“ಕೀಲು ಕುದುರೆ’ ನಾರಾಯಣಪ್ಪಗೆ ಬಂತು ಪ್ರಶಸ್ತಿ
Team Udayavani, Jan 5, 2021, 7:01 PM IST
ಚಿಕ್ಕಬಳ್ಳಾಪುರ: ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ 2020ನೇ ಸಾಲಿನಲ್ಲಿ ನೀಡುವ ಪ್ರಶಸ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್. ಗೊಲ್ಲಹಳ್ಳಿ ಗ್ರಾಮದ ಕೀಲುಕುದುರೆ ಕಲಾವಿದ ನಾರಾಯಣಪ್ಪ ಭಾಜನರಾಗಿದ್ದಾರೆ.
ಆವಲಗುರ್ಕಿ ಅಂಚೆ ಎಸ್.ಗೊಲ್ಲಹಳ್ಳಿಯ ಕಲಾವಿದ ನಾರಾಯಣಪ್ಪ ಸ್ವಗ್ರಾಮದಲ್ಲಿರಾಮಭಜನೆ ಮಾಡುತ್ತಾ ಉತ್ಸವ, ಜಾತ್ರೆಯಲ್ಲಿ ಭಾಗವಹಿಸಿದ್ದರು. ತಮ್ಮ 13ನೇ ವರ್ಷದ ವಯಸ್ಸಿನಲ್ಲಿ ಕೀಲುಕುದುರೆ ಕಲೆ ಕರಗತ ಮಾಡಿಕೊಂಡು ಕೋಲಾರ ಮತ್ತುಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯುವ ಕನ್ನಡಪರ ಕಾರ್ಯಕ್ರಮ, ರಾಜ್ಯೋತ್ಸವ, ಸಾಹಿತ್ಯ ಸಮ್ಮೇಳನ, ಕರಗ ಮಹೋತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಕೀಲುಕುದುರೆ ಕಲೆ ಪ್ರದರ್ಶನ ನೀಡುತ್ತಿದ್ದರು.
2019ರಲ್ಲಿ ನಡೆದ ಮೈಸೂರು ದಸರಾದಲ್ಲಿಯೂ ತಮ್ಮ ಕಲೆ ಪ್ರದರ್ಶನ ಮಾಡಿದ್ದಾರೆ. ಅದರಲ್ಲದೆ ನಿರ್ದೇಶಕ ಆರ್.ಚಂದ್ರ ನಿರ್ದೇಶನದ ಲಕ್ಷ್ಮಣ ಚಲನಚಿತ್ರದಲ್ಲಿಯೂ ಕಲೆ ಪ್ರದರ್ಶನ ಮಾಡಿದ್ದಾರೆ. 2018ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಲಾವಿದ ನಾರಾಯಣಪ್ಪ ಶ್ರೀಬಂಡೆಮ್ಮ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಸಂಘ ಸ್ಥಾಪಿಸಿ ಆಸಕ್ತ ಮತ್ತು ಉತ್ಸಾಹಿ ಯುವಕರಿಗೆ ಮರಗಾಲು ಕುದುರೆ, ಗಾರುಡಿಗೊಂಬೆ, ನವೀಲು ಕುಣಿತ, ಕರಡಿ ಕುಣಿತ, ಕೀಲುಕುದುರೆ ಕಲೆಯನ್ನು ಉಚಿತವಾಗಿ ಕಲಿಸುತ್ತಿದ್ದಾರೆ. 2ನೇ ತರಗತಿ ವ್ಯಾಸಂಗ ಮಾಡಿದರೂ ಕಲೆಯಲ್ಲಿ ಪದವಿ ಪಡೆದಿದ್ದಾರೆ ಎಂದರು ತಪ್ಪಾಗುವುದಿಲ್ಲ. ನೆರೆ ರಾಜ್ಯದ ವಿಜಯವಾಡದಲ್ಲಿ ನಡೆಯುವ ರಥೋತ್ಸವ ಮತ್ತು ಗೋವಾ ರಾಜ್ಯದಲ್ಲಿ ನಡೆಯುವ ಉತ್ಸವಗಳಲ್ಲಿಯೂ ಕಲೆಯನ್ನು ಪ್ರದರ್ಶನ ಮಾಡಿ ಗಮನ ಸೆಳೆದಿದ್ದಾರೆ. ವ್ಯವಸಾಯ ಮಾಡಿಕೊಂಡು ನಾರಾಯಣಪ್ಪ ಜೀವನ ನಡೆಸುದ್ದಾರೆ.
