ಶಿಡಘಟ್ಲ 7ನೇ ವಾರ್ಡ್‌ನಲ್ಲಿ ಸೌಲಭ್ಯ ಮರೀಚಿಕೆ
Team Udayavani, Oct 17, 2022, 4:40 PM IST
ಶಿಡ್ಲಘಟ್ಟ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಮತ್ತು ವಾರ್ಡ್‌ಗಳ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದರೂ ಅನುದಾನ ಸಮರ್ಪಕವಾಗಿ ಬಳಕೆಯಾಗದಿರುವುದಕ್ಕೆ ನಗರಸಭೆಯ 7ನೇ ವಾರ್ಡ್ ಜೀವಂತ ಸಾಕ್ಷಿಯಾಗಿದೆ.
ನಗರಸಭೆ ಕಚೇರಿಯಿಂದ ಕೇವಲ ಕೂಗಳತೆ ದೂರದಲ್ಲಿರುವ ಈ ವಾರ್ಡ್‌ನಿಂದ ಪ್ರತಿನಿಧಿ ಸುತ್ತಿರುವಸದಸ್ಯೆ ಶಿವಮ್ಮ ಮುನಿರಾಜು ಅವರು ವಾರ್ಡಿನ ಅವ್ಯವಸ್ಥೆಗಳನ್ನು ದರ್ಶನ ಮಾಡಿಸಿದರಲ್ಲದೆ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಸಮಸ್ಯೆಗಳಿಗೆ ಮುಕ್ತಿ ಕಲ್ಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಸಿದ್ದಾರ್ಥನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯಭಾಗದಲ್ಲಿ ಚರಂಡಿಯ ಮೇಲು ಹೊದಿಕೆ ಕಿತ್ತು ಹೋಗಿ ಹಲವು ದಿನಗಳಾದರೂ ಅದನ್ನು ದುರಸ್ತಿಗೊಳಿಸದೇ ಇರುವ ಕಾರಣ ಪ್ರತಿನಿತ್ಯ ನಾಗರಿಕರು ಗುಂಡಿ ತಪ್ಪಿಸಿಕೊಂಡು ಹೋಗಲು ಪರಿತಪಿಸುವಂತಾಗಿದೆ. ಇನ್ನು ಮಳೆಗಾಲದಲ್ಲಿ ಮಾತ್ರ ಚರಂಡಿ ಯಾವುದು ರಸ್ತೆ ಯಾವುದು ಎಂಬುದುಗೊತ್ತಾಗುವುದೇ ಇಲ್ಲ ಎಂದು ಸದಸ್ಯೆ ಶಿವಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವಾರ್ಡಿನಲ್ಲಿ ಸಮರ್ಪಕವಾಗಿ ಕಸಕಡ್ಡಿಗಳನ್ನು ವಿಲೇವಾರಿ ಮಾಡುತ್ತಿಲ್ಲ ನೈರ್ಮಲ್ಯ ಹದಗೆಟ್ಟಿದೆ ಮಳೆ ನೀರು ಮತ್ತು ಕೊಳಚೆನೀರು ಸರಾಗವಾಗಿ ಹರಿಯಲು ನಿರ್ಮಿಸಿರುವ ಚರಂಡಿ ಸಂಪೂರ್ಣವಾಗಿ ಮುಚ್ಚಿ ಹೋಗಿ ಸೊಳ್ಳೆಗಳ ಆಶ್ರಯತಾಣವಾಗಿ, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ವಾರ್ಡಿನಲ್ಲಿ ನಾಗರಿಕರು ಅನುಭವಿಸುತ್ತಿರುವ ಸಂಕಷ್ಟವನ್ನು ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರೂ ಸಮಸ್ಯೆಗಳಿಗೆ ಮುಕ್ತಿ ಇಲ್ಲದಂತಾಗಿದೆ ಜಿಲ್ಲೆಯ ಅಭಿವೃದ್ಧಿಗೆ ಪಣತೊಟ್ಟಿರುವ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ 7ನೇ ವಾರ್ಡಿಗೆ ಮೂಲ ಸೌಲಭ್ಯ ವ್ಯವಸ್ಥೆಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಕುಡಿವ ನೀರು ಪೂರೈಕೆ ಮಾಡುವ ಸಲುವಾಗಿ ವಾರ್ಡ್‌ನಲ್ಲಿ ಕೊಳವೆಬಾವಿ ಕೊರೆಸಲಾಗಿದೆ ಆದರೆ ಕೊಳವೆಬಾವಿನಲ್ಲಿ ಇದ್ದ ಮೋಟರ್ ಪಂಪ್‌ಗ್ಳು ಬೇರೆ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಇದರಿಂದ ವಾರ್ಡಿನ ನಾಗರಿಕರಿಗೆ ಟ್ಯಾಂಕರ್‌ಗಳ ಮೂಲಕ ನೀರುಸರಬರಾಜು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಸರಬರಾಜು ವಿಭಾಗದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಹೊಸ ಪಂಪ್‌ಗ್ಳು ಬಂದಾಗ ಕೊಳವೆಬಾವಿಗೆ ಅಳವಡಿಸಲಾಗುವುದು ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ನಗರಸಭಾ ಸದಸ್ಯೆ ಶಿವಮ್ಮ ಮುನಿರಾಜು ಅಸಮಾಧಾನ ವ್ಯಕ್ತಪಡಿಸಿದರು.
ಗಂಥಾಲಯ ನಿರ್ಮಾಣಕ್ಕೆ ಮನವಿ :
ನಗರಸಭೆಯ 7ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಸಮುದಾಯ ಭವನದ ಸ್ಥಿತಿ ಶೋಚನೀಯವಾಗಿದೆ. ಅದನ್ನು ನೆಲಸಮಗೊಳಿಸಿ ಅಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕರ ಅನುಕೂಲಕ್ಕಾಗಿ ಡಿಜಿಟಲ್ ಗ್ರಂಥಾಲಯವನ್ನು ನಿರ್ಮಿಸಬೇಕು. ನಗರಸಭೆ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಪುತ್ಥಳಿ ನಿರ್ಮಿಸಬೇಕು ಎಂದು ನಗರಸಭಾ ಸದಸ್ಯೆ ಶಿವಮ್ಮ ನಗರಸಭೆ ಅಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸದ್ದಾರೆ.
ಮನೆಗಳಿಗೆ ತ್ಯಾಜ್ಯ ಮಿಶ್ರಿತ ನೀರು :
ಪರಿಶಿಷ್ಟ ಜಾತಿ ಮತ್ತು ಪಂಗಡದ ಜತೆಗೆ ಇನ್ನಿತರೆ ಸಮುದಾಯದ ಜನರು ವಾಸಿಸುತ್ತಿರುವ ಈ ವಾರ್ಡ್‌ನಲ್ಲಿ ಕನಿಷ್ಠ ಮೂಲ ಸೌಲಭ್ಯಗಳಿಂದ ಜನ ವಂಚಿತಗೊಂಡಿದ್ದಾರೆ ವಾರ್ಡಿನಲ್ಲಿ ಸುಗುಮ ಸಂಚಾರಕ್ಕಾಗಿ ಸೂಕ್ತ ರಸ್ತೆಗಳಿಲ್ಲ ಇನ್ನೂ ಕುಡಿವ ನೀರು ಸರಬರಾಜು ಮಾಡುವ ಪೈಪ್ ಲೈನ್ ಚರಂಡಿಯಲ್ಲಿ ಹಾದುಹೋಗಿದ್ದು ಪೈಪು ತೂತಾಗಿ ತ್ಯಾಜ್ಯ ಮಿಶ್ರಿತ ನೀರು ಸಾರ್ವಜನಿಕರ ಮನೆ ಸೇರುತ್ತಿದೆ ಎಂದು ಶಿವಮ್ಮ ಬೇಸರ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ನಗರದ 7ನೇ ವಾರ್ಡಿನಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ. ಚರಂಡಿಯ ಅವ್ಯವಸ್ಥೆ ಮತ್ತುನೈರ್ಮಲ್ಯವನ್ನು ಕಾಪಾಡಲು ಪ್ರಥಮಆದ್ಯತೆ ನೀಡಿ ತಾವೇ ಖುದ್ದಾಗಿ ಪರಿಶೀಲಿಸುತ್ತೇವೆ. -ಆರ್.ಶ್ರೀಕಾಂತ್ ಪೌರಾಯುಕ್ತ ನಗರಸಭೆ ಶಿಡ್ಲಘಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.