ಆಟೋಗೆ ಲಾರಿ ಡಿಕ್ಕಿ: ಸ್ಥಳದಲ್ಲಿಯೇ ಆಟೋ ಚಾಲಕ ಸಾವು
Team Udayavani, Sep 6, 2019, 4:26 PM IST
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮರುಗಮಲ್ಲ ರಸ್ತೆಯಲ್ಲಿ ಶುಕ್ರವಾರ ಆಟೋ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ಆಟೋ ಚಾಲಕನನ್ನು ಕೋಲಾರದ ವಾಸೀಮ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಗಾಯಳುನ್ನು ಶ್ರೀನಿವಾಸಪುರದ ಬಾಬು ಎನ್ನಲಾಗಿದೆ.
ಶುಕ್ರವಾರ ಆಗಿದ್ದರಿಂದ ಮುರಗಮಲ್ಲ ಅಮ್ಮಜಾನ್ ಬಾಬಾಜಾನ್ ದರ್ಗಾಗೆ ತೆರಳಿ ವಾಪಸ್ಸು ಬರುವಾಗ ಕಾಗತಿ ಸಮೀಪ ಚಿಂತಾಮಣಿ ಕಡೆಯಿಂದ ಮುರಗಮಲ್ಲ ಕಡೆಗೆ ಹೊರಟ್ಟಿದ್ದ ಲಾರಿಯು, ಮುರಗಮಲ್ಲ ಕಡೆಯಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಕೆಟ್ಟು ಹೋಗಿದ್ದ ಆಟೋ
ಮುರಗಮಲಕ್ಕೆ ಬಂದಿದ್ದ ಆಟೋ ಕೆಟ್ಟು ಹೋಗಿದ್ದು ಅದನ್ನು ದ್ವಿ ಚಕ್ರ ವಾಹನಕ್ಕೆ ಕಟ್ಟಿಕೊಂಡು ಚಿಂತಾಮಣಿಗೆ ಬರುವ ಸಂದರ್ಭದಲ್ಲಿ ಲಾರಿ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಆಟೋಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು