ಮಾವಿಗೆ ಧರ್ಮದ ಕರಿನೆರಳು!
Team Udayavani, Apr 10, 2022, 3:43 PM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಹಿಜಾಬ್, ಹಲಾಲ್ ಕಟ್, ಮಸೀದಿಯಲ್ಲಿ ಧ್ವನಿವರ್ಧಕದ ವಿವಾದದ ನಡುವೆ, ಇದೀಗ ಹಣ್ಣುಗಳ ರಾಜ ಮಾವು ಮಾರಾಟದ ಮೇಲೆ ಧರ್ಮದ ಪ್ರಭಾವ ಬೀರುವ ಲಕ್ಷಣ ಕಂಡುಬಂದಿದೆ. ಕರಾವಳಿ ಜಿಲ್ಲೆಯಲ್ಲಿ ಹಿಜಾಬ್ ವಿವಾದ ಪ್ರಾರಂಭವಾಗಿ ಇದೀಗ ಅನೇಕ ವಿಷಯ ಗಳ ಬಗ್ಗೆ ವಾದ- ಪ್ರತಿ ವಾದಗಳು ನಡೆಯುತ್ತಿದ್ದು, ಸಾರ್ವಜನಿಕ ಮತ್ತು ಸಾಮಾಜಿಕ ಜಾಲತಾ ಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ಶಾಲಾ-ಕಾಲೇಜಿನಲ್ಲಿ ಹಿಜಾಬ್ ಧರಿಸುವ ವಿಚಾರದಲ್ಲಿ ಮೊದಲು ವಿವಾದ ಹುಟ್ಟಿ ಅದು ನ್ಯಾಯಾಯಲದ ಮೆಟ್ಟಲೇರಿ ತೀರ್ಪು ಬಂದ ಬಳಿಕ ವಿವಾದ ತಣ್ಣಗಾಗಿದ್ದ ವೇಳೆ, ಯುಗಾದಿ ಹಬ್ಬದಲ್ಲಿ ಕೆಲ ಹಿಂದೂಪರ ಸಂಘಟನೆ ಹಲಾಲ್ ಮಾಡಿದ ಮಾಂಸ ಖರೀದಿ ಮಾಡಬಾರದು. ಜಟ್ಕಾ ಕಟ್ ಮಾಂಸವನ್ನು ಖರೀದಿಸಬೇಕೆಂದು ಕರಪತ್ರಗಳ ಮೂಲಕ ಪ್ರಚಾರ ನಡೆಸಿದ್ದರು. ಅದು ಕೂಡ ಕೆಲವೊಂದು ಪ್ರಭಾವ ಬೀರಿತ್ತು. ಬಳಿಕ ಮಸೀದಿ ಗಳಲ್ಲಿ ಧ್ವನಿ ವರ್ಧಕಗಳಿಂದ ಶಬ್ದ ಮಾಲಿನ್ಯವಾಗುತ್ತದೆ. ಅದರ ವಿರುದ್ಧ ದೇವಾಲಯಗಳಲ್ಲಿ ಹನುಮಾನ ಚಾಲೀಸಾ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಇದೀಗ ಮಾವು ಹಿಂದೂಗಳ ಮಂಡಿಯಲ್ಲಿ ಖರೀದಿ ಮಾಡಬೇಕೆಂದು ವಿವಾದ ಹುಟ್ಟುಕೊಂಡಿದ್ದು, ಇದರಿಂದ ಮಾವು ಬೆಳೆಯುವ ಬೆಳೆಗಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ಮನೆ ಮಾಡಿದೆ.
12 ಸಾವಿರ ಹೆಕ್ಟೇರ್ ಮಾವು ಬೆಳೆ: ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದ್ದು, ಚಿಂತಾಮಣಿ ತಾಲೂಕಿನಲ್ಲಿ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದಿದ್ದು, ಇನ್ನುಳಿದಂತೆ ಬೇರೆ ತಾಲೂಕುಗಳಲ್ಲಿ ಮಾವು ಬೆಳೆಯನ್ನು ರೈತರು ಬೆಳೆಯುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ 1.15 ಲಕ್ಷ ಟನ್ ಮಾವು ಬರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಜಿಲ್ಲೆಯಲ್ಲಿ ಸುರಿದ ಮಳೆ, ಬಿಸಲಿನ ಪ್ರಭಾವದಿಂದ ಹೂವು ಉದುರಿದ್ದು, ಇದರಿಂದ 65ರಿಂದ 70 ಸಾವಿರ ಟನ್ ಮಾವು ಬರುವ ಅಂದಾಜಿಸಲಾಗಿದೆ.
