ಭಕ್ತರಹಳ್ಳಿ ಗ್ರಂಥಾಲಯದಲ್ಲಿ ಸೌಲಭ್ಯ ಮರೀಚಿಕೆ
ಶಿಥಿಲಾವಸೆ §ಯಲ್ಲಿರುವಕಟ್ಟಡ , ಇದ್ದು ಇಲ್ಲದಂತಾಗಿರುವ ಜ್ಞಾನ ಭಂಡಾರ
Team Udayavani, Oct 13, 2020, 2:39 PM IST
ಚಿಕ್ಕಬಳ್ಳಾಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿರುವ ದೇಶಭಕ್ತರ ಹಳ್ಳಿ ಎಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ತಾಲೂಕಿನಲ್ಲಿಯ ಭಕ್ತರಹಳ್ಳಿಯಲ್ಲಿರುವ ಜ್ಞಾನ ಭಂಡಾರವಾಗಬೇಕಾಗಿದ್ದ ಗ್ರಂಥಾಲಯ ಕನಿಷ್ಠ ಸೌಲಭ್ಯದಿಂದ ವಂಚಿತಗೊಂಡು ಓದುಗರಿಂದ ದೂರವಾಗಿದೆ.
ಹೌದು, ಮಿನಿ ಸರ್ಕಾರವೆಂದು ಪ್ರತಿಬಿಂಬಿಸುವ ಗ್ರಾಪಂ ಕೇಂದ್ರಕ್ಕೆ ಹೊಂದಿಕೊಂಡಿರುವ ಗ್ರಂಥಾ ಲಯದ ಗ್ರಾಮ ಪಂಚಾಯಿತಿ ಮತ್ತು ಗ್ರಂಥಾಲಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಂಬ ಶೋಚನೀಯವಾಗಿದ್ದು,ಅವ್ಯವಸ್ಥೆಯಆಗರವಾಗಿದೆ. ಕನಿಷ್ಠ ಸೌಲಭ್ಯಗಳ ಕೊರತೆಯಿಂದ ನರಳುತ್ತಿರುವ ಗ್ರಾಮೀಣ ಗ್ರಂಥಾಲಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಗೆ ತಲುಪಿದೆ.
ಸೌಲಭ್ಯ ಮರೀಚಿಕೆ: ಗ್ರಂಥಾಲಯಕ್ಕೆ ಬರುವ ಓದುಗರಿಗೆ ಕುಳಿತುಕೊಳ್ಳಲು ಪೀಠೊಪಕರಣಗಳ ವ್ಯವಸ್ಥೆಯಿದೆ. ಆದರೆ ಅಸ್ಥಿಪಂಜರದಂತಿರುವ ಗ್ರಂಥಾ ಲಯದಲ್ಲಿ ಕುಳಿತುಕೊಂಡು ಅಂಗೈಯಲ್ಲಿ ಜೀವಇಟ್ಟುಕೊಂಡು ಪುಸ್ತಕಗಳನ್ನು ಓದುವ ವಾತಾವರಣಇಲ್ಲಿ ಕಾಣುವಂತಾಗಿದೆ. ಸ್ಥಳೀಯ ಆಡಳಿತದಿಂದ ನಿರ್ಲಕ್ಷ್ಯಕ್ಕೊಳಗಾಗಿ ಮೂಲಭೂತವಾಗಿ ಕುಡಿಯುವ ನೀರು ನೀರಿನ ಸೌಲಭ್ಯಗಳಿಲ್ಲದೇ ಅಕ್ಷರ ಭಂಡಾರದಸೌಲಭ್ಯ ಗ್ರಾಮಸ್ಥರಿಗೆ ಮರೀ ಚಿಕೆಯಾಗಿದೆ ಎಂದರೆ ತಪ್ಪಾಗಲಾರದು. ಗ್ರಾಪಂ ಕಟ್ಟಡದಲ್ಲಿ ಪ್ರಾರಂಭವಾಗಿರುವ ಗ್ರಂಥಾಲಯದಲ್ಲಿ ಸಾಹಿತ್ಯ, ಮಹಾತ್ಮರ ಜೀವನ ಚರಿತ್ರೆ, ಕಥೆ, ಕಾದಂಬರಿ ಒಳಗೊಂಡ ಹಲವಾರು ಬಗೆಯ 10,450ಪುಸ್ತಕಗಳಿಗೆಸುಮಾರು 446 ಮಂದಿ ಓದುಗರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಓದುಗರ ಸಂಖ್ಯೆಬೆರಳೆಣಿಕೆ: ಆದರೆ ಗ್ರಂಥಾಲಯದ ದರ್ಶನ ಮಾಡುವವರ ಓದುಗರ ಸಂಖ್ಯೆ ಬೆರಳೆಣಿಕೆಯಾಗಿದೆ. ಗ್ರಂಥಾಲಯದಲ್ಲಿ ಕೇವಲ ಎರಡು ದಿನಪತ್ರಿಕೆಗಳು ಮಾತ್ರ ಸರಬರಾಜು ಆಗುತ್ತಿದ್ದು,ಮಾಹಿತಿ ಮತ್ತು ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯಗಳನ್ನು ಡಿಜಿಟಲೈಸ್ ಮಾಡುತ್ತಿದ್ದರೂ ಸಹ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಗ್ರಂಥಾಲಯಗಳ ಪರಿಸ್ಥಿತಿ ಮಾತ್ರ ಬದಲಾಗಿಲ್ಲ ಎಂಬುದಕ್ಕೆ ಭಕ್ತರ ಹಳ್ಳಿಯ ಗ್ರಂಥಾಲ ಯವೇ ಜೀವಂತ ಸಾಕ್ಷಿಯಾಗಿದೆ.
ಪ್ರಾಮಾಣಿಕ ಪ್ರಯತ್ನ: ಉದ್ಯೋಗ ಖಾತ್ರಿ ಯೋಜನೆ ಮೂಲಕ ಗ್ರಾಮೀಣ ಪ್ರದೇಶದ ಸ್ವರೂಪ ಬದಲಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು ಹಿಂದಿನ ಜಿಪಂ ಸಿಇಒ ಫೌಝೀಯಾ ತರುನ್ನುಮ್. ಸಾರ್ವಜನಿಕಗ್ರಂಥಾಲಯಗಳನ್ನುಮಾದರಿಯಾಗಿ ಅಭಿವೃದ್ಧಿಗೊಳಿಸಿ ಡಿಜಿಟಲೈಸ್ ಮಾಡಲು ಯೋಜನೆ ರೂಪಿಸಿ ಕೆಲವೊಂದು ಗ್ರಂಥಾಲಯಗಳನ್ನು ಅಭಿವೃದ್ಧಿ ಗೊಳಿಸಲು ಚಾಲನೆ ನೀಡಿದರು. ಆದರೆ ಅವರು ವರ್ಗಾವಣೆಯಾದ ಬಳಿಕ ಈ ಯೋಜನೆಗೆ ಗ್ರಹಣ ಹಿಡಿದಿದೆಯೇ? ಎಂಬ ಅನುಮಾನ ಓದುಗರಿಗೆ ಕಾಡುವಂತಾಗಿದೆ.
ಶಿಥಿಲವಾಗಿರುವ ಚಾವಣಿ: ಒಂದೆಡೆ ಸಾರ್ವಜನಿಕ ಗ್ರಂಥಾಲಯದಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ. ಮತ್ತೂಂ ದೆಡೆ ಗ್ರಂಥಾಲಯದ ಸ್ಥಿತಿ ಮಾತ್ರ ಶೋಚನೀಯ ವಾಗಿದ್ದು, ಚಾವಣಿ ಕಿತ್ತುಹೋಗಿ ಶಿಥಿಲವಾಗಿದೆ. ಕಬ್ಬಿಣದ ಸರಳುಗಳು ಎದ್ದು ಕಾಣುತ್ತಿದ್ದು, ನೋಡಲು ಭಯಾನಕ ಸ್ಥಿತಿಯಲ್ಲಿರುವ ಗ್ರಂಥಾಲಯದಲ್ಲಿಪ್ರವೇಶಕ್ಕೆ ಓದುಗರು ಮತ್ತು ವಿದ್ಯಾರ್ಥಿಗಳುಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಇಟ್ಟುಕೊಳ್ಳಲು ಸೂಕ್ತ ವ್ಯವಸ್ಥೆಯಿಲ್ಲ. ಒಬ್ಬರನ್ನು ಗ್ರಂಥಪಾಲಕರನ್ನು ನೇಮಕ ಮಾಡಿರುವುದೇ ದೊಡ್ಡ ಸಾಧನೆ ಎಂದು ಗ್ರಂಥಾಲಯದಇಲಾಖಾಧಿಕಾರಿಗಳ ಕಾರ್ಯ ವೈಖರಿಯನ್ನು ಓದುಗರು ಟೀಕಿಸುವಂತಾಗಿದೆ.
