ಸಂಘಗಳ ಉತ್ಪನ್ನಕ್ಕೆ ಮಾರುಕಟ್ಟೆ ಅತ್ಯಗತ್ಯ
Team Udayavani, Jul 9, 2020, 6:51 AM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರು ಸಿದಟಛಿಪಡಿಸುತ್ತಿರುವ ಉತ್ಪನ್ನಗಳಿಗೆ ಬ್ರ್ಯಾಂಡ್ ಮೂಲಕ ಜನರಿಗೆ ತಲುಪಿಸಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಆಗ ಬೇಕೆಂದು ಮಾಜಿ ಕೃಷಿ ಸಚಿವ, ಗೌರಿಬಿದನೂರು ಶಾಸಕ ಎನ್.ಎಚ್.ಶಿವಶೆಂಕರರೆಡ್ಡಿ ತಿಳಿಸಿದರು.
ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ಸಂಜೀವಿನಿ ಕುಟೀರ ಸ್ವಸಹಾಯ ಸಂಘಗಳ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಸಹಾಯ ಸಂಘಗಳು ರಚನೆಗೊಂಡ ನಂತರ ಮಹಿಳೆ ಯರು ಸ್ವಾವಲಂಬಿ ಜೀವನದೊಂದಿಗೆ ಕುಟುಂಬದ ಆರ್ಥಿಕತೆಯು ಸುಧಾರಿಸುವು ದರಲ್ಲಿ ಹೆಚ್ಚಿನ ಮಹತ್ವವನ್ನು ವಹಿಸುತ್ತಿದ್ದಾರೆ ಎಂದು ಹೇಳಿದರು.
ಸ್ವ ಸಹಾಯ ಸಂಘಗಳ ಸದಸ್ಯರು ತಯಾರಿಸುವ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಯನ್ನು ಒದಗಿಸಬೇಕು ಮತ್ತು ತಯಾರಿಸಿದ ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದು ಕೊಳ್ಳಲು ಅವಶ್ಯವಾದ ಸಹಾಯ ಹಾಗೂ ಸಹಕಾರವನ್ನು ನೀಡಬೇಕೆಂದರು. ಗುಣಮಟ್ಟ ಕಾಯ್ದುಕೊಳ್ಳುವುದರೊಂದಿಗೆ ಉತ್ಪನ್ನಗಳಿಗೆ ನಿಗದಿತ ಬ್ರ್ಯಾಂಡ್ ನೀಡುವ ಮೂಲಕ ಜನರಿಗೆ ತಲುಪಿಸುವ ವ್ಯವಸ್ಥೆ ಆಗಬೇಕು.
ಇದಕ್ಕೆ ಪೂರಕವಾದ ಯೋಜನೆಯನ್ನು ರೂಪಿಸಬೇಕೆಂದರು. ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್ ಮಾತನಾಡಿ, ಸಂಘ ವೆಂಬುದು ಸ್ವಾವಲಂಬಿ ತನವೇ ಅಲ್ಲದೆ, ಉತ್ತಮ ಆರ್ಥಿಕ ಆಡಳಿತ ವ್ಯವಸ್ಥೆಯ ಪರಿ ಚಯವನ್ನು ಮಹಿಳೆಯರಿಗೆ ಮಾಡಿಕೊಡು ತ್ತದೆ. ಇದರಿಂದ ಬ್ಯಾಂಕ್ ಹಣ ಕಾಸು ವ್ಯವಹಾರದ ಜ್ಞಾನವನ್ನು ನೀಡು ವುದಲ್ಲದೆ, ಆಧುನಿಕತೆಯೊಂದಿಗಿನ ಅಭಿವೃದಿಯ ಕಡೆಗೆ ಮಹಿಳೆ ನಡೆಯುವಲ್ಲಿ ಸಹಾಯವಾಗುತ್ತದೆ ಎಂದರು.
ತಾಪಂ ಅಧ್ಯಕ್ಷ ಆರ್.ಲೋಕೇಶ್, ಇಒ ಎನ್.ಮುನಿರಾಜ್, ಸ್ವಸಹಾಯ ಗುಂಪಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.