ಜೀತ ಮುಕ್ತರಿಗೆ ಸರ್ಕಾರದಿಂದ ಭೂಮಿ-ವಸತಿ
Team Udayavani, Mar 2, 2019, 7:16 AM IST
ಗೌರಿಬಿದನೂರು: ಶತ ಶತಮಾನಗಳಿಂದಲೂ ಜೀತ ಪದ್ಧತಿ ದೊಡ್ಡ ಪಿಡುಗಾಗಿ ಜನರ ಮತ್ತು ಜಾತಿಗಳ ಮಧ್ಯ ಕಂದಕಗಳನ್ನು ಸೃಷ್ಟಿ ನಿರ್ಮಾಣ ಮಾಡುತ್ತಿದೆ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.
ನಗರದ ತಾಲೂಕು ಪಂಚಾಯ್ತಿ ಆವರಣದಲ್ಲಿ ತಾಲೂಕಿನ 414 ಜನ ಜೀತ ವಿಮುಕ್ತರಿಗೆ ಬಿಡುಗಡೆ ಪತ್ರ ವಿತರಣಾ ಸಮಾರಂಭದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿ, ಸಮಾಜದ ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎಂಬುದು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮುಖ್ಯ ಉದ್ದೇಶವಾಗಿದ್ದು, ಇದರಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಜೀತ ಮುಕ್ತರಿಗೆ ಭೂಮಿ-ಮನೆ: ಜೀತ ಮುಕ್ತರಿಗೆ ಸರಕಾರದ ವತಿಯಿಂದ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುವುದು, ಜತೆಗೆ ಭೂಮಿ ವಿತರಣೆಗೆ ಸರಕಾರ ಸ್ಥಳವನ್ನು ಖರೀದಿಸಿ ನಂತರ ಭೂಮಿ ನೀಡುವ ಭರವಸೆಯನ್ನು ಸಚಿವರು ಈ ಸಂದರ್ಭದಲ್ಲಿ ನೀಡಿದರು. ಈಗಾಗಲೇ ತಾಲೂಕಿನಲ್ಲಿ ಭೂ ರಹಿತರಿಗೆ 5 ಸಾವಿರ ರೈತರುಗಳಿಗೆ ಹಕ್ಕು ಪತ್ರವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಶಿಕ್ಷಣಕ್ಕೆ ಹೆಚ್ಚು ಒತ್ತು: ಜೀತ ಮುಕ್ತರು ತಮ್ಮ ಜೀವನದ ಅನುಭವವನ್ನು ತಮ್ಮ ಮಕ್ಕಳಿಗೆ ತಿಳಿಸಿ ಶಿಕ್ಷಣವನ್ನು ಪಡೆಯಲು ಉತ್ತೇಜನ ನೀಡಬೇಕು. ಸರಕಾರ ಉಚಿತ ಶಿಕ್ಷಣ, ವಸತಿ ಶಾಲೆಯಗಳನ್ನು ತೆರೆಯಲಾಗಿದ್ದು, ಬಡವರು, ಜೀತ ಮುಕ್ತರು ತಮ್ಮ ಮಕ್ಕಳ ಶೆ„ಕ್ಷಣಿಕ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ನೇರವಾಗಿ ದೂರು ನೀಡಿ: ನವದೆಹಲಿ ಮಾನವ ಹಕ್ಕುಗಳ ಆಯೋಗದ ಸದಸ್ಯ ಹಾಗೂ ಜೀವಿಕ ರಾಜ್ಯ ಸಂಚಾಲಕ ಕಿರಣ್ ಕಮಲ್ ಪ್ರಸಾದ್ ಮಾತನಾಡಿ, ಜಾತಿ ವ್ಯವಸ್ಥೆಯ ಕ್ರೂರತೆಯನ್ನು ಒಂದು ಮಟ್ಟಿಗಾದರೂ ನಿಲ್ಲಿಸಬೇಕಾದರೆ ಜೀತ ಪದ್ಧತಿಯನ್ನು ತಡಗಟ್ಟಲೇಬೇಕು.
ದಲಿತರು ಮತ್ತು ಮೂಲನಿವಾಸಿಗಳ ಒಟ್ಟಾರೆ ಬದುಕಿನಲ್ಲಿ ಆಗಲೇ ಬೇಕಾದ ಬದಲಾವಣೆಯಲ್ಲಿ ಹಾಗೂ ಜಾತಿ ವಿನಾಶಕ್ಕೆ ಜೀತದಾಳುಗಳಿಗೆ ಸಿಗಬೇಕಾದ ನ್ಯಾಯವೂ ಮಹತ್ವದ ಪಾತ್ರ ವಹಿಸಿತ್ತದೆ. ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಲ್ಲಿ ನೇರವಾಗಿ ಉಚ್ಚನ್ಯಾಯಾಲಯಕ್ಕೆ ದೂರು ನೀಡಬಹುದಾಗಿದೆ ಎಂದು ತಿಳಿಸಿದರು.
ಸ್ವಾವಲಂಭಿಗಳಾಗಿ: ಕೇಂದ್ರ ಸರಕಾರ ಜೀತ ವಿಮುಕ್ತ ಪುರುಷರಿಗೆ 1ಲಕ್ಷ ರೂ., ಮಹಿಳೆಯರಿಗೆ 2 ಲಕ್ಷ ರೂ., ವಿಶೇಷ ಚೇತನರಿಗೆ 3 ಲಕ್ಷ ರೂ. ಸಹಾಯ ಧನವನ್ನು ನೀಡಲಾಗುತ್ತಿದ್ದು ಫಲಾನುಭವಿಗಳು ಇದನ್ನು ಸದುಪ ಯೋಗಿಸಿಕೊಂಡು ಸ್ವಾವಲಂಭಿಗಳಾಗಿ ಜೀವನ ನಡೆಸಬೇಕು ಎಂದರು. ಜೀವಿಕ ರಾಜ್ಯ ಸಂಘಟನಾ ಸಂಚಾಲಕ ವಿ.ಗೋಪಾಲ್ ಜೀತ ಪದ್ಧತಿ ಹಾಗೂ ವಿಮುಕ್ತಿ ನಂತರದ ಜೀವನದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ತಹಶೀàಲ್ದಾರ್ ಎಚ್.ಶ್ರೀನಿವಾಸ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಗಿರಿಜಾಶಂಕರ್, ಜೀವಿಕ ಜಿಲ್ಲಾ ಸಂಚಾಲಕ ಹನುಮಂತು, ತಾಲೂಕು ಸಂಚಾಲಕ ಲಕ್ಷ್ಮೀನಾರಾಯಣ್, ತಾಲೂಕು ಪಂಚಾಯ್ತಿ ಅಧ್ಯಕ್ಷ ಚಿಕ್ಕೇಗೌಡ, ಮುಖಂಡರಾದ ಕೇಶವರೆಡ್ಡಿ, ಎಚ್.ಎನ್.ಪ್ರಕಾಶ್‌ರೆಡ್ಡಿ, ಅಶ್ವತ್ಥನಾರಾಯಣಗೌಡ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.