koosina mane: 145 ಗ್ರಾಪಂಗಳಲ್ಲಿ ಕೂಸಿನ ಮನೆ ತೆರೆಯಲು ಸಿದ್ಧತೆ
Team Udayavani, Sep 28, 2023, 1:50 PM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ 4000 ಗ್ರಾಪಂಗಳಲ್ಲಿ ಅನುಷ್ಠಾನಕ್ಕೆ ತರುತ್ತಿರುವ ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಜಿಲ್ಲೆಯಲ್ಲಿ 157 ಗ್ರಾಪಂಗಳ ಪೈಕಿ 145 ಗ್ರಾಪಂಗಳಲ್ಲಿ ತೆರೆಯಲು ಜಿಪಂ ಸಿದ್ಧತೆ ನಡೆಸಿದೆ.
ನರೇಗಾ ಕ್ರಿಯಾಶೀಲ ಉದ್ಯೋಗ ಚೀಟಿ ಹೊಂದಿರುವ ಕುಟುಂಬದ 3 ವರ್ಷದೊಳಗಿನ ಮಕ್ಕಳಿಗೆ ಈ ಕೂಸಿನ ಮನೆ ಅಶ್ರಯ ನೀಡಲಿದ್ದು, ಜಿಲ್ಲಾದ್ಯಂತ ಅ.2 ರ ಗಾಂಧಿ ಜಯಂತಿಯೆಂದು ಕಾರ್ಯಾರಂಭಕ್ಕೆ ಜಿಪಂ ಮುಂದಾಗಿದೆ.
ಗ್ರಾಮೀಣ ಭಾಗದಲ್ಲಿ ನರೇಗಾ ಕೂಲಿ ಕಾರ್ಮಿಕ ಮಹಿಳೆಯರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚು ತೊಡಗಿಸಿಕೊಂಡಾಗ ತಮ್ಮ ಮಕ್ಕಳು ಪೋಷಣೆ, ಸುರಕ್ಷತೆ, ಪೂರಕ ಪೌಷ್ಟಿಕ ಆಹಾರದ ಅಲಭ್ಯತೆ ಹಿನ್ನಲೆಯಲ್ಲಿ ಮಹಿಳೆಯರು ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗದಿದ್ದನ್ನು ಪರಿಗಣಿಸಿ, ರಾಜ್ಯ ಸರ್ಕಾರ ಪ್ರತಿ ಗ್ರಾಪಂ ಕೇಂದ್ರದಲ್ಲಿ ಕೂಸಿನ ಮನೆ ತೆರೆದು 3 ವರ್ಷದೊಳಗಿನ ಮಕ್ಕಳಿಗೆ ಸುರಕ್ಷತೆ, ಪೂರಕ ಪೌಷ್ಟಿಕ ಆಹಾರ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಶಿಶು ಪಾಲನಾ ಕೇಂದ್ರ (ಕೂಸಿನ ಮನೆ) ಕಾರ್ಯಾರಂಭ ಮಾಡಲಿದ್ದು, ನೆಮ್ಮದಿಯಿಂದ ಕೂಲಿ ಕಾರ್ಮಿಕ ಮಹಿಳೆಯರು ಕೆಲಸ ಮಾಡಲಿದ್ದಾರೆಂಬುದು ಯೋಜನೆ ಉದ್ದೇಶವಾಗಿದೆ.
ವಿಶಾಲ ಕಟ್ಟಡ ಒದಗಿಸಿ: ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ನೆಲ ಮಹಡಿಯಲ್ಲಿ ಕೂಸಿನ ಮನೆಗೆ ಕಟ್ಟಡ ಸೌಲಭ್ಯವನ್ನು ಗ್ರಾಪಂ ಒದಗಿಸಬೇಕು. ಉತ್ತಮ ಗಾಳಿ, ಬೆಳಕು ಇರುವ ಕಟ್ಟಡ ಇರಬೇಕು, ಸುತ್ತಲೂ ಗುಂಡಿ, ತೆರೆದ ಬಾವಿ, ತೆರೆದ ಚರಂಡಿ ಇರಬಾರದು. ವಿಶೇಷವಾಗಿ ಕಟ್ಟಡ ಮಳೆ ಬಂದಾಗ ಸೋರಬಾರದು. ಮಕ್ಕಳ ಸ್ನೇಹಿ ಶೌಚಾಲಯ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು, ಮಕ್ಕಳ ಆಟ, ಕಲಿಕೆ ಹಾಗೂ ವಿಶ್ರಾಂತಿಗೆ ಪೂರಕವಾಗಿ ವಿಶಾಲವಾದ ಕಟ್ಟಡ ಒದಗಿಸಬೇಕೆಂದು ಸರ್ಕಾರ ಗ್ರಾಪಂಗಳಿಗೆ ಸೂಚಿಸಿದೆ.
