ಟ್ಯಾಂಕರ್ ಪಲ್ಟಿ: ಹಾಲಿನ ಹೊಳೆ; ಮುಗಿಬಿದ್ದ ಜನರು
Team Udayavani, Dec 19, 2017, 3:46 PM IST
ಚಿಕ್ಕಬಳ್ಳಾಪುರ: ನಗರದ ಹೊರವಲಯದ ವಾಪಸಂದ್ರ ಬಳಿ ಹಾಲಿನ ಟ್ಯಾಂಕರೊಂದು ಪಲ್ಟಿಯಾಗಿ ಸಾವಿರಾರು ಲೀಟರ್ ಹಾಲು ಮಣ್ಣು ಪಾಲಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಸಾದಲಿ ಗ್ರಾಮದ ಹಾಲಿನ ಶೀತಲಿಕರಣ ಘಟಕದಿಂದ ಯಲಹಂಕ ಕೆಎಂಎಫ್ ಡೈರಿಗೆ ಹಾಲು ತುಂಬಿಕೊಂಡು ಸಾಗುತ್ತಿದ್ದ ಟ್ಯಾಂಕರ್ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ರಸ್ತೆಯ ತುಂಬೆಲ್ಲಾ ಹಾಲು ಹೊಳೆಯಾಗಿ ಹರಿದಿದ್ದು, ಗಮನಿಸಿದ ಜನರು ಸಿಕ್ಕ ಸಿಕ್ಕ ಬಾಟಲಿಗಳಲ್ಲಿ ಲೀಕ್ ಆಗುತ್ತಿದ್ದ ಹಾಲನ್ನು ತುಂಬಿಕೊಂಡರೆ , ಇನ್ನು ಕೆಲವರು ಕೊಡಪಾನಗಳನ್ನು ತಂದು ಹಾಲು ತುಂಬಿಸಿಕೊಂಡರು.
ಟ್ಯಾಂಕರ್‌ನಲ್ಲಿ ಬಹುಪಾಲು ಹಾಲು ಮಣ್ಣು ಪಾಲಾಗಿದ್ದು, ಕ್ರೇನ್‌ಮೂಲಕ ಟ್ಯಾಂಕರನ್ನು ತೆರವುಗೊಳಿಸಲಾಗಿದೆ.
ಟ್ಯಾಂಕರ್‌ನಲ್ಲಿದ್ದ ಚಾಲಕ, ಕ್ಲೀನರ್ ಮತ್ತು ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.