ಜಿಲ್ಲಾದ್ಯಂತ ಎಪಿಎಂಸಿ ಸಪ್ತಾಹ ಬ್ಯಾನರ್‌ಗೆ ಸೀಮಿತಿ
Team Udayavani, Dec 28, 2017, 2:35 PM IST
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯಕ್ರಮಗಳ ಬಗ್ಗೆ ರೈತಾಪಿ ಜನರಲ್ಲಿ ಅರಿವು ಮೂಡಿಸಲು ಆಚರಿಸುವ ಮಹತ್ವಾಕಾಂಕ್ಷಿ ಮಾರುಕಟ್ಟೆ ಸಪ್ತಾಹ ಈ ವರ್ಷ ಜಿಲ್ಲೆಯ ಎಪಿಎಂಸಿ ಅಧಿಕಾರಿಗಳ ಉದಾಸೀನತೆಗೆ ಒಳಗಾಗಿದ್ದು, ಬರೀ ಬ್ಯಾನರ್‌ಗಳಲ್ಲಿ ಮಾರುಕಟ್ಟೆ ಸಪ್ತಾಹ ಆಚರಿಸಿ ಅಧಿಕಾರಿಗಳು ಕೈ ತೊಳೆದುಕೊಳ್ಳುತ್ತಿದ್ದಾರೆ.
ಚಿಕ್ಕಬಳ್ಳಾಪುರ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಲಕ್ಷಾಂತರ ಕುಟುಂಬಗಳು ಕೃಷಿ ಮೇಲೆಯೇ ಅವಲಂಬಿತವಾಗಿವೆ. ಜಿಲ್ಲೆಯ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು ಹಾಗೂ ಚಿಂತಾಮಣಿ ನಗರಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳಿದ್ದು, ಬಾಗೇಪಲ್ಲಿ ತಾಲೂಕಿನ ಚೇಳೂರು, ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿ ಮಾತ್ರ ಉಪ ಕೃಷಿ ಉತ್ಪನ್ನ ಮಾರುಕಟ್ಟೆಗಳಿವೆ. ಪ್ರತಿ ದಿನ ಲಕ್ಷಾಂತರ ರೂ. ವಾಣಿಜ್ಯ ವಹಿವಾಟು ನಡೆಯುತ್ತದೆ. ಆದರೆ, ಜಿಲ್ಲೆಯ ಎಪಿಎಂಸಿ ಅಧಿಕಾರಿಗಳು ಮಾರುಕಟ್ಟೆ ಸಪ್ತಾಹವನ್ನು ರೈತರಲ್ಲಿ ಸಮರ್ಪಕವಾಗಿ ಪ್ರಚಾರ ನಡೆಸದೇ ಕದ್ದುಮುಚ್ಚಿ ನಡೆಸುತ್ತಿದ್ದಾರೆಂಬ ಆರೋಪ ರೈತ ವಲಯದಲ್ಲಿ ಕೇಳಿ ಬರುತ್ತಿದೆ.
ಏನಿದು ಮಾರುಕಟ್ಟೆ ಸಪ್ತಾಹ?: ರಾಜ್ಯ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆಗಳ ಬಲರ್ವಧನೆಗಾಗಿ ರೂಪಿಸಿರುವ ರೈತ ಸ್ನೇಹಿ ಮಾರುಕಟ್ಟೆ ಕಾರ್ಯಕ್ರಮಗಳನ್ನು ಹಾಗೂ ಮಾರುಕಟ್ಟೆಯ ಕಾನೂನು ತಿದ್ದುಪತಿಗಳ ಕುರಿತು ರೈತಾಪಿ ಜನರಲ್ಲಿ ಸಭೆ, ಸಮಾರಂಭಗಳ ಮೂಲಕ ಅರಿವು ಮೂಡಿಸಲು ಪ್ರತಿ ವರ್ಷ ಡಿ.24 ರಿಂದ 30 ರವರೆಗೂ ಮಾರುಕಟ್ಟೆ ಸಪ್ತಾಹ ಹಮ್ಮಿಕೊಂಡು ಬರಲಾಗುತ್ತಿದೆ. ಆ ಮೂಲಕ ಜಿಲ್ಲೆಯ ರೈತ ಸಮುದಾಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಸಿಗುವ ಸೌಲಭ್ಯಗಳ ಜೊತೆಗೆ ಮಾರಕಟ್ಟೆಯಲ್ಲಿನ ರೈತರ ಕುಂದು ಕೊರತೆಗಳನ್ನು ಆಲಿಸುವುದು ಮಾರುಕಟ್ಟೆ ಸಪ್ತಾಹದ ಮುಖ್ಯ ಉದ್ದೇಶವಾಗಿದೆ.