ಕೋವಿಡ್‌ನಿಂದ ಸಂಕಷ್ಟದಲ್ಲಿ ಬೆಳೆಗಾರರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಭಾವದಿಂದ ಕಳೆದ ಎರಡು ವರ್ಷದಲ್ಲಿ ಮಾವು ಬೆಳೆಗಾರರು ಸಂಕಷ್ಟ ಎದುರಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಮಾವು ಮಾರಾಟ ಮಾಡಿ ಸ್ವಲ್ಪ ಹಣ ಗಳಿಸಬಹುದು ಎಂದು ನಿರೀಕ್ಷೆಯಲ್ಲಿರುವ ಸಂದರ್ಭದಲ್ಲಿ ಹಿಂದೂಗಳ ಮಂಡಿಗಳಲ್ಲಿ ಮಾವು ಖರೀದಿಸಬೇಕೆಂಬ ವಿಚಾರದಿಂದ ಮಾವು ಮಾರಾಟ ಮತ್ತು ಖರೀದಿ ಮೇಲೆ ಪ್ರಭಾವ ಬೀರುವ ಆತಂಕ ಮನೆ ಮಾಡಿದೆ.
ತೋಟಗಳ ಗುತ್ತಿಗೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾವು ಬೆಳೆಯುವ ರೈತರು ಶೇ. 90ರಷ್ಟು ಸಂಪೂರ್ಣ ತೋಟಗಳನ್ನು ಗುತ್ತಿಗೆ ನೀಡಿದ್ದಾರೆ. ಇನ್ನುಳಿದ ಶೆ.10ರಷ್ಟು ಮಾತ್ರ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ತೋಟವನ್ನು ನಿರ್ವಹಣೆ ಮಾಡಿ ಉತ್ಪಾದನೆಯಾಗುವ ಮಾವು ಮಾರಾಟ ಮಾಡುತ್ತಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಧರ್ಮದ ಆಧಾರದ ಮೇಲೆ ವ್ಯಾಪಾರ ವಹಿವಾಟು ನಡೆಸಬೇಕೆಂದು ಅಭಿಯಾನ ನಡೆಸುತ್ತಿರುವುದರಿಂದ ಅದು ಜಿಲ್ಲೆಯ ಮಾವು ಮಾರಾಟದ ಮೇಲೆ ಬೀಳುವುದಿಲ್ಲ ಎಂಬ ಲೆಕ್ಕಾಚಾರ ನಡೆದಿದೆ.