ಈ ಮೊದಲು ಕೇವಲ 10 ರೂ.ಗಳಿಗೆ ಕಾರ್ಯಕ್ರಮ ನಡೆಸಿಕೊಟ್ಟಿರುವ ಕಲಾವಿದ ನಾರಾಯಣಪ್ಪ ಅವರ ಕಲೆ ನೋಡಿ ಗ್ರಾಮ ಸೇವಕ ಶಿವಣ್ಣ ಎಂಬವರು ಮೊದಲು ಚಿತ್ರಾವತಿಯಲ್ಲಿ ಕಾರ್ಯಕ್ರಮ ನಡೆಸಿಕೊಡಲು ಅವಕಾಶ ಮಾಡಿಕೊಟ್ಟು 500 ರೂ.ಗಳ ಪ್ರೋತ್ಸಾಹಧನ ನೀಡಿದ್ದರು. ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಅರಣ್ಯ ಇಲಾಖೆ ಮೂಲಕ ನಡೆದ ಕಾರ್ಯಕ್ರಮದಲ್ಲಿ 1 ಸಾವಿರ ರೂ. ಗಳ ಸಂಭಾವನೆ ಪಡೆದಿದ್ದರು.
ರಾಜ್ಯದ ತುಮಕೂರು, ರಾಯಚೂರು,ಬೆಳಗಾವಿ, ಮೈಸೂರು, ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಲೆ ಪ್ರದರ್ಶನ ಮಾಡಿದ್ದಾರೆ. ವೇಷಭೂಷಣ, ಕಲೆ ಪ್ರದರ್ಶನ ಮಾಡಲು ವಸ್ತುಗಳನ್ನು ಸ್ವಂತ ತಯಾರಿಸಿಕೊಂಡಿದ್ದಾರೆ. ಜತೆಗೆ ಗ್ರಾಮದಲ್ಲಿ ಉತ್ಸಾಹಿ ಯುವಕರಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ.
ನನಗೆ ಕಲೆ ಮೂಲಕ ಹಣಸಂಪಾದನೆ ಮಾಡುವುದಕ್ಕಿಂತಲೂ ಕಲೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಬೆಳೆಸಬೇಕೆಂಬ ಆಸೆಯಿದೆ. ಊರಲ್ಲಿಯುವಕರಿಗೆ ತರಬೇತಿ ಕೊಡುತ್ತಿದ್ದೇನೆ. ಜಿಲ್ಲಾ ಕೇಂದ್ರದಲ್ಲಿ ಕಲಾವಿದರಿಗೆ ಅನುಕೂಲ ಕಲ್ಪಿಸಲು ಒಂದು ಸುಸಜ್ಜಿತ ಕೇಂದ್ರವನ್ನು ತೆರೆದರೆ ಕಲಾವಿದರಿಗೆ ಅನುಕೂಲವಾಗುತ್ತದೆ. –ನಾರಾಯಣಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ
ಎಸ್.ಗೊಲ್ಲಹಳ್ಳಿಯ ಗ್ರಾಮದಲ್ಲಿ ಕೀಲುಕುದುರೆ, ಗಾರುಡಿಗೊಂಬೆ, ನವೀಲುಕುಣಿತ, ಕರಡಿ ಕುಣಿತದ ಕುರಿತು ತಂದೆಯವರು ಆಸಕ್ತಿ ಹೊಂದಿರುವರಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ರೇಷ್ಮೆ, ಹೈನುಗಾರಿಕೆ, ತರಕಾರಿ ಉತ್ಪಾದನೆ ಜತೆಗೆ ಕಲಾವಿದರ ಜಿಲ್ಲೆಯಾಗಬೇಕು ಎನ್ನುವುದೇ ತಂದೆಯ ಆಶಯವಾಗಿದೆ. –ಮಂಜುನಾಥ್, ಕಲಾವಿದ ಹಾಗೂ ನಾರಾಯಣಪ್ಪ ಅವರ ಪುತ್ರ
–ಎಂ.ಎ.ತಮೀಮ್ ಪಾಷಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.