ಕೇರ್ ಟೇಕರ್ಸ್ ನೇಮಕ: ಗ್ರಾಪಂ ಕೇಂದ್ರಗಳಲ್ಲಿ ಆರಂಭಗೊಳ್ಳಲಿರುವ ಕೂಸಿನ ಮನೆಗೆ ದಾಖಲಾಗುವ ಮಕ್ಕಳ ಆರೈಕೆಗಾಗಿ ಕೇರ್ ಟೇಕರ್ಸ್‌ಗಳ ನೇಮಕ ಮಾಡಲಿದೆ. ನೇರೇಗಾ ಕ್ರಿಯಾಶೀಲ ಉದ್ಯೋಗ ಚೀಟಿ ಹೊಂದಿರುವ 10 ಮಹಿಳೆಯರನ್ನು ಗುರುತಿಸಿ ಅದರಲ್ಲಿ ಇಬ್ಬರನ್ನು ಕೇರ್ ಟೇಕರ್ಸ್ ಗಳನ್ನು ರೋಟೇಷನ್ ಮೇಲೆ ಕೂಸಿನ ಮನೆಗೆ ಕೇಂದ್ರಕ್ಕೆ ಆಯ್ಕೆ ಮಾಡಬೇಕೆಂದು ಗ್ರಾಪಂಗಳಿಗೆ ಸೂಚಿಸಿರುವ ಸರ್ಕಾರ, ಅವರಿಗೆ ನರೇಗಾ ಯೋಜನೆಯಡಿ 100 ದಿನದ ಕೂಲಿ ಪಾವತಿ ಮಾಡುವಂತೆ ಸೂಚಿಸಿದೆ. ಕೇರ್ ಟೇಕರ್ಸ್ ನೇಮಕಾತಿಗೆ 10ನೇ ತರಗತಿ ಉತ್ತೀರ್ಣರಾಗಿರುವರನ್ನು ಪರಿಗಣಿಸಬೇಕು, ಅವರಿಗೆ ಸೂಕ್ತ ತರಬೇತಿ ಕೂಡ ಕಲ್ಪಿಸಬೇಕೆಂದು ಸೂಚಿಸಿರುವ ಸರ್ಕಾರ, ಶಿಶು ಮಕ್ಕಳ ಪೋಷಣೆ, ಆರೈಕೆ ಬಗ್ಗೆ ಅನುಭವ ಇರುವರನ್ನು ನೇಮಿಸಿಕೊಳ್ಳಬೇಕೆಂದು ಸೂಚಿಸಿದೆ. ತರಬೇತಿ ಬಳಿಕವೇ ಅವರನ್ನು ಕೂಸಿನ ಮನೆಗೆ ನೇಮಕ ಮಾಡಬೇಕಿದೆ.
ಕೂಸಿನ ಮನೆಗೆ ಹೇಗೆ ಕಾರ್ಯ ನಿರ್ವಹಿಸುತ್ತದೆ?: ಪ್ರತಿ ಕೇಂದ್ರಕ್ಕೆ ಕನಿಷ್ಠ 25 ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಬೇಕು, ಕೂಸಿನ ಮನೆ ಪ್ರತಿ ದಿನ ಕನಿಷ್ಠ 6 ಗಂಟೆ 30 ನಿಮಿಷ ಕಾರ್ಯನಿರ್ವಹಿಸಬೇಕು, ಮಕ್ಕಳಿಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಬಿಸಿಯೂಟ, ಸಂಜೆ ಲಘು ಉಪಹಾರ ನೀಡಬೇಕು. ಮಕ್ಕಳ ಹಾಜರಾತಿ ನಿರ್ವಹಿಸಬೇಕು, ವೈದ್ಯಾಧಿಕಾರಿಗಳ ತಪಾಸಣೆ ಕಡ್ಡಾಯವಾಗಿ ಮಾಡಿಸಬೇಕು, ಪ್ರತಿ ಕೂಸಿನ ಮನೆಗೆ ಆಯಾ ಗ್ರಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 11 ಮಂದಿ ಸದಸ್ಯರ ನಿರ್ವಹಣಾ ಸಮಿತಿ ರಚನೆ ಆಗಲಿದೆ. ಕೂಸಿನ ಮನೆ ಸ್ಥಾಪನೆಗೆ ಒಮ್ಮೆ 35 ಸಾವಿರ ಹಾಗೂ ಮೂಲ ಸೌಕರ್ಯಕ್ಕೆ ಒಟ್ಟು 30 ಸಾವಿರ, ಮಕ್ಕಳ ಆಟಿಕೆ ಸಾಮಾನುಗಳ ಖರೀದಿಗೆ 5 ಸಾವಿರ ಅನುದಾನವನ್ನು ಗ್ರಾಪಂಗಳು ತಮ್ಮಲ್ಲಿನ ಅನಾವರ್ತಕ ಅನುದಾನದಲ್ಲಿ ಬಳಸಲು ಅವಕಾಶ ಕೊಟ್ಟಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ, ಪ್ರಥಮ ಚಿಕಿತ್ಸೆ, ಸ್ವತ್ಛತಾ ಸಾಮಗ್ರಿ, ಕಲಿಕಾ ಸಾಮಗ್ರಿಗಳು ಹಾಗೂ ಪೋಷಕರ ಸಭೆ, ಉಸ್ತುವಾರಿ ಹಾಗೂ ಮೇಲ್ವಿಚಾರಣೆಗಾಗಿ ವರ್ಷಕ್ಕೆ ಆರ್ವತಕ ವೆಚ್ಚ ಒಟ್ಟು 57,680 ರೂ. ಸಿಗಲಿದೆ. ಕೂಸಿನ ಮನೆಗಳನ್ನು ಶಿಶು ಅಭಿವೃದ್ಧಿ ಯೋಜನಾಧಿನಾರಿಗಳು ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಲಿದ್ದಾರೆ. ಮಕ್ಕಳಿಗೆ ಪಠ್ಯ ಪುಸ್ತಕ, ಮೇಲ್ವಿಚಾರಕರಿಗೆ ಮಾರ್ಗದರ್ಶಿ ಪುಸಕ್ತ ಸರ್ಕಾರದಿಂದ ವಿತರಣೆ ಆಗಲಿದೆ.