ಮಾವು ಬೆಳೆಗಾರರಿಗೆ ತೊಂದರೆ ಆಗಲ್ಲ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಮಾವು ಬಹುತೇಕ ಕೋಲಾರ ಜಿಲ್ಲೆಯ ಶ್ರೀನಿ ವಾಸಪುರದಲ್ಲಿ ಮಾರಾಟವಾಗುತ್ತದೆ. ಈಗಾಗಲೇ ರೈತರಿಂದ ಮಾವು ತೋಟಗಳನ್ನು ಕೆಲವರು ಗುತ್ತಿಗೆ ಪಡೆದಿದ್ದರಿಂದ ಸಹಜವಾಗಿ ಮಾವು ಬೆಳೆಗಾರರಗೆ ತೊಂದರೆ ಆಗುವುದಿಲ್ಲ. ಕನಿಷ್ಠ ಒಂದು ವರ್ಷದಿಂದ ಐದು ವರ್ಷದವರೆಗೆ ತೋಟ ಗುತ್ತಿಗೆ ನೀಡಿದ್ದರಿಂದ ವ್ಯಾಪಾರಸ್ಥರೇ ತೋಟ ನಿರ್ವಹಣೆ ಮಾಡಿ ಇಂತಿಷ್ಟು ದರವನ್ನು ನಿಗದಿ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸಿಕೊಂಡು ಬಂದಿದ್ದಾರೆ. ಮತ್ತೂಂದೆಡೆ ಹಣ್ಣುಗಳ ರಾಜ ಮಾವು ಮಾರಾಟದ ಮೇಲೆ ಧರ್ಮದ ಕರಿನೆರಳು ಬೀಳುತ್ತಿರುವುದಕ್ಕೆ ಸcತಃ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿದೆ. ವ್ಯಾಪಕ ಮಳೆ, ಬಿಸಲಿನ ಪ್ರಭಾವದಿಂದ ಹೂವು ಉದರಿದ್ದು, ಹೀಗಾಗಿ 70 ಸಾವಿರ ಟನ್ ಮಾವು ಬರುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ರೈತರು ಮತ್ತು ವ್ಯಾಪಾರಿಗಳ ಮಧ್ಯೆ ನಂಬಿಕೆ ಆಧಾರದ ಮೇಲೆ ವ್ಯಾಪಾರ ನಡೆಸುತ್ತಿದ್ದಾರೆ. ಶೇ.90ರಷ್ಟು ತೋಟವನ್ನು ರೈತರು ಗುತ್ತಿಗೆ ನೀಡಿದ್ದಾರೆ. –ರಮೇಶ್, ಉಪನಿರ್ದೇಶಕ ತೋಟಗಾರಿಕೆ ಇಲಾಖೆ, ಚಿಕ್ಕಬಳ್ಳಾಪುರ
ಮಧ್ಯೆ ವಿಷ ಬೀಜ ಬಿತ್ತನೆ ಮಾಡುವ ಕೆಲಸ ಯಾರೂ ಮಾಡಬಾರದು. ಅದಕ್ಕೆ ನಮ್ಮ ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ. ಕೆಲವು ಮತೀಯ ಶಕ್ತಿಗಳು ಮಾಡುವ ಕುತಂತ್ರದಿಂದ ರೈತರಿಗೆ ತೊಂದರೆ ಆಗುತ್ತದೆ. ಸಿಎಂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮಾವು ಮಾರಾಟದ ಮೇಲೆ ಯಾವುದೇ ಧಾರ್ಮಿಕ ಕರಿನೆರಳು ಬೀಳದಂತೆ ಕ್ರಮ ಕೈಗೊಳ್ಳಬೇಕು. – ಭಕ್ತರಹಳ್ಳಿ ಭೈರೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ, ರೈತ ಸಂಘ ಹಾಗೂ ಹಸಿರುಸೇನೆ.
ರಾಜ್ಯದಲ್ಲಿ ಮಾವು ಬೆಳೆಗಾರರು ಕಳೆದ ಎರಡು ವರ್ಷಗಳಿಂದ ಸಂಕಷ್ಟದಲ್ಲಿ ಸಿಲುಕಿದ್ದಾರೆ. ನಮಗೆ ಯಾವುದು ಭೇದ ಭಾವ ಇಲ್ಲ. ಯಾರು ದರ ಜಾಸ್ತಿ ಕೊಡ್ತಾರೆ ಅವರಿಗೆ ಮಾವು ಮಾರಾಟ ಮಾಡುತ್ತೇವೆ. ನಂಬಿಕೆಯಿಂದ ನಡೆಯುತ್ತಿದೆ. ರೈತರು, ವ್ಯಾಪಾರಿಗಳು ಪರಸ್ಪರ ವಿಶ್ವಾ ಸ ದಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಧಕ್ಕೆ ಬರುವ ಕೆಲಸ ಯಾರೂ ಮಾಡಬಾರದು. – ಕೆ.ವಿ.ನಾಗರಾಜ್, ರಾಜ್ಯ ಮಾವು ಅಭಿವೃದ್ಧಿ ನಿಗಮ ಅಧ್ಯಕ್ಷ.
-ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.