡೂರು: ಅಜ್ಜಂಪುರ ತಳಿ ಸಂವರ್ಧನಾ ಕೇಂದ್ರ ಮತ್ತು ಪಶುಪಾಲನಾ ಇಲಾಖೆ ಸಹಯೋಗದೊಂದಿಗೆ ಕಡೂರು-ಬೀರೂರು ನಡುವೆ ಇರುವ ಜಾನುವಾರು ತಳಿ ಸಂವರ್ಧನಾ ಕ್ಷೇತ್ರದ ಆವರಣದಲ್ಲಿ ಅಮೃತ್ ಮಹಲ್ ಗಂಡು ಕರುಗಳ ಭಾರೀ ಬಹಿರಂಗ ಹರಾಜು ಬುಧವಾರ ನಡೆಯಿತು.
ಮೈಸೂರು ಮಹಾರಾಜರ ಕಾಲದಿಂದಲೂ ಪ್ರಚಲಿತದಲ್ಲಿರುವ ಅಮೃತ್ ಮಹಲ್ ಆಕರ್ಷಕ ಮೈಕಟ್ಟನ್ನು ಹೊಂದಿ ಕೃಷಿ ಚಟುವಟಿಕೆಗಳಿಗೆ ಹೇಳಿ ಮಾಡಿಸಿರುವಂತಹ ಹೋರಿಕರುಗಳಿಗೆ ಭಾರೀ ಬೇಡಿಕೆಯಿದ್ದು, ಹರಾಜು ಪ್ರಕ್ರಿಯೆ ಅಂದಿನಿಂದಲೂ ಚಾಲನೆಯಲ್ಲಿದೆ. ನಂತರದ ದಿನಗಳಲ್ಲಿ ಸರ್ಕಾರದ ಅಧೀನದಲ್ಲಿರುವ ರಾಜ್ಯದ ವಿವಿಧೆಡೆಯಲ್ಲಿ ತಳಿ ಸಂವರ್ಧನಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಇಲ್ಲಿ ಬೆಳೆದಂತಹ ಹೋರಿ ಕರುಗಳಿಗೆ ಭಾರೀ ಬೇಡಿಕೆಯಿದೆ. ಜಿಲ್ಲೆಯ ಬಾಸೂರು, ಲಿಂಗದಹಳ್ಳಿ, ಅಜ್ಜಂಪುರ ಹಾಗೂ ನೆರೆಯ ಜಿಲ್ಲೆಯ ರಾಮಗಿರಿ, ಹಬ್ಬನಗದ್ದೆ, ಚಿಕ್ಕಎಮ್ಮಿಗನೂರು ಮತ್ತು ರಾಯಚಂದ್ರ ಅಮೃತ್‌ಮಹಲ್ ಕಾವಲುಗಳಲ್ಲಿ ವೈಶಿಷ್ಟಪೂರ್ಣವಾಗಿ ಬೆಳೆಸಲಾಗುತ್ತದೆ.
ಕಳೆದ ಬಾರಿಗಿಂತಲೂ ತುಸು ಹೆಚ್ಚಾಗಿರುವ ರಾಸುಗಳಲ್ಲಿ ಪಾತ್ರೆ, ನಾರಾಯಣಿ, ಕಾವೇರಿ,
ಕರಿಯಕ್ಕ, ಮದಕರಿ, ಸಣ್ಣಿ, ಗಂಗೆ, ಕೆಂಪಲಕ್ಕಿ, ಮಾರಿ, ಕಡೇಗಣ್ಣಿ ಮೆಣಸಿ, ಭದ್ರಿ, ಚನ್ನಕ್ಕ, ಗಂಗೆ, ಕಾಳಿಂಗರಾಯ, ದೇವಗಿರಿ, ಮಲಾರ, ಚನ್ನಬಸವಿ, ರಾಯತದೇವಿ, ಮುತ್ತೆ„ದೆ, ಬೆಳದಿಂಗಳು, ಗಾಳಿಕೆರೆ, ಸನ್ಯಾಸಿ, ಕೆಂದಾವರೆ ಯಂತಹ ನೂರಾರು ಹೆಸರುಗಳ ತಳಿಗಳಿಂದ ಗುರುತಿಸಲ್ಪಡುವ ಹೋರಿಕರುಗಳು ಕೇವಲ ಒಂದೂವರೆ ವರ್ಷದಿಂದ ಎರಡು ವರ್ಷದ ಒಳಗಿನದ್ದಾಗಿವೆ.
ಹರಾಜಿನಲ್ಲಿ 192 ಅಮೃತ್ ಮಹಲ್ ಕ್ಷೇತ್ರದ ಹೋರಿಕರುಗಳು, 14 ಬೀಜದ ಹೋರಿಗಳನ್ನು
ಇಡಲಾಗಿತ್ತು. ಹಬ್ಬನಘಟ್ಟ ಕೇಂದ್ರದ ಮೆಣಸಿ ಮತ್ತು ನಿರ್ವಾಣಿ ತಳಿಯ ಜೋಡಿ ರಾಸು
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಪೆದವಬೈಯ್ಯ ಅವರು ಇಂದಿನ ಗರಿಷ್ಠ ಬೆಲೆ 2.1 ಲಕ್ಷಕ್ಕೆ ಕೂಗಿ ತಮ್ಮದಾಗಿಸಿಕೊಂಡರು. ಚಿತ್ರದುರ್ಗದ ಜಿಲ್ಲೆಯ ಗೊಡಬನಾಳು ಗ್ರಾಮದ ಕಲ್ಲೇಶ್ ಸಣ್ಣಿ ಮತ್ತು ಪಾತ್ರೆ ಜೋಡಿಯನ್ನು 1.51ಲಕ್ಷಕ್ಕೆ ಪಡೆದುಕೊಂಡರು.