ದಲ್ಲಾಳಿ ಹಾವಳಿಗೆ ಬಿದ್ದಿಲ್ಲ ಬ್ರೇಕ್: ಜಿಲ್ಲೆಯ ಮಟ್ಟಿಗೆ ಹೇಳಬೇಕಾದರೆ ಕೃಷಿ ಉತ್ಪನ್ನ ಮಾರುಕಟ್ಟೆಗಳು ರೈತರನ್ನು ಲಿಗೆ ಮಾಡುವ ಹಗಲು ದರೋಡೆ ಕೇಂದ್ರಗಳಾಗಿ ಮಾರ್ಪಟ್ಟಿವೆಂಬ ಆರೋಪ, ಆಕ್ರೋಶ ರೈತರಿಂದ ಕೇಳಿ ಬರುತ್ತಲೇ ಇದೆ. ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ. ಕಮಿಷನ್ ದಂಧೆಗೆ ಕಡಿವಾಣ ಹಾಕಿಲ್ಲ.
ಮಾರುಕಟ್ಟೆಗೆ ರೈತರು ತರುವ ಉತ್ಪನ್ನಗಳ ಮೇಲೆ ಶೇ.10 ಕಮಿಷನ್‌ನ್ನು ವ್ಯಾಪಾರಸ್ಥರು ರಾಜಾರೋಷವಾಗಿ ಪಡೆದರು ಕೇಳ್ಳೋವರೋ ಇಲ್ಲವಾಗಿದ್ದಾರೆ.
ಪಡೆಯುವ ಕಮಿಷನ್‌ಗೆ ಬಿಳಿ ಚೀಟಿ ನೀಡುವ ಕಮಿಷನ್ ಏಜೆಂಟ್‌ರು ಜಾಕ್‌ಪಾಟ್ ಹೆಸರಿನಲ್ಲಿ ರೈತರು ತರುವ ಕೃಷಿ ಉತ್ಪನ್ನಗಳಲ್ಲಿ ಸಾಕಷ್ಟು ಗೋಲ್ ಮಾಲ್ ನಡೆಸುತ್ತಿದ್ದರೂ ಎಪಿಎಂಸಿ ಅಧಿಕಾರಿಗಳು ಕೈ ಕಟ್ಟಿಕೊಂಡು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದಾದರೆಂಬ ಆಕ್ರೋಶ ರೈತರಿಂದ ಕೇಳಿ ಬರುತ್ತಿದ್ದು, ಮಾರುಕಟ್ಟೆಯ ಬಹುತೇಕ ವ್ಯಾಪಾರಸ್ಥರು ಎಲೆಕ್ಟ್ರಿಕಲ್ ತೂಕ ಹಾಗೂ ಅಳತೆ ಮಾಪನಗಳನ್ನು ಸಹ ರೈತರ ತರುವ ಕೃಷಿ ಉತ್ಪನ್ನಗಳ ತೂಕ ಮಾಡಲು ಬಳಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ರೈತರ ಅದಾಲತ್ ಮರೆತ ಅಧಿಕಾರಿಗಳು: ಇನ್ನೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ರೈತರ ಅಹವಾಲುಗಳನ್ನು ಆಲಿಸಲು ಮಾರುಕಟ್ಟೆಯಲ್ಲಿ ರೈತರ ಅದಾಲತ್ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕೆಂಬ ನಿಯಮ ಇದೆ. ಆದರೆ, ಎಪಿಎಂಸಿ ಅಧಿಕಾರಿಗಳು ಮಾತ್ರ ಇದುವರೆಗೂ ಜಿಲ್ಲೆಯ ಯಾವೊಂದು ಎಪಿಎಂಸಿ ಮಾರುಕಟ್ಟೆಯೂ ಸಹ ರೈತರ ಕುಂದುಕೊರತೆಗಳ ಸಭೆ ನಡೆಸಿರುವುದು ಉದಾಹರಣೆಗಳಿಲ್ಲ. ಜಿಲ್ಲೆಯ ಮಾರುಕಟ್ಟೆಗಳಲ್ಲಿ ವಿದ್ಯುತ್ ದೀಪಗಳು, ಚರಂಡಿ, ಶೌಚಾಲಯಗಳು, ಕುಡಿಯುವ ನೀರಿನ ಸಮಸ್ಯೆ, ರೈತರ ಭವನ, ವಿಶ್ರಾಂತಿ ಕೊಠಡಿ, ಉಪಾಹಾರ ಮಂದಿರ ಹೀಗೆ ಅನೇಕ ಸೌಲಭ್ಯಗಳಿಂದ ರೈತರು ವಂಚಿತರಾಗಿದ್ದರೂ ರೈತರ ಸಂಕಷ್ಟ ಕೇಳಲು ಎಪಿಎಂಸಿ ಅಧಿಕಾರಿಗಳು ಮುಂದೆ ಬರುತ್ತಿಲ್ಲ ಎಂಬುದಕ್ಕೆ ಜಿಲ್ಲೆಯಲ್ಲಿ ಮಾರುಕಟ್ಟೆ ಸಪ್ತಾಹ ಆಚರಣೆಯಲ್ಲಿ ಅಧಿಕಾರಿಗಳು ತೋರುತ್ತಿರುವ ಆಸಡ್ಡೆ ಮನೋಭಾವ ಪ್ರತ್ಯಕ್ಷ ಸಾಕ್ಷಿಯಾಗಿದೆ
