Lok Sabha Elections 2024: 29 ಅಭ್ಯರ್ಥಿಗಳ ಸ್ಪರ್ಧೆ ಇದೇ ಮೊದಲು!
Team Udayavani, Apr 13, 2024, 5:24 PM IST
ಚಿಕ್ಕಬಳ್ಳಾಪುರ: ಜಿಲ್ಲೆಯ ಲೋಕಸಭಾ ಚುನಾವಾಸದಲ್ಲಿ ಮೊದಲ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕೆ ಇಳಿಯುವ ಮೂಲಕ 2024 ರ ಲೋಕ ಸಮರ ಹೊಸ ದಾಖಲೆ ಸೃಷ್ಠಿಸಿದೆ.
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ 15 ಮಂದಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದರು. ಹೌದು, ಬೆರಣಿಕೆಯಷ್ಟು ಮಂದಿ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದ ಕಾಲ ಇದೀಗ ಬದಲಾಗಿದ್ದು, ಕ್ಷೇತ್ರ ಪ್ರತಿ ಲೋಕಸಭಾ ಚುನಾವಣೆಯಲ್ಲಿ 10, 15 ರೊಳಗೆ ಇದ್ದ ಅಭ್ಯರ್ಥಿ ಗಳ ಸಂಖ್ಯೆ ಈ ಬಾರಿ ಅಖಾಡದಲ್ಲಿ ಬರೋಬ್ಬರಿ 29 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಹಾಗೂ ಪಕ್ಷಗಳು ಮಾತ್ರವೇ ಪ್ರತಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯುತ್ತಿದ್ದವು. ನಾಲ್ಕೈದು ಚುನಾವಣೆ ಬಿಟ್ಟರೆ ಉಳಿದ ಚುನಾವಣೆಗಳಲ್ಲಿ ಸಿಪಿಎಂ ಪಕ್ಷ ಜೆಡಿಎಸ್ ಪಕ್ಷಕ್ಕೆ ಬೆಂಬಲ ಕೊಡುತ್ತಾ ಬಂದಿದ್ದವು. ಆದರೆ ಈ ಬಾರಿ ಚುನಾವಣಾ ಅಖಾಡ 29 ಅಭ್ಯರ್ಥಿಗಳ ಸ್ಪರ್ಧೆಯಿಂದ ರಾಜಕೀಯವಾಗಿ ಕ್ಷೇತ್ರ ಗಮನ ಸೆಳೆದಿವೆ.
ಈ ಬಾರಿ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ, ಸಿಪಿಎಂ, ಬಹುಜನ ಸಮಾಜ ಪಕ್ಷದ ಜೊತೆಗೆ ಇದೇ ಮೊದಲ ಬಾರಿಗೆ ಎಸ್‌ಯುಸಿಐ, ದಿಗ್ವಿಜಯ ಜನತಾ ಪಕ್ಷ, ಉತ್ತಮ ಪ್ರಜಾಕೀಯ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಇಂಡಿಯಾನ್ ಲೇಬರ್ ಪಾರ್ಟಿ ಅಭ್ಯರ್ಥಿ ಕಣಕ್ಕೆ ಇಳಿಸಿದೆ.
20 ಮಂದಿ ಪಕ್ಷೇತರರು: ಇನ್ನೂ ಚುನಾವಣಾ ಕಣದಲ್ಲಿ ಒಟ್ಟು 29 ಮಂದಿ ಅಭ್ಯರ್ಥಿಗಳು ಇದ್ದರೆ ಆ ಪೈಕಿ 20 ಮಂದಿ ಅಭ್ಯರ್ಥಿಗಳು ಪಕ್ಷೇತರರು ಸೇರಿದ್ದಾರೆ. ಲೋಕಸಭೆಗೆ ಸ್ಪರ್ಧೆ ಬಯಸಿ ಬೆಂಗಳೂರು, ತುಮಕೂರು, ಶಿಡ್ಲಘಟ್ಟ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರು ಈ ಬಾರಿ ಚುನಾವಣೆಗೆ ತಮ್ಮ ಉಮೇದುವಾರಿಕೆ ಸಲ್ಲಿಸಿ ಅಖಾಡದಲ್ಲಿದ್ದಾರೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಪಕ್ಷೇತರರ ಸಂಖ್ಯೆ ಈ ಬಾರಿ ಹೆಚ್ಚಾಗಿದ್ದಾರೆ.
ಎಸ್‌ಯುಸಿಐನ ಕಲಾವತಿ ಏಕೈಕ ಮಹಿಳಾ ಅಭ್ಯರ್ಥಿ: ಇನ್ನೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸಿಪಿಎಂ ಪಕ್ಷದ ಪ್ರಭಾವ ಇದ್ದು ನಿರಂತರವಾಗಿ ಚುನಾವಣಾ ರಾಜಕಾರಣದಲ್ಲಿ ಸಕ್ರಿಯವಾಗಿದೆ. ಆದರೆ ಈ ಭಾಗದಲ್ಲಿ ಎಸ್ ಯುಸಿಐ ಪಕ್ಷದ ಸಂಘಟನೆ ಇಲ್ಲದೇ ಇದ್ದರೂ ಪಕ್ಷ ಎನ್.ಕಲಾವತಿ ಎಂಬುವರನ್ನು ಕಣಕ್ಕೆ ಇಳಿಸಿದೆ. ವಿಶೇಷ ಅಂದರೆ ಎಸ್‌ಯುಸಿಐ ಪಕ್ಷದಿಂದ ಸ್ಪರ್ಧೆ ಮಾಡಿರುವ ಕಲಾವತಿ ಈ ಬಾರಿ ಲೋಕ ಸಮರದಲ್ಲಿ ಏಕೈಕ ಮಹಿಳಾ ಅಭ್ಯರ್ಥಿ ಆಗಿದ್ದಾರೆ.
ಮೊದಲ ಬಾರಿಗೆ 2 ಬ್ಯಾಲೆಟ್ ಬಳಕೆ : ಇನ್ನೂ ಚುನಾವಣಾ ಅಖಾಡದಲ್ಲಿ 29 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮತದಾನಕ್ಕೆ ಇದೇ ಮೊದಲ ಬಾರಿಗೆ 2 ಬ್ಯಾಲೆಟ್ ಯೂನಿಟ್‌ಗಳನ್ನು ಬಳಸಬೇಕಾದ ಅನಿರ್ವಾಯತೆಯನ್ನು ಸೃಷ್ಠಿಸಿದೆ. ಚಿಕ್ಕಬಳ್ಳಾಪುರ ಒಟ್ಟು 29 ಅಭ್ಯರ್ಥಿಗಳು ಹಾಗೂ ನೋಟಾ ಇರುವುದರಿಂದ ಚುನಾವಣೆಯಲ್ಲಿ ಎರಡು ಬ್ಯಾಲೆಟ್ ಯುನಿಟ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಒಟ್ಟು 5576 ಬ್ಯಾಲೆಟ್ ಯೂನಿಟ್ ಹಾಗೂ 2788 ಕಂಟ್ರೋಲ್ ಯೂನಿಟ್‌ಗಳ ಜೊತೆಗೆ 3012 ವಿ.ವಿ.ಪಿ.ಎ.ಟಿ ಬಳಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
-ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.