ಭಕ್ತರಹಳ್ಳಿ ಗ್ರಂಥಾಲಯ ಬೇರೆಕಟ್ಟಡಕ್ಕೆ ಸ್ಥಳಾಂತರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 151 ಗ್ರಂಥಾಲಯಗಳಿವೆ. 24 ಗ್ರಂಥಾಲಯ ಕಟ್ಟಡ ಸೌಲಭ್ಯಗಳನ್ನು ಹೊಂದಿದೆ. ಇನ್ನುಳಿದಂತೆ ಗ್ರಾಪಂ ಮಟ್ಟದಲ್ಲಿರುವ ಖಾಲಿ ಕಟ್ಟಡಗಳಲ್ಲಿ ಗ್ರಂಥಾಲಯಗಳು ನಡೆಯುತ್ತಿವೆ. ಗ್ರಾಪಂಗಳ ಮೂಲಕವೇ ಗ್ರಂಥಾಲಯಗಳ ನಿರ್ವಹಣೆ ಆಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಗ್ರಂಥಾಲಯ ಅಧಿಕಾರಿಎಂ.ಶಂಕರ್ ತಿಳಿಸಿದ್ದಾರೆ.
ಉದಯವಾಣಿಗೆ ಪ್ರತಿಕ್ರಿಯಿಸಿದ ಅವರು, ಗ್ರಾಮೀಣ ಪ್ರದೇಶದಲ್ಲಿರುವ ಗ್ರಂಥಾಲಯದಲ್ಲಿ 7 ಸಾವಿರ ರೂ. ಗೌರವಧನ ನೀಡಿ ಒಬ್ಬರನ್ನು ಗ್ರಂಥಪಾಲಕರನ್ನು ಸರ್ಕಾರ ನೇಮಿಸಿದೆ. ಮಾಸಿಕಪತ್ರಿಕೆಗಳ ಖರೀದಿಗಾಗಿ 400 ರೂ. ನೀಡುತ್ತಿದ್ದೇವೆ. ಸ್ವತ್ಛತೆಗಾಗಿ 100 ರೂ. ನೀಡುತ್ತಿದ್ದೇವೆ. ಭಕ್ತರರಹಳ್ಳಿಯ ಗ್ರಂಥಾಲಯವನ್ನು ಬೇರೆ ಕಟ್ಟಡದಲ್ಲಿ ಸ್ಥಳಾಂತರಿಸುತ್ತೇವೆ. ಅವ್ಯವಸ್ಥೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಪಂಚಾಯಿತಿ ಅಧಿಕಾರಿಗಳು ಹೇಳಿದರು.
ಪ್ರತ್ಯೇಕ ಕಟ್ಟಡದ ಸೌಲಭ್ಯ ಇಲ್ಲ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ 1994-95ನೇ ಸಾಲಿನಲ್ಲಿನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಟ್ಟಡವನ್ನುಶಾಸಕ ವಿ.ಮುನಿಯಪ್ಪ ಹಾಗೂ ಅಂದಿನ ಸಂಸದ ಆರ್. ಎಲ್.ಜಾಲಪ್ಪ ಅವರು ಉದ್ಘಾಟಿಸಿದ್ದರು. ಅದೇ ಕಟ್ಟಡದಲ್ಲಿ ಇದೀಗ ಗ್ರಾಮೀಣ ಗ್ರಂಥಾಲಯನಡೆಯುತ್ತಿರುವುದು ಮಾತ್ರ ವಿಶೇಷ ಗ್ರಾಮದಲ್ಲಿ ಗ್ರಂಥಾಲಯಕ್ಕಾಗಿ ಪ್ರತ್ಯೇಕ ಕಟ್ಟಡದ ಸೌಲಭ್ಯವಿಲ್ಲ.
