ವರ್ಷಾಂತ್ಯಕ್ಕೆ ನಿವೇಶನ ಹಂಚುವ ಗುರಿ
Team Udayavani, Sep 20, 2020, 3:31 PM IST
ಬಾಗೇಪಲ್ಲಿ: ಕ್ಷೇತ್ರದ ಪ್ರತಿಯೊಬ್ಬ ನಿವೇಶನ ರಹಿತ ಬಡವರಿಗೆ ನಿವೇಶನ ನೀಡುವುದು ನನ್ನ ಗುರಿಯಾಗಿದ್ದು, ಈವರ್ಷದ ಅಂತ್ಯದೊಳಗೆ ಸಾಕಾರಗೊಳ್ಳಬೇಕಿದ್ದು, ಇದಕ್ಕೆ ಗ್ರಾಪಂ, ಸರ್ವೆ ಮತ್ತು ಕಂದಾಯ ಅಧಿಕಾರಿಗಳು ಪ್ರಾಮಾಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಶಾಸಕ ಎಸ್. ಎನ್.ಸುಬ್ಟಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಆಶ್ರಯ ಯೋಜನೆಯ ”ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಬಡವರಿಗೆ ನಿವೇಶನ ಹೇಗೆ ಪಡೆದುಕೊಳ್ಳಬೇಕು ಎಂಬ ದಾರಿ ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಬಡವರಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕಾದ ಅವಶ್ಯಕತೆ ಇದೆ. ಈ ಸಂಬಂಧ 6 ಸಭೆಗಳನ್ನು ಮಾಡಿದ್ದೇನೆ. ನಿರೀಕ್ಷಿಸಿದ ರೀತಿಯಲ್ಲಿ ಪಿಡಿಒಗಳು ಸ್ಪಂದಿಸಿಲ್ಲ. ನಿವೇಶನರಹಿತ ಫಲಾನುಭವಿಗಳ ಪಟ್ಟಿ ಸಲ್ಲಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ನಿವೇಶನಗಳ ಅಗತ್ಯ ಇಲ್ಲವೇ?: ಕ್ಷೇತ್ರದಲ್ಲಿ ನಿವೇಶ ನಗಳ ಅಗತ್ಯವೇ ಇಲ್ಲ ಎಂದು ಪುಲಗಲ್ಲು, ಪಾಳ್ಯಕೆರೆ, ಜೂಲಪಾಳ್ಯ, ಚಾಕವೇಲು, ನಾರೇಮದ್ದೇಪಲ್ಲಿ ಮತ್ತು ಯಲ್ಲಂಪಲ್ಲಿ ಒಟ್ಟು 6 ಗ್ರಾಪಂ ಪಿಡಿಒಗಳು ಬರೆದುಕೊಟ್ಟಿರುವುದು ನಾಚಿಕೆಗೇಡಿನ ವಿಚಾರ. ನಿಮ್ಮ ಪ್ರಕಾರ ನಿಮ್ಮ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ನಿವೇಶನ ರಹಿತ ಬಡವರೇ ಇಲ್ಲವೇ ಎಂದು ಪ್ರಶ್ನಿಸಿದರು.
ಲಾಡ್ಜ್-ಡಾಬಾಗಳಲ್ಲಿ ಇ-ಸ್ವತ್ತುಗಳ ವಿಲೇವಾರಿ: ಸರ್ಕಾರಿ ಜಮೀನಿಗೆ ಎನ್ ಒಸಿ ನೀಡಿ ಇ ಖಾತಾ ಮಾಡಿಕೊಡ್ತೀರಿ, ಲಾಡ್ಜ್ಗಳಲ್ಲಿ ಡಾಬಾಗಳಲ್ಲಿ ಕುಳಿತು ಈ ಖಾತಾಗಳನ್ನು ಸಾವಿರಾರು ಸಂಖ್ಯೆಯಲ್ಲಿ ಬರೆದುಕೊಡ್ತೀರಿ, ಬಡವರಿಗೆ ನಿವೇಶನ ನೀಡಲು ಆಗಲ್ಲ. ನಿಮಗೆ ಮುಕ್ತಿಯನ್ನು ಸದ್ಯದಲ್ಲಿಯೇ ಕಾಣಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಜಿಪಂ ಸದಸ್ಯ ನರಸಿಂಹಪ್ಪ, ತಾಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು,ತಹಶೀಲ್ದಾರ್ ಎಂ.ನಾಗರಾಜ್, ತಾಪಂ ಇಒ ಎಚ್. ಎನ್.ಮಂಜುನಾಥಸ್ವಾಮಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
Gudibande: ಹೆಸರಿಗಷ್ಟೇ ಬಸ್ ನಿಲ್ದಾಣ; ಬಸ್‌ಗಳೇ ಬರಲ್ಲ
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.