ಕೂಸಿನ ಮನೆ ತೆರೆಯಲು ಸಿದ್ಧತೆ ನಡೆಸಿದ್ದು, ಸಮುದಾಯ ಕಟ್ಟಡ ಅಥವಾ ಶಾಲೆಗಳಲ್ಲಿ ಕೂಸಿನ ಮನೆ ಕಾರ್ಯಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಅ.2 ಗಾಂಧಿ ಜಯಂತಿ ದಿನದಂದು ಶಿಶು ಪಾಲನಾ ಕೇಂದ್ರ (ಕೂಸಿನ ಮನೆಗೆ) ಚಾಲನೆ ನೀಡಲಾಗುವುದು. – ಡಾ.ಎನ್.ಭಾಸ್ಕರ್, ಉಪ ಕಾರ್ಯದರ್ಶಿ, ಜಿಪಂ ಚಿಕ್ಕಬಳ್ಳಾಪುರ. – ಕಾಗತಿ ನಾಗರಾಜಪ್ಪ
ಶಾಲಾ ಕಾಂಪೌಂಡ್ ನಿರ್ಮಾಣ ವೇಳೆ ತಲೆ ಬುರುಡೆ ಪತ್ತೆ
ಆಲೂರು: ಶಾಲಾ ನಿರ್ಮಾಣಕ್ಕೆ ಕಾಯ್ದಿರಿಸಿದ್ದ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮನುಷ್ಯನ ತಲೆಬುರುಡೆ ಪತ್ತೆಯಾಗಿರುವ ಘಟನೆ ಆಲೂರು ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಾಪುರ ಗ್ರಾಮದಲ್ಲಿ ನಡೆದಿದ್ದು, ವಸತಿ ಶಾಲೆ ನಿರ್ಮಾಣಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ ಮಲ್ಲಾಪುರ ಸ.ನಂ.103 ರ ಎರಡು ಎಕರೆ ಜಾಗವನ್ನು ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ಮಂಜೂರು ಮಾಡಲಾಗಿದ್ದು, ಗುತ್ತಿಗೆದಾರರು ಕಾಂಪೌಂಡ್ ನಿರ್ಮಾಣಕ್ಕೆ ಜೆಸಿಬಿಯಿಂದ ಜಾಗ ಸಮತಟ್ಟು ವೇಳೆ ಮನುಷ್ಯನ ತಲೆಬುರುಡೆ ಕಂಡು ಬಂದಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರುದ್ರಭೂಮಿಗಾಗಿ ಜಾಗ ಕಾಯ್ದಿರಿಸಿದ್ದರು: ಹಿಂದೆ ಬಿ.ಬಿ.ಶಿವಪ್ಪ ಶಾಸಕರಾಗಿದ್ದ ಸಂದರ್ಭದಲ್ಲಿ ಗ್ರಾಮದ ಸ.ನಂ.103 ಜಾಗದಲ್ಲಿ ರುದ್ರಭೂಮಿಗಾಗಿ ಜಾಗ ಕಾಯ್ದಿರಿಸಿ ಸುಮಾರು 25 ವರ್ಷಗಳಿಂದ ಮಲ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮೃತರನ್ನು ಇದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುತ್ತಾ ಬರಲಾಗಿದೆ. ಆದರೆ, ಇತ್ತೀಚಿಗೆ ಗ್ರಾಮಸ್ಥರ ವಿರೋಧದ ನಡುವೆಯೂ ರುದ್ರಭೂಮಿಯನ್ನು ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ಮಂಜೂರು ಮಾಡಲಾಗಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಬಾಲಕಿಯರ ಶಾಲೆಗೆ ಇದು ಸೂಕ್ತವಾದ ಜಾಗವಲ್ಲ. ಈ ಜಾಗದಲ್ಲಿ ನೂರಾರು ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಗಿದೆ. ಇಲ್ಲಿ ವಸತಿ ಶಾಲೆ ನಿರ್ಮಾಣ ಮಾಡಿದರೆ ಹೆಣ್ಣುಮಕ್ಕಳು ಹೇಗೆ ವಿದ್ಯಾಭ್ಯಾಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿ ದರು. ಆದ್ದರಿಂದ ಮಲ್ಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಸೂಕ್ತ ಜಾಗ ಹುಡುಕಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಮಲ್ಲಾಪುರ ಗ್ರಾಮಸ್ಥರು ಶಾಸಕ ಸಿಮೆಂಟ್ ಮಂಜು ಅವರನ್ನು ಭೇಟಿ ಮಾಡಿ ಈ ಜಾಗದಲ್ಲಿ ಶಾಲೆ ನಿರ್ಮಾಣ ಮಾಡುವುದನ್ನು ಕೈಬಿಡಬೇಕು ಎಂದು ಮನವರಿಕೆ ಮಾಡಿ ಮನವಿಪತ್ರ ಸಲ್ಲಿಸಲಾಗಿದೆ ಎಂದರು.
ಮಲ್ಲಾಪುರ ಗ್ರಾಪಂ ಉಪಾ ಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಸೂಕ್ತವಾದ ಜಾಗದಲ್ಲಿ ಶಾಲೆ ನಿರ್ಮಾಣ ಮಾಡಬೇಕು ಎಂದು ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಗ್ರಾಮದ ಮುಖಂಡ ಉಮಾಕಾಂತ್ ಮಾತನಾಡಿ, ಈ ಜಾಗವನ್ನು ಮಲ್ಲಾಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಅನುಕೂಲಕ್ಕಾಗಿ ರುದ್ರಭೂಮಿ (ಸ್ಮಶಾನ ಜಾಗ) ಉಳಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಮದಲ್ಲಿ ಎರಡು ಗುಂಪುಗಳಿದ್ದು, ಒಂದು ಗುಂಪು ಇಲ್ಲಿಯೇ ವಸತಿ ಶಾಲೆ ನಿರ್ಮಾಣವಾಗಬೇಕು ಎಂದರೆ, ಇನ್ನೊಂದು ಗುಂಪು ಬೇರೆಡೆ ಮಾಡಿ ಎನ್ನುತ್ತಾರೆ, ಸ್ಥಳದಲ್ಲಿ ತಲೆಬುರುಡೆ ಬಗ್ಗೆ ಮಾಹಿತಿ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾಹಿತಿ ಪಡೆಯಲಾಗುವುದು. -ಮಧುಸೂದನ್, ಉಪ ತಹಶೀಲ್ದಾರ್
ಈ ಹಿಂದೆ ಮಲ್ಲಾಪುರ ಗ್ರಾಮದ ಕೆಲವರು ಕಾಂಪೌಂಡ್ ಕಾಮಗಾರಿ ಸ್ಥಳದಲ್ಲಿ ತಲೆಬುರುಡೆ ಇದೆ ಎಂದು ಮಾಹಿತಿ ನೀಡಿದರು ಸ್ಥಳಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ತಲೆಬುರುಡೆ ಸ್ಥಳದಲ್ಲಿ ಕಂಡು ಬಂದಿತು ಇದು ಸ್ಮಶಾನ ಜಾಗ ಎನ್ನುವ ಬಗ್ಗೆ ಸರ್ವೆಯರ್ ಬರೆಯಲಾಗಿದೆ. -ರಾಮಪ್ಪ, ಗ್ರಾಮ ಲೆಕ್ಕಿಗ
-ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.