ಗ್ರಾಪಂ ವ್ಯಾಪ್ತಿಯಲ್ಲಿರುವ ಹಳೇ ಸರ್ಕಾರಿ ಶಾಲಾಕಟ್ಟಡವನ್ನು ನವೀ ಕರಣಗೊಳಿಸಿ ಅಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಸ್ಥಳಾಂತರಿಸುವಯೋಜನೆರೂಪಿಸಿ ಕೆಲವೊಂದು ದುರಸ್ತಿ ಕಾಮಗಾರಿಗಳನ್ನು ನಡೆಸಲಾಗಿದೆ. ಶೀಘ್ರವೇ ಗ್ರಂಥಾಲಯ ಸ್ಥಳಾಂತರಿಸಿ ಓದುಗರಿಗೆ ಪೂರಕವಾತಾವರಣ ಮತ್ತು ಅಗತ್ಯಸೌಲಭ್ಯಗಳನ್ನುಕಲ್ಪಿಸಲುಕ್ರಮ ಕೈಗೊಳ್ಳುತ್ತೇವೆ. – ಯಮುನಾ ರಾಣಿ, ಪಿಡಿಒ ಭಕ್ತರಹಳ್ಳಿ ಗ್ರಾಪಂ, ಶಿಡ್ಲಘಟ್ಟ ತಾಲೂಕು
ಗ್ರಾಮದಲ್ಲಿರುವ ಸಾರ್ವಜನಿಕ ಗ್ರಂಥಾ ಲಯವನ್ನು ನವೀಕರಣಗೊಳ್ಳುವಕಟ್ಟಡದಲ್ಲಿ ಸ್ಥಳಾಂತರಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ.ಓದುಗರಿಗೆ ಸಕಲ ಸೌಲಭ್ಯಕಲ್ಪಿಸಲು ಯೋಜನೆ ರೂಪಿಸಿದ್ದೇವೆ. ಮೊದಲು ವ್ಯವಸ್ಥೆಗಳನ್ನು ಸುಧಾರಿಸಿ ಆ ನಂತರ ಗ್ರಂಥಾಲಯ ಅಭಿವೃದ್ಧಿಗೊಳಿಸಲುಕ್ರಮ ಕೈಗೊಳ್ಳುತ್ತೇವೆ. – ಚಿದಾನಂದಮೂರ್ತಿ, ಸದಸ್ಯರು, ಭಕ್ತರಹಳ್ಳಿ ಗ್ರಾಪಂ
ಗ್ರಾಮ ಪಂಚಾಯತಿಯಲ್ಲಿ ಗ್ರಂಥಾಲಯ ಇದ್ದರೂ ಸುಸಜ್ಜಿತವಾಗಿಲ್ಲ. ಗ್ರಾಮೀಣ ಯುವಕರನ್ನು ಆಕರ್ಷಿಸುವಂತಹ ಪುಸ್ತಕಗಳು ಇರಲಿಕ್ಕಿಲ್ಲ. ಆದರೂ ಗ್ರಾಪಂ ಪಿಡಿಒಗಳು ಗ್ರಂಥಾಲಯ ಅಭಿವೃದ್ಧಿಗೆಕ್ರಮಕೈಗೊಳ್ಳಬೇಕು. ಗ್ರಂಥಾಲಯದ ಸೌಲಭ್ಯಎಲ್ಲರಿಗೆಸಿಗುವಂತಾಗಬೇಕು.– ಎಲ್.ಕಾಳಪ್ಪ, ಕಾರ್ಯದರ್ಶಿ ಬಿಎಂವಿ ವಿದ್ಯಾಸಂಸ್ಥೆ ಭಕ್ತರಹಳ್ಳಿ
-ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.