3ನೇ ಅಲೆ: ಇಂದು ಮಕ್ಕಳ ತಜ್ಞರೊಂದಿಗೆ ಸಭೆ
Team Udayavani, May 29, 2021, 6:38 PM IST
ಚಿಕ್ಕಬಳ್ಳಾಪುರ/ಗುಡಿಬಂಡೆ: ಜಿಲ್ಲೆಯಲ್ಲಿ ಕೊರೊನಾ3ನೇ ಅಲೆ ತಡೆಗಟ್ಟಲು, ಅಗತ್ಯ ಕ್ರಮ ಕೈಗೊಳ್ಳಲು ಮೇ29 ರಂದು ಮಕ್ಕಳ ತಜ್ಞರ ಸಭೆ ಕರೆಯಲಾಗಿದೆ ಎಂದುಜಿಲ್ಲಾ ಧಿಕಾರಿ ಆರ್.ಲತಾ ತಿಳಿಸಿದರು.
ಜಿಲ್ಲೆಯ ಗುಡಿಬಂಡೆ ಅಂಬೇಡ್ಕರ್ ಭವನದಲ್ಲಿಸುರಪನೇನಿ ವಿದ್ಯಾಸಾಗರ ಫೌಂಡೇಷನ್, ಗ್ರಾಮವಿಕಾಸ ಸಂಸ್ಥೆಯಿಂದ 15 ರಿಂದ 50 ವರ್ಷದಮಹಿಳೆಯರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವವಿಟಮಿನ್ ಎ ಮತ್ತು ಮಿನರಲ್ ಮಾತ್ರೆ ಒಳಗೊಂಡ1000 ಆರೋಗ್ಯ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರೊನಾ 3ನೇ ಅಲೆ ಮಕ್ಕಳ ಮೇಲೆ ಪರಿಣಾಮಬೀರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸಲು ಕಾರ್ಯಕ್ರಮಅನುಷ್ಠಾನಗೊಳಿಸಿ, ವಿಶೇಷ ನಿಗಾವಹಿಸಲಾಗಿದೆಎಂದು ಹೇಳಿದರು.
ಪಾಸಿಟಿವಿಟಿ ಶೇ.5ರ ಗುರಿ: ಜಿಲ್ಲಾದ್ಯಂತ 4 ದಿನಕಠಿಣ ಲಾಕ್‌ಡೌನ್ ಮಾಡಿದ್ದರಿಂದ ಸೋಂಕಿತಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಪಾಸಿಟಿವಿಟಿಶೇ.30 ರಿಂದ 12ಕ್ಕೆ ಬಂದಿದೆ. ಇದೊಂದುಆಶಾದಾಯಕ ಬೆಳವಣಿಗೆ. ಇದನ್ನು ಶೇ.5ಕ್ಕೆ ತಗ್ಗಿಸುವಗುರಿ ಹೊಂದಿದ್ದು, ಶೂನ್ಯಕ್ಕೆ ತರಲಾಗುವುದು ಎಂದುವಿವರಿಸಿದರು.
ಆಕ್ಸಿಜನ್ ಬೇಡಿಕೆ ಕಡಿಮೆ: ಜಿಲ್ಲೆಯಲ್ಲಿ ಸಂಪೂರ್ಣಲಾಕ್‌ಡೌನ್‌ಗೆ ಜನ ಉತ್ತಮ ಸಹಕಾರ ನೀಡುತ್ತಿದ್ದಾರೆ.ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಖಾಸಗಿ,ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ 170 ಆಕ್ಸಿಜನ್ ಬೆಡ್‌ಖಾಲಿ ಇವೆ. ಆಮ್ಲಜನಕ ಅವಲಂಬಿತ ಸೋಂಕಿತರಸಂಖ್ಯೆಯೂ ಕಡಿಮೆಯಾಗುತ್ತಿದೆ. ಆಕ್ಸಿಜನ್‌ಗೆಬೇಡಿಕೆಯೂ ತಗ್ಗಿದೆ ಎಂದು ಹೇಳಿದರು.
ಆರೋಗ್ಯ ಸೇವೆ: ಹೋಂ ಕ್ವಾರಂಟೈನ್‌ನಲ್ಲಿಇರುವವರಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಒದಗಿಸಲಾಗುತ್ತಿದೆ. ಅಲ್ಲದೆ, ಯಾರಿಗೆ ಮನೆಗಳಲ್ಲಿಪ್ರತ್ಯೇಕ ಕೊಠಡಿ, ಶೌಚಾಲಯ, ಇತರೆ ಸೌಲಭ್ಯ ಇಲ್ಲ,ಅವರನ್ನು ಕಡ್ಡಾಯವಾಗಿ ಕೊರೊನಾ ಕೇರ್ ಸೆಂಟರ್‌ಗೆ ಸೇರಿಸಲಾಗುತ್ತಿದೆ ಎಂದು ವಿವರಿಸಿದರು.
ಕೊರೊನಾ ನಿಯಮ ಪಾಲಿಸಿ: ಲಾಕ್‌ಡೌನ್ ಅನ್ನುಯಾರೂ ನಿರ್ಲಕ್ಷಿಸಬಾರದು. ಎಲ್ಲರೂ ಮನೆಗಳಲ್ಲೇಇದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು. ಸಣ್ಣ ಪುಟ್ಟರೋಗ ಲಕ್ಷಣಗಳು ಕಂಡುಬಂದರೂ ವೈದ್ಯರ ಬಳಿತೋರಿಸಿಕೊಳ್ಳಬೇಕು. ಗ್ರಾಮಗಳಲ್ಲಿ ಟಾಸ್ಕ್ಫೋರ್ಸ್‌ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದು,ಅವರು ನೀಡಿದ ಸಲಹೆ ಸೂಚನೆ ಕಡ್ಡಾಯವಾಗಿಹೋಂ ಕ್ವಾರಂಟೈನ್ ನಲ್ಲಿರುವ ಸೋಂಕಿತರು ಹಾಗೂಸಂಪರ್ಕಿತರು ಪಾಲಿಸಬೇಕು. ಆಗ ಮಾತ್ರ ಕೊರೊನಾಸಂಪೂರ್ಣ ನಿಯಂತ್ರಣ ಮಾಡಲು ಸಾಧ್ಯವಾಗಲಿದೆಎಂದು ಹೇಳಿದರು.
ಆರೋಗ್ಯದ ಕಡೆ ಗಮನ ಹರಿಸಿ: ಒಂದು ಹೆಣ್ಣು ಆರೋಗ್ಯವಾಗಿದ್ರೆ ಆ ಕುಟುಂಬವೇ ಚೆನ್ನಾಗಿರುತ್ತದೆ.ಇತ್ತೀಚಿಗೆ ಮಹಿಳೆಯರು ಕುಟುಂಬದ ಸದಸ್ಯರ ಬಗ್ಗೆಹೆಚ್ಚು ಗಮನ ಕೊಡುವುದರಲ್ಲಿ ತಮ್ಮ ಆರೋಗ್ಯವನ್ನುನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದು ಸರಿಯಲ್ಲ, ಸಕಾಲಕ್ಕೆಪೌಷ್ಟಿಕ ಆಹಾರ ಸೇವಿಸುವುದರ ಜೊತೆಗೆ ರೋಗನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆಗಳನ್ನು ವೈದ್ಯರಸಲಹೆ ಪಡೆದು ಸೇವಿಸಬೇಕೆಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.