ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ
Team Udayavani, Mar 11, 2019, 7:41 AM IST
ಬಾಗೇಪಲ್ಲಿ: ಹಿಂದುಳಿದ ಮತ್ತು ಸದಾ ಬರಗಾಲ ಪೀಡಿತ ಪ್ರದೇಶದಲ್ಲಿ ನ್ಯಾಷನಲ್ ಕಾಲೇಜು ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಬದುಕು ರೂಪಿಸಿಕೊಳ್ಳುವಂತಹ ಅವಕಾಶ ಮಾಡಿಕೊಟ್ಟಿದ್ದೇ ಅಲ್ಲದೆ ನೂರಾರು ಸಂಖ್ಯೆಯ ಉಪನ್ಯಾಸಕರಿಗೂ ಅನ್ನ ಕೊಟ್ಟು ಬದುಕು ರೂಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಶ್ರೇಯಸ್ಸು ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಅವರಿಗೆ ಸಲ್ಲುತ್ತದೆ ಎಂದು ನ್ಯಾಷನಲ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಪಿ.ವಿಜಯಕುಮಾರ್ ಅಭಿಪ್ರಾಯ ಪಟ್ಟರು.
ನ್ಯಾಷನಲ್ ಕಾಲೇಜಿನಲ್ಲಿ ಅಮೇಜಿಂಗ್-1986 ಎ ಬ್ಯಾಚ್‌ನ ವಿದ್ಯಾರ್ಥಿಗಳು ಏರ್ಪಡಿಸಿದ್ದ ಪುನರ್ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1984 ರಲ್ಲಿಯೇ ಉಪನ್ಯಾಸಕ ಹುದ್ದೆಗೆ ಸೇರಬೇಕಾದರೆ ಒಂದು ಲಕ್ಷ ಕೇಳುತ್ತಿದ್ದರು. ಅಂತಹ ಸಂದರ್ಭದಲ್ಲಿ ಒಂದು ಪೈಸೆಯೂ ಪಡೆಯದೆ ನನಗೆ ಉಪನ್ಯಾಸಕ ಹುದ್ದೆ ಕೊಟ್ಟವರು ಡಾ.ಎಚ್ಚೆನ್‌ರವರು ಎಂದು ಸ್ಮರಿಸಿದರು.
ಅಂತಹ ಮಹನೀಯರು ಬಾಗೇಪಲ್ಲಿಯಲ್ಲಿ ಕಾಲೇಜು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಮೂಲಕ ಬದುಕು ರೂಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. 1984-85 ರಲ್ಲಿ ಉತ್ತಮ ವಿದ್ಯಾರ್ಥಿಗಳ ಜೊತೆಗೆ ಉತ್ತಮವಾದ ಉಪನ್ಯಾಸಕ ಮಿತ್ರರೂ ಸಿಕ್ಕಿದ್ದರಿಂದ ತೆಲುಗು ಪ್ರಭಾವದ ಪ್ರದೇಶದಲ್ಲಿ ಉಪನ್ಯಾಸಕನಾಗಿ ಮುಂದುವರಿಯಲು ಸಾಧ್ಯವಾಯಿತು ಎಂದರು.
ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪೊ.ಪಿ.ವೆಂಕಟರಾಮ್, ನಿವೃತ್ತ ಯೋಧ ಹಾಗೂ ಹಳೆಯ ವಿದ್ಯಾರ್ಥಿ ಕೆ.ಎಲ್.ಕೃಷ್ಣಮೂರ್ತಿ ಮಾತನಾಡಿದರು. ಸಹಾಯಕ ನಿರ್ದೇಶಕರಾದ ಡಾ.ಚಿನ್ನಕೈವಾರಮಯ್ಯ, ಡಾ.ಎ.ಎನ್.ನಾಗರಾಜ್, ಡಾ.ಮಂಜುನಾಥ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಡಾ.ಚಂದ್ರಮೋಹನ್ ರೆಡ್ಡಿ, ಛಾಗಲೇರು ಜಬೀವುಲ್ಲಾ, ಡಾ.ಎಚ್.ಅರುಣ್ ಕುಮಾರ್, ಡಾ.ಪ್ರಸಾದ್,
ಸೂರ್ಯನಾರಾಯಣ ರೆಡ್ಡಿ, ಡಾ.ಅಮರನಾರಾಯಣ ರೆಡ್ಡಿ, ತ್ರಿಯಂಭಕಸ್ವಾಮಿ, ಮೆಹಬೂಬ್ ಬಾಷ, ಎಂ.ಎಸ್.ನರಸಿಂಹಾರೆಡ್ಡಿ, ವೆಂಕಟರೆಡ್ಡಿ, ಶ್ರೀರಾಮ, ವೇಣು, ಮುಸ್ತಫಾ, ಬುಜೇಂದ್ರ, ಜಗನ್ನಾಥರೆಡ್ಡಿ, ವೆಂಕಟರಮಣಾರೆಡ್ಡಿ, ಚಂದ್ರಶೇಖರ ರೆಡ್ಡಿ, ಜುಬೇರ್, ಜಿ.ಎಲ್.ಮಂಜುನಾಥ್ ಇದ್ದರು. ಪ್ರಾಂಶುಪಾಲ ಪ್ರೊ.ಬಿ.ಪಿ.ವಿಜಯ್ ಕುಮಾರ್, ಪ್ರೊ.ಪಿ.ವೆಂಕಟರಾಮ್ ಮತ್ತು ನಿವೃತ್ತ ಯೋಧ ಕೆ.ಎಲ್.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.