ಅಸ್ತಿತ್ವ ಕಳೆದುಕೊಳ್ಳುವತ್ತ ಮಾರುಕಟ್ಟೆಗಳು ರೈತರು ಬೆಳೆಯುವ ಬೆಳೆಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ಒದಗಿಸಿ ಉತ್ತಮ ಧಾರಣೆ ರೈತನ ಕೈಗೆಟುಕುವ ಮಹತ್ವಾಕಾಂಕ್ಷೆ ಯೊಂದಿಗೆ ಆರಂಭಗೊಂಡಿರುವ ಕೃಷಿ ಉತ್ಪನ್ನ ಮಾರುಕಟ್ಟೆಗಳು ಜಿಲ್ಲೆಯಲ್ಲಿ ಆಸ್ತಿತ್ವ ಕಳೆದು ಕೊಳ್ಳುವ ಆತಂಕದಲ್ಲಿವೆ. ಇತ್ತೀಚೆಗೆ ಜಿಲ್ಲಾದ್ಯಂತ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ವ್ಯಾಪಾರಸ್ಥರು ನೇರವಾಗಿ ರೈತರ ತೋಟಗಳಿಗೆ ತೆರಳಿ ಅಲ್ಲಿಯೆ ಖರೀದಿ ಮಾಡುವ ಪರಿಪಾಠ
ಬೆಳೆಸಿಕೊಂಡಿರುವುದರಿಂದ ರೈತರು ಬೆಳೆದ ಕೃಷಿ ಉತ್ಪನ್ನಗಳು ಅರ್ಧಕ್ಕೆ ಅರ್ಧ ಮಾರುಕಟ್ಟೆ ಪ್ರವೇಶಿಸುತ್ತಿಲ್ಲ. ವಾಣಿಜ್ಯ ಬೆಳೆ ಟೊಮೆಟೊ ಒಂದು ಬಿಟ್ಟರೆ ಹೂಕೋಸ್, ಕ್ಯಾರೆಟ್, ಮೂಲಂಗಿ, ಆಲೂಗಡ್ಡೆ, ನೆಲಗಡಲೆ, ಈರುಳ್ಳಿ, ಮಾವು ಮತ್ತಿತರ ಪ್ರಮುಖ ಬೆಳೆಗಳನ್ನು ವ್ಯಾಪಾರಸ್ಥರು ನೇರವಾಗಿ ರೈತರ ತೋಟಗಳಲ್ಲಿಯೇ ಖರೀದಿಗೆ ಮುಂದಾಗುತ್ತಿರುವುದರಿಂದ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ವಹಿವಾಟು ಮೇಲೆ ಗಂಭೀರ ಪರಿಣಾಮ ಬೀರಿ ಸರ್ಕಾರಕ್ಕೆ ಹರಿದು ಬರುತ್ತಿದ್ದ ಆದಾಯಕ್ಕೂ ಕತ್ತರಿ ಬಿದ್ದಂತಾಗಿದೆ.
ಅತ್ತ ರೈತರಿಗೆ ನ್ಯಾಯವಾದ ಬೆಲೆ ಸಿಗದೇ ಸಂಕಷ್ಟ ಅನುಭವಿಸುವಂತಾಗಿದೆ. ಆದರೆ, ಹೊರಗಿನ ವಹಿವಾಟು ನಿಲ್ಲಿಸಿ ಮಾರುಕಟ್ಟೆಯತ್ತ ರೈತರನ್ನು ಆಕರ್ಷಿಸುವ ದಿಸೆಯಲ್ಲಿ ಜಿಲ್ಲೆಯ ಎಪಿಎಂಸಿ ಅಧಿಕಾರಿಗಳು ಎಡವಿ ಬಿದ್ದಿರುವುದು ಎದ್ದು
ಕಾಣುತ್ತಿ¨ “ಎಪಿಎಂಸಿಯವರನೇ ‘ಕೇಳಿ ಜಿಲ್ಲೆಯಲ್ಲಿ ಮಾರುಕಟ್ಟೆ ಸಪ್ತಾಹವನ್ನು ನಿರ್ಲಕ್ಷಿಸಿರುವ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಹಾಯಕ ನಿರ್ದೇಶಕ ದ್ವಾರಕಪ್ರಸಾದ್, ನೀವು ಎಪಿಎಂಸಿಯವರನ್ನೇ ಸ್ವಲ್ಪ ಕೇಳಿ ಬಿಡಿ. ನಾವು ಅವರಿಗೆ ಕಾರ್ಯಕ್ರಮ ಆಯೋಜಿಸುವಂತೆ ಎಲ್ಲಾ ಎಪಿಎಂಸಿಗಳಿಗೆ ಸೂಚಿಸಿದ್ದೇನೆ. ಅವರು ಸಭೆ, ಕಾರ್ಯಕ್ರಮ ರೂಪಿಸಿ ನಮ್ಮನ್ನು ಕರೆದರೆ ನಾವು ಪಾಲ್ಗೊಳ್ಳುತ್ತೇವೆ. ಮಾರುಕಟ್ಟೆ ಸಪ್ತಾಹ ಇನ್ನು ಸಮಯ ಇದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.