ಕೈವಾರ ಗುರುಪೂಜಾ ಮಹೋತ್ಸವ, ಸಂಗೀತೋತ್ಸವಕ್ಕೆ ಕ್ಷಣಗಣನೆ


Team Udayavani, Jul 14, 2019, 3:00 AM IST

kai-vara

ಚಿಕ್ಕಬಳ್ಳಾಪುರ: ವಿದ್ಯುತ್‌ ದೀಪಾಲಂಕಾರದೊಂದಿಗೆ ಝಗಮಗಿಸುತ್ತಿರುವ ಶ್ರೀ ಕ್ಷೇತ್ರ ಕೈವಾರ ಮಠ. ನಿರಂತರ 72 ಗಂಟೆಗಳ ನಾದೋಪಾಸನೆಗೆ ಸಜ್ಜಾದ ಭವ್ಯ ವೇದಿಕೆ. ಗುರುಪೂಜೆಗೆ ಸಾಕ್ಷಿಯಾಗಲು ತಂಡೋಪ ತಂಡವಾಗಿ ಬರುತ್ತಿರುವ ಭಕ್ತಸಾಗರ. ಅನ್ನದಾಸೋಹ ಸಿದ್ಧತೆಗೆ ನೂರಾರು ಬಾಣಸಿಗರ ಕೆಲಸ, ಕೈವಾರದಲ್ಲಿ ಎತ್ತ ಕಣ್ಣಾಯಿಸಿದರೂ ಓಂ ನಮೋ ನಾರೇಯಣಾಯ ನೀನಾದ..

ಜಿಲ್ಲೆಯ ಶ್ರೀ ಕ್ಷೇತ್ರ ಕೈವಾರದ ಯೋಗಿ ನಾರೇಯಣ ಮಠಲ್ಲಿ ಗುರು ಪೌರ್ಣಮಿ ಪ್ರಯುಕ್ತ ಭಾನುವಾರದಿಂದ ಆರಂಭಗೊಳ್ಳಲಿರುವ ಮೂರು ದಿನಗಳ ಗುರು ಪೂಜಾ ಮಹೋತ್ಸವ ಹಾಗೂ 72 ಗಂಟೆಗಳ ಸಂಗೀತೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಗುರುಪೂಜೆಯ ವಿಶೇಷವಾಗಿ ಖ್ಯಾತ ಸಂಗೀತ ದಿಗ್ಗಜರಿಂದ ನಾದೋಪಾಸನೆಗೆ ಸಕಲ ರೀತಿಯಲ್ಲಿ ಕೈವಾರ ಕ್ಷೇತ್ರ ಸಜ್ಜಾಗಿ ಸಂಗೀತ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ.

ಹರಿದು ಬರುತ್ತಿರುವ ಜನಸಾಗರ: ಕಠಿಣ ತಪಸ್ಸು, ಧ್ಯಾನದ ಮೂಲಕ ಯೋಗಿಗಳಾಗಿ ನಂತರ ನಾದಬ್ರಹ್ಮವಾಗಿರುವ ಕೈವಾರ ಯೋಗಿ ನಾರೇಯಣ ತಾತಯ್ಯನವರಿಗೆ ಶ್ರೀ ಮಠ ಗುರುಪೂಜೆ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಶ್ರೀ ಮಠಕ್ಕೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ತಂಡೋಪ ತಂಡವಾಗಿ ಭಕ್ತರ ಆಗಮನವಾಗುತ್ತಿದೆ.