ಹರಾಜು ಪ್ರಕ್ರಿಯೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ಬಿಡ್ಡುದಾರರು ಪಾಲ್ಗೊಂಡಿದ್ದು,
ಹಾಸನ, ಮೈಸೂರು, ಅರಸೀಕೆರೆ ರಾಣಿಬೆನ್ನೂರು, ಹಾವೇರಿ, ಶಿಕಾರಿಪುರ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಚಳ್ಳಕೆರೆ, ರಾಯಚೂರು ಸೇರಿದಂತೆ ರಾಜ್ಯದ ನಾನಾ ಭಾಗದ ರೈತರು, ಗೋಶಾಲೆ ಮತ್ತು ಮಠದಿಂದಲೂ ಸಾವಿರಾರು ಜನ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಹರಾಜು ಪ್ರಕ್ರಿಯೆಯಲ್ಲಿ ಗೊಂದಲ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಬೀರೂರು
ಪೊಲೀಸ್ ಉಪನಿರೀಕ್ಷಕ ಕೆ.ವಿ. ರಾಜಶೇಖರ್ ಸಿಬ್ಬಂದಿಯೊಂದಿಗೆ ಸೂಕ್ತ ಭದ್ರತೆ ಕಲ್ಪಿಸಿದ್ದರು.
ಜಂಟಿ ನಿರ್ದೇಶಕರಾದ ಡಾ| ಪ್ರಶಾಂತಮೂರ್ತಿ ಅಮೃತ್ ಮಹಲ್ ತಳಿಸಂವರ್ಧನಾ ಕೇಂದ್ರದ ಉಪನಿರ್ದೇಶಕ ಡಾ.ರಮೆಶ್ ಕುಮಾರ್, ಡಾ. ಮೋಹನ್, ಡಾ| ಸಿದ್ದಗಂಗಪ್ಪ ಡಾ| ಶ್ರೀನಿವಾಸ್ ಬೀರೂರು ತಳಿ ಸಂವಂರ್ಧನ ಕೇಂದ್ರದ ಡಾ.ಬಾನುಪ್ರಕಾಶ್, ಡಾ| ನವೀನ್, ಡಾ|
ಮಂಜುನಾಥ್, ಡಾ| ಕಿರಣ್ ಮತ್ತಿತರಿದ್ದರು.
ಅಮೃತ್ ಮಹಲ್ ತಳಿಯ ಹೋರಿಗಳು ಉತ್ತಮ ದೇಶೀಯ ತಳಿಗಳಾಗಿದ್ದು, ಬಹು ಬೇಡಿಕೆಯಿದೆ. ಕೃಷಿ ಚಟುವಟಿಕೆಗಳಿಗೂ ಹೇಳಿ ಮಾಡಿಸಿರುವಂತಹ ಈ ಹೋರಿಗಳನ್ನು ನಾವು
ಕೊಂಡೊಯ್ದು ಒಂದೆರಡು ವರ್ಷಗಳ ಕಾಲ ಬೇಸಾಯದಂತಹ ಕಾಯಕಗಳಿಗೆ ಬಳಸಿಕೊಂಡು ನಂತರ ಬೇರೆಯವರಿಗೆ ಉತ್ತಮ ಲಾಭದಾಯಕ ಬೆಲೆಗೆ ಮಾರಾಟ ಮಾಡಲಾಗುವುದು.
ಮಹೇಶ್‌ಗೌಡ, ರೈತ, ಹಾಸನ
512 ವರ್ಷಗಳ ಇತಿಹಾಸ ಇರುವ ಅಮೃತ್ ಮಹಲ್ ಹೋರಿಗಳು ಉತ್ತಮವಾಗಿದ್ದು,
ಮಹಾರಾಜರ ಕಾಲದಿಂದಲೂ ಈ ತಳಿಯನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಕಳೆದ ವರ್ಷ 190 ಹೋರಿಕರುಗಳನ್ನು ಬಿಕರಿ ಮಾಡಲಾಗಿದ್ದು, ಪ್ರಸ್ತುತ ಈ ವರ್ಷ
ಅವುಗಳ ಸಂಖ್ಯೆ ಗಣನೀಯವಾಗಿ 21 ಕ್ಕೆ ಏರಿರುವುದು ಪ್ರಗತಿಯ ಸಂಕೇತವಾಗಿದೆ. ಇಂದಿನ
ಬಿಡ್‌ನಲ್ಲಿ ವಿವಿಧ ಜಿಲ್ಲೆಯ ಸುಮಾರು 300ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಈ ರಾಸುಗಳು ರೈತರ ಹೊಸಮನೆ ಕೆಲಸಗಳಿಗೆ ಸೂಕ್ತವಾಗಿದ್ದು ಅವರ ಪ್ರಗತಿಗೆ ನೆರವಾಗುತ್ತವೆ.
.ಡಾ| ಶ್ರೀನಿವಾಸ್,
ಜಂಟಿ ನಿರ್ದೇಶಕರು, ಪಶುಪಾಲನಾ
ಇಲಾಖೆ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Supreme Court: ಕ್ರೆಡಿಟ್ ಕಾರ್ಡ್ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.