ವಿಶೇಷವಾಗಿ ಆಂಧ್ರದ ಅನಂತಪುರ, ಕದಿರಿ, ಚಿತ್ತೂರು, ಮದನಪಲ್ಲಿ ಮತ್ತಿತರ ಕಡೆಗಳಿಂದ ಸಹಸ್ರಾರು ಮಂದಿ ತಾತಯ್ಯನವರ ಭಕ್ತರು ಕೈವಾರ ಮಠದಲ್ಲಿ ಜಮಾಯಿಸಿದ್ದಾರೆ. ನೂರಾರು ಭಜನಾ ತಂಡಗಳು ಸ್ವಯಂ ಪ್ರೇರಣೆಯಿಂದ ಲಾರಿ, ಬಸ್‌, ಟೆಂಪೋ, ಟ್ರ್ಯಾಕ್ಟರ್‌, ಕಾರು ಮತ್ತಿತರ ವಾಹನಗಳಲ್ಲಿ ರಾಮನಾಮದ ಜೊತೆ ಓಂ ನಾರೇಯಣಾಯ ಜಪವನ್ನು ಜಪಿಸುತ್ತಾ ಕೈವಾರ ಮಠದ ಕಡೆಗೆ ಬರುತ್ತಿರುವುದು ಎದ್ದು ಕಾಣುತ್ತಿದೆ.

ಕೈವಾರದಲ್ಲಿ ಹಬ್ಬದ ಸಂಭ್ರಮ: ದಕ್ಷಿಣ ಭಾರತದಲ್ಲಿ ಅತ್ಯಂತ ವೈಶಿಷ್ಠé ಹಾಗೂ ಅಪರೂಪ ಎಂಬಂತೆ ವರ್ಷಕ್ಕೊಮ್ಮೆ ನಡೆಯುವ ಗುರುಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವ ಪ್ರಯುಕ್ತ ಇಡೀ ಕೈವಾರ ಗ್ರಾಮದಲ್ಲಿ ಹಬ್ಬದ ಸಂಭ್ರಮ ಏರ್ಪಟಿದ್ದು, ಗ್ರಾಮದ ರಾಜಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಇಡೀ ಕೈವಾರ ಮಠವನ್ನು ಸುಣ್ಣ, ಬಣ್ಣಗಳಿಂದ ಅಲಂಕರಿಸಿದ್ದು, ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಜಿಲ್ಲಾದ್ಯಂತ ಕೂಡ ಸಂಗೀತೋತ್ಸವ ಹಾಗೂ ಗುರುಪೂಜೆ ಕುರಿತು ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.

ಬೃಹತ್‌ ವೇದಿಕೆ ನಿರ್ಮಾಣ: ಗುರು ಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವ ನಡೆಯುವ ಯೋಗಿ ನಾರೇಯಣ ಸಭಾಂಗಣವನ್ನು ವೈಭವವಾಗಿ ಸಜ್ಜುಗೊಳಿಸಲಾಗಿದೆ. ಸಭಾಂಗಣದಲ್ಲಿ ಸಂಗೀತ ಗಾಯನ ಕಚೇರಿಗಳಿಗೆ ಅನುಕೂಲವಾಗುವಂತೆ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ.
ಸಂಗೀತ ಕಾರ್ಯಕ್ರಮಗಳು ನಡೆಯುವ ವೇದಿಕೆಗೆ ಶ್ರೀ ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಶ್ರೀ ಭೀಮಲಿಂಗೇಶ್ವರಸ್ವಾಮಿ ವೇದಿಕೆ ಎಂದು ಹೆಸರಿಡಲಾಗಿದೆ.

ವೇದಿಕೆಯ ಮುಂಭಾಗದಲ್ಲಿ ಮತ್ತೂಂದು ವೇದಿಕೆಯನ್ನು ನಿರ್ಮಿಸಿ ನಾದಬ್ರಹ್ಮ ಸದ್ಗುರು ತಾತಯ್ಯನವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಗುರುಗಳಿಗೆ ಎದುರು ಸಂಗೀತ ವಿದ್ಯಾಂಸರು, ಕಲಾವಿದರು ತಮ್ಮ ಸಂಗೀತ ಸೇವೆಯನ್ನು ಸಮರ್ಪಣೆ ಮಾಡಲಿದ್ದಾರೆ.

ಪ್ರಖ್ಯಾತ ಸಂಗೀತ ಮಾಂತ್ರಿಕರು: ದೇಶ, ವಿದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವ ಸಂಗೀತ ಮಾಂತ್ರಿಕರು ಈ ಗುರುಪೂಜಾ ಸಂಗೀತೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು 2 ಗಂಟೆಗಳ ನಿರಂತರ ಸಂಗೀತೋತ್ಸವ ಆಯೋಜನೆ ಸಂಯೋಜಕರಾದ ವಾನರಾಸಿ ಬಾಲಕೃಷ್ಣ ಭಾಗವತರ್‌ ತಿಳಿಸಿದ್ದಾರೆ.

ಸಂಗೀತ ಉತ್ಸವದಲ್ಲಿ ನಾನಾ ಪ್ರಕಾರದ ಸಂಗೀತ ಕಛೇರಿ, ಹರಿಕಥೆ, ಬುರ್ರಕಥೆ, ಕುಚಿಪುಡಿ ನೃತ್ಯ, ಭರತನಾಟ್ಯ, ನಾದಸ್ವರ ವಾದನ, ಸ್ಯಾಕ್ಸೊಪೋನ್‌, ಹಿಂದೂಸ್ತಾನಿ ಸೇರಿದಂತೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಎಲ್ಲಾ ಪ್ರಕಾರಗಳನ್ನು ಸಂಗೀತ ಪ್ರೇಮಿಗಳು ಒಂದೇ ವೇದಿಕೆಯಲ್ಲಿ ಸವಿಯುವ ಸದಾವಕಾಶವನ್ನು ಒದಗಿಸಲಾಗಿದೆ ಎಂದರು.

ವಿಶಾಲ ಮಂಟಪ, ಭಕ್ತರಿಗೆ ಸೌಕರ್ಯ: ಕೈವಾರ ಯೋಗಿ ನಾರೇಯಣ ತಾತಯ್ಯನಗರ ಮೂರು ದಿನಗಳ ಗುರು ಪೂಜಾ ಹಾಗೂ ಸಂಗೀತೋತ್ಸವದಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ದೇವಾಯಲದ ಪ್ರಾಂಗಣದಲ್ಲಿ ವಿಸ್ತಾರವಾದ ಶಾಮಿಯಾನ ಹಾಕಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಸುಲಭವಾಗಿ ಭಕ್ತರಿಗೆ ದಾಸೋಹ ಕಲ್ಪಿಸುವ ನಿಟ್ಟಿನಲ್ಲಿ ಹಲವು ಕೌಂಟರ್‌ಗಳನ್ನು ತೆರೆಯಲಾಗಿದೆ. ಶುದ್ಧ ಕುಡಿಯುವ ನೀರು, ತಾತ್ಕಾಲಿಕವಾಗಿ ಶೌಚಾಲಯಗಳು, ಭದ್ರತೆ ಸೇರಿದಂತೆ ಮೂರು ದಿನಗಳ ಗುರು ಪೌರ್ಣಮಿಯನ್ನು ಭಕ್ತಿಭಾವದಿಂದ ಆಚರಿಸಲು ಕೈವಾರ ಧರ್ಮಾಧಿಕಾರಿ ಡಾ.ಎಂ.ಆರ್‌.ಜಯರಾಮ್‌ ಮಾರ್ಗದರ್ಶನದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಮಠದ ವ್ಯವಸ್ಥಾಪಕ ಕೆ.ಲಕ್ಷ್ಮೀನಾರಾಯಣ್‌ ತಿಳಿಸಿದರು.

ಗುರುಪೂಜಾ ಮಹೋತ್ಸವ, ಸಂಗೀತೋತ್ಸವದಲ್ಲಿ ಇಂದು: ಬೆಳಗ್ಗೆ 6ರಿಂದ ಮಂಗಳವಾದ್ಯದೊಂದಿಗೆ ಅಧಿಕೃತವಾಗಿ ಗುರುಪೂಜಾ ಹಾಗೂ ಸಂಗೀತೋತ್ಸವಕ್ಕೆ ಚಾಲನೆ ಸಿಗಲಿದೆ. ಬೆಳಗ್ಗೆ 7 ಗಂಟೆಗೆ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕರೆತಂದು ವಿಶೇಷ ಪೂಜೆ ಸಲ್ಲಿಸಿದ ನಂತರ 8 ಗಂಟೆಗೆ ಧರ್ಮಾಧಿಕಾರಿ ಡಾ.ಎಂ.ಆರ್‌.ಜಯರಾಮ್‌ ರವರಿಂದ ತಾತಯ್ಯನವರಿಗೆ ಸಂಕೀರ್ತನೆ ಸಮರ್ಪಣೆ ಮಾಡುತ್ತಾರೆ.

ನಂತರ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಸ್ಥಳೀಯ ಕಲಾವಿದರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿ ಕೊಡಲಿದ್ದಾರೆ. ಸಂಜೆ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ತಿರುಪತಿ ಯಾಳ್ಳ ಶ್ರೀವಾಣಿ ವೀಣಾವಾದನ, ಬೆಂಗಳೂರಿನ ಅಪೇಕ್ಷ ಅಪ್ಪಲಾ ಗಾಯನ, ಚೆನ್ನೈ ಓ.ಎಸ್‌.ಅರುಣ್‌ ಗಾಯನ, ಚೆನ್ನೈ ಪ್ರಿಯಾ ಸಹೋದರಿಯರಿಂದ ಗಾಯನ, ಮೈಸೂರು ಮಂಜುನಾಥ್‌ ಮತ್ತು ನಾಗರಾಜ್‌ ರವರಿಂದ ಪಿಟೀಲು ಸೋಲೋ, ಪದ್ಮಶ್ರೀ ಹೈದರಾಬಾದ್‌ನ ಯಲ್ಲಾ ವೆಂಕಟೇಶ್ವರ ರಾವ್‌ ರವರಿಂದ ಮೃದಂಗ, ಗಿರಿಧರ್‌ ಉಡುಪ ಅವರಿಂದ ಘಟಂ ವಾದನವಿರುತ್ತದೆ. ಶ್ರೀ ಬೆಂಗಳೂರಿನ ಪದ್ಮಾವತಿ ಕಲಾನಿಕೇತನ್‌ ಸಂಗೀತ ನೃತ್ಯ ಶಾಲೆಯವರಿಂದ ಭರತನಾಟ್ಯ ಕಾರ್ಯಕ್ರಮವಿರುತ್ತದೆ.

* ಇಂದಿನಿಂದ ಮೂರು ದಿನ ಗುರುಪೂಜೆ, ಸಂಗೀತೋತ್ಸವ
* 72 ಗಂಟೆಗಳ ನಾದೋಪಾಸನೆಗೆ ಸಾಕ್ಷಿಯಾಗಲಿರುವ ಕೈವಾರ
* ಕೈವಾರ ಕ್ಷೇತ್ರದಲ್ಲಿ 20ನೇ ಗುರು ಪೂಜೆ ಮಹೋತ್ಸವ ಸಂಭ್ರಮ
* ಮೂರು ದಿನಗಳ ಕಾಲ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ
* ಇಡೀ ಕೈವಾರ ಮಠಕ್ಕೆ ವಿದ್ಯುತ್‌ ದೀಪಾಲಂಕಾರ
* ವಿಶಾಲವಾದ ಸಭಾಂಗಣ ನಿರ್ಮಾಣ, ಆಸನಗಳ ವ್ಯವಸ್ಥೆ
* ಅನ್ನದಾಸೋಹಕ್ಕೆ ಪ್ರತ್ಯೇಕ ಕೌಂಟರ್‌ಗಳ ನಿರ್ಮಾಣ
* ಎಲ್ಲೆಡೆ ಸಿಸಿ ಕ್ಯಾಮರಾಗಳ ಕಣ್ಗಾವಲು, ಬಿಗಿ ಭದ್ರತೆ
* ಶ್ರೀ ಕ್ಷೇತ್ರದಲ್ಲಿ ಸಂಗೀತ ದಿಗ್ಗಜರ ಸಮಾಗಮಾ

* ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

7-belagavi

Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧ ಹುತಾತ್ಮ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಬ್ರಮದ ಕ್ರಿಸ್‌ಮಸ್‌ ಆಚರಣೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7-belagavi

Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧ ಹುತಾತ್ಮ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಬ್ರಮದ ಕ್ರಿಸ್‌ಮಸ್‌ ಆಚರಣೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.